ಸ್ಟಾರ್ ವಾರ್ಸ್
ಸ್ಟಾರ್ ವಾರ್ಸ್ ಚಲನಚಿತ್ರ ಆಕಾಶಯಾನ ಗೀತನಾಟಕ(ಸ್ಪೇಸ್ ಒಪೆರಾ)ದ ಚರಿತ್ರೆಯಲ್ಲೇ ಒಂದು ಮಹಾಕಾವ್ಯವೆನಿಸಿದ್ದು, ಅಮೇರಿಕಾದ ಸುಪ್ರಸಿದ್ಧ ನಿರ್ದೇಶಕ ಜಾರ್ಜ್ ಲ್ಯೂಕಾಸ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಫ್ರಾಂಚೈಸಿಯ ಮೊದಲ ಚಿತ್ರವನ್ನು ಮೂಲತಃ 1977, ಮೇ 25ರಂದು 20ನೇ ಸೆಂಚುರಿ ಫಾಕ್ಸ್ ಬಿಡುಗಡೆ ಮಾಡಿತು. ಇದು ವಿಶ್ವಾದ್ಯಂತ ಪಾಪ್ ಸಂಸ್ಕೃತಿಯ ಅಪೂರ್ವ ವಿದ್ಯಮಾನವೆನಿಸಿತು, ಅಲ್ಲದೆ ಇದರ ಬೆನ್ನಿಗೇ ಮೂರು ವರ್ಷಗಳ ಮಧ್ಯಂತರದಲ್ಲಿ ಇನ್ನೆರಡು ಸೀಕ್ವೆಲ್(ಉತ್ತರಭಾಗದ) ಚಿತ್ರಗಳು ತೆರೆ ಕಂಡವು.
ಟ್ರೈಲಾಜಿ(ತ್ರಿವಳಿ ಕಥೆ)ಯ ಕೊನೆಯದ್ದು ಬಿಡುಗಡೆಯಾಗಿ ಹದಿನಾರು ವರ್ಷಗಳ ನಂತರ, ಹೊಸ ಪ್ರೀಕ್ವೆಲ್ (ಹೋಲಿಕೆಯ ಕಥೆಯಿರುವ) ತ್ರಿವಳಿ ಕಥೆಗಳ ಸುತ್ತ ಹೆಣೆದ ಮೊದಲ ಚಿತ್ರ ಬಿಡುಗಡೆಯಾಯಿತು. ಮೂರು ವರ್ಷಗಳ ಮಧ್ಯಂತರಗಳಲ್ಲಿ ಅದು ಮತ್ತೊಮ್ಮೆ ಬಿಡುಗಡೆಯಾಯಿತು, 2005 ಮೇ 19ರಂದು ಅಂತಿಮ ಚಿತ್ರವೂ ಬಿಡುಗಡೆಯಾಯಿತು. 2008ರ ಹೊತ್ತಿಗೆ ಆರು ಸ್ಟಾರ್ ವಾರ್ಸ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು ಅಂದಾಜು $4.3 ಶತಕೋಟಿ ಆದಾಯ ಗಳಿಸಿವೆ, ಅಲ್ಲದೆ [೧]ಜೇಮ್ಸ್ ಬಾಂಡ್ ಮತ್ತು ಹ್ಯಾರಿ ಪಾಟರ್ ಚಲನಚಿತ್ರಗಳ ನಂತರ ಮೂರನೇ ಅತಿ ಹೆಚ್ಚು ಗಳಿಕೆಯ ಚಿತ್ರ ಸರಣಿಯೆಂಬ ಹೆಗ್ಗಳಿಕೆಗೂ ಇದು ಪಾತ್ರವಾಯಿತು.
ಸ್ಟಾರ್ ವಾರ್ಸ್ ಚಿತ್ರ ಸರಣಿಗಳ ಪ್ರಭಾವದಿಂದಾಗಿ ಆ ಕುರಿತ ಪುಸ್ತಕಗಳು, ಟೆಲಿವಿಷನ್ ಸರಣಿಗಳು, ವಿಡಿಯೋ ಆಟಗಳು ಮತ್ತು ವಿನೋದ ಪುಸ್ತಕಗಳು ಹೊರಬಂದವು. ಚಿತ್ರದ ಟ್ರೈಲಾಜಿಗಳಿಗೆ ಪೂರಕವಾಗಿರುವ ಈ ಕೃತಿಗಳಲ್ಲಿ ಸ್ಟಾರ್ ವಾರ್ಸ್ ಎಕ್ಸ್‌ಪಾಂಡೆಡ್ ಯೂನಿವರ್ಸ್ ಇದೆ, ಹೀಗೆ ಕಾಲ್ಪನಿಕ ವಿಶ್ವದ ಕುರಿತ ಸರಣಿಗಳಲ್ಲಿ ಮಹತ್ವದ ಅಭಿವೃದ್ಧಿಗಳಾದವು. ಚಿತ್ರದ ಟ್ರೈಲಾಜಿಗಳ ನಡುವಿನ ಮಧ್ಯಂತರವನ್ನು ತುಂಬುವಲ್ಲಿ ಈ ಮಾಧ್ಯಮಗಳು ಫ್ರಾಂಚೈಸಿಗಳಿಗೆ ನೆರವಾದವು.
2008ರಲ್ಲಿ ಸ್ಟಾರ್ ವಾರ್ಸ್: ದಿ ಕ್ಲೋನ್ ವಾರ್ಸ್ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಮೂಲ ಟ್ರೈಲಾಜಿಯಿಂದ ಹೊರಬಂದು ಜಗತ್ತಿನಾದ್ಯಂತ ಬಿಡುಗಡೆಯಾದ ಮೊದಲ ಸ್ಟಾರ್ ವಾರ್ಸ್ ಚಿತ್ರವಿದು. ಇದು ಫ್ರಾಂಚೈಸಿಯ ಮೊದಲ ಅನಿಮೇಷನ್ ಚಿತ್ರ ಕೂಡ ಹೌದು, ಇದರ ಜತೆಗೆ ಅದೇ ಹೆಸರಿನ ಸರಣಿಗಳಲ್ಲಿ ಎಕ್ಸ್‌ಪಾಂಡೆಡ್ ಯೂನಿವರ್ಸ್ ಬಗ್ಗೆ ಒಂದು ಪರಿಚಯ ನೀಡುವ ಗುರಿ ಕೂಡ ಹೊಂದಲಾಗಿತ್ತು. ಇದು ಈ ಹಿಂದೆ 2D ಅನಿಮೇಷನ್ ಸರಣಿಗಳ ಆಧಾರದಲ್ಲಿ ನಿರ್ಮಿಸಿದ ಅದೇ ಹೆಸರಿನ 3D CGI ಒಂದು ಅನಿಮೇಷನ್ ಚಿತ್ರವಾಗಿದೆ.
ಸನ್ನಿವೇಶ
[ಬದಲಾಯಿಸಿ]ಸ್ಟಾರ್ ವಾರ್ಸ್ ನಲ್ಲಿ ಚಿತ್ರಿಸಿರುವ ಘಟನೆಗಳು ಕಾಲ್ಪನಿಕ ಗ್ಯಾಲಕ್ಸಿ(ಆಕಾಶಗಂಗೆ)ಯಲ್ಲಿ ನಡೆಯುತ್ತವೆ.
ಅನ್ಯ ಜೀವಿಗಳ(ಆಗಾಗ್ಗೆ ಮಾನವನಂತೆಯೇ ಕಾಣುವ) ಅನೇಕ ವರ್ಗಗಳನ್ನು ಇದರಲ್ಲಿ ಚಿತ್ರಿಸಲಾಗಿದೆ. ರೊಬೊಟಿಕ್ ಡ್ರಾಯಿಡ್ಸ್‌ಗಳು ಮಾಮೂಲಿ ಸ್ಥಾನದಲ್ಲಿರುತ್ತವೆ ಮತ್ತು ಸಾಮಾನ್ಯವಾಗಿ ಮಾಲೀಕರ ಅವಶ್ಯಕತೆಗಳನ್ನು ಪೂರೈಸಲು ಇದನ್ನು ರೂಪಿಸಿರಲಾಗುತ್ತದೆ. ಬಾಹ್ಯಾಕಾಶಯಾನ ಸಾಮಾನ್ಯ, ಮತ್ತು ಗ್ಯಾಲಕ್ಸಿಯಲ್ಲಿರುವ ಅನೇಕ ಗ್ರಹಗಳು ಗ್ಯಾಲಕ್ಟಿಕ್ ರಿಪಬ್ಲಿಕ್( ಗ್ಯಾಲಕ್ಸಿ ಸಮುದಾಯ)ನ ಸದಸ್ಯರಾಗಿರುತ್ತವೆ, ನಂತರ ಗ್ಯಾಲಕ್ಟಿಕ್ ಎಂಪೈರ್(ಸಾಮ್ರಾಜ್ಯ) ಆಗಿ ಪುನರ್-ಸಂಘಟಿತಗೊಂಡಿರುತ್ತವೆ.
"ಫೋರ್ಸ್" ಸ್ಟಾರ್ ವಾರ್ಸ್ ನ ಪ್ರಮುಖ ಅಂಶಗಳಲ್ಲಿ ಒಂದು, ಅದು ಶಕ್ತಿಯ ಸರ್ವವ್ಯಾಪಿ ರೂಪವಾಗಿದ್ದು, ಅದೇ ಸಾಮರ್ಥ್ಯವುಳ್ಳ ಮಂದಿ ಮಾತ್ರವೇ ಅದನ್ನು ಬಳಸಬಹುದು. ಇದನ್ನು ಮೊದಲು ನಿರ್ಮಾಣಗೊಂಡ ಚಿತ್ರದಲ್ಲಿ ಈ ರೀತಿ ವರ್ಣಿಸಲಾಗಿದೆ; "ನಮ್ಮ ಸುತ್ತಮುತ್ತಲಿರುವ, ನಮ್ಮನ್ನು ವ್ಯಾಪಿಸಿರುವ, (ಮತ್ತು) ಗ್ಯಾಲಕ್ಸಿಗಳನ್ನು ಜೊತೆಗೂಡಿಸಿರುವ ಎಲ್ಲ ಜೀವಿಗಳಿಂದ ಸೃಷ್ಟಿಸಲ್ಪಟ್ಟ ಒಂದು ಶಕ್ತಿ"[೨] ಈ ಫೋರ್ಸ್ ಅತೀಂದ್ರಿಯ ಕಾರ್ಯಗಳನ್ನು (ಟೆಲಿಕೈನೆಸೀಸ್, ದಿವ್ಯದೃಷ್ಟಿ, ಪೂರ್ವಜ್ಞಾನ ಮತ್ತು ಮನೋನಿಯಂತ್ರಣ ಇತ್ಯಾದಿ)ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ, ಅಲ್ಲದೆ ವೇಗ ಮತ್ತು ಅನುವರ್ತನಗಳಂತಹ ಕೆಲವು ನಿರ್ದಿಷ್ಟ ದೈಹಿಕ ಲಕ್ಷಣಗಳನ್ನು ವರ್ಧಿಸಲು ಫೋರ್ಸ್‌ನಿಂದ ಸಾದ್ಯವಾಗಬಹುದು; ಈ ಸಾಮರ್ಥ್ಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಮತ್ತು ಸೂಕ್ತ ತರಬೇತಿ ಮೂಲಕ ಸುಧಾರಿಸಿಕೊಳ್ಳಬಹುದು.
ಫೋರ್ಸ್ ಅನ್ನು ಉತ್ತಮ ಉದ್ದೇಶಕ್ಕಾಗಿಯೂ ಬಳಸಿಕೊಳ್ಳಬಹುದು, ಆದರೆ ಇದಕ್ಕೆ ದುಷ್ಟ ಮುಖವೂ ಇದೆ. ಇದು ಬಳಕೆದಾರನಲ್ಲಿ ದ್ವೇಷ, ಆಕ್ರಮಣಶೀಲತೆ, ಮತ್ತು ಕೇಡನ್ನು ತುಂಬಿಸಿ ಕೆಟ್ಟ ಕಾರ್ಯಕ್ಕೆ ಪ್ರೇರೇಪಿಸಬಹುದು. ಆರು ಸ್ಟಾರ್ ವಾರ್ಸ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಜೇಡಿ ಪಾತ್ರವು ಫೋರ್ಸ್ ಅನ್ನು ಉತ್ತಮ ಉದ್ದೇಶಕ್ಕಾಗಿ ಬಳಸಿಕೊಂಡರೆ, ಸಿತ್ ಪಾತ್ರ ಅದೇ ಬಲವನ್ನು ಗ್ಯಾಲಕ್ಸಿಯನ್ನೇ ತನ್ನ ಕೈವಶ ಮಾಡಿಕೊಳ್ಳುವ ಕೆಟ್ಟ ಉದ್ದೇಶಕ್ಕಾಗಿ ಬಳಸಿಕೊಂಡಿತು.
ಎಕ್ಸ್‌ಪಾಂಡೆಡ್ ಯೂನಿವರ್ಸ್‌ನಲ್ಲಿ ಮಾತ್ರ ದುಷ್ಟ ಜೇಡಿಯು ಫೋರ್ಸ್‌ನ ದುಷ್ಟ ಮುಖವನ್ನು ಸಿತ್‌ಗಿಂತ ಹೆಚ್ಚು ಬಳಸಿಕೊಂಡಿದ್ದಾನೆ, ಇಬ್ಬರ ಆಡಳಿತವೇ ಇದಕ್ಕೆ ಪ್ರಮುಖ ಕಾರಣ.(ಸಿತ್ ಮೂಲ ನೋಡಿ)[೨][೩][೪][೫][೬][೭]
ಚಲನಚಿತ್ರಗಳು
[ಬದಲಾಯಿಸಿ]1977, ಮೇ 25ರಂದು ಸ್ಟಾರ್ ವಾರ್ಸ್ ಚಿತ್ರ ಬಿಡುಗಡೆಯಾಗುವುದರೊಂದಿಗೆ ಈ ಕುರಿತ ಚಿತ್ರ ಸರಣಿ ಆರಂಭಗೊಂಡಿತು. ಇದರ ಬೆನ್ನಿಗೇ ಇದೇ ಚಿತ್ರದ ಎರಡು ಸೀಕ್ವೆಲ್‌ಗಳು ಬಿಡುಗಡೆಯಾದವು; 1980 ಮೇ 21ರಂದು ದಿ ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ಬಿಡುಗಡೆಯಾದರೆ,ರಿಟರ್ನ್ ಆಫ್ ದಿ ಜೇಡಿ 1983, ಮೇ 25ರಂದು ತೆರೆ ಕಂಡಿತು. ಸಾಮಾನ್ಯವಾಗಿ ಚಿತ್ರಗಳ ಜಾಹೀರಾತುಗಳನ್ನು ಅವುಗಳ ಉಪ ಶೀರ್ಷಿಕೆಗಳಡಿಯಲ್ಲೇ ಕೊಡಲಾಗುತ್ತದೆಯಾದರೂ, ಅವುಗಳಿಗೆ "ಎಪಿಸೋಡ್ V" ಮತ್ತು "ಎಪಿಸೋಡ್ VI" ಎಂದು ಕ್ರಮಾಂಕ ನೀಡಿದ್ದನ್ನು ಸೀಕ್ವೆಲ್‌ಗಳ ಆರಂಭಿಕ ಪ್ರದರ್ಶನಗಳು ಬಹಿರಂಗಪಡಿಸಿದವು.
ಈ ಸರಣಿಯ ಮೊದಲ ಚಿತ್ರಕ್ಕೆ ಸರಳವಾಗಿ ಸ್ಟಾರ್ ವಾರ್ಸ್ ಎಂದು ಹೆಸರಿಡಲಾಗಿತ್ತಾದರೂ, ನಂತರ ಇದಕ್ಕೆ ಎಪಿಸೋಡ್ IV: ಎ ನ್ಯೂ ಹೋಪ್ ಎಂಬ ಉಪ ಶೀರ್ಷಿಕೆ ಇರಿಸಲಾಯಿತು, ಹೀಗೆ ಇದು ಸೀಕ್ವೆಲ್‌ದ ಚಿತ್ರವನ್ನು ಸರಣಿಯ ಹಿಂದಿನ ಚಿತ್ರದಿಂದ ಪ್ರತ್ಯೇಕಿಸಿತು.[೮]
1997ರಲ್ಲಿ ಸ್ಟಾರ್ ವಾರ್ಸ್ ಬಿಡುಗಡೆಯ 20ನೇ ವಾರ್ಷಿಕೋತ್ಸವದ ನೆನಪಿಗಾಗಿ ಲ್ಯೂಕಾಸ್ ಅವರು, ಮೂರು ಚಿತ್ರಗಳ "ವಿಶೇಷ ಆವೃತ್ತಿ"ಗಳನ್ನು ಚಿತ್ರಮಂದಿರಗಳಿಗೆ ಬಿಡುಗಡೆ ಮಾಡಿದರು. ಮೂಲ ಚಿತ್ರದಲ್ಲಿ ಮಾಡಿದ ಬದಲಾವಣೆಗಳನ್ನು ಮರು ಬಿಡುಗಡೆಯಾದ ಚಿತ್ರಗಳಲ್ಲೂ ಕಾಣಬಹುದಾಗಿತ್ತು.CGIನಲ್ಲಿನ ಸುಧಾರಣೆ ಹಾಗೂ ವಿಶೇಷ ಪರಿಣಾಮಗಳ ತಂತ್ರಜ್ಞಾನಗಳಿಂದ ಸ್ಫೂರ್ತಿಗೊಂಡು ಈ ಬದಲಾವಣೆಗಳನ್ನು ಮಾಡಲಾಗಿತ್ತು. ಮೂಲದ ಚಿತ್ರೀಕರಣ ವೇಳೆ ತೆಗೆಯಲಾಗದ ಸನ್ನಿವೇಶಗಳನ್ನು ಹೊಸ ತಂತ್ರಜ್ಞಾನಗಳನ್ನು ಬಳಸಿ ಚಿತ್ರೀಕರಿಸಲಾಗಿತ್ತು.
ಲ್ಯೂಕಾಸ್ ಅವರು ನಂತರದ ಎಲ್ಲ ಬಿಡುಗಡೆಗಳಲ್ಲೂ ಮೂಲ ಟ್ರೈಲಾಜಿ ಕಥೆಯಲ್ಲಿ ಬದಲಾವಣೆ ಮಾಡುವುದನ್ನು ಮುಂದುವರಿಸಿದರು, ಹೀಗೆ 2004 ಮೇ 21ರಂದು ಟ್ರೈಲಾಜಿಯ ಮೊದಲ DVDಯನ್ನು ಬಿಡುಗಡೆ ಮಾಡಿದರು.[೯]
ಎ ನ್ಯೂ ಹೋಪ್ ಬಿಡುಗಡೆಯಾಗಿ ಎರಡು ದಶಕಗಳು ಕಳೆದ ನಂತರವೂ, ಈ ಟ್ರೈಲಾಜಿಯ ಘಟನೆಗಳನ್ನೇ ಹೊಂದಿರುವ ಚಿತ್ರ ಸರಣಿಗಳು ಬಹುನಿರೀಕ್ಷಿತವಾಗಿಯೇ ಮುಂದುವರಿದವು; 1999, ಮೇ 19ರಂದು ಬಿಡುಗಡೆಯಾದ ಎಪಿಸೋಡ್ I: ದಿ ಫಾಂಟಂ ಮೆನೇಸ್ , 2002, ಮೇ 16ರಂದು ಬಿಡುಗಡೆಯಾದ ಎಪಿಸೋಡ್ II: ಅಟ್ಯಾಕ್ ಆಫ್ ದಿ ಕ್ಲೋನ್ಸ್ ಮತ್ತು 2005, ಮೇ 19ರಂದು ಬಿಡುಗಡೆಯಾದ ಎಪಿಸೋಡ್ III: ರಿವೆಂಜ್ ಆಫ್ ದಿ ಸಿತ್ ಚಿತ್ರಗಳನ್ನು ಒಳಗೊಂಡಿದೆ.[೧೦]
ಕಥಾವಸ್ತು- ಒಂದು ನೋಟ
[ಬದಲಾಯಿಸಿ]ಆಪ್ತ ಸಲಹೆಗಾರ ಕ್ವಿ-ಗೊನ್ ಜಿನ್‌ನೊಂದಿಗೆ ಅನಾಕಿನ್ ಸ್ಕೈವಾಕರ್‌ನನ್ನು ಪತ್ತೆ ಹಚ್ಚುವ ಜೇಡಿ ನೈಟ್, ಆತನನ್ನು ಬೆಳೆಸುವ ಕಥೆಯನ್ನು ಈ ಟ್ರೈಲಾಜಿ ಒಳಗೊಂಡಿದೆ. ಆತ 'ದೇವ ಮಾನವ'ನಾಗಿದ್ದು, ಫೋರ್ಸ್‌ಗೆ ಸಮತೋಲನ ತರುವ ನಿಟ್ಟಿನಲ್ಲಿ ಆತನ ಅವಶ್ಯಕತೆಯಿದೆಯೆಂದು ಭಾವಿಸಿದ್ದಾಗಿ ಪ್ರವಾದಿ ಜೇಡಿ ಭವಿಷ್ಯ ನುಡಿಯುತ್ತಾನೆ.
ಅಷ್ಟರಲ್ಲಿ ತನ್ನ ಭವಿಷ್ಯ ಭಯದಿಂದ ಮಸುಕಾಗಿರುವುದನ್ನು ಜೇಡಿ ಕೌನ್ಸಿಲ್ ನೇತೃತ್ವವಹಿಸಿರುವ ಯೋದಾ ಗ್ರಹಿಸುತ್ತಾನೆ. ಕ್ವಿ-ಗೊನ್‌ನನ್ನು ಸಿತ್ ಲಾರ್ಡ್ ಡರ್ತ್ ಮೌಲ್ ಹತ್ಯೆಗೈದ ಬಳಿಕ ಅನಾಕಿನ್‌ಗೆ ತರಬೇತಿ ನೀಡಲು ಗೊನ್ ಶಿಷ್ಯ ಒಬಿ-ವಾನ್ ಕೆನೊಬಿಯನ್ನು ನೇಮಿಸಲಾಗುತ್ತದೆ, ಆದರೆ ಇದು ಯೋದಾನಿಗೆ ಪೂರ್ತಿ ಇಷ್ಟವಿರುವುದಿಲ್ಲ. ಅದೇ ಸಮಯದಲ್ಲಿ ನಬೂ ಗ್ರಹದ ಮೇಲೆ ದಾಳಿ ನಡೆಯುತ್ತದೆ. ಪ್ರತಿದಾಳಿ ನಡೆಸಲು ಅದರ ಆಡಳಿತಗಾರ್ತಿ ರಾಣಿ ಪಾದ್ಮ್ ಅಮಿಡಲಾ ಜೇಡಿಯ ನೆರವು ಕೋರುತ್ತಾಳೆ. ಇನ್ನೊಂದೆಡೆ ಸಿತ್ ದೊರೆ ಡರ್ತ್ ಸೀಡಿಯಸ್ ತನ್ನ ಇನ್ನೊಂದು ಹೆಸರು ಸೆನೆಟರ್ ಪಾಲ್ಪಟಿನ್ ಸೋಗಿನಲ್ಲಿ ಗ್ಯಾಲಕ್ಸಿ ಸಮುದಾಯದ ಮುಖ್ಯ ಚಾನ್ಸೆಲರ್‌ಅನ್ನು ಪದಚ್ಯುತಗೊಳಿಸಲು ರಹಸ್ಯವಾಗಿ ದಾಳಿಯ ಸಂಚು ರೂಪಿಸುತ್ತಾನೆ.[೩]
ಈ ಟ್ರೈಲಾಜಿ ಚಿತ್ರಕಥೆಯ ಉಳಿದ ಭಾಗದಲ್ಲಿ ಅನಾಕಿನ್ ಸ್ಕೈವಾಕರ್ ದುಷ್ಟರ ಗುಂಪು ಸೇರಿಕೊಳ್ಳುವ ಕಥೆಯಿದೆ, ಜೇಡಿಯನ್ನು ಸೋಲಿಸುವುದಕ್ಕಾಗಿ ಸೀಡಿಯಸ್ ಒಂದು ಸೇನೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಾನೆ ಮತ್ತು ತನ್ನ ಪಾಳೆಯಕ್ಕೆ ಬರುವಂತೆ ಅನಾಕಿನ್‌ಗೆ ಆಮಿಷವೊಡ್ಡುತ್ತಾನೆ.[೪] ಅನಾಕಿನ್ ಮತ್ತು ಪದ್ಮ್ ಪರಸ್ಪರ ಪ್ರೀತಿಸಿ ರಹಸ್ಯವಾಗಿ ವಿವಾಹವಾಗುತ್ತಾರೆ, ಮತ್ತು ಅಂತಿಮವಾಗಿ ಪದ್ಮ್ ಗರ್ಭಿಣಿಯಾಗುತ್ತಾಳೆ. ಅನಾಕಿನ್ ಒಡನೆಯೇ ಸಿಟ್ಟುಗೊಂಡು ಸಿತ್ ದೊರೆ ಡರ್ತ್ ವಾಡೇರ್‌ನಾಗಿ ಪರಿವರ್ತನೆಯಾಗುತ್ತಾನೆ. ಈ ನಡುವೆ ಸೀಡಿಯಸ್ ರಿಪಬ್ಲಿಕ್‌ಅನ್ನು ಗ್ಯಾಲಕ್ಟಿಕ್ ಎಂಪೈರ್‌ನಡಿ ಪುನರ್ ಸಂಘಟಿಸುತ್ತಾನೆ. ಜೇಡಿ ವಂಶವನ್ನೇ ನಿರ್ನಾಮಗೊಳಿಸಲು ನಡೆವ ಯುದ್ಧದಲ್ಲಿ ವಾಡೆರ್ ಕೂಡ ಪಾಲ್ಗೊಳ್ಳುತ್ತಾನೆ, ಹೀಗೆ ವಾಡೆರ್ ಮತ್ತು ಒಬಿ-ವಾನ್ ಲೈಟ್ಸ್‌ಬೇರ್(ಪ್ರಕಾಶ ಹೊರಸೂಸುವ ದಂಡು)ದೊಂದಿಗೆ ಮುಖಾಮುಖಿಯಾಗುತ್ತಾರೆ.
ತಮ್ಮ ಮಾಜಿ ಶಿಷ್ಯನನ್ನು ಸೋಲಿಸುವ ಒಬಿ-ವಾನ್, ವಾಡೆರ್‌ನನ್ನು ಮಾರಣಾಂತಿಕವಾಗಿ ಗಾಯಗೊಳಿಸುತ್ತಾನೆ. ಆದಾಗ್ಯೂ, ವಾಡೆರ್‌ನನ್ನು ಉಳಿಸಿಕೊಳ್ಳಲು ರಣರಂಗಕ್ಕೆ ಆಗಮಿಸುವ ಸೀಡಿಯಸ್ ಆತನಿಗೆ ಕಪ್ಪು ರಕ್ಷಾ ಕವಚ ತೊಡಿಸಿ ಜೀವವುಳಿಸುತ್ತಾನೆ. ಅದೇ ಹೊತ್ತಿಗೆ, ಪದ್ಮ್ ಅವಳಿ ಮಕ್ಕಳಿಗೆ ಜನ್ಮವಿತ್ತು ಸಾವನ್ನಪ್ಪುತ್ತಾಳೆ. ಈ ಅವಳಿಗಳನ್ನು ವಾಡೆರ್‌ಗೆ ತೋರಿಸಲಾಗುವುದಿಲ್ಲ ಮತ್ತು ನೈಜ ಹೆತ್ತವರ ಬಗ್ಗೆ ಆ ಮಕ್ಕಳಿಗೂ ತಿಳಿಯಪಡಿಸುವುದಿಲ್ಲ.[೫]
ಬಾಹ್ಯಾಕಾಶ ನಿಲ್ದಾಣದಲ್ಲಿ ಬೃಹತ್ತಾದ ಡೆತ್ ಸ್ಟಾರ್ ಯೋಜನೆಯನ್ನು ವಾಡೆರ್ ಇನ್ನೇನು ಮುಗಿಸುವ ಹಂತದಲ್ಲಿದ್ದಾಗ ಸೀಡಿಯಸ್‌ನ ದುಷ್ಟ ಸಾಮ್ರಾಜ್ಯದ ವಿರುದ್ಧ ದಂಗೆಕೋರರು ಬಂಡೇಳುತ್ತಾರೆ. ಬಂಡಾಯಗಾರರನ್ನು ಹಿಮ್ಮೆಟ್ಟಿಸಲು ವಾಡೆರ್ ಮತ್ತು ಗ್ಯಾಲಕ್ಸಿಯ ಹಾಲಿ ಚಕ್ರವರ್ತಿ ಸೀಡಿಯಸ್‌ಗೆ ಡೆತ್ ಸ್ಟಾರ್ ವೇದಿಕೆಯಾಗುತ್ತದೆ. ಇದಾದ 19 ವರ್ಷಗಳ ನಂತರ ಮೂಲ ಟ್ರೈಲಾಜಿಯು ಆರಂಭವಾಗುತ್ತದೆ.
ಡೆತ್ ಸ್ಟಾರ್ ಯೋಜನೆಯನ್ನು ಕದ್ದು ಡ್ರಾಯಿಡ್ R2-D2ನಲ್ಲಿ ಅಡಗಿಸಿಟ್ಟ ರಾಜಕುಮಾರಿ ಲೀಯಾ ಒರ್ಗಾನಾಳನ್ನು ವಾಡೆರ್ ಬಂಧಿಸುತ್ತಾನೆ. R2-D2, ತನ್ನ ಪ್ರತಿರೂಪಿ C-3POನೊಂದಿಗೆ ವಾಡೆರ್ ಟಟೂಯಿನ್ ಗ್ರಹಕ್ಕೆ ಪರಾರಿಯಾಗುತ್ತಾನೆ. ಅಲ್ಲಿ, ಅನಾಕಿನ್‌ನ ಮಗ ಲ್ಯೂಕ್ ಸ್ಕೈವಾಕರ್ ಮತ್ತು ಆತನ ಮಲ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಡ್ರಾಯಿಡ್ಸ್‌ಗಳನ್ನು ಖರೀದಿಸುತ್ತಾರೆ. ಲ್ಯೂಕ್ R2-D2ಅನ್ನು ಶುಚಿಗೊಳಿಸುತ್ತಿರುವಾಗ ಆಕಸ್ಮಿಕವಾಗಿ ಟ್ರಿಗರ್ ಒತ್ತಿ ಹೋಗುತ್ತದೆ, ಆಗ ರೊಬೊಟ್‌ನಲ್ಲಿ ಲೀಯಾ ಅಳವಡಿಸಿದ್ದ ಸಂದೇಶ ಬಹಿರಂಗವಾಗುತ್ತದೆ, ಅಲ್ಲದೆ ನೆರವು ಕೋರಿ ಒಬಿ-ವಾನ್‌ಗೆ ಲೀಯಾ ಕಳುಹಿಸಿದ್ದ ಸಂದೇಶವೂ ಬಯಲಾಗುತ್ತದೆ. ನಂತರ ಬೆನ್ ಕೆನೊಬಿಯ ಕೈಕೆಳಗೆ ಹಳೆಯ ಆಶ್ರಮದಲ್ಲಿ ಒಂಟಿ ಜೀವನ ನಡೆಸುತ್ತಿರುವ ಜೇಡಿ ನೈಟ್‌ನನ್ನು ಪತ್ತೆ ಮಾಡುವಲ್ಲಿ ಡ್ರಾಯಿಡ್ಸ್‌ಗಳಿಗೆ ಲ್ಯೂಕ್ ಸಹಕರಿಸುತ್ತಾನೆ. ಲ್ಯೂಕ್‌ಗೆ ಆತನ ತಂದೆಯ ಖ್ಯಾತಿಯನ್ನು ಒಬಿ-ವಾನ್ ತಿಳಿಸುತ್ತಾನೆ, ಆದರೆ ನಿನ್ನ ತಂದೆಯನ್ನು ವಾಡೆರ್ ಸಾಯಿಸಿದ್ದಾಗಿ ಹೇಳುತ್ತಾನೆ.[೧೨] ಒಬಿ-ವಾನ್ ಮತ್ತು ಲ್ಯೂಕ್ ಬಾಹ್ಯಾಕಾಶ ಪೈಲಟ್ ಕೊರೆಲಿಯನ್, ಕಳ್ಳಸಾಗಾಣೆಗಾರ ಹ್ಯಾನ್ ಸೊಲೊ ಮತ್ತು ಆತನ ವುಕೀ ಜನಾಂಗದ ಸ್ನೇಹಿತ-ಪೈಲಟ್ ಚ್ಯುಬಾಕ್ಕಾ ಅವರನ್ನು ಬಂಡುಕೋರರ ಪಾಳೆಯಕ್ಕೆ ಕರೆದೊಯ್ಯಲು ಗೊತ್ತುಮಾಡಿಕೊಳ್ಳುತ್ತಾರೆ. ನಂತರ ಫೋರ್ಸ್ ಬಗ್ಗೆ ಲ್ಯೂಕ್‌ಗೆ ಪಾಠ ಹೇಳಿಕೊಡಲು ಒಬಿ-ವಾನ್ ಪ್ರಾರಂಭಿಸುತ್ತಾನೆ, ಆದರೆ ಲೀಯಾಳನ್ನು ರಕ್ಷಿಸುವ ವೇಳೆ ವಾಡೆರ್‌ನೊಂದಿಗೆ ಹೋರಾಡಿ ಆತ ಸಾವನ್ನಪ್ಪಿದ್ದನ್ನು ತಿಳಿಸುತ್ತಾನೆ. ಆತ ಸತ್ತಿದ್ದರಿಂದಾಗಿಯೇ ಬಂಡಾಯಗಾರ ತಂಡ ಡೆತ್ ಸ್ಟಾರ್ ಯೋಜನೆಯೊಂದಿಗೆ ಪರಾರಿಯಾಗುತ್ತದೆ, ಮತ್ತು ಡೆತ್ ಸ್ಟಾರ್‌ಅನ್ನು ಬಂಡಾಯಗಾರರು ನಾಶಪಡಿಸುತ್ತಾರೆ.[೨]
ಬಂಡುಕೋರರ ಬೇಟೆಯನ್ನು ವಾಡೆರ್ ಮುಂದುವರಿಸುತ್ತಾನೆ, ಮತ್ತು ಎರಡನೇ ಡೆತ್ ಸ್ಟಾರ್ ನಿರ್ಮಿಸಲು ಆರಂಭಿಸುತ್ತಾನೆ. ಈ ನಡುವೆ ಲ್ಯೂಕ್ ಜೇಡಿನಂತೆ ತರಬೇತಿ ಪಡೆಯಲು ಯೋದಾನನ್ನು ಅರಸುತ್ತಾ ಪ್ರಯಾಣಿಸುತ್ತಾನೆ, ಆದರೆ ಹ್ಯಾನ್ ಮತ್ತು ಇತರರನ್ನು ವಾಡೆರ್ ತನ್ನ ವಶಕ್ಕೆ ತೆಗೆದುಕೊಂಡು ಲ್ಯೂಕ್‌ಗೆ ಆಮಿಷವೊಡ್ಡಿದಾಗ ಲ್ಯೂಕ್‌ನ ಪ್ರಯಾಣಕ್ಕೆ ಅಡಚಣೆಯಾಗುತ್ತದೆ. ನಾನೇ ನಿನ್ನ ತಂದೆಯೆಂದು ಲ್ಯೂಕ್‌ಗೆ ಹೇಳುವ ವಾಡೆರ್, ಆ ಮೂಲಕ ಲ್ಯೂಕ್‌ನನ್ನು ದುಷ್ಟಕೂಟಕ್ಕೆ ಸೆಳೆಯಲು ಪ್ರಯತ್ನಿಸುತ್ತಾನೆ.[೬] ಪರಾರಿಯಾಗುವ ಲ್ಯೂಕ್, ಯೋದಾನಲ್ಲಿ ತರಬೇತಿ ಪಡೆಯಲು ವಾಪಸಾಗುತ್ತಾನೆ. ಜೇಡಿ ಆಗುವುದಕ್ಕಿಂತ ಮೊದಲು ತಂದೆಯನ್ನೇ ಎದುರಿಸಬೇಕಾಗಿರುವುದು ಮತ್ತು ಲೀಯಾ ತನ್ನ ಅವಳಿ ಸೋದರಿಯೆಂಬುದು ಲ್ಯೂಕ್‌ಗೆ ತಿಳಿಯುತ್ತದೆ. ಎರಡನೇ ಡೆತ್ ಸ್ಟಾರ್ ಮೇಲೆ ಬಂಡಾಯಗಾರರು ದಾಳಿಯಿಟ್ಟಾಗ, ಚಕ್ರವರ್ತಿಯ ಸಮ್ಮುಖದಲ್ಲೇ ವಾಡೆರ್ ಮತ್ತು ಲ್ಯೂಕ್ ಮುಖಾಮುಖಿಯಾಗುತ್ತಾರೆ. ಯುವ ಜೇಡಿಯು ದುಷ್ಟ ಕೂಟವನ್ನು ಸೇರುವಂತೆ ಲ್ಯೂಕ್‌ನ ಮನವೊಪ್ಪಿಸುವ ಬದಲು, ಲೈಟ್ಸ್‌ಬೇರ್ ದ್ವಂದ್ವ ಯುದ್ಧದಲ್ಲಿ ವಾಡೆರ್‌ನನ್ನು ಸೋಲಿಸಿ ತನ್ನಲ್ಲಿ ಇನ್ನೂ ಸಾಮರ್ಥ್ಯ ಉಳಿದಿದೆ ಎಂಬುದನ್ನು ಸಾಬೀತುಪಡಿಸುತ್ತಾನೆ. ವಾಡೆರ್ ತಾನು ಸಾಯುವ ಮೊದಲು ಚಕ್ರವರ್ತಿಯನ್ನು ಕೊಲ್ಲುತ್ತಾನೆ, ಮತ್ತು ಎರಡನೇ ಡೆತ್ ಸ್ಟಾರ್ ನಾಶವಾಗಿ ಗ್ಯಾಲಕ್ಸಿಯ ಸ್ವಾತಂತ್ರ್ಯ ಪುನಃ ಸ್ಥಾಪನೆಯಾಗುತ್ತದೆ.[೭]
ವಿಷಯಗಳು
[ಬದಲಾಯಿಸಿ]ಕಾಲ್ಪನಿಕ ಪ್ರಕಾರದ ಮೂಲರೂಪದೊಂದಿಗೆ ಸಂಬಂಧವಿರುವ (ಜೇಡಿ) ನೈಟ್ಸ್, ಮಂತ್ರವಾದಿಗಳು, ಮತ್ತು ರಾಜಕುಮಾರಿಯರಂತಹ ಪಾತ್ರಗಳನ್ನು ಸ್ಟಾರ್ ವಾರ್ಸ್ ಚಿತ್ರದಲ್ಲಿ ತೋರಿಸಲಾಗಿದೆ.[೧೩]
ಒಟ್ಟು ಸ್ಟಾರ್ ವಾರ್ಸ್ ಜಗತ್ತು ಚಿತ್ರವನ್ನು ಭಿನ್ನವಾಗಿ ಚಿತ್ರಿಸಲಾಗಿದೆ. ವೈಜ್ಞಾನಿಕ-ಕಾದಂಬರಿ ಮತ್ತು ಕಾಲ್ಪನಿಕ ಚಿತ್ರಗಳಲ್ಲಿರುವಂತೆ ಮೈತುಂಬಿಕೊಂಡಿರುವ ಮತ್ತು ಭವಿಷ್ಯತ್ತಿನ ಸನ್ನಿವೇಶಗಳು ಇದರಲ್ಲಿಲ್ಲ, ಬದಲಾಗಿ ಬೃಹತ್ತಾಗಿದೆ ಮತ್ತು ಆಳವಾಗಿಲ್ಲ.
"ಬಳಸಿದ ವಿಶ್ವ'ದ ಕುರಿತ ಲ್ಯೂಕಾಸ್‌ನ ದೃಷ್ಟಿಕೋನವು ವೈಜ್ಞಾನಿಕ ಕಾದಂಬರಿ-ಹಾರರ್(ಭಯಾನಕ) ಚಿತ್ರ ಅಲಿಯನ್ [೧೪] ನಲ್ಲಿ ಮತ್ತಷ್ಟು ಜನಪ್ರಿಯವಾಯಿತು, ಮ್ಯಾಡ್ ಮಾಕ್ಸ್ 2 ಎಂಬ ದೊಡ್ಡ ಬಾಹ್ಯಾಕಾಶ ನೌಕೆಯಲ್ಲಿ ಇದರ ಸನ್ನಿವೇಶ ನಿರ್ಮಿಸಲಾಗಿತ್ತು, ಸರ್ವನಾಶಗೊಂಡ ಮರುಭೂಮಿಯಲ್ಲಿ ಈ ನೌಕೆಯ ಸೆಟ್ ಹಾಕಲಾಗಿತ್ತು; ಅಂತೆಯೇ ಮುರಿದು ಬೀಳಲಿರುವ ಭವಿಷ್ಯತ್ತಿನ ದೊಡ್ಡ ನಗರದಲ್ಲಿ ಬ್ಲೇಡ್ ರನ್ನರ್ ಸನ್ನಿವೇಶವನ್ನು ನಿರ್ಮಿಸಲಾಯಿತು. ಸಮಾನ ದೃಶ್ಯಗಳು ಮತ್ತು ಚಿತ್ರಗಳ ನಡುವಿನ ಸಂಭಾಷಣೆ, ಮತ್ತು ವಿಶೇಷವಾಗಿ ತಂದೆ ಅನಾಕಿನ್ ಮತ್ತು ಮಗ ಲ್ಯೂಕ್ ಸ್ಕೈವಾಕರ್‌ನ ಪ್ರಯಾಣದ ದೃಶ್ಯಗಳನ್ನು ಏಕಕಾಲಕ್ಕೆ ಚಿತ್ರೀಕರಿಸುವ ಸಂದರ್ಭದಲ್ಲಿ ಲ್ಯೂಕಾಸ್ ಪ್ರಜ್ಞಾಪೂರ್ವಕ ಶ್ರಮ ಹಾಕಿದ್ದಾರೆ.[೩]
ತಾಂತ್ರಿಕ ಮಾಹಿತಿ
[ಬದಲಾಯಿಸಿ]ಸ್ಟಾರ್ ವಾರ್ಸ್ ಸರಣಿಯ ಎಲ್ಲಾ ಆರು ಚಿತ್ರಗಳನ್ನು 2.35:1 ದೃಶ್ಯಾನುಪಾತದಲ್ಲಿ ಚಿತ್ರೀಕರಿಸಲಾಗಿದೆ.
ಅನಾಮೊರ್ಫಿಕ್ ಮಸೂರಗಳನ್ನು ಬಳಸಿ ಮೂಲ ಟ್ರೈಲಾಜಿಯನ್ನು ಚಿತ್ರೀಕರಿಸಲಾಗಿದೆ. ಎಪಿಸೋಡ್ಸ್ IV ಮತ್ತು V ಅನ್ನು ಪಾನವಿಷನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದರೆ, ಎಪಿಸೋಡ್ VI ಅನ್ನು ಜಾಯ್ ದುಂಟಾನ್ ಕ್ಯಾಮೆರಾ ಸ್ಕೋಪಿನಲ್ಲಿ ಚಿತ್ರೀಕರಿಸಲಾಗಿದೆ. ಎಪಿಸೋಡ್ I ಅನ್ನು ಅರ್ರಿ ಫ್ಲೆಕ್ಸ್ ಕ್ಯಾಮೆರಾಗಳಲ್ಲಿ ಹಾಕ್ ಅನಾಮೊರ್ಫಿಕ್ ಮಸೂರಗಳನ್ನು ಅಳವಡಿಸಿ ಚಿತ್ರೀಕರಿಸಲಾಯಿತು, ಮತ್ತು ಎಪಿಸೋಡ್ಸ್ II ಮತ್ತು III ಅನ್ನು ಸೋನಿಯ ಸಿನಿಅಲ್ಟಾ ಉನ್ನತ ಸ್ತರದ ಡಿಜಿಟಲ್ ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲಾಗಿದೆ.[೧೫] ಎ ನ್ಯೂ ಹೋಪ್ ಚಿತ್ರದ ಧ್ವನಿ ಪರಿಣಾಮಗಳ ಮೇಲುಸ್ತುವಾರಿ ನೋಡಲು ಲ್ಯೂಕಾಸ್ ಅವರು ಬೆನ್ ಬರ್ಟ್‌ರನ್ನು ನೇಮಕ ಮಾಡಿಕೊಂಡಿದ್ದರು.
ಬರ್ಟ್‌ರ ಸಾಧನೆಯನ್ನು ಗುರುತಿಸಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಅವರಿಗೆ ವಿಶೇಷ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ, ಅವರು ಮಾಡಿದ ಕೆಲಸಕ್ಕೆ ಅದುವರೆಗೆ ಯಾವುದೇ ಪ್ರಶಸ್ತಿಗಳಿರಲಿಲ್ಲ.[೧೬]
ರಿಟರ್ನ್ ಆಫ್ ದಿ ಜೇಡಿ ಗಾಗಿ ಲ್ಯೂಕಾಸ್ ಫಿಲ್ಮ್ ಸಂಸ್ಥೆಯು THX ಎಂಬ ಧ್ವನಿ ನಕಲುಮಾಡುವ ಗುಣಮಟ್ಟವನ್ನು ಅಭಿವೃದ್ಧಿಪಡಿಸಿತು.[೧೭] ಎಲ್ಲಾ ಆರು ಸ್ಟಾರ್ ವಾರ್ಸ್ ಚಿತ್ರಗಳಿಗೆ ಸಂಗೀತ ನೀಡಿದವರು ಜಾನ್ ವಿಲ್ಲಿಯಮ್ಸ್.
ಚಿತ್ರದ ವಿವಿಧ ಪಾತ್ರಗಳು ಮತ್ತು ಪ್ರಮುಖ ಭಾವನೆಗಳಿಗೆ ಸಂಗೀತ ಪ್ರಧಾನ ಮಾಡುವುದರೊಂದಿಗೆ ಸ್ಟಾರ್ ವಾರ್ಸ್ ಚಿತ್ರಕ್ಕಾಗಿ ಲ್ಯೂಕಾಸ್ ಮಾಡಿದ ವಿನ್ಯಾಸವು ಅದ್ದೂರಿ ಸಂಗೀತವನ್ನು ಒಳಗೊಂಡಿದೆ. ವಿಲ್ಲಿಯಮ್ಸ್‌ರ ಸ್ಟಾರ್ ವಾರ್ಸ್ ಶೀರ್ಷಿಕೆ ಸಂಗೀತ ಆಧುನಿಕ ಸಂಗೀತ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಜನಪ್ರಿಯ ಸಂಗೀತಗಳಲ್ಲೊಂದು ಎಂಬ ಖ್ಯಾತಿಗೆ ಪಾತ್ರವಾಯಿತು.[೧೮]
ಮೂಲ ಟ್ರೈಲಾಜಿಗಾಗಿ ಲೈಟ್ಸ್‌ಬೇರ್ ಯುದ್ಧ ನೃತ್ಯದ ತಾಂತ್ರಿಕತೆಯನ್ನು ಹಾಲಿವುಡ್‌ನ ಕತ್ತಿವರಿಸೆ ನಿಪುಣ ಬಾಬ್ ಆಂಡರ್ಸನ್ ಅಭಿವೃದ್ಧಿಪಡಿಸಿದರು. ನಟ ಮಾರ್ಕ್ ಹಮೀಲ್‌ಗೆ ಆಂಡರ್ಸನ್ ತರಬೇತಿ ನೀಡಿದ್ದೂ ಅಲ್ಲದೆ ವಾಡೆರ್ ದಿರಿಸಿನಲ್ಲಿ ಡರ್ತ್ ವಾಡೆರ್‌ನಾಗಿ ಕತ್ತಿವರಿಸೆಯ ಎಲ್ಲ ಸಾಹಸಗಳನ್ನು ಪ್ರದರ್ಶಿಸಿದರು. ಮೂಲ ಸ್ಟಾರ್ ವಾರ್ಸ್ ಟ್ರೈಲಾಜಿಯಲ್ಲಿ ಬಾಬ್ ಆಂಡರ್ಸನ್ ನಿರ್ವಹಿಸಿದ ಪಾತ್ರವನ್ನು ರಿಕ್ಲೇಮಿಂಗ್ ದಿ ಬ್ಲೇಡ್ ಚಿತ್ರದಲ್ಲಿ ಎತ್ತಿ ತೋರಿಸಲಾಗಿದೆ, ಇದರಲ್ಲಿ ಚಲನಚಿತ್ರಗಳಿಗಾಗಿ ಲೈಟ್ಸ್‌ಬೇರ್ ತಂತ್ರವನ್ನು ಅಭಿವೃದ್ಧಿಪಡಿಸಿದ ಯುದ್ಧ ನೃತ್ಯ ಕಲಾವಿದರಾಗಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.[೧೯]
ನಿರ್ಮಾಣ ಇತಿಹಾಸ
[ಬದಲಾಯಿಸಿ]ಮೂಲ ಟ್ರೈಲಾಜಿ
[ಬದಲಾಯಿಸಿ]1971ರಲ್ಲಿ ಯುನಿವರ್ಸಲ್ ಸ್ಟುಡಿಯೋಸ್ ಸಂಸ್ಥೆ ಅಮೆರಿಕನ್ ಗ್ರಾಫಿಟಿ ಮತ್ತು ಸ್ಟಾರ್ ವಾರ್ಸ್ ಎಂಬ ಎರಡು ಚಿತ್ರಗಳ ಒಪ್ಪಂದಕ್ಕೆ ಸಮ್ಮತಿಸಿತು, ಆದರೆ ಸ್ಟಾರ್ ವಾರ್ಸ್ ಆರಂಭಿಕ ಹಂತದಲ್ಲೇ ತಿರಸ್ಕರಿಸಲ್ಪಟ್ಟಿತ್ತು ಎಂಬುದು ಬೇರೆ ವಿಚಾರ.
ಅಮೆರಿಕನ್ ಗ್ರಾಫಿಟಿ 1973ರಲ್ಲಿ ಪೂರ್ಣಗೊಂಡಿತು. ಕೆಲವು ತಿಂಗಳ ನಂತರ ಲ್ಯೂಕಾಸ್ "ದಿ ಜರ್ನಲ್ ಆಫ್ ದಿ ವಿಲ್ಸ್" ಎಂಬ ಲಘು ಬರಹವನ್ನು ಬರೆದರು; ಇದರಲ್ಲಿ ಬಾಹ್ಯಾಕಾಶ ಯೋಧ "ಜೇಡಿ-ಬೆಂದು"ವಾಗಿ ಸಿ.ಜೆ.ಥೋರ್ಪೆಯು ದಂತಕಥೆ ಮೇಸ್ ವಿಂಡಿಯಿಂದ ತರಬೇತಿ ಪಡೆಯುವ ಕಥೆಯಿದೆ.[೨೦] ಈ ಕಥೆಯನ್ನು ಅರ್ಥೈಸಿಕೊಳ್ಳಲು ಬಹಳ ಕಷ್ಟವಿದೆ ಎಂದು ಹತಾಶರಾದ ಲ್ಯೂಕಾಸ್, ಬಳಿಕ ದಿ ಸ್ಟಾರ್ ವಾರ್ಸ್ ಎಂಬ 13 ಪುಟಗಳ ನಿರೂಪಣೆಯನ್ನು ಪ್ರಸ್ತುತಪಡಿಸಿದರು, ಇದು ಅಕಿರಾ ಕುರೊಸಾವಾರ ದಿ ಹಿಡನ್ ಫೋಟ್ರೆಸ್ ನ ರಿಮೇಕಾಗಿತ್ತು.[೨೧]
1974ರಲ್ಲಿ ತಮ್ಮ ಕಥೆಗೆ ಸಿತ್, ಡೆತ್ ಸ್ಟಾರ್ ಮತ್ತು ಅನ್ನಿಕಿನ್ ಸ್ಟಾರ್‌ಕಿಲ್ಲರ್ ಎಂಬ ಯುವ ನಾಯಕನ ಪಾತ್ರವನ್ನು ಸೇರಿಸಿಕೊಂಡು ಕಥೆಯನ್ನು ಇನ್ನಷ್ಟು ವಿಸ್ತೃತಗೊಳಿಸಿ ಕಥಾವಸ್ತುವಿನ ಕರಡು ರಚಿಸಿದರು. ಎರಡನೇ ಕರಡು ಪ್ರತಿಯಲ್ಲಿ ಕಥೆಯನ್ನು ಅವರು ಮತ್ತಷ್ಟು ಸರಳಗೊಳಿಸಿ ಲ್ಯೂಕ್ ಎಂಬ ಯುವ ನಾಯಕನನ್ನೂ ಪರಿಚಯಿಸಿದರು. ಇಲ್ಲಿ ಬುದ್ಧಿವಂತನಾಗಿರುವ ಜೇಡಿ ನೈಟ್, ಅನಾಕಿನ್ ಲ್ಯೂಕನ ತಂದೆಯಾಗುತ್ತಾನೆ. ಅತೀಂದ್ರಿಯ ಶಕ್ತಿಯಾಗಿ ಫೋರ್ಸ್ ಅನ್ನೂ ಪರಿಚಯಿಸಲಾಯಿತು. ಮುಂದಿನ ಕರಡು ಪ್ರತಿಯಲ್ಲಿ ತಂದೆಯ ಪಾತ್ರವನ್ನು ತೆಗೆದು, ಬೆನ್ ಕೆನೊಬಿ ಎನ್ನುವ ಬದಲಿ ಪಾತ್ರದಿಂದ ಸ್ಥಾನವನ್ನು ತುಂಬಲಾಯಿತು. 1976ರಲ್ಲಿ ಪ್ರಧಾನ ಛಾಯಾಗ್ರಹಣಕ್ಕಾಗಿ ನಾಲ್ಕನೇ ಕರಡು ಪ್ರತಿಯನ್ನು ಸಿದ್ಧಗೊಳಿಸಲಾಯಿತು. ಚಿತ್ರಕ್ಕೆ ಅಡ್ವೆಂಚರ್ಸ್ ಆಫ್ ಲ್ಯೂಕ್ ಸ್ಟಾರ್‌ಕಿಲ್ಲರ್, ಜರ್ನಲ್ ಆಫ್ ದಿ ವಿಲ್ಸ್‌ನಿಂದ ತೆಗೆದುಕೊಂಡಂತೆ, ಸಾಗಾ I: ದಿ ಸ್ಟಾರ್ ವಾರ್ಸ್ ಎಂಬ ಶೀರ್ಷಿಕೆಯನ್ನು ಇಡಲಾಯಿತು.
ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಲ್ಯೂಕನ ಹೆಸರನ್ನು ಸ್ಕೈವಾಕರ್ ಎಂದು ಲ್ಯೂಕಾಸ್ ಬದಲಾಯಿಸಿದನು ಮತ್ತು ಚಿತ್ರದ ಹೆಸರನ್ನು ದಿ ಸ್ಟಾರ್ ವಾರ್ಸ್ ಎಂದು ಇನ್ನಷ್ಟು ಸರಳೀಕರಿಸಿದನು, ನಂತರ ಸ್ಟಾರ್ ವಾರ್ಸ್ ಶೀರ್ಷಿಕೆ ಅಂತಿಮವಾಯಿತು.[೨೨]
ಈ ಚಿತ್ರ ಮುಂದೆ ಸರಣಿಯಾದೀತೆಂದು ಲ್ಯೂಕಾಸ್ ಆ ಹೊತ್ತಿಗೆ ನಿರೀಕ್ಷಿಸಿರಲಿಲ್ಲ. ಚಿತ್ರಕಥೆಯ ನಾಲ್ಕನೇ ಕರಡು ಪ್ರತಿಯಲ್ಲಿ ಮಾರ್ಮಿಕ ಬದಲಾವಣೆಗಳನ್ನು ಮಾಡಲಾಯಿತು, ಚಿತ್ರದ ಕೊನೆಯಲ್ಲಿ ಡೆತ್ ಸ್ಟಾರ್ ನಾಶವಾಗುವುದರೊಂದಿಗೆ ಚಕ್ರಾಧಿಪತ್ಯವೇ ನಶಿಸುವ ಸ್ವ-ನಿರ್ಮಾಣದ ಚಿತ್ರವಾಗಿ ಲ್ಯೂಕಾಸ್‌ಗೆ ಇನ್ನೂ ಹೆಚ್ಚಿನ ತೃಪ್ತಿ ನೀಡಿತು.
ಆದಾಗ್ಯೂ, ಇದು ಸಾಹಸ ಚಿತ್ರಗಳ ಸರಣಿಗಳ ಪೈಕಿ ಮೊದಲನೆಯದ್ದೆಂದು ಲ್ಯೂಕಾಸ್ ಈ ಹಿಂದೆಯೇ ಹೇಳಿಕೊಂಡಿದ್ದ ರು. ಈ ತೆರನಾದ ಚಿತ್ರಗಳ ಅನುಕ್ರಮದಲ್ಲಿ ತನ್ನ ಚಿತ್ರ ಮೊದಲನೆಯದ್ದಾಗದು ಎಂಬುದನ್ನು ಆನಂತರ ಲ್ಯೂಕಾಸ್ ಅರಿತುಕೊಂಡರು, ಆದರೆ ಇದು ಸಾಹಸಗಾಥೆಗಳ ಸಾಲಿನಲ್ಲಿ ಎರಡನೇ ಟ್ರೈಲಾಜಿ ಚಿತ್ರವಾಗಿದೆ. ಜಾರ್ಜ್ ಲ್ಯೂಕಾಸ್ ಬರೆದ ಸ್ಪ್ಲಿಂಟರ್ ಆಫ್ ದಿ ಮೈಂಡ್ಸ್ ಐ ನ 1994ರ ಆವೃತ್ತಿಯ ಮುನ್ನುಡಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ:
ಸ್ಟಾರ್ ವಾರ್ಸ್ ಬರೆಯಲು ನಾನು ಆರಂಭಿಸಿದಾಗ ಚಿತ್ರಕಥೆ ಇಷ್ಟು ದೊಡ್ಡದಾಗಿರಲಿಲ್ಲ, ಈ ಚಿತ್ರಕಥೆಯನ್ನು ಒಂದೇ ಚಿತ್ರದಲ್ಲಿ ಹಿಡಿದಿಡಲಾಗದು ಎಂಬುದೂ ನನ್ನ ಅರಿವಿಗೆ ಬಂತು.
ಸ್ಕೈವಾಕರ್ಸ್ ಮತ್ತು ಜೇಡಿ ನೈಟ್ಸ್‌ಗಳ ಸಾಹಸಗಾಥೆಗಳು ಬಯಲಾಗುತ್ತಾ ಹೋದಂತೆ, ಈ ಮೂರು ಟ್ರೈಲಾಜಿಗಳನ್ನು ಹೇಳಲು ಕನಿಷ್ಟ ಒಂಭತ್ತು ಚಿತ್ರಗಳಾದರೂ ಬೇಕಾದಿತು ಎಂಬುದನ್ನು ಮನಗಾಣಲಾರಂಭಿಸಿದೆ, ಇದರೊಂದಿಗೆ ಹಿಂದಿನ ಕಥೆ ಮತ್ತು ನಂತರದ ಕಥೆ ಮಧ್ಯೆ ದಾರಿ ಕಂಡುಕೊಳ್ಳುವುದರ ಮೂಲಕ, ಮಧ್ಯದ ಕಥೆಯನ್ನು ಬರೆಯಲು ನಾನು ಸಿದ್ಧಗೊಳ್ಳುತ್ತಿದ್ದೇನೆ ಎಂಬುದೂ ನನ್ನ ಅರಿವಿಗೆ ಬಂತು.
"ದಿ ಪ್ರಿನ್ಸೆಸ್ ಆಫ್ ಒಂಡಾಸ್," ಸೀಕ್ವೆಲ್ ಚಿತ್ರಕ್ಕೆ ಪೀಠಿಕೆ ಎರಡನೇ ಕರಡು ಪ್ರತಿಯಲ್ಲಿತ್ತು, ಅಲ್ಲದೆ ಇದುವರೆಗೂ ಈ ಚಿತ್ರದ ಸೀಕ್ವೆಲ್ ಅನ್ನು ಯಾರೂ ನಿರ್ಮಿಸಿರಲಿಲ್ಲ. ಕೆಲವು ತಿಂಗಳ ನಂತರ ಮೂರನೇ ಕರಡು ಪ್ರತಿ ಸಿದ್ಧವಾಗುಷ್ಟರ ಹೊತ್ತಿಗೆ, ಲ್ಯೂಕಾಸ್ ಮಾತುಕತೆ ನಡೆಸಿ ಚಿತ್ರದ ಎರಡು ಸೀಕ್ವೆಲ್ ಗಳನ್ನು ನಿರ್ಮಿಸಲು ಹಕ್ಕುಗಳನ್ನು ಪಡೆದರು. ಕೆಲವು ದಿನಗಳ ಬಳಿಕ ಲ್ಯೂಕಾಸ್ ಲೇಖಕ ಅಲನ್ ಡೀನ್ ಫೋಸ್ಟರ್‌ರನ್ನು ಭೇಟಿಯಾಗಿ ಚಿತ್ರದ ಎರಡು ಸೀಕ್ವೆಲ್ ಗಳನ್ನು ಕಾದಂಬರಿಗಳ ಸ್ವರೂಪದಲ್ಲಿ ಬರೆದುಕೊಡುವಂತೆ ವಿನಂತಿಸಿದರು.[೨೩]
ಸ್ಟಾರ್ ವಾರ್ಸ್ ಚಿತ್ರ ಸರಣಿಗಳು ಯಶಸ್ವಿಯಾದಲ್ಲಿ ಈ ಕಾದಂಬರಿಗಳನ್ನು ಕೂಡ ಚಿತ್ರಕಥೆಗಳನ್ನಾಗಿ ಪರಿವರ್ತಿಸಬಹುದು ಎಂಬುದು ಲ್ಯೂಕಾಸ್‌ರ ಇರಾದೆಯಾಗಿತ್ತು.[೨೪] ಕಾದಂಬರಿ ಬರೆಯುವ ಪ್ರಕ್ರಿಯೆಗೆ ಪೂರಕವಾಗಿ ವಿವರವಾದ ಪರಿಷ್ಕೃತ ಹಿನ್ನಲೆ ಕಥೆ ಕೂಡ ಆ ಹೊತ್ತಿಗೆ ಅವರಲ್ಲಿ ಸಿದ್ಧವಾಗಿತ್ತು.[೨೫]
ಸ್ಟಾರ್ ವಾರ್ಸ್ ಯಶಸ್ವಿಯೆಂದು ಸಾಬೀತಾದಾಗ, ಇದೇ ಚಿತ್ರವನ್ನು ಸಮಗ್ರ ಧಾರವಾಹಿ ರೂಪದಲ್ಲಿ ಬಳಸಿಕೊಳ್ಳಲು ಲ್ಯೂಕಾಸ್ ತೀರ್ಮಾನಿಸಿದರು. ಆದರೆ ಒಂದು ಹಂತದಲ್ಲಿ ಈ ಎಲ್ಲ ಸರಣಿಗಳಿಂದ ಹೊರಬಂದು ಬಿಡಲು ಲ್ಯೂಕಾಸ್ ಪರಿಗಣಿಸಿದ್ದೂ ಉಂಟು.[೨೬] ಈ ನಡುವೆ ಸ್ಕೈವಾಕರ್ ರಾಂಚ್ ಎಂಬ ಸ್ವತಂತ್ರ ಚಿತ್ರನಿರ್ಮಾಣ ಕೇಂದ್ರವನ್ನು ನಿರ್ಮಿಸುವ ಯೋಚನೆಯೂ ಲ್ಯೂಕಾಸ್‌ಗಿತ್ತು, ಮತ್ತು ಇದೇ ಸರಣಿಗಳನ್ನು ಬಳಸಿಕೊಂಡು ಆರ್ಥಿಕವಾಗಿ ಭದ್ರ ಬುನಾದಿ ಹಾಕುವ ಕನಸು ಕಂಡಿದ್ದರು.[೨೭] ಅಲನ್ ಡೀನ್ ಫೋಸ್ಟರ್ ಅವರು ಅದಾಗಲೇ ಚಿತ್ರ ಮೊದಲ ಸೀಕ್ವೆಲ್ ಕಾದಂಬರಿ ಬರೆಯಲು ಶುರು ಹಚ್ಚಿಕೊಂಡಿದ್ದರು, ಆದರೆ ಫೋಸ್ಟರ್‌ರ ಕಾದಂಬರಿಯನ್ನು ಚಿತ್ರಕ್ಕೆ ತಕ್ಕಂತೆ ಹೊಂದಿಸುವ ತಮ್ಮ ಯೋಜನೆಯನ್ನು ಲ್ಯೂಕಾಸ್ ಕೈಬಿಟ್ಟರು; ನಂತರದ ವರ್ಷ ಸ್ಪ್ಲಿಂಟರ್ ಆಫ್ ದಿ ಮೈಂಡ್ಸ್ ಐ ಶೀರ್ಷಿಕೆಯಲ್ಲಿ ಈ ಪುಸ್ತಕ ಬಿಡುಗಡೆಯಾಯಿತು.
ಜೇಮ್ಸ್ ಬಾಂಡ್ ಸರಣಿಗಳ ರೀತಿಯಲ್ಲೇ ಯಾವುದೇ ನಿರ್ದಿಷ್ಟ ಸಂಖ್ಯೆಗಳನ್ನು ಗಮನದಲ್ಲಿಡದೆ ಚಿತ್ರ ಸರಣಿಗಳನ್ನು ಹೊರತರುವ ಕುರಿತು ಲ್ಯೂಕಾಸ್ ಯೋಚಿಸಲಾರಂಭಿಸಿದರು.
ತಮ್ಮ ಪ್ರತಿಯೊಬ್ಬ ಸ್ನೇಹಿತನೂ ನಿರ್ದೇಶನದತ್ತ ಗಮನಹರಿಸಬೇಕು ಮತ್ತು ಆ ಮೂಲಕ ಚಿತ್ರ ಸರಣಿಗೆ ಅಪೂರ್ವ ವ್ಯಾಖ್ಯಾನಗಳನ್ನು ನೀಡಬೇಕೆಂದು ತಾವು ಬಯಸಿದ್ದಾಗಿ 1977 ಅಗಸ್ಟ್ ತಿಂಗಳು ರೋಲಿಂಗ್ ಸ್ಟೋನ್ ಗೆ ನೀಡಿದ ಸಂದರ್ಶನದಲ್ಲಿ ಲ್ಯೂಕಾಸ್ ತಿಳಿಸಿದ್ದಾರೆ. ಡರ್ತ್ ವಾಡೆರ್ ದುರುಳರ ಗುಂಪಿಗೆ ಸೇರಿಕೊಂಡು, ಲ್ಯೂಕನ ತಂದೆಯನ್ನು ಸಾಯಿಸಿ ಮತ್ತು ಗ್ಯಾಲಕ್ಸಿ ರಿಪಬ್ಲಿಕ್ ಪತನವಾಗುತ್ತಿದ್ದಂತೆ ಬೆನ್ ಕೆನೊಬಿಯೊಂದಿಗೆ ಜ್ವಾಲಾಮುಖಿಯಾಗಿ ಯುದ್ಧ ಮಾಡುವ ನಂತರದ ಕಥೆಯು ಒಂದು ಅತ್ಯದ್ಭುತ ಸೀಕ್ವೆಲ್ ಚಿತ್ರವಾಗಬಹುದು ಎಂದು ಲ್ಯೂಕಾಸ್ ಹೇಳಿದ್ದಾರೆ.
ಆ ವರ್ಷದ ಕೊನೆಗೆ ಲ್ಯೂಕಾಸ್, ತಮ್ಮ ಜೊತೆ ಸ್ಟಾರ್ ವಾರ್ಸ್ II ಬರೆಯಲು ವೈಜ್ಞಾನಿಕ ಕಾದಂಬರಿಕಾರ ಲೇಹ್ ಬ್ರಾಕೆಟ್ ಅವರನ್ನು ನೇಮಿಸಿಕೊಂಡರು. ಇಬ್ಬರು ಕಥೆಯ ಬಗ್ಗೆ ಸಾಕಷ್ಟು ಚರ್ಚಿಸಿದರು, ಮತ್ತು 1977 ನವೆಂಬರ್ ತಿಂಗಳ ಕೊನೆಗೆ ಲ್ಯೂಕಾಸ್ ದಿ ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ಎಂಬ ಶೀರ್ಷಿಕೆಯುಳ್ಳ ಲಿಖಿತ ಕಥಾವಸ್ತುವನ್ನು ಸಿದ್ಧಪಡಿಸಿದರು. ತಾನು ಲ್ಯೂಕನ ತಂದೆಯೆಂಬುದನ್ನು ಡರ್ತ್ ವಾಡೆರ್ ಬಹಿರಂಗಪಡಿಸದೇ ಇರುವುದನ್ನು ಹೊರತುಪಡಿಸಿದರೆ, ಲಿಖಿತ ಪ್ರತಿಯ ಕಥಾವಸ್ತು ಲ್ಯೂಕಾಸ್‌ರ ಕೊನೆಯ ಚಿತ್ರದಂತೆಯೇ ಇತ್ತು. ಲ್ಯೂಕನಿಗೆ ತಿಳಿವಳಿಕೆ ನೀಡಲು ಲ್ಯೂಕನ ತಂದೆ ಪ್ರೇತದ ರೂಪದಲ್ಲಿ ಪ್ರತ್ಯಕ್ಷವಾಗುವ ರೀತಿಯಲ್ಲಿ ಬ್ರಾಕೆಟ್ ಮೊದಲ ಕರಡು ಪ್ರತಿಯಲ್ಲಿ ಬರೆಯಬೇಕಿತ್ತು.[೨೮]
1978ರ ಆರಂಭದಲ್ಲೇ ಬ್ರಾಕೆಟ್ ಮೊದಲ ಕರಡು ಪ್ರತಿಯನ್ನು ಪೂರ್ಣಗೊಳಿಸಿದರು; ಆಕೆಯ ಕಾದಂಬರಿ ನಿರಾಶೆಯಿಂದ ಕೂಡಿತ್ತು ಎಂದು ಲ್ಯೂಕಾಸ್ ಹೇಳಿದ್ದಾರೆ, ಆದರೆ ಆ ಬಗ್ಗೆ ಆಕೆಯೊಂದಿಗೆ ಚರ್ಚಿಸುವ ಮೊದಲೇ ಕ್ಯಾನ್ಸರ್‌ನಿಂದಾಗಿ ಆಕೆ ತೀರಿಕೊಂಡರು.[೨೯] ನಂತರ ಯಾವುದೇ ಲೇಖಕರು ಲಭ್ಯರಿಲ್ಲದ ಕಾರಣ, ಲ್ಯೂಕಾಸ್ ಸ್ವತಃ ಮುಂದಿನ ಕರಡು ಪ್ರತಿಯನ್ನು ಬರೆಯಬೇಕಾಯಿತು. ಲ್ಯೂಕಾಸ್ ಈ ಕರಡು ಪ್ರತಿಯಲ್ಲಿ ಮೊದಲ ಬಾರಿಗೆ "ಎಪಿಸೋಡ್" ಬಳಸಿ, ಚಿತ್ರಗಳಿಗೆ ಕ್ರಮಾಂಕಗಳನ್ನು ನೀಡತೊಡಗಿದರು; ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ಚಿತ್ರವು ಎಪಿಸೋಡ್ II ಎಂದಾಯಿತು.[೩೦] ದಿ ಸೀಕ್ರೆಟ್ ಹಿಸ್ಟರಿ ಆಫ್ ಸ್ಟಾರ್ ವಾರ್ಸ್ ನಲ್ಲಿ ಮೈಕೆಲ್ ಕಾಮಿನ್ಸ್ಕಿ ವಾದಿಸುವಂತೆ, ಮೊದಲ ಕರಡು ಪ್ರತಿಯಲ್ಲಾದ ನಿರಾಶೆಯಿಂದಾಗಿ ಕಥೆ ಆರಿಸಿಕೊಳ್ಳುವ ವಿಚಾರದಲ್ಲಿ ಲ್ಯೂಕಾಸ್ ಭಿನ್ನವಾಗಿ ಯೋಚಿಸಿರಬಹುದು.[೩೧] ಹೊಸ ವಿಷಯದಲ್ಲಿನ ತಿರುವನ್ನು ಲ್ಯೂಕಾಸ್ ಚೆನ್ನಾಗಿ ಬಳಸಿಕೊಂಡರು: ಇಲ್ಲಿ ಡರ್ತ್ ವಾಡೆರ್ ತಾನು ಲ್ಯೂಕನ ತಂದೆಯೆಂದು ಹೇಳಿಕೊಳ್ಳುತ್ತಾನೆ. ಬರೀ ಚಿತ್ರಕಥೆ ಬರೆಯಲು ಸುದೀರ್ಘ ಅವಧಿ ತೆಗೆದುಕೊಂಡ ಮೊದಲ ಚಿತ್ರಕ್ಕೆ ಹೋಲಿಸಿದರೆ, ಈ ಕರಡು ಪ್ರತಿ ಬರೆಯುವುದರಲ್ಲಿ ಆನಂದವಿದೆ ಎಂದು ಸ್ವತಃ ಲ್ಯೂಕಾಸ್ ಹೇಳಿಕೊಂಡಿದ್ದಾರೆ. 1978ರಲ್ಲಿ ಲ್ಯೂಕಾಸ್ ತ್ವರಿತವಾಗಿ ಮತ್ತೆರಡು ಕರಡು ಪ್ರತಿಯನ್ನು ಬರೆದರು.[೩೨] ಕಾರ್ಬೊನೈಟ್‌ನಲ್ಲಿ ಸೆರೆ ಸಿಕ್ಕುವ ಹ್ಯಾನ್ ಸೊಲೊ, ಕೈದಿಯಾಗುವ ಹಂತದವರೆಗೂ ಲ್ಯೂಕಾಸ್ ತಮ್ಮ ಚಿತ್ರಕಥೆಯನ್ನು ಎಳೆದರು.[೬]
ಡರ್ತ್ ವಾಡೆರ್ ಲ್ಯೂಕನ ತಂದೆಯಾಗುವ ಹೊಸ ಕಥೆ, ಸರಣಿಯ ಮೇಲೆ ಭಾರಿ ಪರಿಣಾಮವನ್ನು ಬೀರಿತು. ಈ ಕಥೆ ಬಗ್ಗೆ 1978ರ ಮೊದಲು ಅಲೋಚನೆಯಾಗಲೀ ಅಥವಾ ಕಲ್ಪಿಸಿಕೊಂಡಿರುವ ಸಾಧ್ಯತೆಗಳು ಕೂಡ ಕಡಿಮೆ, ಮೊದಲ ಚಿತ್ರದಲ್ಲಿ ಬೇರೆಯೇ ಕಥಾವಸ್ತುವಿದ್ದು, ಅಲ್ಲಿ ವಾಡೆರ್ ಲ್ಯೂಕನ ತಂದೆಯಾಗಿರುವುದಿಲ್ಲ;[೩೩] 1978ರ ಮೊದಲು ಈ ಕಥಾವಸ್ತುವಿನ ಬಗ್ಗೆ ಎಲ್ಲೂ ಪ್ರಸ್ತಾಪವಿಲ್ಲ ಎಂದು ಮೈಕೆಲ್ ಕಾಮಿನ್ಸ್ಕಿ ತಮ್ಮ ಪುಸ್ತಕದಲ್ಲಿ ವಾದಿಸುತ್ತಾರೆ. ಈ ಹೊಸ ಕಥಾವಸ್ತುವನ್ನು ಸೇರಿಸಿ ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ನ ಎರಡನೇ ಮತ್ತು ಮೂರನೇ ಕರಡು ಪ್ರತಿ ಬರೆದ ನಂತರ, ಲ್ಯೂಕಾಸ್ ತಾವು ರಚಿಸಿದ ಹಿನ್ನಲೆ ಕಥೆಯನ್ನು ವಿಮರ್ಶಿಸಿದರು: ಅನಾಕಿನ್ ಸ್ಕೈವಾಕರ್ ಬೆನ್ ಕೆನೊಬಿಯ ಪ್ರತಿಭಾವಂತ ವಿದ್ಯಾರ್ಥಿಯಾಗಿರುತ್ತಾನೆ; ಅವನಿಗೆ ಲ್ಯೂಕ್ ಎಂಬ ಮಗುವಿರುತ್ತದೆ, ಆದರೆ ಚಕ್ರವರ್ತಿ ಪಾಲ್ಪಟಿನ್‌ನ ಪ್ರಭಾವಕ್ಕೊಳಗಾಗಿ ದುರುಳರ ಗುಂಪು ಸೇರುತ್ತಾನೆ (ಇಲ್ಲಿ ಪಾಲ್ಪಟಿನ್ ಕೇವಲ ರಾಜಕಾರಣಿಯಾಗದೆ ಸಿತ್ ಆಗಿ ಪರಿವರ್ತನೆಯಾಗುತ್ತಾನೆ) ಜ್ವಾಲಾಮುಖಿಯಿರುವ ಸ್ಥಳದಲ್ಲಿ ಬೆನ್ ಕೆನೊಬಿಯೊಂದಿಗೆ ಅನಾಕಿನ್ ಹೋರಾಡಿ ಗಾಯಗೊಳ್ಳುತ್ತಾನೆ, ಆದರೆ ಡರ್ತ್ ವಾಡೇರನಾಗಿ ಮರಳಿ ಬದುಕುತ್ತಾನೆ.
ಈ ನಡುವೆ ಕೆನೊಬಿ ಲ್ಯೂಕನನ್ನು ಟಟೂಯಿನ್ ಗ್ರಹದಲ್ಲಿ ಅಡಗಿಸಿಡುತ್ತಾನೆ, ಅಷ್ಟೊತ್ತಿಗೆ ರಿಪಬ್ಲಿಕ್ ಸಾಮ್ರಾಜ್ಯವಾಗಿ ಪರಿವರ್ತನೆಯಾಗಿರುತ್ತದೆ ಮತ್ತು ಜೇಡಿ ನೈಟ್ಸ್‌ಗಳನ್ನು ವಾಡೆರ್ ಬೇಟೆಯಾಡುತ್ತಾನೆ.[೩೪]
ಈ ಹೊಸ ಹಿನ್ನಲೆ ಕಥೆಯೊಂದಿಗೆ, ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ಮೂಲಕಥೆಯು ನಂತರದ ಕರಡು ಪ್ರತಿಯಲ್ಲಿ ಎಪಿಸೋಡ್ II ನಿಂದ ಎಪಿಸೋಡ್ V ಗೆ ಬದಲಾಗಿ ಒಟ್ಟು ಸರಣಿಯು ಟ್ರೈಲಾಜಿಯಾಗಲಿದೆ ಎಂದು ಲ್ಯೂಕಾಸ್ ತೀರ್ಮಾನಿಸಿದರು.[೩೨] ಮುಂದಿನ ಕರಡು ಪ್ರತಿಗಳನ್ನು ಬರೆಯಲು ರೈಡರ್ಸ್ ಆಫ್ ದಿ ಲಾಸ್ಟ್ ಆರ್ಕ್ ಅನ್ನು ಆಗಷ್ಟೇ ಬರೆದು ಮುಗಿಸಿದ ಲಾರೆನ್ಸ್ ಕಾಸ್ದನ್‌ರನ್ನು ಗೊತ್ತುಮಾಡಿಕೊಳ್ಳಲಾಯಿತು, ಮತ್ತು ಅವರಿಗೆ ನಿರ್ದೇಶಕ ಇರ್ವಿನ್ ಕೆರ್ಶ್ನೆರ್‌ರಿಂದ ಹೆಚ್ಚುವರಿ ಮಾಹಿತಿ ಕೂಡ ಒದಗಿಸಲಾಯಿತು. ಆದರೆ ಈ ಚಿತ್ರವನ್ನು ಕಸ್ದಾನ್, ಕೆರ್ಶ್ನೆರ್ ಮತ್ತು ನಿರ್ಮಾಪಕ ಗ್ಯಾರಿ ಕರ್ಟ್ಜ್ ಒಂದು ಗಂಭೀರ ಮತ್ತು ವಯಸ್ಕರ ಚಿತ್ರದಂತೆ ಕಂಡರು. ಚಿತ್ರದಲ್ಲಿ ಹೊಸ ಮತ್ತು ದುರುಳರ ಕಥೆಯಿದ್ದುದು ಅವರ ನಿಲುವಿಗೆ ಪೂರಕವಾಯ್ತು, ಮತ್ತು ಈ ಚಿತ್ರ ಸರಣಿಯನ್ನು ಮೊದಲ ಚಿತ್ರದಿಂದ ಅಭಿವೃದ್ಧಿಪಡಿಸಲಾಗಿತ್ತು.[೩೫]
1981ರಲ್ಲಿ ಎಪಿಸೋಡ್ VI (ಇದಕ್ಕೆ ನಂತರ ರಿವೆಂಜ್ ಆಫ್ ದಿ ಜೇಡಿ ಎಂಬ ಶೀರ್ಷಿಕೆ ಇಡಲಾಗಿತ್ತು) ಬರೆಯಲಾರಂಭಿಸುವಷ್ಟರಲ್ಲಿ ಸಾಕಷ್ಟು ಬದಲಾವಣೆಗಳಾಗಿತ್ತು.
ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ನಿರ್ಮಾಣ ಒತ್ತಡದಿಂದ ಕೂಡಿತ್ತು ಮತ್ತು ದುಬಾರಿಯಾಗಿತ್ತು, ಇದರಿಂದಾಗಿ ಲ್ಯೂಕಾಸ್‌ರ ವೈಯಕ್ತಿಕ ಜೀವನ ಹದಗೆಡತೊಡಗಿತು.
ಅದಾಗಲೇ ಸಾಕಷ್ಟು ದಣಿದಿದ್ದ ಲ್ಯೂಕಾಸ್, ಇನ್ನು ಮುಂದೆ ಯಾವುದೇ ಸ್ಟಾರ್ ವಾರ್ಸ್ ಚಿತ್ರ ಮಾಡಲು ಬಯಸುವುದಿಲ್ಲ ಎಂದರು. 1983ರಲ್ಲಿ ಟೈಮ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ತಾವು ಸರಣಿಯನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಿದರು. 1981ರಲ್ಲಿ ದೊರೆತ ಲ್ಯೂಕಾಸ್‌ರ ಅಪೂರ್ಣ ಕರಡು ಪ್ರತಿಗಳಲ್ಲಿ, ಲ್ಯೂಕನನ್ನು ಪಡೆಯುವುದಕ್ಕಾಗಿ ಚಕ್ರವರ್ತಿಯೊಂದಿಗೆ ಡರ್ತ್ ವಾಡೆರ್ ಹೋರಾಡುವ ಕಥಾವಸ್ತುವಿದೆ, ಮತ್ತು ಎರಡನೇಯ ಚಿತ್ರಕಥೆಯಲ್ಲಿ ಅಂದರೆ "ಪರಿಷ್ಕೃತ ಅಪೂರ್ಣ ಕರಡು ಪ್ರತಿ"ಯಲ್ಲಿ, ವಾಡೆರ್ ಸಹಾನುಭೂತಿಯಿಂದ ತುಂಬಿರುವ ಪಾತ್ರವಾಗಿ ಬದಲಾಗುತ್ತಾನೆ.
ಲಾರೆನ್ಸ್ ಕಸ್ದಾನ್‌ರನ್ನು ಒಟ್ಟು ಸರಣಿಯ ಮೇಲುಸ್ತುವಾರಿ ನೋಡಿಕೊಳ್ಳಲು ಮತ್ತೆ ಗೊತ್ತುಮಾಡಿಕೊಳ್ಳಲಾಯಿತು, ಸರಣಿಯ ಕೊನೆಯ ಕರಡು ಪ್ರತಿಗಳಲ್ಲಿ ವಾಡೆರ್ ದೋಷ ವಿಮೋಚನೆಗೊಳ್ಳುತ್ತಾನೆ ಮತ್ತು ಅಂತಿಮವಾಗಿ ಸತ್ಯ ಸಂಗತಿ ಬಯಲಾಗುತ್ತದೆ. ಪಾತ್ರದಲ್ಲಿನ ಈ ಬದಲಾವಣೆ "ಡರ್ತ್ ವಾಡೆರ್‌ನ ದುರಂತ ಕಥೆ"ಯ ಕಥಾವಸ್ತುವಿಗೆ ಉತ್ತೇಜಕವಾಗಿದೆ, ಕೃತಿ ಆಧಾರಿತ ಚಿತ್ರಗಳಿಗೆ ಅದೇ ಮೂಲಾಧಾರವೂ ಹೌದು.[೩೬]
ಕೃತಿ ಆಧರಿತ ಟ್ರೈಲಾಜಿ
[ಬದಲಾಯಿಸಿ]1987ರಲ್ಲಿ ವಿಚ್ಛೇದನ ಇತ್ಯರ್ಥದಲ್ಲೇ ತಮ್ಮ ಬಹುಪಾಲು ಐಶ್ವರ್ಯವನ್ನೆಲ್ಲಾ ಕಳೆದುಕೊಂಡ ಬಳಿಕ, ಲ್ಯೂಕಾಸ್‌ಗೆ ಸ್ಟಾರ್ ವಾರ್ಸ್ ಗೆ ವಾಪಸಾಗುವ ಬಯಕೆಯಿರಲಿಲ್ಲ. ರಿಟರ್ನ್ ಆಫ್ ದಿ ಜೇಡಿ ತೆರೆ ಕಾಣುವಷ್ಟರ ಹೊತ್ತಿಗೆ ಟ್ರೈಲಾಜಿಯ ಸೀಕ್ವೆಲ್ ನಿರ್ಮಿಸುವುದನ್ನು ಅನಧಿಕೃತವಾಗಿ ರದ್ದುಪಡಿಸಿದರು.[೩೭]
ಆದಾಗ್ಯೂ, ಸ್ವಲ್ಪ ಮಟ್ಟಿಗೆ ಪಕ್ವವಾಗಿದ್ದ ಕಾದಂಬರಿ ಆಧಾರಿತ ಚಿತ್ರಗಳು ಲ್ಯೂಕಾಸ್ ಮೇಲೆ ಮೋಡಿ ಮಾಡುವುದನ್ನು ಮುಂದುವರಿಸಿದವು.
ಕಪ್ಪು ಕುದುರೆಗಳ ವಿನೋದ ಸರಣಿ ಮತ್ತು ಟಿಮೊತಿ ಝಾನ್ರ ಕಾದಂಬರಿಗಳ ಟ್ರೈಲಾಜಿಯ ಬೆನ್ನಿಗೇ ಸ್ಟಾರ್ ವಾರ್ಸ್ ಮತ್ತೊಮ್ಮೆ ಜನಪ್ರಿಯವಾಗಿದ್ದರಿಂದ, ಸ್ಟಾರ್ ವಾರ್ಸ್‌ಗೆ ಇನ್ನೂ ನೋಡುಗರಿದ್ದಾರೆ ಎಂಬುದನ್ನು ಲ್ಯೂಕಾಸ್ ಮನಗಂಡರು.
ಈಗ ಲ್ಯೂಕಾಸ್‌ರ ಮಕ್ಕಳು ಪ್ರೌಢರಾಗುತ್ತಿದ್ದಾರೆ, ಇದೀಗ CGI ತಂತ್ರಜ್ಞಾನವೂ ಬಂದಿರುವುದರಿಂದ ನಿರ್ದೇಶನಕ್ಕೆ ಮರಳುವ ಬಗ್ಗೆ ಯೋಚಿಸುತ್ತಿದ್ದಾರೆ.[೩೮] 1993ರ ಹೊತ್ತಿಗೆ ಕೃತಿ ಆಧರಿತ ಚಿತ್ರಗಳ ಜಗತ್ತಿಗೆ ಲ್ಯೂಕಾಸ್ ವಾಪಸಾಗುತ್ತಿರುವುದನ್ನು ವಿವಿಧ ಮ್ಯಾಗಜಿನ್ ಘೋಷಿಸಿಯೂ ಬಿಟ್ಟಿತು. ಅವರು ಕಥೆಯ ಸಾರಾಂಶ ಕುರಿತು ಕಾರ್ಯ ಆರಂಭಿಸಿದರು, ಅನಾಕಿನ್ ಸ್ಕೈವಾಕರ್ ದುಷ್ಟನಾಗಿ ಪರಿವರ್ತನೆಯಾದುದರ ಪರಾಮರ್ಶೆ ಹೊಂದಿರುವ ಈ ಸರಣಿಯು ದುರಂತ ಕಥೆಯಾಗಲಿರುವ ಸುಳಿವನ್ನು ನೀಡಿದರು.
ಹೊಸತನ ಉಳಿಸಿಕೊಳ್ಳುವುದರ ಜೊತೆಗೆ ಮೂಲ ಕಥೆಗಳಿಂದ ಬೇರ್ಪಡದೆ ಕೃತಿ ಆಧಾರಿತ ಚಿತ್ರಗಳನ್ನು ಹೇಗೆ ನಿರ್ಮಿಸಬಹುದೆಂಬ ಬಗ್ಗೆ ಲ್ಯೂಕಾಸ್ ಯೋಚಿಸಲಾರಂಭಿಸಿದರು; ಇತಿಹಾಸ, ಹಿನ್ನಲೆ ಕಥೆ, ಪ್ರೀಕ್ವೆಲ್ ಅಥವಾ ಮೂಲಗಳೊಂದಿಗೆ ಸಂಬಂಧವಿರದಿದ್ದ ಮಾಹಿತಿಗಳನ್ನು ಕಲೆ ಹಾಕುವುದು ಮೊದಲ ಕೆಲಸವಾಗಿತ್ತು. ಆದರೆ ಅನಾಕಿನ್‌ನ ಬಾಲ್ಯದಿಂದ ಆರಂಭವಾಗಿ, ಆತ ಸಾಯುವ ತನಕದ ಒಂದು ಸುದೀರ್ಘ ಕಥೆಯ ಆರಂಭಕ್ಕೆ ಈಗ ನಾವು ರೂಪು ನೀಡಬಹುದು ಎಂಬುದನ್ನು ಲ್ಯೂಕಾಸ್ ಕಂಡುಕೊಂಡರು. ಇದು ಚಿತ್ರ ಸರಣಿಗಳನ್ನು "ಸಾಹಸಗಾಥೆ" ಗಳನ್ನಾಗಿ ಪರಿವರ್ತಿಸುವುದರಲ್ಲಿ ಅಂತಿಮ ಹೆಜ್ಜೆಯಾಗಿತ್ತು.[೩೯]
1994ರಲ್ಲಿ ಲ್ಯೂಕಾಸ್ ಎಪಿಸೋಡ್ I: ದಿ ಬಿಗಿನಿಂಗ್ ಶೀರ್ಷಿಕೆ ನೀಡಿ ಮೊದಲ ಚಿತ್ರಕಥೆ ಬರೆಯಲಾರಂಭಿಸಿದರು. ಆ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ, ಇನ್ನೆರಡು ಚಿತ್ರಗಳನ್ನು ನಿರ್ದೇಶಿಸುವುದಾಗಿ ಲ್ಯೂಕಾಸ್ ಘೋಷಿಸಿದರು. ಅದೇ ಸಮಯದಲ್ಲಿ ಎಪಿಸೋಡ್ II ಗಾಗಿ ಕಾರ್ಯಾರಂಭಿಸಿದರು.[೪೦] ಪ್ರಧಾನ ಛಾಯಾಗ್ರಹಣದ ಕೆಲವು ವಾರಗಳ ಮುನ್ನವಷ್ಟೇ ಎಪಿಸೋಡ್ II ರ ಮೊದಲ ಕರಡು ಪ್ರತಿ ಪೂರ್ಣಗೊಂಡಿತು, ಅಲ್ಲದೆ ಕರಡು ಪ್ರತಿಯನ್ನು ಪರಿಷ್ಕರಿಸಲು ದಿ ಯಂಗ್ ಇಂಡಿಯಾನಾ ಜೋನ್ಸ್ ಕ್ರಾನಿಕಲ್ಸ್ ಲೇಖಕ ಜೊನಾಥನ ಹೇಲ್ಸ್ ಅವರನ್ನು ಗೊತ್ತುಪಡಿಸಿಕೊಂಡರು.[೪೧]
ಚಿತ್ರದ ಶೀರ್ಷಿಕೆ ಬಗ್ಗೆ ಇನ್ನೂ ಖಚಿತ ತೀರ್ಮಾನ ಇಲ್ಲದಿರುವಾಗಲೇ, ಲ್ಯೂಕಾಸ್ ವಿನೋದವಾಗಿ ಚಿತ್ರವನ್ನು "ಜಾರ್ ಜಾರ್ಸ್ ಗ್ರೇಟ್ ಎಡ್ವೆಂಚರ್" ಎಂದು ಕರೆದರು.[೪೨]
ದಿ ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ಬರಹದಲ್ಲಿ, ಲ್ಯಾಂಡೊ ಕ್ಯಾಲ್ರಿಸ್ಸಿಯನ್ ಒಬ್ಬ ತದ್ರೂಪಿಯೆಂದೂ ಮತ್ತು ಎ ನ್ಯೂ ಹೋಪ್ ನಲ್ಲಿ ಕೆನೊಬಿ ಹೇಳಿರುವಂತೆ "ತದ್ರೂಪಿಗಳ ಯುದ್ಧ" ಜರುಗಿದ ತದ್ರೂಪಿಗಳ ಗ್ರಹದಿಂದ ಈತ ಬಂದವನೆಂದೂ ಲ್ಯೂಕಾಸ್ ಆರಂಭದಲ್ಲಿ ತೀರ್ಮಾನಿಸಿದರು;[೪೩][೪೪] ದೂರದ ಗ್ರಹದಲ್ಲಿರುವ ತದ್ರೂಪಿ ಶಾಕ್‌ಟ್ರೂಪರ್ಸ್‌ಗಳ ಸೇನೆಯು ರಿಪಬ್ಲಿಕ್‌ದ ಮೇಲೆ ದಾಳಿ ನಡೆಸಿತು ಮತ್ತು ಜೇಡಿ ನೈಟ್ಸ್‌ಗಳು ಹಿಮ್ಮೆಟ್ಟಿಸಿದರು ಎಂಬ ಪರ್ಯಾಯ ಹೊಸ ವಿಷಯವನ್ನು ಲ್ಯೂಕಾಸ್ ನಂತರ ಮುಂದಿಟ್ಟರು.[೪೫]
ಈ ಒಟ್ಟು ಘಟನೆ ಪಾಲ್ಪಟಿನ್ ಬೇಕೆಂದೇ ಮಾಡಿದ ಕುತಂತ್ರವೆಂಬ ಹೊಸ ವಿಷಯದ ಸೇರ್ಪಡೆಯೊಂದಿಗೆ, ಹಿನ್ನಲೆ ಕಥೆಯ ಮೂಲ ಅಂಶಗಳು ಕಂತುಗಳಿಗೆ ಮೂಲಾಧಾರವಾಯಿತು.[೪]
ಅಟ್ಯಾಕ್ ಆಫ್ ದಿ ಕ್ಲೋನ್ಸ್ ಬಿಡುಗಡೆಯಾಗುವುದಕ್ಕಿಂತ ಮೊದಲೇ ಲ್ಯೂಕಾಸ್ ಕಂತುಗಳಿಗಾಗಿ ಕೆಲಸ ಮಾಡಲು ಆರಂಭಿಸಿದರು, ಕಲ್ಪನಾಶೀಲ ಕಲಾವಿದರನ್ನು ನೀಡುವುದರೊಂದಿಗೆ ಈ ಚಿತ್ರ ಏಳು ತದ್ರೂಪಿ ಸಮರಗಳ ಜೋಡಣೆಯೊಂದಿಗೆ ಬಿಡುಗಡೆಯಾಗಲಿತ್ತು.[೪೬] ಆ ಬೇಸಿಗೆಯಲ್ಲಿ ಕಥಾವಸ್ತುವನ್ನು ಲ್ಯೂಕಾಸ್ ವಿಮರ್ಶಿಸುತ್ತಿದ್ದಾಗ್ಯೂ, ಒಟ್ಟು ಚಿತ್ರದ ಸಾರಾಂಶವನ್ನು ಮೂಲಭೂತವಾಗಿ ತಾನು ಪುನರ್-ಸಂಘಟಿಸಿದ್ದಾಗಿ ಹೇಳಿಕೊಂಡಿದ್ದಾರೆ.[೪೭] ಅನಾಕಿನ್ ದುರುಳರ ಪಾಲಾದಾಗ ಕಾಣಿಸಿಕೊಂಡ ಸಮಸ್ಯೆಗಳಿಂದಾಗಿ, ಒಟ್ಟು ಕಥೆಯಲ್ಲಿ ಲ್ಯೂಕಾಸ್ ಭಾರಿ ಬದಲಾವಣೆಗಳನ್ನು ಮಾಡಬೇಕಾಗಿ ಬಂತು, ಮೊದಲು ಆರಂಭಿಕ ಸನ್ನಿವೇಶದಲ್ಲಿ ಪಾಲ್ಪಟಿನ್ ಅಪಹರಿಸಲ್ಪಟ್ಟಂತೆ ಮತ್ತು ದುರುಳರ ಗುಂಪು ಸೇರಿಕೊಂಡ ಅನಾಕಿನ್ ತನ್ನ ಮೊದಲ ಕಾರ್ಯಾಚರಣೆಯಲ್ಲಿ ದೂಕುನನ್ನು ಕೊಂದಂತೆ ಚಿತ್ರಕಥೆಯನ್ನು ಬದಲಾಯಿಸಬೇಕಾಗಿ ಬಂತು. ಇದಕ್ಕೆ ತಮ್ಮ ಬಳಿ ಪೂರಕವಾದ ಸಾಕ್ಷ್ಯಗಳಿವೆಯೆಂದು ದಿ ಸೀಕ್ರೆಟ್ ಹಿಸ್ಟರಿ ಆಫ್ ಸ್ಟಾರ್ ವಾರ್ಸ್ ನಲ್ಲಿ ಮೈಕೆಲ್ ಕಾಮಿನ್ಸ್ಕಿ ಹೇಳಿಕೊಂಡಿದ್ದಾರೆ.[೪೮] 2003ರಲ್ಲಿ ಚಿತ್ರದ ಪ್ರಧಾನ ಛಾಯಾಗ್ರಹಣ ಪೂರ್ಣಗೊಂಡ ಬಳಿಕ, ಅನಾಕಿನ್‌ನ ಪಾತ್ರದಲ್ಲೂ ಲ್ಯೂಕಾಸ್ ಭಾರಿ ಬದಲಾವಣೆಗಳನ್ನು ಮಾಡಿದರು, ಆತ ದುರುಳರ ಗುಂಪು ಸೇರಿಕೊಂಡ ಬಗೆಯನ್ನು ಪರಿಷ್ಕರಿಸಿ ಬರೆದರು; ಆ ಪ್ರಕಾರ ಪದ್ಮ್‌ಳನ್ನು ಸಾವಿನ ದವಡೆಯಿಂದ ಪಾರುಮಾಡುವುದಕ್ಕಾಗಿ ಅನಾಕಿನ್ ಹುಡುಕಾಟ ಆರಂಭಿಸುತ್ತಾನೆ, ಇದರ ಬದಲು ಹಿಂದಿನ ಆವೃತ್ತಿಯಲ್ಲಿ ಜೇಡಿ ಮುಂತಾದವರು ದುಷ್ಟರೆಂದು ಅನಾಕಿನ್ ಪ್ರಾಮಾಣಿಕವಾಗಿ ನಂಬಿದ್ದು ಮತ್ತು ರಿಪಬ್ಲಿಕ್ ಅನ್ನು ಆಕ್ರಮಿಸಿಕೊಳ್ಳಲು ಸಂಚು ರೂಪಿಸಿದ್ದು ಒಳಗೊಂಡಂತೆ ಹಲವು ಉಪ ಕಥೆಗಳಿದ್ದವು.
ಈ ಮೂಲಭೂತ ಮರು-ಪರಿಷ್ಕರಣೆಯ ವೇಳೆ ಪ್ರಧಾನ ವಿಷಯದ ತಿದ್ದುಪಡಿ ಮತ್ತು ಹೊಸ ಹಾಗೂ 2004ರಲ್ಲಿ ಪಿಕ್-ಅಪ್ಸ್ ಸಂದರ್ಭದಲ್ಲಿ ಚಿತ್ರೀಕರಿಸಿದ ಪರಿಷ್ಕೃತ ದೃಶ್ಯಗಳ ತಿದ್ದುಪಡಿ ಹೀಗೆ ಎರಡನ್ನೂ ಪೂರ್ಣಗೊಳಿಸಿದಂತಾಗಿತ್ತು.[೪೯]
ಸರಣಿಗಳು ಅಪೂರ್ವ ಘಟನೆಯಾಗಿ ಮನೆಮಾತಾದಾಗ ಈ ಸರಣಿಗಾಗಿ ತಾವು ಬರೆದಿರುವುದನ್ನು ಲ್ಯೂಕಾಸ್ ಆಗಾಗ್ಗೆ ಉತ್ಪ್ರೇಕ್ಷಿಸಿ ಹೇಳಿದ್ದುಂಟು; ಈ ಪೈಕಿ ಹೆಚ್ಚಿನವುಗಳು 1978ರ ನಂತರದ ಅವಧಿಯಲ್ಲಿ ಬೆಳಕಿಗೆ ಬಂದಿದ್ದವು.
ಈ ಉತ್ಪ್ರೇಕ್ಷೆಗಳನ್ನು ಪ್ರಚಾರಕ್ಕಾಗಿ ಮತ್ತು ಭದ್ರತಾ ದೃಷ್ಟಿಯಿಂದ ಮಾಡಲಾಗಿತ್ತು ಎಂದು ಮೈಕೆಲ್ ಕಾಮಿನ್ಸ್ಕಿ ವಿವರಿಸಿದ್ದಾರೆ.
ಈ ಸರಣಿ ಕಥೆ ಹಲವು ವರ್ಷಗಳಲ್ಲಿ ಅಮೂಲಾಗ್ರವಾಗಿ ಬದಲಾವಣೆಯಾಗಿದ್ದರಿಂದ, ಮೂಲ ಕಥೆಯನ್ನೇ ಪ್ರಮುಖ ಕಥೆಯನ್ನಾಗಿ ಮಾಡುವುದು ಲ್ಯೂಕಾಸ್‌ರ ಯಾವತ್ತೂ ಇರಾದೆಯಾಗಿತ್ತು, ಏಕೆಂದರೆ ಅವರ ದೃಷ್ಟಿಕೋನದ ಪ್ರಕಾರ ವೀಕ್ಷಕರು ಮುಖ್ಯ ವಿಷಯವನ್ನು ಮಾತ್ರ ನೋಡುತ್ತಾರಾದ್ದರಿಂದ ಕಾಮಿನ್ಸ್ಕಿ ಸರಣಿಯನ್ನು ತರ್ಕಬದ್ಧವಾಗಿಸಿದರು.[೫][೫೦]
ಭವಿಷ್ಯದ ಬಿಡುಗಡೆಗಳು
[ಬದಲಾಯಿಸಿ]2005ರಲ್ಲಿ ನಡೆದ ಶೊವೆಸ್ಟ್ ಸಮಾವೇಶದಲ್ಲಿ ಲ್ಯೂಕಾಸ್ ಹೊಸ ತಂತ್ರಜ್ಞಾನವನ್ನು ಪ್ರದರ್ಶಿಸಿದರು, ತಮ್ಮ ಎಲ್ಲ ಆರು ಚಿತ್ರಗಳನ್ನು ಹೊಸ 3-D ಚಿತ್ರ ಮಾದರಿಯಲ್ಲಿ ಬಿಡುಗಡೆಗೊಳಿಸಲು ಯೋಜಿಸಿರುವುದಾಗಿ ಹೇಳಿದರು. ಈ ಪೈಕಿ ಎ ನ್ಯೂ ಹೋಪ್ 2007ರಲ್ಲಿ ತೆರೆ ಕಂಡಿತು.[೫೧] ಆದಾಗ್ಯೂ 2007 ಜನವರಿಯಲ್ಲಿ, ಸ್ಟಾರ್ ವಾರ್ಸ್ ಸಾಹಸ ಕಥೆಗಳನ್ನು 3-D ರೂಪದಲ್ಲಿ ಬಿಡುಗಡೆಗೊಳಿಸಲು ನಿರ್ದಿಷ್ಟ ಯೋಜನೆಗಳಾಗಲೀ ಅಥವಾ ದಿನಾಂಕಗಳಾಗಲಿ ಇಲ್ಲ ಎಂದು ಲ್ಯೂಕಾಸ್ ಫಿಲ್ಮ್ ಸಂಸ್ಥೆ StarWars.comನಲ್ಲಿ ಹೇಳಿತು.
ಜುಲೈ 2007ರಲ್ಲಿ ಯುರೋಪಿನಲ್ಲಿ ನಡೆದ ಉತ್ಸವದಲ್ಲಿ, ಲ್ಯೂಕಾಸ್‌ಫಿಲ್ಮ್ ಸಂಸ್ಥೆ ಎಲ್ಲ ಆರು ಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು 3-D ಮಾದರಿಗೆ ಪರಿವರ್ತಿಸಲು ಯೋಜಿಸಿರುವುದನ್ನು ರಿಕ್ ಮೆಕಲಂ ದೃಢಪಡಿಸಿದರು, ಆದರೆ ವೆಚ್ಚದಲ್ಲಿ ಕಡಿತ ಮಾಡಿ ಪ್ರತಿಯೊಬ್ಬರಿಗೂ ಲಾಭದಾಯಕವಾಗುವ ರೀತಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಂಪೆನಿಗಳಿಗಾಗಿ ಕಾಯುತ್ತಿರುವುದಾಗಿ ಹೇಳಿದರು.[೫೨]
2008 ಜುಲೈಯಲ್ಲಿ ಡ್ರೀಮ್‌ವರ್ಕ್ಸ್ ಅನಿಮೇಷನ್ಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ರಿ ಕಟ್ಜೆಂಬರ್ಗ್, ಜಾರ್ಜ್ ಲ್ಯೂಕಾಸ್ ಎಲ್ಲ ಆರು ಚಿತ್ರಗಳನ್ನು 3D ರೂಪದಲ್ಲಿ ಪುನರ್ ನಿರ್ಮಿಸಬೇಕೆಂದರು.[೫೩]
ಆರು ಸ್ಟಾರ್ ವಾರ್ಸ್ ಚಿತ್ರಗಳ ಹೆಚ್ಚಿನ ಪೂರ್ಣಗೊಂಡ ಆವೃತ್ತಿಗಳನ್ನು ಮುಂದಿನ ತಲೆಮಾರಿನ ಹೋಮ್-ವಿಡಿಯೋ ರೂಪದಲ್ಲಿ ಭವಿಷ್ಯದಲ್ಲಿ ಬಿಡುಗಡೆ ಮಾಡುವುದಾಗಿ ಲ್ಯೂಕಾಸ್ ಈ ಹಿಂದೆಯೇ ಸುಳಿವು ನೀಡಿದ್ದರು.[೫೪][೫೫]
ಚಿತ್ರಗಳು ಅಂತಿಮವಾಗಿ ತೆರೆ ಕಾಣಲಿರುವ ಹಿನ್ನೆಲೆಯಲ್ಲಿ ಕೊನೆ ಕ್ಷಣದ ಯಾವುದೇ ಹೊಂದಾಣಿಕೆಗಳು, ಬದಲಾವಣೆಗಳು, ಸೇರ್ಪಡೆಗಳು, ಮತ್ತು/ಅಥವಾ ತೆಗೆಯುವಿಕೆಗಳನ್ನು ಮಾಡಲು ಅವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿದ್ದವು. ದಿ ಫಾಂಟಮ್ ಮೆನೇಸ್ ನಿಂದ ತೆಗೆದ ಒಂದು ತುಣುಕಿನಲ್ಲಿ ಮಾರ್ಪಾಡು ಮಾಡಿ ರಿವೆಂಜ್ ಆಫ್ ದಿ ಸಿತ್ DVDಯಲ್ಲಿ ಸೇರಿಸಿ ಬಿಡುಗಡೆ ಮಾಡಲಾಯಿತು, ಇದರಲ್ಲಿ ಕಂಪ್ಯೂಟರ್ ನಿರ್ಮಿಸಿದ ಯೋದಾ ಪಾತ್ರ ಮೂಲ ಪಪ್ಪೆಟ್ ಸ್ಥಾನವನ್ನು ತುಂಬುತ್ತದೆ; ರಿವೆಂಜ್ ಆಫ್ ದಿ ಸಿತ್ ಕೆಲಸ ಆರಂಭಿಸುವ ಮೊದಲು ಪರೀಕ್ಷಾರ್ಥವಾಗಿ ಯೋದಾನ ಪಾತ್ರವನ್ನು ಸೃಷ್ಟಿಸಲಾಗಿದೆ ಎಂದು ಅನಿಮೇಷನ್ ನಿರ್ದೇಶಕ ರಾಬ್ ಕೊಲ್ಮನ್ ಹೇಳಿಕೆ ನೀಡಿದರು.[೫೬] ಲ್ಯೂಕಾಸ್‌ಫಿಲ್ಮ್ ಸಂಸ್ಥೆ ಚಿತ್ರ ಜಗತ್ತಿನಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲಿದೆ ಎಂದು ಲ್ಯೂಕಾಸ್‌ಫಿಲ್ಮ್‌ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಜಿಮ್ ವರ್ಡ್ ಘೋಷಿಸಿದರು. "ತಂತ್ರಜ್ಞಾನ ಬೆಳೆದಂತೆ, ನಾವೂ ಅದನ್ನು ಅಳವಡಿಸಿಕೊಂಡು ನಮ್ಮ ಗ್ರಾಹಕರು ಸುಲಭವಾಗಿ ಬಳಸಬಹುದಾದ ರೀತಿಯಲ್ಲಿ ಚಿತ್ರವನ್ನು ನಿರ್ಮಿಸುತ್ತೇವೆ. ಈಗ ಪರಿಸ್ಥಿತಿ ಸಾಕಷ್ಟು ಉತ್ತಮವಾಗಿದೆ, ಆದರೆ ಕೆಲಸ ಯಾವತ್ತೂ ನಡೆಯುತ್ತಲೇ ಇರುತ್ತದೆ."[೫೭]
ಗಲ್ಲಾ ಪೆಟ್ಟಿಗೆ ಸಾಧನೆ
[ಬದಲಾಯಿಸಿ]ಚಿತ್ರ | ಬಿಡುಗಡೆಯಾದ ದಿನಾಂಕಗಳು | ಗಲ್ಲಾ ಪೆಟ್ಟಿಗೆ ಆದಾಯ | ಗಲ್ಲಾ ಪೆಟ್ಟಿಗೆ ಆದಾಯವನ್ನು ಹಣದುಬ್ಬರಕ್ಕೆ ಹೊಂದಾಣಿಸಲಾಗಿದೆ | ಗಲ್ಲಾ ಪೆಟ್ಟಿಗೆ ಶ್ರೇಯಾಂಕ | |||||
---|---|---|---|---|---|---|---|---|---|
ಅಮೇರಿಕಾ ಸಂಯುಕ್ತ ಸಂಸ್ಥಾನ | ವಿದೇಶ | ವಿಶ್ವಾದ್ಯಂತ | ಅಮೇರಿಕಾ ಸಂಯುಕ್ತ ಸಂಸ್ಥಾನ | ವಿದೇಶ | ವಿಶ್ವಾದ್ಯಂತ | ಸ್ವದೇಶದಲ್ಲಿ ಸರ್ವಕಾಲಿಕ | ವಿಶ್ವಾದ್ಯಂತ ಸರ್ವಕಾಲಿಕ | ||
Star Wars Episode IV: A New Hope [೫೮] | ಮೇ 25, 2006 | $460,998,007 | $314,400,000 | $775,398,007 | $1,278,898,700 | $872,207,136 | $2,151,105,836 | #3 | #19 |
Star Wars Episode V: The Empire Strikes Back [೫೯] | May 21, 1980 | $290,475,067 | $247,900,000 | $538,375,067 | $704,937,000 | $601,614,053 | $1,306,551,053 | #33 | #52 |
Star Wars Episode VI: Return of the Jedi [೬೦] | ಮೇ 25, 2006 | $309,306,177 | $165,800,000 | $475,106,177 | $675,346,600 | $362,011,737 | $1,037,358,337 | #27 | #68 |
ಸ್ಟಾರ್ ವಾರ್ಸ್ ಟ್ರೈಲಾಜಿ ಮೂಲ |
| align="right" | $1,060,779,251 | align="right" | $728,100,000 | align="right" | $1,788,879,251 | align="right" | $2,659,182,300 | align="right" | $1,835,832,925 | align="right" | $4,495,015,225 ! ! |- | Star Wars Episode I: The Phantom Menace [೬೧] ಮೇ 19, 2008 | align="right" | $431,088,301 | align="right" | $493,229,257 | align="right" | $924,317,558 | align="right" | $609,049,300 | align="right" | $696,843,160 | align="right" | $1,305,892,460 | align="center" | #5 | align="center" | #7 |- | Star Wars Episode II: Attack of the Clones [೬೨] | ಮೇ 16, 2002 | align="right" | $310,676,740 | align="right" | $338,721,588 | align="right" | $649,398,328 | align="right" | $383,903,600 | align="right" | $418,558,650 | align="right" | $802,462,250 | align="center" | #22 | align="center" | #32 |- | Star Wars Episode III: Revenge of the Sith [೬೩] ಮೇ 19, 2008 | align="right" | $380,270,577 | align="right" | $468,728,238 | align="right" | $848,998,815 | align="right" | $425,950,500 | align="right" | $524,760,756 | align="right" | $950,711,256 | align="center" | #8 | align="center" | #16 |- | ಕೃತಿ ಆಧರಿತ ಸ್ಟಾರ್ ವಾರ್ಸ್ ಟ್ರೈಲಾಜಿ ! | align="right" | $1,122,035,618 | align="right" | $1,300,435,036 | align="right" | $2,422,470,654 | align="right" | $1,418,903,400 | align="right" | $1,640,162,566 | align="right" | $3,059,065,966 ! ! |- | ಸ್ಟಾರ್ ವಾರ್ಸ್: ದಿ ಕ್ಲೋನ್ ವಾರ್ಸ್ [೬೪] ಆಗಸ್ಟ್ 15, 2008 | align="right" | $35,161,554 | align="right" | $33,121,290 | align="right" | $68,282,844 | align="right" | $35,161,554 | align="right" | $33,121,290 | align="right" | $68,282,844 | align="center" | #1,557 |- align="center" |- | ಪೂರ್ಣ ಸ್ಟಾರ್ ವಾರ್ಸ್ ಚಿತ್ರ ಸರಣಿಗಳು ! | align="right" | $2,217,976,423 | align="right" | $2,061,656,326 | align="right" | $4,279,632,749 | align="right" | $4,113,247,254 | align="right" | $3,509,116,781 | align="right" | $7,622,364,035 ! ! |}
ವಿಮರ್ಶಾತ್ಮ ಪ್ರತಿಕ್ರಿಯೆ
[ಬದಲಾಯಿಸಿ]ಚಿತ್ರ | ರಾಟನ್ ಟೊಮ್ಯಾಟೋಸ್ | ಮೆಟಾಕ್ರಿ | |
---|---|---|---|
ಒಟ್ಟಾರೆ | ಅತ್ಯುತ್ತಮ | ||
Star Wars Episode IV: A New Hope | 93% (61 ವಿಮರ್ಶೆಗಳು)[೬೫] | 88% (17 ವಿಮರ್ಶೆಗಳು)[೬೬] | 91% (13 ವಿಮರ್ಶೆಗಳು)[೬೭] |
Star Wars Episode V: The Empire Strikes Back | 97% (66 ವಿಮರ್ಶೆಗಳು)[೬೮] | 88% (16 ವಿಮರ್ಶೆಗಳು)[೬೯] | 78% (15 ವಿಮರ್ಶೆಗಳು)[೭೦] |
Star Wars Episode VI: Return of the Jedi | 75% (60 ವಿಮರ್ಶೆಗಳು)[೭೧] | 71% (17 ವಿಮರ್ಶೆಗಳು)[೭೨] | 52% (14 ವಿಮರ್ಶೆಗಳು)[೭೩] |
Star Wars Episode I: The Phantom Menace | 63% (153 ವಿಮರ್ಶೆಗಳು)[೭೪] | 39% (46 ವಿಮರ್ಶೆಗಳು)[೭೫] | 52% (35 ವಿಮರ್ಶೆಗಳು)[೭೬] |
Star Wars Episode II: Attack of the Clones | 66% (213 ವಿಮರ್ಶೆಗಳು)[೭೭] | 38% (39 ವಿಮರ್ಶೆಗಳು)[೭೮] | 53% (39 ವಿಮರ್ಶೆಗಳು)[೭೯] |
Star Wars Episode III: Revenge of the Sith | 79% (247 ವಿಮರ್ಶೆಗಳು)[೮೦] | 68% (41 ವಿಮರ್ಶೆಗಳು)[೮೧] | 68% (40 ವಿಮರ್ಶೆಗಳು)[೮೨] |
ಸ್ಟಾರ್ ವಾರ್ಸ್: ದಿ ಕ್ಲೋನ್ ವಾರ್ಸ್ | 19% (149 ವಿಮರ್ಶೆಗಳು)[೮೩] | 8% (24 ವಿಮರ್ಶೆಗಳು)[೮೪] | 35% (30 ವಿಮರ್ಶೆಗಳು)[೮೫] |
ಅಕಾಡೆಮಿ ಪ್ರಶಸ್ತಿಗಳು
[ಬದಲಾಯಿಸಿ]ಒಟ್ಟು 22 ಅಕಾಡೆಮಿ ಪ್ರಶಸ್ತಿಗಳಿಗೆ ಆರು ಚಿತ್ರಗಳು ಒಟ್ಟಾಗಿ ನಾಮಕರಣಗೊಂಡಿವೆ, ಈ ಪೈಕಿ ಅವು ಗೆದ್ದಿರುವುದು 7.
ಪ್ರಶಸ್ತಿ | ಗೆದ್ದ ಪ್ರಶಸ್ತಿಗಳು | |||||
---|---|---|---|---|---|---|
IV: ಎ ನ್ಯೂ ಹೋಪ್ | V: ದಿ ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ | VI: ರಿಟರ್ನ್ ಆಫಿ ದಿ ಜೇಡಿ | I: ದಿ ಫಾಂಟಮ್ ಮೆನೇಸ್ | II: ಅಟ್ಯಾಕ್ ಆಫ್ ದಿ ಕ್ಲೋನ್ಸ್ | III: ರಿವೆಂಜ್ ಆಫ್ ದಿ ಸಿತ್ | |
ಪೋಷಕ ನಟ ಪ್ರಶಸ್ತಿ | ನಾಮಕರಣ ಅಲೆಕ್ ಗಿನ್ನಿಸ್ |
|||||
ಕಲಾ ನಿರ್ದೇಶನ-ಸನ್ನಿವೇಶ ಅಲಂಕಾರ | ಜಯ | ನಾಮಕರಣ | ನಾಮಕರಣ | |||
ವಸ್ತ್ರ ವಿನ್ಯಾಸ | ಜಯ | |||||
ನಿರ್ದೇಶಕ | ನಾಮಕರಣ ಜಾರ್ಜ್ ಲ್ಯೂಕಾಸ್ |
|||||
ಚಿತ್ರ ಸಂಪಾದನೆ | ಜಯ | |||||
ಪ್ರಸಾಧನ | ನಾಮಕರಣ | |||||
ಸಂಗೀತ(ಮೂಲ ಸಂಗೀತ) | ಜಯ | ನಾಮಕರಣ | ನಾಮಕರಣ | |||
;fld | ನಾಮಕರಣ | |||||
ಮೂಲ-ಚಿತ್ರಕಥೆ | ನಾಮಕರಣ | |||||
ಧ್ವನಿ ಪರಿಷ್ಕರಣೆ | ನಾಮಕರಣ | ನಾಮಕರಣ | ||||
ದ್ವನಿ(ಮಿಶ್ರಣ) | ಜಯ | ಜಯ | ನಾಮಕರಣ | ನಾಮಕರಣ | ||
ಚಿತ್ರ
Visual Effects |
ಜಯ | ನಾಮಕರಣ | ನಾಮಕರಣ |
ವಿಸ್ತರಿಸಿದ ವಿಶ್ವ
[ಬದಲಾಯಿಸಿ]ಎಕ್ಸ್‌ಪಾಂಡೆಡ್ ಯೂನಿವರ್ಸ್ (EU ) ಪದವು ಕೊಡೆಗೆ ಬಳಸುವ ಪದವಾಗಿದ್ದು, ಇದನ್ನು ಅಧಿಕೃತ ಪರವಾನಗಿ ಪಡೆದುಕೊಂಡ ಸ್ಟಾರ್ ವಾರ್ಸ್ ನ ಮೂಲ ಕಥಾವಸ್ತುವಿಗೆ ಬಳಸಲಾಗುತ್ತಿದೆ. ಅಂದಹಾಗೆ ಆರು ಚಲನಚಿತ್ರಗಳು ಇದರ ವ್ಯಾಪ್ತಿಗೆ ಬರುವುದಿಲ್ಲ.
ಚಿತ್ರಗಳಲ್ಲಿ ಹೇಳಿದ ಕಥೆಗಳನ್ನು ಕಥಾವಸ್ತು ವಿಸ್ತರಿಸುತ್ತಾ ಹೋಗುತ್ತದೆ, ಅದರಂತೆ ಕಥೆ ದಿ ಫಾಂಟಮ್ ಮೆನೇಸ್ ನಿಂದ ಸುಮಾರು 25,000 ವರ್ಷಗಳಷ್ಟು ಹಿಂದೆ ಮತ್ತು ರಿಟರ್ನ್ ಆಫ್ ದಿ ಜೇಡಿ ಆಗಮಿಸಿದ 140 ವರ್ಷಗಳ ನಂತರದ ಮಧ್ಯೆ ಎಲ್ಲಾದರೂ ಒಂದು ಕಡೆ ನಡೆಯುತ್ತದೆ.
ಮೊದಲ ಎಕ್ಸ್‌ಪಾಂಡೆಡ್ ಯೂನಿವರ್ಸ್ ಕಥೆಯು 1978 ಜನವರಿಯಲ್ಲಿ ಸ್ಟಾರ್ ವಾರ್ಸ್ #7 ಮಾರ್ವೆಲ್ ಕಾಮಿಕ್ಸ್‌ಗಳಲ್ಲಿ ಪ್ರಕಟಗೊಂಡಿತು (ಸರಣಿಯ ಮೊದಲ ಆರು ಆವೃತ್ತಿಗಳಲ್ಲಿರುವ ಕಥೆಗಳನ್ನು ಚಿತ್ರದಿಂದ ಪಡೆದುಕೊಳ್ಳಲಾಗಿದೆ), ಇದರ ಬೆನ್ನಿಗೇ ನಂತರದ ತಿಂಗಳು ಅಲನ್ ಡೀನ್ ಫೋಸ್ಟರ್ ಬರೆದ ಸ್ಪ್ಲಿಂಟರ್ ಆಫ್ ದಿ ಮೈಂಡ್ಸ್ ಐ ಕಾದಂಬರಿ ಪ್ರಕಟವಾಯಿತು.[೮೬]
ಜಾರ್ಜ್ ಲ್ಯೂಕಾಸ್ ಸ್ಟಾರ್ ವಾರ್ಸ್ ವಿಶ್ವದ ಮೇಲೆ ಕಲಾತ್ಮಕ ನಿಯಂತ್ರಣವನ್ನು ಉಳಿಸಿಕೊಂಡರು.
ಉದಾಹರಣೆಗೆ, ಪ್ರಧಾನ ಪಾತ್ರಗಳ ಸಾವು ಮತ್ತು ಯಥಾಸ್ಥಿತಿಯಲ್ಲಿನ ಇದೇ ತೆರನಾದ ಬದಲಾವಣೆಗಳನ್ನು ಮೊದಲು ಲ್ಯೂಕಾಸ್ ಪರಿಶೀಲಿಸಿದ ನಂತರವಷ್ಟೇ, ಲೇಖಕರಿಗೆ ಮುಂದುವರಿಯಲು ಅನುಮತಿ ನೀಡಲಾಗುತ್ತಿತ್ತು. ಲ್ಯೂಕಾಸ್‌ಫಿಲ್ಮ್ ಸಂಸ್ಥೆ ಇನ್ನೂ ಹೆಜ್ಜೆ ಮುಂದಕ್ಕೆ ಹೋಗಿ, ಪರವಾನಗಿ ಕೊಡುವಾಗ ಕಂಪೆನಿಗಳಲ್ಲಿರುವ ಅನೇಕ ಲೇಖಕರ ಕೃತಿಗಳ ನಡುವೆ ನಿರಂತರತೆ ಕಾಯ್ದುಕೊಳ್ಳಲು ಹೆಚ್ಚಿನ ಶ್ರಮವಹಿಸಿತು.[೮೭]
ಎಕ್ಸ್‌ಪಾಂಡೆಡ್ ಯೂನಿವರ್ಸ್‌ನಲ್ಲಿರುವ ಅಂಶಗಳನ್ನು ಲ್ಯೂಕಾಸ್ ತಮ್ಮ ಚಿತ್ರಗಳಲ್ಲಿ ಬಳಸಿಕೊಂಡರು, ಅವುಗಳ ಪೈಕಿ ಕ್ಯಾಪಿಟಲ್ ಪ್ಲಾನೆಟ್‌ನ ಹೆಸರು ಕೊರುಸ್ಕ್ಯಾಂಟ್ ಕೂಡ ಒಂದು. ಈ ಹೆಸರು ದಿ ಫಾಂಟಮ್ ಮೆನೇಸ್ ನಲ್ಲಿ ಬಳಕೆಯಾಗುವುದಕ್ಕಿಂತ ಮುನ್ನ ತಿಮೊತಿ ಜಾನ್‌ರ ಹೇರ್ ಟು ದಿ ಎಂಪೈರ್ ಕಾದಂಬರಿಯಲ್ಲಿ ಪ್ರಕಟವಾಗಿತ್ತು.
ಸ್ಟಾರ್ ವಾರ್ಸ್ ಸರಣಿಯ ಡಾರ್ಕ್ ಹಾರ್ಸ್ ಕಾಮಿಕ್ಸ್‌ನಲ್ಲಿ ಪಾತ್ರವನ್ನು ಪರಿಚಯಿಸಲಾಯಿತು, ಆಯ್ಲಾ ಸೆಕ್ಯುರಾ ಹೆಸರಿನ ನೀಲ ವರ್ಣದ ಟ್ವಿ'ಲೆಕ್ ಜೇಡಿ ನೈಟ್ ಅನ್ನು ಬಹಳಷ್ಟು ಇಷ್ಟಪಟ್ಟ ಲ್ಯೂಕಾಸ್ ಅಟ್ಯಾಕ್ ಆಫ್ ದಿ ಕ್ಲೋನ್ಸ್ ಚಿತ್ರದಲ್ಲಿ ಪಾತ್ರವಾಗಿ ಸೇರಿಸಿಕೊಂಡರು.[೮೮]
ಈವರೆಗೆ ಟಿವಿಗಾಗಿ ಲೈವ್-ಆಕ್ಷನ್‌ಗಳಿರುವ ಆರು ಚಿತ್ರಗಳು ಮತ್ತು ಮೂರು ಅನಿಮೇಷನ್ ಸರಣಿಗಳನ್ನು ನಿರ್ಮಿಸಲಾಗಿದೆ ಮತ್ತು ನಿರ್ಮಾಣ ಪೂರ್ವದಲ್ಲಿ 3D CGI ಅನಿಮೇಷನ್ ಸರಣಿ, ಇದರ ಜೊತೆಗೇನೆ ದಿ ಕ್ಲೋನ್ ವಾರ್ಸ್ ಎಂಬ ಪರಿಪೂರ್ಣ ನಾಟಕೀಯ ಚಿತ್ರವನ್ನು 2008 ಅಗಸ್ಟ್ 15ರಂದು ಬಿಡುಗಡೆ ಮಾಡಲಾಗಿತ್ತು.
ಟವಿ ಕಾರ್ಯಕ್ರಮಗಳ ನಿರ್ಮಾಣದ ವೇಳೆ ಲ್ಯೂಕಾಸ್ ಸಾಮಾನ್ಯವಾಗಿ ಕಥೆಗಾರ ಅಥವಾ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಮುಖ ಪಾತ್ರವಹಿಸುತ್ತಿದ್ದರು.[೮೯]
ಸ್ಟಾರ್ ವಾರ್ಸ್ ನಲ್ಲಿ ಹಲವು ರೇಡಿಯೊ ರೂಪಾಂತರಗಳೂ ಇದ್ದವು.
ಎ ನ್ಯೂ ಹೋಪ್ ನ ರೇಡಿಯೊ ರೂಪಾಂತರ 1981ರಲ್ಲಿ ನ್ಯಾಷನಲ್ ಪಬ್ಲಿಕ್ ರೇಡಿಯೊದಲ್ಲಿ ಮೊದಲು ಪ್ರಸಾರವಾಯಿತು.
ಈ ರೂಪಾಂತರವನ್ನು ವೈಜ್ಞಾನಿಕ ಕಾದಂಬರಿಕಾರ ಬ್ರಿಯಾನ್ ಡೇಲೆ ಬರೆದಿದ್ದು, ಜಾನ್ ಮೇಡನ್ ನಿರ್ದೇಶಿಸಿದ್ದಾರೆ.
1983ರಲ್ಲಿ ದಿ ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ಮತ್ತು 1996ರಲ್ಲಿ ರಿಟರ್ನ್ ಆಫ್ ದಿ ಜೇಡಿ ಯ ರೂಪಾಂತರಗಳು ಇದನ್ನು ಹಿಂಬಾಲಿಸಿದವು.
ಈ ರೂಪಾಂತರಗಳು ಲ್ಯೂಕಾಸ್ ರಚಿಸಿದ ಹಿನ್ನೆಲೆ ಕಥಾವಸ್ತುವನ್ನು ಒಳಗೊಂಡಿದ್ದವು, ಆದರೆ ಚಿತ್ರಗಳಲ್ಲಿ ಇವನ್ನು ಬಳಸಿಕೊಂಡಿಲ್ಲ.
ಮಾರ್ಕ್ ಹ್ಯಾಮಿಲ್, ಆಂಟನಿ ಡೇನಿಯಲ್ಸ್, ಮತ್ತು ಬಿಲ್ಲಿ ದೀ ವಿಲ್ಲಿಯಮ್ಸ್ ಕ್ರಮವಾಗಿ ಲ್ಯೂಕ್ ಸ್ಕೈವಾಕರ್, C-3PO, ಮತ್ತು ಲ್ಯಾಂಡೊ ಕ್ಯಾಲ್ರಿಸ್ಸಿಯನ್ ಪಾತ್ರಗಳಲ್ಲಿ ನಟಿಸಿದರು. ಆದರೆ ರಿಟರ್ನ್ ಆಫ್ ದಿ ಜೇಡಿ ಯಲ್ಲಿ ಲ್ಯೂಕನ ಪಾತ್ರವನ್ನು ಜೊಶುವಾ ಫಾರ್ಡನ್ ಮತ್ತು ಲ್ಯಾಂಡೊ ಪಾತ್ರವನ್ನು ಅರ್ಯೆ ಗ್ರಾಸ್ ನಿರ್ವಹಿಸಿದರು.
ಚಿತ್ರಗಳಿಂದ ಜಾನ್ ವಿಲ್ಲಿಯಮ್ಸ್‌ರ ಮೂಲ ಸಂಗೀತ ಮತ್ತು ಬೆನ್ ಬರ್ಟ್‌ರ ಮೂಲ ಧ್ವನಿ ವಿನ್ಯಾಸವನ್ನೂ ಚಿತ್ರ ಸರಣಿಯಲ್ಲಿ ಬಳಸಿಕೊಳ್ಳಲಾಯಿತು.[೯೦]
ಇತರ ಚಲನಚಿತ್ರಗಳು
[ಬದಲಾಯಿಸಿ]ಎರಡು ಟ್ರೈಲಾಜಿಗಳಿಗೆ ಹೆಚ್ಚುವರಿಯಾಗಿ, ಅನೇಕ ಪ್ರಮಾಣಿತ ಚಿತ್ರಗಳನ್ನು ನಿರ್ಮಿಸಲಾಯಿತು:
- ದಿ ಸ್ಟಾರ್ ವಾರ್ಸ್ ಹಾಲಿಡೇ ಸ್ಪೆಷಲ್ ಅನ್ನು 1978ರಲ್ಲಿ ಎರಡು-ತಾಸಿನ ಟೆಲಿವಿಷನ್ ವಿಶೇಷ ಕಾರ್ಯಕ್ರಮವಾಗಿ ಒಮ್ಮೆ ಮಾತ್ರ ತೋರಿಸಲಾಯಿತು, ಆದರೆ ವಿಡಿಯೋ ರೂಪದಲ್ಲಿ ಬಿಡುಗಡೆಯಾಗಲೇ ಇಲ್ಲ. ಬೊಬಾ ಫೆಟ್ರ ಪರಿಚಯ ಗಮನ ಸೆಳೆಯುವಂತಾದ್ದು.
- Caravan of Courage: An Ewok Adventure ,1984ರಲ್ಲಿ ಅಮೇರಿಕನ್ ನಿರ್ಮಾಣದ TV ಚಿತ್ರ - ಸಾಗರೋತ್ತರದ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಯಿತು.
- Ewoks: The Battle for Endor , 1985ರಲ್ಲಿ ಅಮೇರಿಕನ್ ನಿರ್ಮಾಣದ TV ಚಿತ್ರ - ಸಾಗರೋತ್ತರದ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಯಿತು.
- ದಿ ಗ್ರೇಟ್ ಹೀಪ್ , TV ಸರಣಿಯಿಂದ ನಿರ್ಮಿಸಿದ ಟೆಲಿವಿಷನ್ ಅನಿಮೇಷನ್ ವಿಶೇಷ 1986ರದ್ದು.
- ಸ್ಟಾರ್ ವಾರ್ಸ್: ದಿ ಕ್ಲೋನ್ ವಾರ್ಸ್ , 2008ರಲ್ಲಿ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಕಂಡ ಇದು, ಅದೇ ಹೆಸರಿನಲ್ಲಿ ಅನಿಮೇಷನ್ TV ಸರಣಿಯಾಗಿಯೂ ಹೊರಬಂತು.
ಆನಿಮೇಟೆಡೆ ಸರಣಿಗಳು
[ಬದಲಾಯಿಸಿ]ಸ್ಟಾರ್ ವಾರ್ಸ್ ಚಿತ್ರಗಳ ಯಶಸ್ಸು ಮತ್ತು ಅವುಗಳು ವ್ಯಾಪಾರವಾದ ಹಿನ್ನೆಲೆಯಲ್ಲಿ, ಯುವ ಅಭಿಮಾನಿಗಳನ್ನು ಆಧಾರವಾಗಿಟ್ಟುಕೊಂಡು ಅನೇಕ ಆನಿಮೇಟೆಡ್ ಟಿವಿ ಸರಣಿಗಳನ್ನು ನಿರ್ಮಿಸಲಾಯಿತು.
- Star Wars: Droids ,ಡ್ರಾಯಿಡ್ಸ್ ಎಂದೂ ಕರೆಯಲ್ಪಡುವ ಇವುಗಳನ್ನು 1985 ಸೆಪ್ಟೆಂಬರ್ ತಿಂಗಳಲ್ಲಿ ಪ್ರದರ್ಶನ ಕಂಡವು. R2-D2 ಮತ್ತು C-3P0ಗಳು ಅನೇಕ ಮಾಲೀಕರು/ಒಡೆಯರ ಮೂಲಕ ಆಚೀಚೆ ಬದಲಾಗುತ್ತಾ ಪ್ರಯಾಣಿಸುವುದರ ಮೇಲೆ ಡ್ರಾಯಿಡ್ಸ್‌ಗಳು ಕೇಂದ್ರೀಕೃತವಾಗಿದ್ದವು ಮತ್ತು ಘಟನೆಗಳ ನಡುವಿನ ಖಾಲಿ ಸ್ಥಳವನ್ನು ಅಸ್ಪಷ್ಟವಾಗಿ ತುಂಬುತ್ತಿದ್ದವುStar Wars Episode III: Revenge of the Sith ಮತ್ತು Star Wars Episode IV: A New Hope
- Star Wars: Ewoks ಮತ್ತು ದಿ ಇವೊಕ್ಸ್ ಎಂದು ಆಡು ಮಾತಿನಲ್ಲಿರುವಂತೆ 1985 ಸೆಪ್ಟೆಂಬರ್‌ನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ವಿಕೆಟ್‌ನ ಸಾಹಸಗಳು ಮತ್ತು ಮೂಲ ಟ್ರೈಲಾಜಿಯಿಂದ ಶುರುವಾಗಿ ವರ್ಷಗಳು ಉರುಳಿದಂತೆ ಕ್ರಮೇಣವಾಗಿ ಹುಟ್ಟಿಕೊಂಡ ಇತರ ಅನೇಕ ಗುರುತಿಸಬಹುದಾದ ಇವೊಕ್ ಪಾತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿತ್ತು.Star Wars Episode VI: Return of the Jedi
- ಜೆಂಡಿ ತಾರ್ತಕೊವಿಸ್ಕಿ ನಿರ್ಮಿಸಿದ ಸ್ಟಾರ್ ವಾರ್ಸ್: ಕ್ಲೋನ್ ವಾರ್ಸ್ ವ್ಯಂಗ್ಯ ಸರಣಿಗಳು ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ನವೆಂಬರ್ 2003ರಿಂದ 2005 ಮಾರ್ಚ್‌ವರೆಗೆ ಪ್ರಸಾರವಾದವು.
- ಸ್ಟಾರ್ ವಾರ್ಸ್: ದಿ ಕ್ಲೋನ್ ವಾರ್ಸ್ ಆನಿಮೇಟೆಡ್ ಚಲನಚಿತ್ರದಿಂದಲೇ ಬಂದ ಅದೇ ಹೆಸರಿನ ವ್ಯಂಗ್ಯ ಸರಣಿಗಳು ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ಅಕ್ಟೋಬರ್ 2008ರಿಂದಲೇ ಪ್ರಸಾರವಾಗುತ್ತಿವೆ.
- Lego Star Wars: The Quest for R2-D2 , 2009ರ ಅಧಿಕೃತ ಹಾಸ್ಯ ಅಣಕುಗಳು ಮೂಲದಲ್ಲಿ ದಿ ಕ್ಲೋನ್ ವಾರ್ಸ್ ಸರಣಿಗಳನ್ನು ಆಧರಿಸಿವೆ.
ಸಾಹಿತ್ಯ
[ಬದಲಾಯಿಸಿ]1976ರಲ್ಲಿ ಸ್ಟಾರ್ ವಾರ್ಸ್ ಕಾದಂಬರೀಕರಣವಾಗುವುದರೊಂದಿಗೆ, ಸ್ಟಾರ್ ವಾರ್ಸ್ - ಆಧಾರಿತ ಕಾಲ್ಪನಿಕ ಕಾದಂಬರಿಯು ಚಿತ್ರ ತೆರೆ ಕಾಣುವುದಕ್ಕಿಂತ ಮೊದಲೇ ಪ್ರಕಟವಾಗಿತ್ತು (ಚಿತ್ರದ ತಿರುಳನ್ನು ಅಲನ್ ಡೀನ್ ಫೋಸ್ಟರ್ ಬರೆದಿದ್ದರೆ, ಅದರ ಕೀರ್ತಿ ಲ್ಯೂಕಾಸ್‌ಗೆ ಸಂದಿತು)
ಫೋಸ್ಟರ್‌ರವರ 1978ರ ಕಾದಂಬರಿ ಸ್ಪ್ಲಿಂಟರ್ ಆಫ್ ದಿ ಮೈಂಡ್ಸ್ ಐ ಯು ಬಿಡುಗಡೆಯಾದ ಮೊದಲ ಎಕ್ಸ್‌ಪಾಂಡೆಡ್ ಯೂನಿವರ್ಸ್ ಕೃತಿಯಾಗಿದೆ.
ಇದು ಚಿತ್ರಗಳ ನಡುವಿನ ಸಮಯವನ್ನು ತುಂಬುವುದು ಮಾತ್ರವಲ್ಲದೆ ಅದಕ್ಕೆ ಹೆಚ್ಚುವರಿಯಾಗಿ, ಈ ವಿಷಯ ಸ್ಟಾರ್ ವಾರ್ಸ್ ನ ಸಕಾಲಿಕತೆಯನ್ನು ಚಿತ್ರ ಸರಣಿಯ ಮೊದಲು ಮತ್ತು ಆನಂತರ ಬಹುಮಟ್ಟಿಗೆ ವಿಸ್ತರಿಸಿತು.
ಸ್ಟಾರ್ ವಾರ್ಸ್ ಕಾದಂಬರಿಯು ಮೂಲ ಸರಣಿಯ (1977–1983) ವೇಳೆ ಭಾರಿ ಯಶಸ್ಸು ಕಂಡಿತು, ಆದರೆ ನಂತರ ನಿಧಾನಗೊಂಡು ಯಶಸ್ಸು ಇಳಿಮುಖವಾಯಿತು.
1992ರಲ್ಲಿ ತಿಮೊತಿ ಜಾನ್‌ರ ತ್ರಾನ್ ಟ್ರೈಲಾಜಿ ಯು ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸಿ, ಸ್ಟಾರ್ ವಾರ್ಸ್ ವಿಶ್ವದಲ್ಲಿ ಹೊಸ ಆಸಕ್ತಿಯನ್ನು ಹುಟ್ಟು ಹಾಕಿತು.
ಅಂದಿನಿಂದ ಪರಸ್ಪರ ಸಂಬಂಧವಿರುವ ನೂರಾರು ಕಾದಂಬರಿಗಳನ್ನು ಬಾಂಟಮ್ ಮತ್ತು ಡೆಲ್ ರೇ ಪ್ರಕಟಿಸಿದರು.
ಎಪಿಸೋಡ್ಸ್ V ಮತ್ತು VI ನಡುವಿನ ಸನ್ನಿವೇಶವನ್ನು ಹೇಳುವ ಸ್ಟೀವ್ ಪೆರ್ರಿ ಕಾದಂಬರಿ ಶ್ಯಾಡೋಸ್ ಆಫ್ ದಿ ಎಂಪೈರ್ ಬಿಡುಗಡೆ ಮತ್ತು ಅದಕ್ಕೆ ಜೊತೆ ನೀಡಿದ ವಿಡಿಯೋ ಆಟ ಮತ್ತು ವಿನೋದ ಪುಸ್ತಕ ಸರಣಿಗಳಿಂದಾಗಿ 1996ರಲ್ಲಿ ಎಕ್ಸ್‌ಪಾಂಡೆಡ್ ಯೂನಿವರ್ಸ್‌ನಲ್ಲಿ ಅದೇ ತೆರನಾದ ಪುನರ್ಜಾಗೃತಿ ನಡೆಯಿತು.[೯೧]
ನ್ಯೂ ಜೇಡಿ ಆರ್ಡರ್ ಸರಣಿಯನ್ನು ಪರಿಚಯಿಸುವುದರೊಂದಿಗೆ ಲ್ಯೂಕಾಸ್‌ಬುಕ್ಸ್ ಸ್ಟಾರ್ ವಾರ್ಸ್ ವಿಶ್ವದ ಮುಖಭಾವವನ್ನು ಸಂಪೂರ್ಣವಾಗಿ ಬದಲಾಯಿಸಿತು, ಇದು ರಿಟರ್ನ್ ಆಫ್ ದಿ ಜೇಡಿ ಯ 20 ವರ್ಷಗಳ ನಂತರ ನಡೆಯುತ್ತದೆ ಮತ್ತು ಮೂಲ ಸರಣಿಯ ಪಕ್ಕಪಕ್ಕದಲ್ಲಿಯೇ ಹೊಸ ಪಾತ್ರಗಳಿಗೂ ಸ್ಟಾರ್ಸ್ ವೇದಿಕೆಯಾಗುತ್ತದೆ.
ಯುವ ಪ್ರೇಕ್ಷಕರಿಗಾಗಿ ಮೂರು ಸರಣಿಗಳನ್ನು ಪರಿಚಯಿಸಲಾಯಿತು.
ಎಪಿಸೋಡ್ I ತೆರೆ ಕಾಣುವುದಕ್ಕಿಂತ ಮೊದಲೇ ದಿ ಜೇಡಿ ಅಪ್ರೆಂಟಿಸ್ ಸರಣಿಗಳು ಕ್ವಿ-ಗೊನ್ ಜಿನ್ನ್ ಮತ್ತು ಆತನ ಶಿಷ್ಯ ಒಬಿ-ವಾನ್ ಕೆನೊಬಿಯ ಸಾಹಸಗಳನ್ನು ವಿವರಿಸುತ್ತವೆ. ಎಪಿಸೋಡ್ I ನ ನಂತರ ಮತ್ತು ಎಪಿಸೋಡ್ II ಮೊದಲು ಹೊರ ಬಂದ ದಿ ಜೇಡಿ ಕ್ವೆಸ್ಟ್ ಸರಣಿಗಳು ಒಬಿ-ವಾನ್ ಕೆನೊಬಿ ಮತ್ತು ಆತನ ಶಿಷ್ಯ ಅನಾಕಿನ್ ಸ್ಕೈವಾಕರ್‌ನ ಸಾಹಸಗಳನ್ನು ವಿವರಿಸುತ್ತವೆ. ಮೂರನೇ ಮತ್ತು ಪ್ರಸ್ತುತ ಪ್ರಗತಿಯಲ್ಲಿರುವ ದಿ ಲಾಸ್ಟ್ ಆಫ್ ದಿ ಜೇದಿ ಸರಣಿಯು ಒಬಿ-ವಾನ್ ಕೆನೊಬಿ ಮತ್ತು ಎಪಿಸೋಡ್ III ನ ಕೆಲವೇ ದಿನಗಳ ನಂತರ ಬದುಕಿದ್ದ ಜೇಡಿಯ ಸಾಹಸಗಳನ್ನು ವರ್ಣಿಸುತ್ತವೆ.
ಮಾರ್ವೆಲ್ ಕಾಮಿಕ್ಸ್ ಸಂಸ್ಥೆಯು ಸ್ಟಾರ್ ವಾರ್ಸ್ ವಿನೋದ ಪುಸ್ತಕಗಳ ಸರಣಿ ಮತ್ತು 1977ರಿಂದ 1986ರವರೆಗಿನ ರೂಪಾಂತರಗಳನ್ನು ಪ್ರಕಟಿಸಿತು. ರಾಯ್ ಥಾಮಸ್, ಆರ್ಕೀ ಗುಡ್ವಿನ್, ಹೊವಾರ್ಡ್ ಚೇಕಿನ್, ಅಲ್ ವಿಲ್ಲಿಯಮ್ಸನ್, ಕಾರ್ಮಿನ್ ಇನ್‌ಫ್ಯಾಂಟಿನೊ, ಗೆನೆ ಡೇ, ವಾಲ್ಟ್ ಸಿಮನ್ಸನ್, ಮೈಕೆಲ್ ಗೋಲ್ಡನ್, ಕ್ರಿಸ್ ಕ್ಲೇರ್‌ಮಂಟ್, ವಿಲ್ಸ್ ಪೊರ್ಟಾಶಿಯೋo, ಜೊ ಡಫ್ಫಿ, ಮತ್ತು ರಾನ್ ಫ್ರೆಂಝ್ ಒಳಗೊಂಡಂತೆ ವೈವಿಧ್ಯ ಹಿನ್ನಲೆಯುಳ್ಳ ರಚನಾಕಾರರು ಈ ಸರಣಿಯಲ್ಲಿ ವ್ಯಾಪಕವಾಗಿ ಕೆಲಸ ಮಾಡಿದರು.
ಅವರು ರಸ್ ಮ್ಯಾನಿಂಗ್, ಸ್ಟೀವ್ ಗೆರ್ಬೆರ್, ಮತ್ತು ಅರ್ಕೀ ಗುಡ್ವಿನ್ ವರದಿಗಳ ತುಣುಕುಗಳನ್ನು ಸ್ಟಾರ್ ವಾರ್ಸ್ ಪತ್ರಿಕೆಯಲ್ಲಿ ಪ್ರಕಟಿಸಿದರು, ಈ ಪೈಕಿ ಅರ್ಕೀ ಗುಡ್ವಿನ್ ಗುಪ್ತ ನಾಮವನ್ನಿಟ್ಟುಕೊಂಡು ಬರೆದಿದ್ದರು.
1980ರ ಕೊನೆಗೆ, ಟಾಮ್ ವೇಟ್ಚ್ ಮತ್ತು ಕ್ಯಾಮ್ ಕೆನ್ನೆಡಿ ಬರೆದ ಹೊಸ ಸ್ಟಾರ್ ವಾರ್ಸ್ ವಿನೋದಗಳನ್ನು ಪ್ರಕಟಿಸುವುದಾಗಿ ಮಾರ್ವೆಲ್ ಘೋಷಿಸಿತು. ಆದಾಗ್ಯೂ 1991 ಡಿಸೆಂಬರ್ ತಿಂಗಳಲ್ಲಿ, ಸ್ಟಾರ್ ವಾರ್ಸ್ ಪರವಾನಗಿಯನ್ನು ಡಾರ್ಕ್ ಹಾರ್ಸ್ ಕಾಮಿಕ್ಸ್ ಪಡೆದುಕೊಂಡಿತು ಮತ್ತು ಮೂಲ ಟ್ರೈಲಾಜಿಯ ಬದಲು ಬಹಳ ಜನಪ್ರಿಯ ಡಾರ್ಕ್ ಎಂಪೈರ್ ಕಥೆಗಳು ಒಳಗೊಂಡಂತೆ ಅನೇಕ ಮಹತ್ವಾಕಾಂಕ್ಷೆಯ ಸೀಕ್ವೆಲ್ ಗಳನ್ನು ನಿರ್ಮಿಸಲು ಇದನ್ನು ಬಳಸಿಕೊಳ್ಳಲಾಯಿತು.[೯೨]
ಅಂದಿನಿಂದ ಅವರು ಸ್ಟಾರ್ ವಾರ್ಸ್ ವಿಶ್ವದ ಸೆಟ್‌ನಲ್ಲಿ ಚಿತ್ರಿಸಿದ ಬೃಹತ್ ಸಂಖ್ಯೆಯಲ್ಲಿರುವ ಮೂಲ ಸಾಹಸಗಳನ್ನು ಪ್ರಕಟಿಸುತ್ತಾ ಹೋದರು. ಟ್ಯಾಗ್ ಮತ್ತು ಬಿಂಕ್ ಒಳಗೊಂಡಂತೆ ಅಣಕು ವಿನೋದಗಳೂ ಅವುಗಳಲ್ಲಿವೆ.[೯೩]
ಆಟಗಳು
[ಬದಲಾಯಿಸಿ]ಅತಾರಿ 2600ಗಾಗಿ ಪಾರ್ಕರ್ ಸಹೋದರರು ಪ್ರಕಟಿಸಿದ ಸ್ಟಾರ್ ವಾರ್ಸ್: ದಿ ಎಂಪೈರ್ ಸ್ಟ್ರೈಕ್ಸ್ ಬ್ಯಾಕ್ ನಿಂದ ಆರಂಭವಾಗಿ ಸ್ಟಾರ್ ವಾರ್ಸ್ ಹೆಸರನ್ನು ಹೊತ್ತುಕೊಂಡು ಡಜನುಗಟ್ಟಲೆ ವಿಡಿಯೋ ಆಟಗಳು 1982ರಿಂದಲೂ ಪ್ರಕಟಗೊಳ್ಳುತ್ತಿವೆ.
ಅಂದಿನಿಂದ, ಸ್ಪೇಸ್-ಫ್ಲೈಟ್ ಸಿಮ್ಯುಲೇಷನ್ ಆಟಗಳು, ಫರ್ಸ್ಟ್-ಪರ್ಸನ್ ಶೂಟರ್ ಆಟಗಳು, ರೋಲ್‌ಪ್ಲೇಯಿಂಗ್ ಆಟಗಳು, RTS ಆಟಗಳು, ಮತ್ತು ಇತರ ಸೇರಿದಂತೆ ಅಸಂಖ್ಯಾತ ಆಟಗಳಿಗೆ ಸ್ಟಾರ್ ವಾರ್ಸ್ ದಾರಿ ಮಾಡಿಕೊಟ್ಟಿದೆ.
1980 ಮತ್ತು 1990ರಲ್ಲಿ ವೆಸ್ಟ್ ಎಂಡ್ ಗೇಮ್ಸ್‌ರಿಂದ ಒಂದು ಆವೃತ್ತಿ ಮತ್ತು 2000ದಲ್ಲಿ ವಿಝಾರ್ಡ್ಸ್ ಆಫ್ ದಿ ಕೋಸ್ಟ್‌ನಿಂದ ಇನ್ನೊಂದು ಸೇರಿ ಸ್ಟಾರ್ ವಾರ್ಸ್ ವಿಶ್ವಕ್ಕಾಗಿ ಎರಡು ಬಗೆಯ ಅಧಿಕೃತ ಟೇಬಲ್ ಟಾಪ್ ರೋಲ್-ಪ್ಲೇಯಿಂಗ್ ಆಟಗಳನ್ನು ಅಭಿವೃದ್ಧಿಪಡಿಸಲಾಯಿತು.
ಲೆಗೊ ಸ್ಟಾರ್ ವಾರ್ಸ್ ಮತ್ತು ಬ್ಯಾಟಲ್‌ಫ್ರಂಟ್ ಸರಣಿಗಳು ಕ್ರಮವಾಗಿ 12 ದಶಲಕ್ಷ ಮತ್ತು 10 ದಶಲಕ್ಷ ಪ್ರತಿಗಳು ಮಾರಾಟವಾಗುವುದರೊಂದಿಗೆ ಈವರೆಗೆ ಅತಿ ಹೆಚ್ಚು ಮಾರಾಟವಾದ ಖ್ಯಾತಿ ಪಡೆದಿವೆ,[೯೪][೯೫] Star Wars: Knights of the Old Republic ಅಲ್ಲದೆ ಇವು ಅತ್ಯಂತ ಜನಪ್ರಿಯ ಆಟಗಳೂ ಆಗಿವೆ.[೯೬]
PS3, PSP, PS2, Xಬಾಕ್ಸ್ 360, ನಿಂಟೆಂಡೊ DS ಮತ್ತು and Wiiಗಾಗಿ ಸ್ಟಾರ್ ವಾರ್ಸ್: ದಿ ಫೋರ್ಸ್ ಅನ್‌ಲೀಶ್ಡ್ ಇತ್ತೀಚೆಗೆ ಬಿಡುಗಡೆಯಾದ ಆಟಗಳಾಗಿವೆ. ಪೂರ್ಣ ಚಿತ್ರಕಥೆ ಎಲ್ಲ ಆರು ಎಪಿಸೋಡ್‌ಗಳ ಸರಣಿಯ ಮೇಲೆ ಕೇಂದ್ರೀಕೃತವಾಗಿರುವಾಗ, ದಿ ಫೋರ್ಸ್ ಅನ್‌ಲೀಶ್ಡ್ ಹೆಸರಿನ ಅದ ಭಾಗವೇ ಆಗಿರುವ ಮಲ್ಟಿಮಿಡಿಯಾ ಯೋಜನೆಯು ಇದುವರೆಗೆ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗದೇ ಇರುವ Star Wars Episode III: Revenge of the Sith ಮತ್ತು Star Wars Episode IV: A New Hope ಕಾಲಾವಧಿಯಲ್ಲಿ ನಡೆಯುತ್ತದೆ, ಮತ್ತು ಆಟದಲ್ಲಿ ಉಳಿದ ಜೇಡಿಯನ್ನು ಬೇಟೆಯಾಡುವ ಡರ್ತ್ ವಾಡೆರ್‌ನ ರಹಸ್ಯ ಶಿಷ್ಯರ ಪಾತ್ರದಲ್ಲಿ ಆಟಗಾರರು ಕಾಣಿಸಿಕೊಳ್ಳುತ್ತಾರೆ.
ಈ ಆಟವು ಹೊಸ ಯಂತ್ರವನ್ನು ಹೊಂದಿದೆ. ಇದನ್ನು 2008 ಸೆಪ್ಟೆಂಬರ್ 16ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಿಡುಗಡೆ ಮಾಡಲಾಯಿತು.[೯೭][೯೮] ಕ್ಲೋನ್ ವಾರ್ಸ್ ಸುತ್ತ ನಡೆಯುವ ಕಥೆ ಆಧರಿಸಿ ನಿಂಟೆಂಡೊ DS (Star Wars: The Clone Wars - Jedi Alliance ಮತ್ತು Wiiಗಾಗಿ 2008 ನವೆಂಬರ್‌ನಲ್ಲಿ ಇನ್ನೆರಡು ಶೀರ್ಷಿಕೆಗಳು ಬಿಡುಗಡೆಯಾದವು(Star Wars: The Clone Wars - Lightsaber Duels).
1977ರಲ್ಲಿ ಮೊದಲ 'ನೀಲಿ' ಸರಣಿಗಳನ್ನು ಟಾಪ್ಸ್ ಬಿಡುಗಡೆ ಮಾಡಿದಂದಿನಿಂದ ಸ್ಟಾರ್ ವಾರ್ಸ್ ವ್ಯಾಪಾರಿ ಕಾರ್ಡುಗಳೂ ಪ್ರಕಟವಾದವು.[೯೯]
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟಾಪ್ಸ್‌ಗೆ ನಿರ್ಮಾಣದ ಪರವಾನಗಿ ಸಿಗುವುದರೊಂದಿಗೆ ಡಜನ್ನುಗಟ್ಟಲೆ ಸರಣಿಗಳು ನಿರ್ಮಾಣಗೊಳ್ಳತೊಡಗಿದವು. ಕೆಲವು ಕಾರ್ಡು ಸರಣಿಗಳು ಸ್ಥಿರ ಚಿತ್ರಗಳನ್ನು ಹೊಂದಿದ್ದರೆ, ಇತರವುಗಳು ಮೂಲ ಕಲೆಯನ್ನು ಹೊಂದಿದ್ದವು. ಈ ಪೈಕಿ ಹೆಚ್ಚಿನ ಕಾರ್ಡುಗಳು ಸಂಗ್ರಹ ಯೋಗ್ಯವಾಗಿ ಪರಿಗಣಿಸಲ್ಪಟ್ಟವು. 1993 ಗ್ಯಾಲಕ್ಸಿ ಸರಣಿ IIನ 'ತೇಲುತ್ತಿರುವ ಯೋದಾ' P3 ಕಾರ್ಡಿನಂತಹ ತೀರಾ ಅಪರೂಪದ 'ಉತ್ತೇಜಕಗಳು' ಆಗಾಗ್ಗೆ US$1000 ಅಥವಾ ಇನ್ನೂ ಹೆಚ್ಚು ಬೆಲೆ ಬಾಳುತ್ತಿದ್ದವು. ಹೆಚ್ಚಿನ 'ಬೇಸ್' ಅಥವಾ 'ಕಾಮನ್ ಕಾರ್ಡ್' ಸೆಟ್‌ಗಳು ಹೇರಳವಾಗಿದ್ದವು, ಆದೆ ಹಲವು ಇನ್ಸರ್ಟ್ ಅಥವಾ ಚೇಸ್ ಕಾರ್ಡುಗಳು ತೀರಾ ಅಪರೂಪ.[೧೦೦]
ರಿಸ್ಕ್ ಎಂಬ ಬೋರ್ಡು ಆಟವನ್ನು ಹ್ಯಾಸ್ಬ್ರೋನ ರಿಸ್ಕ್ ಸ್ಟಾರ್ ವಾರ್ಸ್: ದಿ ಒರಿಜಿನಲ್ ಟ್ರೈಲಾಜಿ ಎಡಿಷನ್[೧೦೧] 2006) ಮತ್ತು ರಿಸ್ಕ್ ಸ್ಟಾರ್ ವಾರ್ಸ್: ಕ್ಲೋನ್ ವಾರ್ಸ್ ಎಡಿಶನ್[೧೦೨] (2005) ಎಂಬ ಎರಡು ಆವೃತ್ತಿಗಳ ಸರಣಿಯಲ್ಲಿ ಸರಿಹೊಂದಿಸಲಾಯಿತು.
ಅಭಿಮಾನಿಗಳ ಕಾರ್ಯಗಳು
[ಬದಲಾಯಿಸಿ]ಸ್ಟಾರ್ ವಾರ್ಸ್ ಸಾಹಸಗಾಥೆಯು ಅಭಿಮಾನಿಗಳಲ್ಲಿ ಸ್ಫೂರ್ತಿ ತುಂಬಿ ಸ್ಟಾರ್ ವಾರ್ಸ್ ಗ್ಯಾಲಕ್ಸಿಯಲ್ಲಿ ತಮ್ಮದೇ ಬರಹಗಳನ್ನು ಸೃಷ್ಟಿಸಲು ಪ್ರೇರೇಪಿಸಿತು. ಇತ್ತೀಚಿನ ವರ್ಷಗಳಲ್ಲಿ, ಇದು ಅಭಿಮಾನಿ-ಕಾದಂಬರಿಗಳಿಂದ ಹಿಡಿದು ಅಭಿಮಾನಿ ಚಲನಚಿತ್ರ ನಿರ್ಮಾಣದವರೆಗೆ ತಲುಪಿದೆ. ಚಿತ್ರ ನಿರ್ಮಾಪಕರು ಮತ್ತು ಈ ಪ್ರಕಾರವನ್ನು ಅಧಿಕೃತವಾಗಿ ಗುರುತಿಸುವ ದೃಷ್ಟಿಯಿಂದ ಲ್ಯೂಕಾಸ್‌ಫಿಲ್ಮ್ ಸಂಸ್ಥೆ 2002ರಲ್ಲಿ ಮೊದಲ ವಾರ್ಷಿಕ ಅಧಿಕೃತ ಸ್ಟಾರ್ ವಾರ್ಸ್ ಫ್ಯಾನ್ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಾಯೋಜಿಸಿತು. ಹಕ್ಕುಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ನಕಲುಗೊಳ್ಳುವ ಸಾಧ್ಯತೆ ಬಗ್ಗೆ ಇದ್ದ ಕಳವಳ ಕೂಡ ಈ ಪ್ರಾಯೋಜಕತ್ವಕ್ಕೆ ಒಂದು ಕಾರಣ. ಆದಾಗ್ಯೂ, ಆರಂಭದಲ್ಲಿ ಅಣಕು ಬರಹಗಳು, ಅಣಕು-ಸಾಕ್ಷ್ಯಚಿತ್ರಗಳು(ಮಾಕ್ಯುಮೆಂಟರೀಸ್) ಮತ್ತು ಸಾಕ್ಷ್ಯಚಿತ್ರಗಳಿಗೆ ಮಾತ್ರ ಪ್ರಶಸ್ತಿಗಳನ್ನು ತೆರೆದಿಡಲಾಗಿತ್ತು.
ಸ್ಟಾರ್ ವಾರ್ಸ್ ವಿಶ್ವದಲ್ಲಿ ಚಿತ್ರೀಕರಿಸಲ್ಪಟ್ಟ ಫ್ಯಾನ್-ಫಿಕ್ಶನ್ ಚಿತ್ರಗಳು ಮೂಲತಃ ಅನರ್ಹವಾಗಿದ್ದವು, ಆದರೆ ಇನ್-ಯುನಿವರ್ಸ್ ಕಾದಂಬರಿ ಚಿತ್ರಗಳನ್ನು ಸ್ವೀಕರಿಸಲು ಅನುವಾಗುವಂತೆ 2007ರಲ್ಲಿ ಲ್ಯೂಕಾಸ್‌ಫಿಲ್ಮ್ ತನ್ನ ಸಲ್ಲಿಕೆ ಗುಣಮಟ್ಟಗಳಲ್ಲಿ ಬದಲಾವಣೆ ಮಾಡಿಕೊಂಡಿತು.[೧೦೩]
ಹಲವು ಅಭಿಮಾನಿ ಚಿತ್ರಗಳು ತಮ್ಮ ಕಥೆ ಹೇಳಲು ಎಕ್ಸ್‌ಪಾಂಡೆಡ್ ಯೂನಿವರ್ಸ್‌ನ ಅಂಶಗಳನ್ನು ಬಳಸಿಕೊಂಡರೂ, ಅವುಗಳನ್ನು ಸ್ಟಾರ್ ವಾರ್ಸ್ ನಿಯಮದ ಒಂದು ಅಧಿಕೃತ ಭಾಗವೆಂದು ಪರಿಗಣಿಸಲಾಗಲಿಲ್ಲ. ಆದಾಗ್ಯೂ, ಪಿಂಕ್ ಫೈವ್ ಸರಣಿಯ ಪ್ರಮುಖ ಪಾತ್ರವನ್ನು ತಿಮೊತಿ ಜಾನ್‌ರ 2007ರ ಕಾದಂಬರಿ ಎಲಿಗಿಯನ್ಸ್ ಜೊತೆ ಸೇರಿಸಿಕೊಳ್ಳಲಾಯಿತು. ಇದರೊಂದಿಗೆ ಅಭಿಮಾನಿಯೊಬ್ಬರು ಸೃಷ್ಟಿಸಿದ ಸ್ಟಾರ್ ವಾರ್ಸ್ ಪಾತ್ರವೊಂದು ಮೊಟ್ಟ ಮೊದಲ ಬಾರಿಗೆ ಅಧಿಕೃತವಾಗಿ ಸ್ವೀಕೃತವಾಯಿತು.[೧೦೪]
ಸ್ಟಾರ್ ವಾರ್ಸ್ ಫ್ರಾಂಚೈಸಿಯನ್ನು ಯಾವುದೇ ರೀತಿಯಲ್ಲಿ ಕಳೆಗುಂದಿಸುವ ಪ್ರಯತ್ನ ಅಥವಾ ಲಾಭಗಳಿಸುವ ಪ್ರಯತ್ನಗಳು ನಡೆಯುದೆ ಇರುವವರೆಗೂ ಅಭಿಮಾನಿಗಳ ಫ್ಯಾನ್-ಫಿಕ್ಶನ್‌ಗಳಿಗೆ ಲ್ಯೂಕಾಸ್‌ಫಿಲ್ಮ್ ಅನುವು ಮಾಡಿಕೊಟ್ಟಿತು, ಆದರೆ ಅವರ ನಿರ್ಮಾಣಗಳನ್ನು ಸಮ್ಮತಿಸಲಿಲ್ಲ.[೧೦೫]
ಲ್ಯೂಕಾಸ್‌ಫಿಲ್ಮ್‌ನ ಬಹಿರಂಗ ಬೆಂಬಲ ಮತ್ತು ಅಭಿಮಾನಿಗಳ ನಿರ್ಮಾಣಗಳಿಗೆ ಅನುಮೋದನೆ ನೀಡಿರುವುದು, ಹಕ್ಕುಸ್ವಾಮ್ಯ ಪಡೆದ ಇತರ ಅನೇಕರ ನಿಲವುಗಳಿಗೆ ವಿರುದ್ಧವಾಗಿತ್ತು.
ಪರಂಪರೆ
[ಬದಲಾಯಿಸಿ]ಆಧುನಿಕ ಅಮೆರಿಕದ ಪಾಪ್ ಸಂಸ್ಕೃತಿ ಮೇಲೆ ಸ್ಟಾರ್ ವಾರ್ಸ್ ಸಾಹಸಗಾಥೆಯು ಮಹತ್ವದ ಪ್ರಭಾವ ಬೀರಿತು. ಚಿತ್ರಗಳು ಮತ್ತು ಪಾತ್ರಗಳು ಎರಡನ್ನೂ ಅನೇಕ ಚಲನಚಿತ್ರಗಳಲ್ಲಿ ಮತ್ತು ಟಿವಿಯಲ್ಲಿ ಅಣಕು ಅನುಕರಣೆ ಮಾಡಲಾಗಿದೆ. ಸ್ಟಾರ್ ವಾರ್ಸ್ ನ ಪ್ರಮುಖ ಅಣಕು ಚಿತ್ರಗಳೆಂದರೆ 1977ರ ಹಾರ್ಡ್‌ವೇರ್ ವಾರ್ಸ್ ಮತ್ತು ಮೆಲ್‌ಬ್ರೂಕ್ಸ್ ನಿರ್ಮಿಸಿದ ಸ್ಪೇಸ್‌ಬಾಲ್ಸ್ . ಹಾರ್ಡ್‌ವೇರ್ ವಾರ್ಸ್ ೧೩ ನಿಮಿಷದ ಅಣಕು ಚಿತ್ರವಾಗಿದ್ದು, ಇದು ತಮಗೆ ಅತ್ಯಂತ ಇಷ್ಟವಾದ ಅಣಕು ಎಂದು ಲ್ಯೂಕಾಸ್ ಹೇಳಿಕೊಂಡಿದ್ದಾರೆ. ಸ್ಪೇಸ್‌ಬಾಲ್ಸ್ ಚಲನಚಿತ್ರದಲ್ಲಿ ಲ್ಯೂಕಾಸ್ ಇಂಡಸ್ಟ್ರಿಯಲ್ ಲೈಟ್ & ಮ್ಯಾಜಿಕ್ ಮಾಡಿದ ಪರಿಣಾಮಗಳನ್ನು ತೋರಿಸಲಾಯಿತು.[೧೦೬][೧೦೭]
ಲ್ಯೂಕಾಸ್‌ಫಿಲ್ಮ್ ಸ್ವತಃ ವಿಕೆಟ್ W. ವಾರ್ರಿಕ್‌ರ ನಟ ವಾರ್ವಿಕ್ ಡೇವಿಸ್ ಕುರಿತು ರಿಟರ್ನ್ ಆಫ್ ದಿ ಇವೋಕ್ (1982) ಮತ್ತು R2-D2ನ ಜೀವನ ಕಥೆಯನ್ನು ಹೇಳುವ R2-D2: ಬಿನೀತ್ ದಿ ಡೋಮ್ (2002) ಎಂಬ ಎರಡು ಅಣಕು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿತು.[೧೦೮][೧೦೯] ಸ್ಟಾರ್ ವಾರ್ಸ್ ವಿಶ್ವವನ್ನು ಆಧರಿಸಿ ಮತ್ತು ವಿಶ್ವದಲ್ಲಿ ಅನೇಕ ಹಾಡುಗಳಿದ್ದವು. ದಿ ಕಿಂಕ್ಸ್ ನಿರ್ಮಿಸಿದ "ಲೊಲಾ"ನ ಅಣಕು "ಯೋದಾ" ಮತ್ತು ಒಬಿ-ವಾನ್ ಕೆನೊಬಿಯ ದೃಷ್ಟಿಕೋನದಲ್ಲಿ ದಿ ಫಾಂಟಮ್ ಮೆನೇಸ್ ಕಥೆಯನ್ನು ಬೇರೆ ರೀತಿಯಲ್ಲಿ ಹೇಳುವ ಡಾನ್ ಮೆಕ್‌ಲೀನ್‌ನ ಹಾಡು "ಅಮೆರಿಕನ್ ಪೈ"ಯ ಅಣಕು "ದಿ ಸಾಗಾ ಬಿಗಿನ್ಸ್" ಎಂಬ ಎರಡು ಅಣಕುಗಳನ್ನು "ವೇರ್ಡ್ ಅಲ್" ಯಾಂಕೊವಿಕ್ ಧ್ವನಿಮುದ್ರಿಸಿತು.[೧೧೦]
ಅಂತರ್ಖಂಡ ಬ್ಯಾಲಿಸ್ಟಿಕ್ ಕ್ಪಿಪಣಿICBMಗಳನ್ನು ಅಡ್ಡಗಟ್ಟುವ ಲೇಸರ್‌ಗಳು ಮತ್ತು ಕ್ಷಿಪಣಿಗಳ ವ್ಯವಸ್ಥೆ ಸ್ಟ್ರಾಟಜಿಕ್ ಡಿಫೆನ್ಸ್ ಇನಿಷಿಯೇಟಿವ್ (SDI) ಅನ್ನು ರೊನಾಲ್ಡ್ ರೇಗನ್ ಪ್ರಸ್ತಾವ ಮುಂದಿಟ್ಟಾಗ, ಆ ಯೋಜನೆಗೆ ತಕ್ಷಣವೇ "ಸ್ಟಾರ್ ವಾರ್ಸ್" ತಲೆಬರಹ ನೀಡಿ, ಇದೊಂದು ವೈಜ್ಞಾನಿಕ ಕಲ್ಪನೆ ಎನ್ನಲಾಯಿತು, ಅಲ್ಲದೆ ರೊನಾಲ್ಡ್ ರೇಗನ್‌ರ ನಟನಾ ವೃತ್ತಿಯೊಂದಿಗೂ ಸಂಪರ್ಕ ಕಲ್ಪಿಸಲಾಯಿತು. ಫ್ರಾನ್ಸೆಸ್ ಫಿಟ್ಜ್‌ಗೆರಾಲ್ಡ್ ಹೇಳುವ ಪ್ರಕಾರ, ಇದರಿಂದ ರೊನಾಲ್ಡ್ ರೇಗನ್ ಕಿರಿಕಿರಿಗೊಂಡಿದ್ದರಂತೆ, ಆದರೆ "ಹೆಸರು ಅಷ್ಟೇನು ಕೆಟ್ಟದಾಗಿಲ್ಲವೆಂದು ತಾವು ಅಂದುಕೊಂಡಿದ್ದಾಗಿ" ರಕ್ಷಣಾ ಸಹ ಕಾರ್ಯದರ್ಶಿ ರಿಚರ್ಡ್ ಪರ್ಲ್ ಸಹೋದ್ಯೋಗಿಗಳಲ್ಲಿ ಹೇಳಿಕೊಂಡಿದ್ದಾರೆ.
- "ಯಾಕಿಲ್ಲ?' ಅವರು ಹೇಳಿದ್ದು; "ಇದು ಒಂದು ಉತ್ತಮ ಚಲನಚಿತ್ರ. ಅಲ್ಲದೆ, ಉತ್ತಮ ವ್ಯಕ್ತಿಗಳು ಗೆದ್ದಿದ್ದಾರೆ.'"[೧೧೧][೧೧೧]ಸೋವಿಯತ್ ಯೂನಿಯನ್ ಒಂದು ದುಷ್ಟರ ಸಾಮ್ರಾಜ್ಯ ಎಂದು ರೇಗನ್ ಕರೆದಾಗ ಚಿತ್ರ ಕುರಿತ ವಿವಾದ ಮತ್ತಷ್ಟು ಉದ್ರಿಕ್ತಗೊಂಡಿತು, ಈ ಪದವನ್ನು ಎ ನ್ಯೂ ಹೋಪ್ ನ ಆರಂಭದ ದೃಶ್ಯದಿಂದ ತೆಗೆದುಕೊಳ್ಳಲಾಗಿತ್ತು.
ಜೇಡಿ ಧರ್ಮ
[ಬದಲಾಯಿಸಿ]ಜೇಡಿಯಿಸಮ್, ಸ್ಟಾರ್ ವಾರ್ಸ್‌ನ ಕಾಲ್ಪನಿಕ ಜೇಡಿಯ ತತ್ವಗಳು ಮತ್ತು ಬೋಧನೆಗಳ ನೆಲೆಗಟ್ಟಲ್ಲಿ ರೂಪುಗೊಂಡ ಒಂದು ನಾಸ್ತಿಕವಾದಿ ಹೊಸ ಧಾರ್ಮಿಕ ಚಳವಳಿ. 2001ರ ಗಣತಿಯಲ್ಲಿ 390,೦೦೦ ಜನರು ತಮ್ಮದು ಜೇಡಿ ಧರ್ಮವೆಂದು ಘೋಷಿಸುವುದರೊಂದಿಗೆ, ಬ್ರಿಟನ್ನಿನಲ್ಲಿ ನಾಲ್ಕನೇ ಅತಿ ದೊಡ್ಡ ಧರ್ಮವಾಗಿ ಇದು ಹೊರಹೊಮ್ಮಿದೆ. ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಜಿಲೆಂಡ್‌ನಲ್ಲೂ ಜೇಡಿಯಿಸಮ್ ಸಾಕಷ್ಟು ಅಸ್ತಿತ್ವವನ್ನು ಹೊಂದಿದೆ. ಸುಮಾರು ಅರ್ಧ ದಶಲಕ್ಷಕ್ಕೂ ಹೆಚ್ಚು ಮಂದಿ ಜೇಡಿ ಧರ್ಮವನ್ನು ಅನುಸರಿಸುತ್ತಿರುವುದು ವಿಶ್ವಾದ್ಯಂತ ನಡೆಸಿದ ಗಣತಿಯಿಂದ ತಿಳಿದುಬಂದಿದೆ.
ಇದನ್ನೂ ನೋಡಿರಿ
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ "Star Wars' Earnings". AOL UK Money. May 14, 2007. Retrieved 2007-12-27.
{{cite news}}
: Cite has empty unknown parameter:|coauthors=
(help) - ↑ ೨.೦ ೨.೧ ೨.೨ Star Wars Episode IV: A New Hope (DVD). 20th Century Fox. 2006.
- ↑ ೩.೦ ೩.೧ ೩.೨ Star Wars Episode I: The Phantom Menace (DVD). 20th Century Fox. 2001.
- ↑ ೪.೦ ೪.೧ ೪.೨ Star Wars Episode II: Attack of the Clones (DVD). 20th Century Fox. 2002.
- ↑ ೫.೦ ೫.೧ ೫.೨ Star Wars Episode III: Revenge of the Sith (DVD). 20th Century Fox. 2005.
- ↑ ೬.೦ ೬.೧ ೬.೨ Star Wars Episode V: The Empire Strikes Back (DVD). 20th Century Fox. 2004.
- ↑ ೭.೦ ೭.೧ Star Wars Episode VI: Return of the Jedi (DVD). 20th Century Fox. 2004.
- ↑ Lucas, George (2004). DVD commentary for Star Wars Episode IV: A New Hope (DVD). 20th Century Fox.
- ↑ Arnold, Gary (1997-01-26). "THE FORCE RETURNS: `Star Wars' Special Edition features some new tinkering but same old thrills". The Washington Times. Archived from the original on 2012-03-16. Retrieved 2008-03-28.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Episode III Release Dates Announced". Star Wars. 2004-04-05. Retrieved 2008-03-27.
- ↑ [25]
- ↑ "Star Wars plot summary". Ruined Endings. Retrieved 2008-03-29.
- ↑ Empire of Dreams: The Story of the Star Wars Trilogy (DVD). Star Wars Trilogy Box Set DVD documentary. 2004.
- ↑ The Force Is With Them: The Legacy of Star Wars. Star Wars Original Trilogy DVD Box Set: Bonus Materials. 2004.
- ↑ "Widescreen-O-Rama". The Digital Bits. Archived from the original on 2008-03-24. Retrieved 2008-03-27.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Sergi, Gianluca (1998). "Tales of the Silent Blast: Star Wars and Sound". Journal of Popular Film & Television. 26 (1).
{{cite journal}}
: Unknown parameter|month=
ignored (help) - ↑ "Quality Home Theater Systems Products". Digital Home Theater. Archived from the original on 2008-03-21. Retrieved 2008-03-27.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Star Wars Trilogy". Amazon.com. Retrieved 2008-03-27.
- ↑ ರಿಕ್ಲೇಮಿಂಗ್ ದಿ ಬ್ಲೇಡ್ (2009)
- ↑ (Rinzler 2007, p. 8)
- ↑ (Kaminski 2007, p. 50)
- ↑ "Starkiller". Jedi Bendu. Archived from the original on 2006-06-28. Retrieved 2008-03-27.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ (Rinzler 2007, p. 107)
- ↑ (Kaminski 2007, p. 38)
- ↑ (Kaminski 2007, p. 134)
- ↑ (Kaminski 2007, p. 142)
- ↑ Baxter, John (1999). Mythmaker. p. 173.
- ↑ Biodrowski, Steve. "Star Wars : The Original Trilogy - Then And Now". Hollywood Gothique. Retrieved 2008-03-28.
- ↑ (Bouzereau 1997, p. 144)
- ↑ (Bouzereau 1997, p. 135)
- ↑ (Kaminski 2007, p. 161)
- ↑ ೩೨.೦ ೩೨.೧ (Bouzereau 1997, p. 123)
- ↑ (Kaminski 2007, pp. 120–121)
- ↑ (Kaminski 2007, pp. 164–165)
- ↑ (Kaminski 2007, p. 178)
- ↑ "Lawrence Kasdan". Star Wars. Retrieved 2008-03-28.
- ↑ (Kaminski 2007, p. 227)
- ↑ (Kaminski 2007, pp. 294–295)
- ↑ (Kaminski 2007, pp. 299–300)
- ↑ "Star Wars Insider". Star Wars Insider (45): 19.
- ↑ (Kaminski 2007, p. 371)
- ↑ (Kaminski 2007, p. 374)
- ↑ (Bouzereau 1997, p. 196)
- ↑ (Kaminski v.3.0 2007, p. 158)
- ↑ (Kaminski v.3.0 2007, p. 162)
- ↑ (Rinzler 2005, pp. 13–15)
- ↑ (Rinzler 2005, p. 36)
- ↑ (Kaminski 2007, pp. 380–384)
- ↑ Star Wars: Episode III Revenge of the Sith documentary "Within a Minute" (DVD documentary). 2005.
- ↑ Arnold, William (2005-05-12). "Director George Lucas Takes A Look Back--And Ahead". Seattle Post-Intelligencer.
- ↑ "Star Wars to enter third dimension". Guardian. 2005-03-18. Retrieved 2008-01-09.
- ↑ "Rick McCallum Talks Live Action TV Series and Star Wars 3-D". The Official Star Wars Blog. 2007-07-14. Retrieved 2007-07-17.
- ↑ ತೆಚ್ರಾಡರ್ Techradar.com 2008-12-08ರಂದು ಮರು ಸಂಪಾದಿಸಲಾಗಿದೆ.
- ↑ "George Lucas Planning on a New Star Wars Video Release". Movieweb.com. Associated Press. 2007-02-12. Archived from the original on 2008-06-17. Retrieved 2008-04-16.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Drees, Rich. "George Lucas and the Not-So-Special Edition of Star Wars". Film Buff Online. Retrieved 2008-04-16.
- ↑ ಫ್ರಾಂಕ್ ಓಜ್ & ಆನಿಮೇಟರ್ ರಾಬ್ ಕೊಲ್ಮನ್ DVD ಮೇಲಿನ ಸೇಡಿನಿಂದ ಮಾತಾಡುತ್ತಾನೆ.
- ↑ "John D. Lowry". Apple Inc. Archived from the original on 2006-02-11. Retrieved 2008-03-27.
- ↑ "Star Wars Episode IV: A New Hope (1977)". Box Office Mojo. Retrieved 2008-09-12.
- ↑ "Star Wars Episode V: The Empire Strikes Back (1980)". Box Office Mojo. Retrieved 2008-09-12.
- ↑ "Star Wars: Episode VI - Return of the Jedi (1983)". Box Office Mojo. Retrieved 2008-09-12.
- ↑ "Star Wars Episode I: The Phantom Menace (1999)". Box Office Mojo. Retrieved 2008-09-12.
- ↑ "Star Wars Episode II: Attack of the Clones (2002)". Box Office Mojo. Retrieved 2008-09-12.
- ↑ "Star Wars: Episode III: Revenge of the Sith (2005)". Box Office Mojo. Retrieved 2008-09-14.
- ↑ "Star Wars: The Clone Wars (film)". Box Office Mojo. Retrieved 2009-01-01.
- ↑ "Star Wars". Rotten Tomatoes. Retrieved 2008-09-11.
- ↑ "Star Wars (Cream of the Crop)". Rotten Tomatoes. Retrieved 2007-09-11.
- ↑ "Star Wars: Reviews". Metacritic. Retrieved 2008-09-11.
- ↑ "Empire Strikes Back". Rotten Tomatoes. Retrieved 2008-09-11.
- ↑ "The Empire Strikes Back (Cream of the Crop)". Rotten Tomatoes. Retrieved 2008-09-11.
- ↑ "The Empire Strikes Back". Metacritic. Retrieved 2008-06-25.
- ↑ "Return of the Jedi". Rotten Tomatoes. Retrieved 2008-06-25.
- ↑ "Return of the Jedi (Cream of the Crop)". Rotten Tomatoes. Retrieved 2008-09-11.
- ↑ "Return of the Jedi". Metacritic. Retrieved 2008-06-25.
- ↑ "Star Wars Episode I: The Phantom Menace (Cream of the Ctop)". Rotten Tomatoes. Retrieved 2008-06-16.
- ↑ "Star Wars Episode I: The Phantom Menace(Cream of the Crop)". Rotten Tomatoes. Retrieved 2007-05-17.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Star Wars : Episode I - The Phantom Menace : Reviews". Metacritic. Retrieved 2008-06-25.
- ↑ "Star Wars Episode II: Attack of the Clones". Rotten Tomatoes. Retrieved 2007-06-16.
- ↑ "Star Wars Episode II: Attack of the Clones (Cream of the Crop)". Rotten Tomatoes. Retrieved 2007-05-17.
- ↑ "Star Wars : Episode II - Attack of the Clones: Reviews". Metacritic. Retrieved 2007-06-23.
- ↑ "Star Wars Episode III: Revenge of the Sith". Rotten Tomatoes. Retrieved 2007-06-16.
- ↑ "Star Wars Episode III: Revenge of the Sith (Cream of the Crop)". Rotten Tomatoes. Retrieved 2007-05-17.
- ↑ "Star Wars : Episode III - Revenge of the Sith: Reviews". Metacritic. Retrieved 2008-06-25.
- ↑ "Star Wars: The Clone Wars". Rotten Tomatoes. Retrieved 2009-01-01.
- ↑ "Star Wars: The Clone Wars (Cream of the Crop)". Rotten Tomatoes. Retrieved 2009-01-01.
- ↑ "Star Wars: The Clone Wars: Reviews". Metacritic. Archived from the original on 2009-03-01. Retrieved 2009-01-01.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Lost Star Warriors". AOL. Archived from the original on 1998-12-01. Retrieved 2008-03-27.
- ↑ Pollock, Dale (2005-05-19). "Star Wars: George Lucas' Vision". Washington Post. Retrieved 2008-03-27.
- ↑ "From EU to Episode II: Aayla Secura". Star Wars. Retrieved 2008-01-09.
- ↑ "Star Wars Live-Action Series Delayed". IGN. 2008-03-17. Retrieved 2008-03-27.
- ↑ "Ultimate Timeline". The Force. Retrieved 2008-03-27.
- ↑ "Alan Dean Foster". Alan Dean Foster. 2008-03-01. Retrieved 2008-03-28.
- ↑ "Company Timeline". Dark Horse comics. Archived from the original on 2008-06-04. Retrieved 2008-04-16.
- ↑ "Kevin Rubio on the Return of Tag and Bink". Dark Horse comics. 2006-03-30. Archived from the original on 2008-05-18. Retrieved 2008-04-16.
- ↑ Matt Martin (2007-08-11). "Warner Bros. swoops for Traveller's Tales". GamesIndustry.biz. Retrieved 2008-01-09.
- ↑ "Star Wars Battlefront: Renegade Squadron sends PSP system owners to the front" (Press release). LucasArts. 2007-05-10. Retrieved 2008-01-09.
- ↑ "ಆರ್ಕೈವ್ ನಕಲು". Archived from the original on 2010-08-09. Retrieved 2009-12-29.
- ↑ "Overview". Star Wars: The Force Unleashed. LucasArts. Retrieved 2008-03-08.
- ↑ Berardini, César A. (2008-04-03). "Star Wars: The Force Unleashed Dated". Team Xbox. Archived from the original on 2008-04-07. Retrieved 2008-04-03.
- ↑ "Star Wars Trading Cards". Star Wars cards. Archived from the original on 2008-04-05. Retrieved 2008-03-27.
- ↑ "Star Wars Promotional Trading Card List". The Star Wars Collectors Archive. Retrieved 2008-03-28.
- ↑ "Risk Star Wars: The Original Trilogy Edition". Hasbro. Retrieved 2009-03-23.
- ↑ "Star Wars Clone Wars Edition". Hasbro. Retrieved 2009-03-23.
- ↑ "Filmmaker Kevin Smith Hosts `The Official Star Wars Fan Film Awards' On SCI FI Channel; George Lucas to Present Special Honor". Business Wire. 2002-04-23. Archived from the original on 2012-06-29. Retrieved 2008-03-28.
- ↑ Peter Rowe. "Final installment of 'Star Wars' parody is out there - somewhere". San Diego Union Tribune. Retrieved 2009-03-25.
- ↑ Knapton, Sarah (2008-04-07). "Court to rule in Star Wars costume battle". The Guardian. Retrieved 2008-04-15.
- ↑ ""Hardware Wars": The movie, the legend, the household appliances". Salon.com. Archived from the original on 2011-06-06. Retrieved 2008-03-27.
- ↑ Mel Brooks'. Spaceballs (DVD).
- ↑ "Mystery Ewok Theater 2005: Return of the Ewok". Star Wars. Retrieved 2008-01-09.
- ↑ "R2-D2: Beneath the Dome DVD". Star Wars. Retrieved 2008-01-09.
- ↑ ""Weird Al" -- Nerdy Something". Star Wars. 2006-10-26. Retrieved 2008-01-09.
- ↑ ೧೧೧.೦ ೧೧೧.೧ Fitzgerald, Frances. Way Out There in the Blue. Simon & Schuster.; ದಿ ನ್ಯೂಯಾರ್ಕ್ ಟೈಮ್ಸ್ ಅನ್ನು ಇಲ್ಲಿಂದ ಪಡೆಯಬಹುದು[೧]
ಉಲ್ಲೇಖಗಳು
[ಬದಲಾಯಿಸಿ]- Arnold, Alan (1980), Once Upon a Galaxy: A Journal of the Making of The Empire Strikes Back, Ballantine Books, ISBN 0345290755
- Bouzereau, Laurent (1997), The Annotated Screenplays, Del Rey, ISBN 0345409817
- Kaminski, Michael (2007), The Secret History of Star Wars, archived from the original on 2007-07-06, retrieved 2009-12-29
- Kaminski, Michael (2008), The Secret History of Star Wars (3.0 ed.), archived from the original on 2007-07-06, retrieved 2008-05-21
- Rinzler, J.W. (2007), The Making of Star Wars: The Definitive Story Behind the Original Film (Star Wars), Del Rey, ISBN 0345494768
- Rinzler, Jonathan (2005). The Making of Star Wars, Episode III - Revenge of the Sith. Del Rey. ISBN 0345431391.
ಹೆಚ್ಚಿನ ಓದಿಗೆ
[ಬದಲಾಯಿಸಿ]- ಸ್ಟಾರ್ ವಾರ್ಸ್, ಧರ್ಮ, ಮತ್ತು ತತ್ವಶಾಸ್ತ್ರ
- Bortolin, Matthew (2005-04-25). The Dharma of Star Wars. Wisdom Publications. ISBN 0861714970.
- Decker, Kevin S. (2005-03-10). Star Wars and Philosophy. Open Court. ISBN 0812695836.
- Porter, John M. (2003-01-31). The Tao of Star Wars. Humanics Trade Group. ISBN 0893343854.
- Snodgrass, Jon (2004-09-13). Peace Knights of the Soul. InnerCircle Publishing. ISBN 0975521470.
- Staub, Dick (2005-03-25). Christian Wisdom of the Jedi Masters. Jossey-Bass. ISBN 0787978949.
- ಸ್ಟಾರ್ ವಾರ್ಸ್ ಮೇಲೆ ಜೋಸೆಫ್ ಕ್ಯಾಂಪ್ಬೆಲ್ನ ಪ್ರಭಾವ
- Campbell, Joseph (1991-06-01). The Power of Myth. Anchor. ISBN 0385418868.
- Henderson, Mary (1997-11-03). Star Wars: The Magic of Myth. Bantam. ISBN 0553102060.
- Larsen, Stephen (2002-04-01). Joseph Campbell: A Fire in the Mind. Inner Traditions. ISBN 0892818735.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸ್ಟಾರ್ ವಾರ್ಸ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ಸ್ಟಾರ್ ವಾರ್ಸ್ ಅಧಿಕೃತ ಜಾಲತಾಣ
- ವಿಕಿಪೀಡಿಯಾ: ದಿಸ್ಟಾರ್ ವಾರ್ಸ್ ವಿಕಿ – ಸ್ಟಾರ್ ವಾರ್ಸ್ ಗಾಗಿ ಸಮರ್ಪಿಸಿರುವ ವಿಕಿ.
- ಯೂಹೂನಲ್ಲಿ ಸ್ಟಾರ್ ವಾರ್ಸ್ ವಿಶ್ವ Archived 2009-02-28 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಟಾರ್ ವಾರ್ಸ್ ಮೂಲಗಳು: ಜಾರ್ಜ್ ಲ್ಯೂಕಸ್ ಸ್ಟಾರ್ ವಾರ್ಸ್ ಸೃಷ್ಟಿಸಿದ್ದು ಹೇಗೆ?
- CS1 errors: empty unknown parameters
- CS1 errors: redundant parameter
- CS1 errors: unsupported parameter
- Harv and Sfn no-target errors
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hatnote templates targeting a nonexistent page
- Commons link from Wikidata
- Articles with Open Directory Project links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಅಂತರರಾಷ್ಟ್ರೀಯ ಸಿನಿಮಾ
- ಹಾಲಿವುಡ್
- ಸ್ಟಾರ್ ವಾರ್ಸ್
- ಆನಂತರದ ಚಲನಚಿತ್ರಗಳು
- ಪಾಶ್ಚಿಮಾತ್ಯರ ಆಕಾಶ
- ತ್ರಿಕೋಣ ಚಲನಚಿತ್ರಗಳು
- ಮಾಧ್ಯಮ ಸಂಸ್ಥೆಗಳು
- ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರಗಳ ಸರಣಿ
- ಆಕಾಶಯಾನ ಗೀತಾನಾಟಕ
- ಕಾಲ್ಪನಿಕ ಚಲನಚಿತ್ರಗಳ ಸರಣಿ
- ಆರು ಪ್ರವೇಶದೊಂದಿಗೆ ಚಲನಚಿತ್ರಗಳ ಸರಣಿ
- ಏಕಕಲ್ಪನೆಗಳು
- ಚಲನಚಿತ್ರಗಳು