ಅನ್ನಿ ಬೆಸೆಂಟ್
ಅನ್ನಿ ಬೆಸೆಂಟ್ | |
---|---|
Born | |
Died | 20 September 1933 | (aged 85)
Known for | Theosophist, women's rights activist, writer and orator |
Spouse | Frank Besant |
Children | Digby, Mabel |
ಅನ್ನಿ ಬೆಸೆಂಟ್ (pronounced /ˈbɛsənt/; ನೀ ವುಡ್ ; ಕ್ಲಾಫಾಮ್, ಲಂಡನ್ 1 ಆಕ್ಟೋಬರ್ 1847 – ಭಾರತದ ಅಡ್ಯಾರ್ನಲ್ಲಿ, 20 ಸೆಪ್ಟೆಂಬರ್ 1933) ಪ್ರಖ್ಯಾತ ಥಿಯೊಸೊಫಿಸ್ಟ್, ಮಹಿಳಾ ಹಕ್ಕುಗಳ ಕ್ರಾಂತಿಕಾರಿ, ಬರಹಗಾರ್ತಿ ಮತ್ತು ವಾಗ್ಮಿ ಮತ್ತು ಐರಿಷ್ ಮತ್ತು ಭಾರತದ ಸ್ವ-ಆಡಳಿತ ಬೆಂಬಲಗಾರ್ತಿ. 1873ರಲ್ಲಿ ಅವರು ಫ್ರಾಂಕ್ ಬೆಸೆಂಟ್ ಅವರನ್ನು ವಿವಾಹವಾದರು ಮತ್ತು ಲಂಡನ್‌ಗೆ ತೆರಳಿದರು, ಅಲ್ಲಿ ಅವರು ನ್ಯಾಷನಲ್ ಸೆಕ್ಯುಲರ್ ಸೊಸೈಟಿಯ ಒಬ್ಬ ಪ್ರಖ್ಯಾತ ಸಭಾಪತಿ ಮತ್ತು ಬರಹಗಾರ್ತಿ ಹಾಗೂ ಚಾರ್ಲ್ಸ್ ಬ್ರಾಡ್ಲಾಗ್|ನ್ಯಾಷನಲ್ ಸೆಕ್ಯುಲರ್ ಸೊಸೈಟಿಯ ಒಬ್ಬ ಪ್ರಖ್ಯಾತ ಸಭಾಪತಿ ಮತ್ತು ಬರಹಗಾರ್ತಿ ಹಾಗೂ ಚಾರ್ಲ್ಸ್ ಬ್ರಾಡ್ಲಾಗ್‌ರ ಅಪ್ತ ಗೆಳತಿಯಾದರು. ಜನನ ನಿಯಂತ್ರಣ ಚಳುವಳಿಗಾರ ಚಾರ್ಲ್ಸ್ ನೊಲ್ಟನ್‌ರಿಂದ ಒಂದು ಪುಸ್ತಕವನ್ನು ಬಿಡುಗಡೆ ಮಾಡಿಸಿದ ಕಾರಣಕ್ಕಾಗಿ 1877ರಲ್ಲಿ ಅವರುಗಳ ಮೇಲೆ ಕಾನೂನು ಕ್ರಮ ಜರುಗಿಸಲಾಯಿತು. ಈ ಹಗರಣ ಅವರನ್ನು ಜನಪ್ರಿಯಗೊಳಿಸಿತು ಮತ್ತು ಬ್ರಾಡ್ಲಾಗ್ 1880ರಲ್ಲಿ ನಾರ್ಥ್‌ಅಮ್ಟನ್‌ಗೆ MP ಆಗಿ ಚುನಾಯಿತರಾದರು. ಅನ್ನಿ ಯೂನಿಯನ್ ಸಂಘಟಕರ ಜೊತೆ ತೊಡಿಗಿಸಿಕೊಂಡರು, ಬ್ಲಡಿ ಸಂಡೆ ಗಲಭೆ ಮತ್ತು 1888ರ ಲಂಡನ್ ಮ್ಯಾಚ್‌ಗರ್ಲ್‌ಸ್ ಸ್ಟ್ರೈಕ್ ಅವುಗಳಲ್ಲಿ ಸೇರಿವೆ ಮತ್ತು ಫ್ಯಾಬಿಯನ್ ಸೊಸೈಟಿ ಮತ್ತು (ಮಾರ್ಕ್ಸ್‌ವಾದಿ) ಸೋಶಿಯಲ್ ಡೆಮೊಕ್ರೆಟಿಕ್ ಫೆಡರೆಷನ್‌ಗೆ ಒಬ್ಬ ಮುಂದಾಳತ್ವ ಸಭಾಪತಿಯಾದರು ಮತ್ತು ಟವರ್ ಹ್ಯಾಮ್ಲೆಟ್ಸ್‌ಗೆ ಲಂಡನ್ ಸ್ಕೂಲ್ ಬೋರ್ಡ್‌ಗೆ ಚುನಾಯಿತರಾದರು. ಆ ಕಾಲದಲ್ಲಿ ಕೆಲವೇ ಮಹಿಳೆಯರು ಮತದಾನ ಮಾಡಲು ಆರ್ಹರಾಗಿದ್ದರೂ ಸಹ ಇವರು ಅಧಿಕ ಮತಗಳನ್ನು ಪಡೆದು ಅಗ್ರ ಸ್ಥಾನಗಳಿಸಿದರು. 1890ರಲ್ಲಿ ಅನ್ನಿ ಬೆಸೆಂಟ್ ಹೆಲೆನಾ ಬ್ಲಾವಟ್ಸಕಿಯನ್ನು ಭೇಟಿಯಾದರು ಮತ್ತು ನಂತರದ ಕೆಲವು ವರ್ಷಗಳಲ್ಲಿ ದೇವತಾ ತತ್ವಜ್ಞಾನ ಯೋಗದಲ್ಲಿ ಅವರ ಆಸಕ್ತಿ ಬೆಳೆಯಿತು ಮತ್ತು ಸಮಾಜವಾದಿ ರಾಜಿಕೀಯದಲ್ಲಿ ಅವರ ಆಸಕ್ತಿ ಕ್ಷೀಣಿಸಿತು. ಅವರು ಭಾರತಕ್ಕೆ ಪ್ರಯಾಣಿಸಿದರು ಮತ್ತು 1988ರಲ್ಲಿ ಕೇಂದ್ರಿಯ ಹಿಂದೂ ಕಾಲೇಜನ್ನು ಭಾರತದಲ್ಲಿ ಸ್ಥಾಪಿಸಲು ಸಹಾಯಮಾಡಿದರು. 1902ರಲ್ಲಿ ಇಂಟರ್‌ನ್ಯಾಷನಲ್ ಆರ್ಡರ್ ಅಫ್ ಕೋ-ಪ್ರಿಮಸೊನ್ರಿಯನ್ನು ಇಂಗ್ಲೆಂಡ್‌ನಲ್ಲಿ ಸ್ಥಾಪಿಸಿದರು ಮತ್ತು ನಂತರದ ಕೆಲವು ವರ್ಷಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಹಲವು ಭಾಗಗಳಲ್ಲಿ ವಸತಿಗೃಹಗಳನ್ನು ಸ್ಥಾಪಿಸಿದರು. 1908ರಲ್ಲಿ ಅನ್ನಿ ಬೆಸೆಂಟ್ ದೇವತಾ ತತ್ವಜ್ಞಾನ ಯೋಗ (ಥಿಯೊಫಿಸಿಕಲ್) ಸಮಾಜದ ಅಧ್ಯಕ್ಷರಾದರು ಮತ್ತು ಸಮಾಜವನ್ನು ಭೌದ್ಧಧರ್ಮದಿಂದ ದೂರ ಮತ್ತು ಹಿಂದೂ ಧರ್ಮದ ಕಡೆ ನಿರ್ದೇಶಿಸಲು ಪ್ರಾರಂಭಿಸಿದರು. ಅವರು ಭಾರತದ ರಾಷ್ಟ್ರೀಯ ಕಾಗ್ರೆಂಸ್‌ಗೆ ಸೇರುವ ಮೂಲಕ ಅವರನ್ನು ಭಾರತದ ರಾಜಿಕೀಯದಲ್ಲಿ ಸಹ ತೊಡಗಿಸಿಕೊಡರು. 1914ರಲ್ಲಿ ಯುರೋಪಿನಲ್ಲಿ ಯುದ್ಧ ಅರಂಭವಾದಾಗ, ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಚಳುವಳಿಗಾಗಿ ಭಾರತದಲ್ಲಿ ಹೋಂ ರೂಲ್ ಲೀಗ್ ಮತ್ತು ಸಾಮ್ರಾಜ್ಯದ ಒಳಗಡೆ ಆಡಳಿತದ ಸ್ಥಾನಮಾನವನ್ನು ಸ್ಥಾಪಿಸಲು ಅವರು ಸಹಾಯ ಮಾಡಿದರು, ಅದು 1917 ಕೊನೆಯಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಅವರು ಚುನಾವಣೆಯಲ್ಲಿ ಅಧ್ಯಕ್ಷೆ ಆಗಿ ಆಯ್ಕೆಯಾಗುವಂತಹ ಉಚ್ಚಮಟ್ಟವನ್ನು ತಲುಪಿತು. ಯುದ್ಧ ನಂತರ ಆಕೆ 1933ರಲ್ಲಿ ಅವರ ಸಾವಿನವರೆಗೆ ವರೆಗೆ ಭಾರತದ ಸ್ವಾತಂತ್ರಕ್ಕಾಗಿ ಚಳುವಳಿಯನ್ನು ಮುಂದುವರಿಸಿದರು.
ಆರಂಭಿಕ ಜೀವನ
[ಬದಲಾಯಿಸಿ]ಅನ್ನಿ ವುಡ್ ಇರಿಷ್ ಮೂಲದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ 1847 ಅಕ್ಟೋಬರ್ ೧೦ ರಂದು ಲಂಡನ್‌ನಲ್ಲಿ ಜನಿಸಿದರು. ಅವರು ಇರಿಷ್ ಮೂಲದವರಾದ ಕಾರಣ ಯಾವಾಗಲೂ ಹೆಮ್ಮೆ ಪಡುತ್ತಿದ್ದರು ಮತ್ತು ಅವರ ಯೌವನ ದಿನಗಳ ಪೂರ್ತಿ ಇರಿಷ್ ಸ್ವಯಂ ಪ್ರಭುತ್ವದ ಉದ್ದೇಶವನ್ನು ಬೆಂಬಲಿಸಿದರು. ಅನ್ನಿಯ ಐದು ವರ್ಷ ವಯಸ್ಸಿನಲ್ಲಿ ಅವರ ತಂದೆ ಕುಟುಂಬವನ್ನು ಹೆಚ್ಚು ಕಡಿಮೆ ನಿರ್ಗತಿಕರನ್ನಾಗಿ ಮಾಡಿ ಸಾವನ್ನಪ್ಪಿದರು. ಅವರ ತಾಯಿ ಹ್ಯಾರೊನಲ್ಲಿ ಬಾಲಕರಾಗಿ ಒಂದು ವಸತಿ ಮನೆಯನ್ನು ನಡೆಸುವ ಮೂಲಕ ಕುಟುಂಬದ ಜವಾಬ್ದಾರಿ ವಹಿಸಿಕೊಂಡರು. ಆದ್ಯಾಗಿಯೂ, ಅವರು ಅನ್ನಿಗೆ ಆಸರೆಯಾಗಲು ಅಸಮರ್ಥರಾದರು ಮತ್ತು ಅನ್ನಿಯ ಜವಾಬ್ದಾರಿ ವಹಿಸಿಕೊಳ್ಳಲು ಅವರ ಗೆಳತಿ ಎಲ್ಲೆನ್ ಮೆರಿಯತ್‌ನ ಮನವೊಪ್ಪಿಸಿದರು. ಅನ್ನಿ ಒಂದು ಉತ್ತಮ ಶಿಕ್ಷಣವನ್ನು ಹೊಂದುವುದಾಗಿ ಮೆರಿಯತ್ ಖಚಿತ ಪಡಿಸಿದರು. ಸಮಾಜಕ್ಕೆ ಕರ್ತ್ಯವ್ಯದ ಒಂದು ದೃಡ ಅರಿವನ್ನು ಅವರಿಗೆ ನೀಡಲಾಯಿತು ಮತ್ತು ಸ್ವಾತಂತ್ರ ಮಹಿಳೆ ಏನು ಸಾಧಿಸಬಹುದು ಎಂಬ ಒಂದು ಸಮಾನ ದೃಡ ಅರಿವನ್ನು ಒದಗಿಸಲಾಯಿತು. ಒಬ್ಬ ಯುವ ಮಹಿಳೆಯಾಗಿ, ಯುರೋಪಿನಲ್ಲಿ ವ್ಯಾಪಕವಾಗಿ ಪ್ರಯಾಣಿಸಲು ಸಹ ಅವರು ಸಮರ್ಥರಾಗಿದ್ದರು. ಅಲ್ಲಿ ಅವರು ಕ್ಯಾಥೋಲಿಕ್ ವರ್ಣ ಮತ್ತು ಸಾಂಪ್ರದಾಯಿಕ ಆಚರಣೆಗಳ ಮೇಲೆ ಒಂದು ಸದಭಿರುಚಿಯನ್ನು ಗಳಿಸಿಕೊಂಡರು ಮತ್ತು ಅದನ್ನು ಯಾವತ್ತೂ ಉಳಿಸಿಕೊಂಡರು.
1867ರಲ್ಲಿ, ಹತ್ತೊಂಬತ್ತನೆಯ ವಯಸ್ಸಿನಲ್ಲಿ ಅವರು ವಾಲ್ಟರ್ ಬೆಸೆಂಟ್‌ರ ಕಿರಿಯ ಸಹೋದರ 26-ವರ್ಷ ವಯಸ್ಸಿನ ಪಾದ್ರಿ ಫ್ರಾಂಕ್ ಬೆಸೆಂಟ್‌ರನ್ನು ಮದುವೆಯಾದರು. ಆತ ಇವ್ಯಾಲಾಂಜಲಿಕಲ್ ಆಂಗ್ಲಿಕನ್ ಪಾದ್ರಿಯಾಗಿದ್ದರು, ಅವರು ಅನ್ನಿ ಬೆಸೆಂಟ್‌ರ ಹಲವು ಆಸಕ್ತಿಗಳಿಗೆ ಸಹಮತಿ ಹೊಂದಿದ್ದರು. ಶೀಘ್ರವಾಗಿ ಫ್ರಾಂಕ್ ಲಿಂಕನ್‌ಶೈರ್‌ನಲ್ಲಿ ಸಿಬ್ಸೆಯ ಬಿಷಪ್‌ನ ಪ್ರತಿನಿಧಿಯಾದರು ಅನ್ನಿ ಅವರ ಪತಿಯೊಂದಿಗೆ ಸಿಬ್ಸೆಗೆ ತೆರಳಿದರು, ಮತ್ತು ಕೆಲ ವರ್ಷಗಳಲ್ಲಿ ಅವರು ಎರಡು ಮಕ್ಕಳನ್ನು ಹೊಂದಿದರು: ಡಿಗ್ಬಿ ಮತ್ತು ಮ್ಯಾಬೆಲ್. ಆದ್ಯಾಗಿಯೂ, ಮದುವೆ ಒಂದು ದುರ್ಘಟನೆಯಾಗಿತ್ತು. ಹಣ ಮತ್ತು ಅನ್ನಿಯ ಸ್ವಾಂತಂತ್ರ್ಯದ ಮೇಲೆ ಮೊದಲ ಭಿನ್ನಾಭಿಪ್ರಾಯ ಸಂಭವಿಸಿತು. ಅನ್ನಿ ಸಣ್ಣ ಕಥೆಗಳು ಮಕ್ಕಳಿಗಾಗಿ ಪುಸ್ತಕಗಳು ಮತ್ತು ಲೇಖನಗಳನ್ನು ಬರೆಯುತ್ತಿದ್ದರು. ಮದುವೆಯಾದ ಮಹಿಳೆ ಸ್ವಂತ ಆಸ್ತಿಯನ್ನು ಹೊಂದಲು ಕಾನೂನಿ ಹಕ್ಕನ್ನು ಹೊಂದಿರದ ಕಾರಣ, ಫ್ರಾಂಕ್ ಅವರು ಗಳಿಸಿದ ಎಲ್ಲಾ ಹಣವನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದರು. ರಾಜಕೀಯ ಇನ್ನಷ್ಟೂ ಈ ಜೋಡಿಯನ್ನು ಬೇರೆಮಾಡಿತು. ಕಾರ್ಮಿಕರನ್ನು ಸಂಘಟಿಸಲು ಮತ್ತು ಉತ್ತಮ ಸ್ಥಿತಿಗಳನ್ನು ಜಯಿಸಲು ಹೋರಾಡುತ್ತಿದ್ದ ಜಮೀನಿನ ಕೆಲಸಗಾರರನ್ನು ಬೆಂಬಲಿಸಲು ಅನ್ನಿ ಆರಂಭಿಸಿದರು. ಫ್ರಾಂಕ್ ಒಬ್ಬ ಸಂಪ್ರದಾಯವಾದಿ ಯಾಗಿದ್ದರು ಮತ್ತು ಜಮೀನ್ದಾರರು ಮತ್ತು ರೈತರನ್ನು ಬೆಂಬಲಿಸುತ್ತಿದ್ದರು. ಅನ್ನಿ ಕ್ರೈಸ್ತಧರ್ಮದ ಒಂದು ಧಾರ್ಮಿಕ ಆಚರಣೆಗೆ ಹಾಜರಾಗಲು ನಿರಾಕರಿಸಿದ್ದಾಗ ಉದ್ವೇಗ ಹೆಚ್ಚಾಯಿತು. ಅವರು ಆತನನ್ನು ತ್ಯಜಿಸಿದರು ಮತ್ತು ಲಂಡನ್‌ಗೆ ಮರಳಿದರು. ಅವರು ಕಾನೂನು ಬದ್ಧವಾಗಿ ಬೇರೆಯಾದರು ಮತ್ತು ಅನ್ನಿ ಹೆಣ್ಣುಮಕ್ಕಳನ್ನು ಅವರ ಜೊತೆಯಲ್ಲಿ ಕರೆದುಕೊಂಡು ಹೋದರು. ಅನ್ನಿ ಅವರ ಸ್ವಂತ ನಂಬಿಕೆಯನ್ನೇ ಪ್ರಶ್ನಿಸಿಕೊಳ್ಳಲು ಆರಂಭಿಸಿದರು. ಆಕೆ ಅಭಿಪ್ರಾಯಕ್ಕಾಗಿ ಪ್ರಮುಖ ಪಾದ್ರಿಗಳಿಗೆ ತಿರುಗಿದರು. ಅವರು ಇಂಗ್ಲೆಂಡ್‌ನ ಚರ್ಚ್‌ನ ಕ್ಯಾಥೋಲಿಕ್ ಪಕ್ಷದ ನಾಯಕ, ಎಡ್ವರ್ಡ್ ಬೌವೆರಿಎ ಪುಸಿಯನ್ನು ಭೇಟಿಯಾಗಲು ಸಹ ಹೋದರು. ಅನ್ನಿಗೆ ಆಕೆ ತುಂಬಾ ಪುಸ್ತಕಗಳನ್ನು ಓದಿರುವುದಾಗಿ ಆತ ಸರಳವಾಗಿ ಹೇಳಿದನು. ಅನ್ನಿ ಅವರ ಮದುವೆಯನ್ನು ಸರಿಗೊಳಿಸುವ ಕೊನೆಯ ಪ್ರಯತ್ನ ಮಾಡಲು ಫ್ರಾಂಕ್ ಬಳಿ ಮರಳಿದರು. ಅದು ನಿಷ್ಪ್ರಯೋಜಕ ಎಂದು ಸಾಬೀತಾಯಿತು. ಅವರು ಅಂತಿಮವಾಗಿ ಲಂಡನ್‌ಗೆ ತೆರಳಿದರು. ಫ್ರಾಂಕ್‌ಗೆ ವೀಚ್ಛೇಧನ ಯೋಚಿಸಲಾಗದಾಗಿತ್ತು ಮತ್ತು ನಿಜವಾಗಿ ಮಧ್ಯಮ-ವರ್ಗದ ಜನರಿಗೆ ಎಟುಕುವಂತದಾಗಿರಲಿಲ್ಲ. ಅನ್ನಿ ಉಳಿದ ಜೀವನ ಪೂರ್ತಿ ಶ್ರೀಮತಿ ಬೆಸೆಂಟ್ ಆಗಿಯೇ ಉಳಿಯ ಬೇಕಾಗಿತ್ತು. ಮೊದಲಿಗೆ, ಆಕೆ ತನ್ನ ಎರಡು ಮಕ್ಕಳ ಜೊತೆ ಸಂಪರ್ಕ ಹೊಂದಲು ಸಮರ್ಥರಾಗಿದರು ಮತ್ತು ಮ್ಯಾಬೆಲ್‌ನನ್ನು ಅವರ್ ಜೊತೆ ಹೊಂದಿದರು. ಆಕೆ ಫ್ರಾಂಕ್‌ನಿಂದ ಒಂದು ಸಣ್ಣ ಭತ್ಯೆಯನ್ನು ಪಡೆಯುತ್ತಿದ್ದರು. ಆಕೆ ಪತಿಗೆ ಅವರ ಇಬ್ಬರು ಮಕ್ಕಳ ಅಧೀನವನ್ನು ನೀಡಲಾಯಿತು.
ಬ್ರಿಕ್‌ಬೆಕ್
[ಬದಲಾಯಿಸಿ]ಕೆಲ ಸಮಯ ಆಕೆ ಬ್ರಿಕ್‌ಬೆಕ್ ಸಾಹಿತ್ಯ ಮತ್ತು ವೈಙ್ಞಾನಿಕ ಸಂಸ್ಥೆಯಲ್ಲಿ ಅರೆಕಾಲಿಕ ಅಧ್ಯಯನವನ್ನು ಕೈಗೊಂಡರು, ಅಲ್ಲಿ ಅವರ ಧಾರ್ಮಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ಭೀತಿ ಉಂಟಾಯಿತು. ಒಂದು ಸಾರಿ ಸಂಸ್ಥೆಯ ಗವರ್ನರ್ ಆಕೆಯ ಪರೀಕ್ಷೆಯ ಫಲಿತಾಂಶವನ್ನು ತಡೆಹಿಡಿಯಲು ಪ್ರಯತ್ನಿಸಿದರು.[೧]
ಸುಧಾರಣೆಗಾರ್ತಿ ಮತ್ತು ಜಾತ್ಯತೀತ ವ್ಯಕ್ತಿ
[ಬದಲಾಯಿಸಿ]ಅವರು ತಮಗೆ ಸರಿ ಎನಿಸಿದ ಕಾರಣಗಳಿಗಾಗಿ ಹೋರಾಡಿದರು, ಸ್ವಾತಂತ್ರ್ಯದ ಅಭಿಪ್ರಾಯದೊಂದಿಗೆ ಆರಂಭಿಸಿ, ಮಹಿಳೆಯರ ಹಕ್ಕುಗಳು, ಜಾತ್ಯತೀತತೆ (ಆಕೆ ಚಾರ್ಲ್ಸ್ ಬ್ರಾಡ್‌ಲೌಗ್ ಜೊತೆಗೆ ರಾಷ್ಟ್ರೀಯ ಜಾತ್ಯತೀತ ಸಮಾಜದ ಒಬ್ಬ ಪ್ರಮುಖ ಸದಸ್ಯೆ), ಜನನ ನಿಯಂತ್ರಣ, ಫ್ಯಾಬಿಯನ್ ಸಮಾಜವಾದ ಮತ್ತು ಕಾರ್ಮಿಕರ ಹಕ್ಕುಗಳು ಕಾರಣಕ್ಕಾಗಿ ಹೋರಾಡಿದರು. ಒಮ್ಮೆ ಫ್ರಾಂಕ್ ಬೆಸೆಂಟ್‌ರ ಹಿಡಿತದಿಂದ ಸ್ವಾತಂತ್ರವಾಗಿ ಮತ್ತು ಚಿಂತನೆಗಳ ಹೊಸ ಹರಿವಿಗೆ ತೆರೆದಿಟ್ಟರು, ಅನ್ನಿ ದೀರ್ಘಕಾಲದಿಂದ ಎತ್ತಿ ಹಿಡಿದ ಅವರ ಧಾರ್ಮಿಕ ನಂಬಿಕೆಗಳನ್ನಷ್ಟೇ ಅಲ್ಲದೇ ಸಂಪ್ರದಾಯಿಕ ಅಭಿಪ್ರಾಯದ ಸಮಗ್ರತೆಯನ್ನು ಸಹ ಪ್ರಶ್ನಿಸಲು ಆರಂಭಿಸಿದರು. ಅವರು ಚರ್ಚ್‌ಗಳ ಮೇಲೆ ದಾಳಿಗಳನ್ನು ಮತ್ತು ಅವರು ಜನರ ಜೀವನಗಳನ್ನು ನಿಯಂತ್ರಿಸಿದ ವಿಧಾನದ ಬರೆಯಲು ಆರಂಭಿಸಿದರು ನಿರ್ದಿಷ್ಟವಾಗಿ ಆಕೆ ಒಂದು ರಾಜ್ಯ-ಪೋಷಿತ ನಂಬಿಕೆಯ ಹಾಗೆ ಇಂಗ್ಲೆಂಡ್‌ನ ಚರ್ಚ್‌ನ ಸ್ಥಾನಮಾನದ ಮೇಲೆ ದಾಳಿ ಮಾಡಿದರು. ಆಕೆ ರಾಷ್ಟ್ರೀಯ ಜಾತ್ಯತೀತ ಸಮಾಜದ ವಾರ್ತಾಪತ್ರಿಕೆ ರಾಷ್ಟ್ರೀಯ ಸುಧಾರಾಣೆಗಾರಕ್ಕೆ ಒಂದು ಅಂಕಣವನ್ನು ಬರೆಯುವ ಮೂಲಕ ಶೀಘ್ರವಾಗಿ ಒಂದು ಸಣ್ಣ ಮೊತ್ತದ ವಾರದ ಸಂಬಳವನ್ನು ಗಳಿಸಲು ಪ್ರಾರಂಭಿಸಿದರು. ಸಮಾಜವು ಒಂದು ಜಾತ್ಯತೀತ ರಾಜ್ಯದ: ಕ್ರೈಸ್ತಧರ್ಮದ ವಿಶೇಷ ಸ್ಥಾನಮಾನದ ಮುಕ್ತಾಯದ ಧೋರಣೆಯನ್ನು ಹೊಂದಿತ್ತು. ಸಮಾಜವು ಆಕೆಗೆ ಅದರ ಸಾರ್ವಜನಿಕ ಭಾಷಣಕಾರರಲ್ಲಿ ಒಬ್ಬರ ಹಾಗೆ ನಿರ್ವಹಿಸಲು ಅನುಮತಿಸಿತು. ವಿಕ್ಟೋರಿಯ ರಾಣಿಯ ಕಾಲದಲ್ಲಿ ಸಾರ್ವಜನಿಕ ಭಾಷಣಗಳು ತುಂಬಾ ಜನಪ್ರಿಯ ಮನೋರಂಜನೆಯಾಗಿದ್ದವು. ಅನ್ನಿ ಒಬ್ಬ ಬುದ್ಧಿವಂತ ಭಾಷಣಕಾರರಾಗಿದ್ದರು, ಮತ್ತು ಬೇಗ ವ್ಯಾಪಕ ಬೇಡಿಕೆ ಗಳಿಸಿದರು. ದಿನದ ಎಲ್ಲಾ ಮುಖ್ಯ ವಿಷಯಗಳ ಮೇಲೆ ಮಾತನಾಡುತ್ತ, ಯಾವಾಗಲೂ ಅಭಿವೃದ್ಧಿ, ಸುಧಾರಣೆ ಮತ್ತು ಸ್ವಾತಂತ್ರವನ್ನು ಆಗ್ರಹಪೂರ್ವಕವಾಗಿ ಕೇಳುತ್ತ ರೈಲು ಮಾರ್ಗವನ್ನು ಬಳಸಿ, ಆಕೆ ದೇಶವನ್ನು ಸುತ್ತಾಡಿದರು. ಹಲವು ವರ್ಷಗಳ ವರೆಗೆ ಅನ್ನಿ ಸಮಾಜದ ನಾಯಕ ಚಾರ್ಲ್ಸ್ ಬ್ರಾಡ್‌ಲೌಗ್‌ರ ಸ್ನೇಹಿತೆಯಾಗಿದ್ದರು. ಅವರುಗಳು ಎಂದಿಗೂ ಪ್ರೇಮಿಗಳ ರೀತಿಯಲ್ಲಿ ಕಾಣಿಸಲಿಲ್ಲ, ಆದರೆ ಅವರ ಸ್ನೇಹ ತುಂಬಾ ಗಾಡವಾಗಿತ್ತು. ಬ್ರಾಡ್‌ಲೌಗ್, ಒಬ್ಬ ಮಾಜಿ ನಾವಿಕ, ಅವರ ಪತ್ನಿಯಿಂದ ಬೇರೆಯಾಗಿದ್ದರು. ಅನ್ನಿ ಬ್ರಾಡ್‌ಲೌಗ್ ಮತ್ತು ಆತನ ಹೆಣ್ಣುಮಕ್ಕಳ ಜೊತೆ ವಾಸಿಸುತ್ತಿದ್ದರು, ಮತ್ತು ಅವರುಗಳು ಹಲವು ವಿಷಯಗಳ ಮೇಲೆ ಒಟ್ಟಿಗೆ ಕೆಲಸಮಾಡಿದರು. ಬ್ರಾಡ್‌ಲೌಗ್ ಒಬ್ಬ ನಾಸ್ತಿಕ ಮತ್ತು ಪ್ರಜಾಪ್ರಭುತ್ವವಾದಿಯಾಗಿದ್ದರು. ಆತ ಅವರ ಅಭಿಪ್ರಾಯಗಳಿಗೆ ಒಂದು ಉತ್ತಮ ವೇದಿಕೆ ಗಳಿಸಿ ಕೊಳ್ಳಲು ನಾರ್ಥ್‌ಅಮ್ಪನ್‌ಗೆ ಎಂಪಿ ಯಾಗಿ ಚುನಾಯಿತರಾಗುವ ಸಲುವಾಗಿ ಕೆಲಸ ಅವರು ಮಾಡುತ್ತಿದ್ದರು. 1877ರಲ್ಲಿ ಬೆಸೆಂಟ್ ಮತ್ತು ಬ್ರಾಡ್‌ಲೌಗ್ ಅಮೆರಿಕದ ಜನನ ನಿಯಂತ್ರಣ ಚಳುವಳಿಗಾರ ಚಾರ್ಲ್ಸ್ ನೋಲ್ಟನ್‌ನಿಂದ ಒಂದು ಪುಸ್ತಕವನ್ನು ಬಿಡುಗಡೆ ಮಾಡಿಸಿದಾಗ ಅವರಿಬ್ಬರು ಮನೆ ಮಾತಾದರು. ಕಾರ್ಮಿಕ ವರ್ಗದ ಕುಟುಂಬಗಳು ಅವರಿಗೆ ಎಷ್ಟು ಮಕ್ಕಳು ಬೇಕು ಎಂಬುದನ್ನು ನಿರ್ಧರಿಸಲು ಸಮರ್ಥರಾಗುವವರೆಗೆ ಅವರುಗಳು ಸಂತೋಷವಾಗಿರುವುದು ಸಾಧ್ಯವಿಲ್ಲ ಎಂದು ಆ ಪುಸ್ತಕ ಹೇಳುತ್ತದೆ. ಅದು ಅವರ ಕುಟುಂಬದ ಗಾತ್ರವನ್ನು ಮಿತಿಗೊಳಿಸುವ ಮಾರ್ಗಗಳನ್ನು ಸೂಚಿಸುತ್ತದೆ. ನೊಲ್ಟನ್ ಪುಸ್ತಕ ಚರ್ಚುಗಳಿಗೆ ಮಹಾ ಅಪರಾಧವನ್ನು ಉಂಟುಮಾಡಿತು, ಆದರೆ ಅನ್ನಿ ಮತ್ತು ಬ್ರಾಡ್‌ಲೌಗ್‌ರನ್ನು ರಾಷ್ಟ್ರೀಯ ಸುಧಾರಕರಲ್ಲಿ ಬಹಿರಂಗವಾಗಿ ಪ್ರಕಟಿಸಿತು: "ನಾವು ಪ್ರಕಟಿಸಲು ಉದ್ದೇಶಿಸಿದ್ದು ಏನೂ ಇಲ್ಲ ನೈತಿಕತವಾಗಿ ನಾವು ರಕ್ಷಿಸಿಕೊಳ್ಳಲು ಸಾಧ್ಯ ಎಂದು ನಾವು ಭಾವಿಸುವುದಿಲ್ಲ. ನಾವು ಪ್ರಕಟಿಸಿದ್ದನ್ನೆಲ್ಲಾ ನಾವು ಸಮರ್ಥಿಸುತ್ತೇವೆ." ನೊಲ್ಟನ್ ಪುಸ್ತಕವನ್ನು ಪ್ರಕಟಿಸಿದ ಕಾರಣಕ್ಕಾಗಿ ಜೋಡಿಯನ್ನು ಬಂಧಿಸಲಾಯಿತು ಮತ್ತು ವಿಚಾರಣೆಗೆ ಒಳಪಡಿಸಲಾಯಿತು. ಅವರು ಅಪರಾಧಿಗಳು ಎಂದು ಪತ್ತೆಮಾಡಲಾಯಿತು, ಆದರೆ ಮನವಿಯನ್ನು ತೀರ್ಮಾನಿಸದೆ ಬಿಡುಗಡೆ ಮಾಡಿದರು. ವ್ಯಾಪಕ ವಿರೋಧದ ಜೊತೆ, ಅನ್ನಿ ಮತ್ತು ಬ್ರಾಡ್‌ಲೌಗ್ ಲಿಬರಲ್ ಪ್ರೆಸ್‌ನಿಂದ ವ್ಯಾಪಕವಾದ ಬೆಂಬಲವನ್ನು ಸಹ ಪಡೆದರು. ಈ ಕುರಿತಂತೆ ಪತ್ರಗಳಲ್ಲಿ, ಅಭಿಪ್ರಾಯ ವಿಭಾಗಗಳಲ್ಲಿ ಮತ್ತು ಕೋರ್ಟ್‌ನಲ್ಲಿ ಸಹಾ ವಾದಗಳು ಮಾಡಲ್ಪಟ್ಟವು. ಒಂದು ಬಾರಿ, ಅವರನ್ನು ಜೈಲಿಗೆ ಕಳುಹಿಸುತ್ತಾರೆ ಎಂದೇ ಕಾಣಿಸಿತು. ಒಂದು ತಾಂತ್ರಿಕ ಅಂಶದ ಮೇಲೆ ವ್ಯಾಜ್ಯವನ್ನು ಅಂತಿಮವಾಗಿ ಕೈಬಿಡಲಾಯಿತು: ಆರೋಪಗಳನ್ನು ಸರಿಯಾಗಿ ಚಿತ್ರಿಸಿರಲಿಲ್ಲ. ಈ ವಿವಾದದಿಂದಾಗಿ ಅನ್ನಿ ಆಕೆಯ ಮಕ್ಕಳನ್ನು ಕಳೆದುಕೊಂಡರು. ಅನ್ನಿ ಮಕ್ಕಳನ್ನು ನೋಡಿಕೊಳ್ಳಲು ಅಶಕ್ಯರಾಗಿದ್ದಾರೆ ಮತ್ತು ಅವರನ್ನು ಶಾಶ್ವತವಾಗಿ ಆತನಿಗೆ ಒಪ್ಪಿಸಬೇಕು ಎಂದು ಫ್ರಾಂಕ್ ಅವರು ನ್ಯಾಯಾಲಯದ ಮನವೊಪ್ಪಿಸಲು ಸಮರ್ಥರಾದರು. ನೊಲ್ಟನ್ ವಿವಾದದಿಂದ ಬ್ರಾಡ್‌ಲೌಗ್‌ರ ರಾಜಕೀಯ ನಿರೀಕ್ಷೆಗಳಿಗೆ ತೊಂದರೆಯಾಗಲಿಲ್ಲ. ಅಂತಿಮವಾಗಿ ಅವರು 1881ರಲ್ಲಿ ಸಂಸತ್ತಿನ ಒಳಗೆ ಸೇರಿದರು. ಅವರ ನಾಸ್ತಿಕತೆಯ ಕಾರಣದಿಂದ, ಅವರು ಸ್ವಾಮಿಭಕ್ತಿಯ ಪ್ರಮಾಣ ವಚನಕ್ಕೆ ಅಣೆಮಾಡಲು ನಿರಾಕರಿಸಿದರು ಹಲವು ಕ್ರಿಶ್ಚಿಯನ್ನರು ಬ್ರಾಡ್‌ಲೌಗ್‌ನಿಂದ ಚಕಿತರಾದರು, ಆದರೂ ಇತರರು (ಉದಾಹರಣೆಗೆ ಲಿಬರಲ್ ನಾಯಕ ಗ್ಲಾಡ್‌ಸ್ಟೊನ್) ನಂಬಿಕೆಯ ಸ್ವಾತಂತ್ರಕ್ಕಾಗಿ ಮಾತನಾಡಿದರು. ಉಪ-ಚುನಾವಣೆಯ ಒಂದು ಸರಣಿ ಮತ್ತು ನ್ಯಾಯಾಲಯದ ಹಾಜರಿಗಳ ನಂತರ ಪೂರ್ತಿ ಘಟನೆಯು ಬಗೆ ಹರಿಯಲು (ಬ್ರಾಡ್‌ಲೌಗ್‌ರ ಪರ) ಆರು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಮಧ್ಯಂತರದಲ್ಲಿ ಬೆಸೆಂಟ್ ಇರಿಷ್ ಹೋಮ್ ರೂಲ್‌ಗೆ ಸಂಬಂಧಿಸಿದವರ ಜೊತೆ ನಿಕಟವಾದ ಸಂಪರ್ಕವನ್ನು ಬೆಳೆಸಿಕೊಂಡರು ಮತ್ತು ಆಕೆ ವಾರ್ತಾಪತ್ರಿಕೆಯ ಅಂಕಣಗಳಲ್ಲಿ ಅವರಿಗೆ ಬೆಂಬಲವನ್ನು ನೀಡಿದರು. ಅವುಗಳು ನಿರ್ಣಾಯಕ ವರ್ಷಗಳಾಗಿದ್ದವು, ಆ ಸಮಯದಲ್ಲಿ ಇರಿಷ್ ರಾಷ್ಟ್ರೀಯತಾವಾದಿಗಳು ಲಿಬರಲ್ ಪಕ್ಷದವರ ಮತ್ತು ತೀವ್ರಗಾಮಿಗಳ ಜೊತೆ ಒಪ್ಪಂದವನ್ನು ಮಾಡಿಕೊಳ್ಳುತ್ತಿದ್ದರು. ಅನ್ನಿ ಚಳುವಳಿಯ ನಾಯಕರನ್ನು ಭೇಟಿಯಾದರು. ವಿಶೇಷವಾಗಿ, ಆಕೆಗೆ ಮೈಕಲ್ ಡೆವಿಟ್ಟ್‌ರ ಪರಿಚಯವಾಯಿತು, ಅವರು ನೆಲ ಯುದ್ಧದ ಮೂಲಕ ಇರಿಷ್ ರೈತ ಸಮುದಾಯವನ್ನು ಸಜ್ಜುಗೊಳಿಸಲು ಬಯಸಿದರು: ಜಮೀನುದಾರ ವಿರುದ್ಧ ಒಂದು ನೇರ ಹೋರಾಟ. ಅನ್ನಿ ನಂತರ ದಶಕಗಳಲ್ಲಿ ಹಲವು ಬಾರಿ ಡವಿಟ್ಟ್ ಮತ್ತು ಅತನ ಭೂ ಒಕ್ಕೂಟದರ ಭಾಷಣ ಮಾಡಿದರು ಮತ್ತು ಬರೆದರು. ಆದ್ಯಾಗಿಯೂ, ಬ್ರಾಡ್‌ಲೌಗ್‌ರ ಸಂಸತ್ತಿನ ಕೆಲಸ ಕ್ರಮೇಣವಾಗಿ ಅನ್ನಿಯನ್ನು ದೂರಮಾಡಿತು. ಸಂಸತ್ತಿನ ರಾಜಕೀಯದಲ್ಲಿ ಮಹಿಳೆಯರು ಪಾತ್ರವನ್ನು ಹೊಂದಿರಲಿಲ್ಲ. ಅನ್ನಿ ಒಂದು ನಿಜವಾದ ರಾಜಿಕೀಯ ಅಭಿವ್ಯಕ್ತಿ ಮಾರ್ಗಕ್ಕಾಗಿ ಹುಡುಕುತ್ತಿದ್ದರು: ಭಾಷಣಗಾರ್ತಿ, ಲೇಖಕಿ ಮತ್ತು ಸಂಘಟಕಿಯಾಗಿ ಅವರ ಕೌಶಲ್ಯಗಳನ್ನು ರಾಜಕೀಯದಲ್ಲಿ ಅವರು ನಿಜವಾಗಿ ಕೆಲವು ಒಳ್ಳೆಯದನ್ನು ಮಾಡಲು ಸಾಧ್ಯವಾಗಿತ್ತು.
ಸಮಾಜವಾದಿ
[ಬದಲಾಯಿಸಿ]ಅನ್ನಿಗೆ, ರಾಜಕೀಯ, ಸ್ನೇಹ ಮತ್ತು ಪ್ರೀತಿಗಳು ಯಾವಾಗಲೂ ನಿಕಟವಾಗಿ ಹೆಣೆದುಕೊಂಡಿದವು. ಸಮಾಜವಾದ ಪರ ಆಕೆಯ ತೀರ್ಮಾನ ಜಾರ್ಜ್ ಬರ್ನರ್ಡ್ ಶಾರ ಒಂದು ನಿಕಟ ಸಂಬಂಧದ ಮೂಲಕ ಉಂಟಾಯಿತು, ಅವರು ಲಂಡನ್ ವಾಸಿಸುತ್ತಿದ್ದ ಒಬ್ಬ ಹೆಣಗಾಡುವ ಯುವ ಲೇಖಕ, ಮತ್ತು ಫ್ಯಾಬಿಯನ್ ಸೊಸೈಟಿಯ ಪ್ರಮುಖ ಬೆಳಕು. ಅನ್ನಿ ಆತನ ಕೆಲಸದಿಂದ ಪ್ರಭಾವಗೊಂಡರು ಮತ್ತು 1880ರ ಆರಂಭದಲ್ಲಿ ಅತನಿಗೂ ಸಹ ತುಂಬಾ ನಿಕಟವಾದರು. ಅನ್ನಿ ಆತನನ್ನು ಜೊತೆಯಲ್ಲಿ ವಾಸಿಸಲು ಆಹ್ವಾನಿಸುವುದರ ಮೂಲಕ, ಅನ್ನಿ ಮೊದಲ ಹೆಜ್ಜೆ ಇಟ್ಟರು. ಅವರು ಅದನ್ನು ನಿರಾಕರಿಸಿದರು, ಆದರೆ ಅನ್ನಿಗೆ ಫ್ಯಾಬಿಯನ್ ಸೊಸೈಟಿಯನ್ನು ಸೇರಲು ಸೂಚಿಸಿದವರು ಶಾ. ಸೊಸೈಟಿಯ ಅದರ ಆರಂಭದ ದಿನಗಳಲ್ಲಿ, ರಾಜಕೀಯದ ಬದಲಾಗಿ ಆಧ್ಯಾತ್ಮಿಕವನ್ನು ವಿಚಾರಮಾಡುವ, ಬಂಡವಾಳಗಾರ ವ್ಯವಸ್ಥೆಗೆ ಪರ್ಯಾಯವಾದ ಜನರ ಸಮೂಹವಾಗಿತ್ತು. ಆನ್ನಿ ಫ್ಯಾಭಿಯನ್‌ಗಳಿಗಾಗಿ ಬರೆಯಲು ಆರಂಭಿಸಿದರು. ಇದು ಹೊಸ ಬದ್ಧತೆ- ಮತ್ತು ಶಾ ಮತ್ತು ಆಕೆಯ ಸಂಬಂಧ- ಅನ್ನಿ ಮತ್ತು ಬ್ರಾಡ್‌ಲೌಗ್‌ರ ನಡುವಿನ ಬಿರುಕನ್ನು ಹೆಚ್ಚಿಸಿತು, ಬ್ರಾಡ್‌ಲೌಗ್ ಒಬ್ಬ ಕಟ್ಟಾ ವ್ಯಕ್ತಿವಾದಿ ಮತ್ತು ಯಾವುದೇ ವಿಧದ ಸಮಾಜವಾದವನ್ನು ವಿರೋಧಿಸುತ್ತಿದ್ದರು. ಆತ ಮಾತಿನ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಿದ್ದನಾದರೂ ಕಾರ್ಮಿಕ ವರ್ಗದವರು ಉಗ್ರಗಾಮಿಗಳಾಗುವ ಸಾಧ್ಯತೆಯ ಕುರಿತು ಎಚ್ಚರ ಹೊಂದಿದ್ದನು. ನಿರುದ್ಯೋಗ ಆ ಸಮಯದ ಒಂದು ಕೇಂದ್ರ ಅಂಶವಾಗಿತ್ತು, ಮತ್ತು 1887ರಲ್ಲಿ ಲಂಡನ್ ನಿರುದ್ಯೋಗಿಗಳಲ್ಲಿ ಕೆಲವರು ಟ್ರಫಲ್ಘರ್ ಚೌಕದಲ್ಲಿ ಪ್ರತಿಭಟನೆಗಳನ್ನು ನಡೆಸಲು ಅರಂಭಿಸಿದರು. 13 ನವೆಂಬರ್‌ರ ಒಂದು ಸಭೆಯಲ್ಲಿ ಅನ್ನಿ ಭಾಷಣಗಾರ್ತಿಯಾಗಿ ಕಾಣಿಸಿಕೊಳ್ಳಲು ಒಪ್ಪಿಕೊಂಡರು. ಪೋಲಿಸ್ ಸಭೆಯನ್ನು ತಡೆಯಲು ಪ್ರಯತ್ನಿಸಿದರು. ಹೊಡೆದಾಟ ಹಠಾತ್ತನೆ ಆರಂಭವಾಯಿತು, ಮತ್ತು ಸೇನೆಗಳನ್ನು ಕರೆಸಲಾಯಿತು. ಹಲವರು ಗಾಯಗೊಂಡರು, ಒಬ್ಬ ಮೃತನಾದನು, ಮತ್ತು ನೂರಾರು ಜನರನ್ನು ಬಂಧಿಸಲಾಯಿತು. ಸ್ವತಹ ಅನ್ನಿ ಆಕೆಯನ್ನು ಬಂಧಿಸಲು ಕೇಳಿಕೊಂಡರು, ಆದರೆ ಪೋಲಿಸರು ತೊಂದರೆ ತೆಗೆದುಕೊಳ್ಳಲು ನಿರಾಕರಿಸಿದರು. ಘಟನೆಯು ತುಂಬಾ ಸಂವೇದನೆಯನ್ನು ಉಂಟುಮಾಡಿತು, ಮತ್ತು ಬ್ಲಡಿ ಸಂಡೇ ಎಂದು ಪರಿಚಿತವಾಯಿತು. ಇದಕ್ಕಾಗಿ- ಅನ್ನಿಯನ್ನು ವ್ಯಾಪಕವಾಗಿ ದೂಷಿಸಲಾಯಿತು- ಅಥವಾ ಗೌವರವಿಸಲಾಯಿತು. ಬಂಧಿಸಿದ ಕೆಲಸಗಾರರಿಗೆ ಕಾನೂನಿನ ನೆರವವನ್ನು ವ್ಯವಸ್ಥೆಗೊಳಿಸಲು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಅವರು ತಮ್ಮನ್ನು ತೊಡಗಿಸಿಕೊಂಡರು. ಅಂತಿಮವಾಗಿ ಬ್ರಾಡ್‌ಲೌಗ್ ಅನ್ನಿಯ ಸಂಬಂಧ ಮುರಿಯಿತು ಏಕೆಂದರೆ, ಬ್ರಾಡ್‌ಲೌಗ್ ಅನ್ನಿ ಸಭೆಯ ಜೊತೆ ಮುಂದುವರಿಯುವ ಮೊದಲು ಅವರ ಸಲಹೆಯನ್ನು ಕೇಳಬೇಕಾಗಿತ್ತು ಎಂದು ಭಾವಿಸಿದರು. ಸಮಾಜವಾದಿಗಳು ಕಾರ್ಮಿಕರ ಸಂಘಗಳನ್ನು ಕೆಲಸಗಾರ ಸಂಘಟನೆಗೊಳ್ಳುವ ಮತ್ತು ಅವರಿಗಾಗಿ ಹೋರಾಡುವ ಸಾಮರ್ಥ್ಯದ ಮೊದಲ ನಿಜವಾದ ಚಿಹ್ನೆಗಳು ಎಂದು ತಿಳಿದರು. ಅಲ್ಲಿಯವರೆಗೆ, ಕಾರ್ಮಿಕ ಸಂಘಗಳು ಕುಶಲಕರ್ಮಿ ಕೆಲಸಗಾರರಿಗೆ ಆಗಿತ್ತು - ಅಂದರೆ ಅಂತಹ ಕುಶಲಕರ್ಮದ ಕೆಲಸಗಳು ಕಲಿಯಲು ಕೆಲಸಗಾರರಿಂದ ವರ್ಷಗಳ ಪರಿಶ್ರಮವನ್ನು ಬೇಡುತ್ತಿದ್ದವು ಮತ್ತು ಅವುಗಳು ಅವರಿಗೆ ಜೀವನದಲ್ಲಿ ಸ್ವಲ್ಪವಾದರೂ ಭದ್ರತೆಯನ್ನು ಒದಗಿಸುತ್ತಿದ್ದವು. ಸಮಾಜವಾದಿಗಳು ಉತ್ತಮ ವೇತನ ಮತ್ತು ಸೌಲಭ್ಯಗಳಿಗಾಗಿ ಹೋರಾಡಲು ಚಾತುರ್ಯವುಳ್ಳ ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಸಂಘಗಳ ಒಳಗೆ ತರಲು ಬಯಸಿದರು ಆ ಕಾಲದ ಆಕೆಯ ಅತಿ ಗಮನಾರ್ಹವಾದ ಜಯವೆಂದರೆ 1888ರ ಲಂಡನ್ ಮ್ಯಾಚ್‌ಗರ್ಲ್ಸ್ ಸ್ಟ್ರೈಕ್‌ನಲ್ಲಿ ಪಾಲ್ಗೊಳುವಿಕೆ. ಮೊದಲ ಅತ್ಯಂತ ಪ್ರಮುಖವಾದ ಈ "ಹೊಸ ಯೂನಿಯನಿಸಮ್" ನ ಯುದ್ಧದೆಡೆಗೆ ಅನ್ನಿ ಕೆಲ ಸಮಯ ತಾವು ಪ್ರೀತಿಸುತ್ತಿದ್ದ ಯುವ ಸಮಾಜವಾದಿ ಹರ್ಬರ್ಟ್ ಬರ್ರೋವ್ಸ್‌ರಿಂದ ಸೆಳೆಯಲ್ಪಟ್ಟರು. ಆತ ಬೋ, ಲಂಡನ್‌ನ ಬ್ರಿಯಾಂಟ್ ಅಂಡ್ ಮೇಸ್ ಬೆಂಕಿಪಟ್ಟಣದ ಕಾರ್ಖಾನೆಯ ಕೆಲಸಗಾರರ ಜೊತೆ ಸಂಪರ್ಕ ಸಾಧಿಸಿದ್ದ, ಅವರಲ್ಲಿ ಹೆಚ್ಚಿನವರು ಯುವತಿಯರಾಗಿದ್ದರು. ಅವರಿಗೆ ತುಂಬಾ ಕಡಿಮೆ ಸಂಬಳವನ್ನು ನೀಡಲಾಗುತ್ತಿತ್ತು. ಬೆಂಕಿಯ ಕಡ್ಡಿಯ ತಯಾರಿಕೆಯಲ್ಲಿ ಬಳಸುವ ರಾಸಾಯಿನಿಕ ವಸ್ತುಗಳಿಂದ ಉಂಟಾಗುವ ಭಯಾನಕ ಕೈಗಾರಿಕ ವ್ಯಾಧಿಗಳಾದ ಮೂಳೆ ಸವೆತ, ಫೋಸಿ ಜಾ ಸಹ ಅವರನ್ನು ಕಿತ್ತು ತಿನ್ನುತ್ತಿದ್ದವು. ಬೆಂಕಿಕಡ್ಡಿಯ ಕೆಲಸಗಾರರಲ್ಲಿ ಒಂದು ಸಂಘವನ್ನು ಸ್ಥಾಪಿಸಲು ಕೆಲವರು ಅನ್ನಿ ಮತ್ತು ಬುರ್ರೊವ್ಸ್‌ನಿಂದ ಸಹಾಯವನ್ನು ಕೇಳಿದರು. ಅನ್ನಿ ಮಹಿಳೆಯರನ್ನು ಭೇಟಿಯಾದರು ಮತ್ತು ಒಂದು ಸಮಿತಿಯನ್ನು ಸ್ಥಾಪಿಸಿದರು, ಅದು ಉತ್ತಮ ವೇತನ ಮತ್ತು ಸೌಲಭ್ಯಗಳಿಗಾಗಿ ಮಹಿಳೆಯರನ್ನು ಒಂದು ಚಳುವಳಿಗೆ ಕರೆದೊಯ್ಯಿತು. ಕ್ರಿಯೆಯು ಬಾರಿ ಸಾರ್ವಜನಿಕ ಬೆಂಬಲವನ್ನು ಗಳಿಸಿತು. ಅನ್ನಿ "ಬೆಂಕಿಕಡ್ಡಿ-ಹುಡುಗಿಯರ" ಮೂಲಕ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ರಸ್ತೆಗಳಲ್ಲಿ ಅವರುಗಳಿಗೆ ಉತ್ತೇಜನ ನೀಡಲಾಯಿತು, ಮತ್ತು ಪ್ರಧಾನ ಪಾದ್ರಿಗಳು ಅವರ ಪರವಾಗಿ ಬರೆದರು. ಕೇವಲ ಒಂದು ವಾರದಲ್ಲಿ ಅವರುಗಳು ಸಂಬಳ ಮತ್ತು ಸೌಲಭ್ಯಗಳನ್ನು ಸುಧಾರಿಸುವ ಹಾಗೆ ಕೈಗಾರಿಕೆಗೆ ಬಲವಂತ ಮಾಡಿದರು. ನಂತರ ಅನ್ನಿ ಅವರಿಗೆ ಒಂದು ಸರಿಯಾದ ಸಂಘ ಮತ್ತು ಒಂದು ಸಮಾಜಿಕ ಕೇಂದ್ರವನ್ನು ಸ್ಥಾಪಿಸಲು ಸಹಾಯ ಮಾಡಿದರು. ಆ ಕಾಲದಲ್ಲಿ, ವಿದ್ಯುತ್ತ್ ದೀಪಗಳು ವ್ಯಾಪಕವಾಗಿ ಇನ್ನೂ ಲಭ್ಯವಾಗಿರದ ಕಾರಣ, ಮತ್ತು ಮೇಣದ ಬತ್ತಿಗಳು, ಎಣ್ಣೆ ದೀಪಗಳು, ಗ್ಯಾಸ್ ದೀಪಗಳು ಮತ್ತು ಮುಂತಾದವುಗಳನ್ನು ಹಚ್ಚಲು ಬೆಂಕಿಕಡ್ಡಿಗಳು ಅವಶ್ಯಕವಾಗಿದುದ್ದರಿಂದ ಬೆಂಕಿಕಡ್ಡಿಯ ಕೈಗಾರಿಕೆಯು ಒಂದು ಬಾರಿ ಬಲಿಷ್ಠ ಪ್ರಭಾವ ಬೀರುವುದಾಗಿತ್ತು. (ಕೇವಲ ಕೆಲವು ವರ್ಷಗಳ ಹಿಂದೆ 1872ರಲ್ಲಿ, ಬೆಂಕಿಕಡ್ಡಿಯ ಕೈಗಾರಿಕೆಯಿಂದ ವಶೀಲಿಗಾರರು ಬ್ರಿಟಿಷ್ ಸರ್ಕಾರಕ್ಕೆ ಅದರ ಯೋಜಿತ ತೆರಿಗೆ ಕಾಯಿದೆಯನ್ನು ಬದಲಾಯಿಸಲು ಮನವೊಲಿಸಿದರು.) ಬೆಂಕಿಕಡ್ಡಿಯ ಉತ್ಪಾದಕರನ್ನು ಒಂದು ಪ್ರಮುಖ ಅಂಶ ಮೇಲೆ ಮೊದಲ ಬಾರಿಗೆ ಯಶಸ್ವಿಯಾಗಿ ಪ್ರತಿಭಟಿಸಿದ್ದು ಬೆಸೆಂಟ್‌ರ ಹೋರಾಟ, ಮತ್ತು ಅದನ್ನು ಬ್ರಿಟಿಷ್ ಸಮಾಜವಾದದ ಆರಂಭದ ವರ್ಷಗಳ ಗೆಲವಿನ ಒಂದು ಹೆಗ್ಗುರುತು ಎಂದು ಕಾಣಲಾಗುತ್ತದೆ.
ಮಾರ್ಕ್ಸ್‌ವಾದಿ
[ಬದಲಾಯಿಸಿ]1884ರ ವೇಳೆಯಲ್ಲಿ, ಅನ್ನಿ ಯುವ ಸಮಾಜವಾದಿ ಶಿಕ್ಷಕ ಎಡ್ವರ್ಡ್ ಅವೆಲಿಂಗ್ ಜೊತೆ ಒಂದು ತುಂಬಾ ಆತ್ಮೀಯ ಸ್ನೇಹವನ್ನು ಬೆಳೆಸಿಕೊಂಡಿದರು, ಕೆಲವು ಕಾಲ ಆತ ಅನ್ನಿಯ ಮನೆಯಲ್ಲಿ ವಾಸಿಸುತ್ತಿದ್ದನು. ಅವೆಲಿಂಗ್ ಒಬ್ಬ ಪಂಡಿತೋಚಿತ ಆಕೃತಿ ಮತ್ತು ಆತ ಮಾರ್ಕ್ಸ್‌ನ ಕೃತಿಗಳು ಮೊದಲ ಬಾರಿಗೆ ಮಾರ್ಕ್ಸ್‌ರ ಮುಖ್ಯ ಕೃತಿಗಳನ್ನು ಇಂಗ್ಲೀಷ್‌ಗೆ ಅನುವಾದಿಸಿದರು. ಅನ್ನಿ ಅವೆಲಿಂಗ್‌ನನ್ನು ಪ್ರೀತಿಸುತ್ತಿದ್ದ ಹಾಗೆ ಕಾಣಿಸುತ್ತಿತ್ತು, ಆದರೆ ಆತನು ಅದೇ ಭಾವಿಸಿದ್ದನು ಎಂಬುದು ಸ್ಪಷ್ಟವಾಗಿಲ್ಲ. ಆತ ಖಚಿತವಾಗಿ ಆಕೆಯ ಅಭಿಪ್ರಾಯಗಳ ಮೇಲೆ ಬಾರಿ ಪ್ರಭಾವ ಬೀರಿದ್ದನು, ಮತ್ತು ಆಕೆ ಅವನ ಕೆಲಸಗಳಿಗೆ ಬೆಂಬಲವಾಗಿದ್ದರು. ಆದರೆ, ಅವೆಲಿಂಗ್ ಕಾರ್ಲ್ ಮಾರ್ಕ್ಸ್ ಮಗಳು, ಎಲಿನೊರ್ ಮಾರ್ಕ್ಸ್ ಜೊತೆ ವಾಸಿಸಲು ಅನ್ನಿಯನ್ನು ತೊರೆದನು. ಇದು ಅನ್ನಿ ಮತ್ತು ಎಲಿನೊರ್ ನಡುವೆ ಶಾಶ್ವತವಾದ ಕೆಟ್ತ ಭಾವನೆಗೆ ದಾರಿ ಮಾಡಿತು ಮತ್ತು ಆ ಸಮಯದಲ್ಲಿ ಬಹುಶಃ ವಿರೋಧಿ ಫ್ಯಾಬಿಯನ್‌ರ ಕಡೆಗೆ ಅನ್ನಿಯನ್ನು ದೂಡಿತು. ಎವೆಲಿಂಗ್ ಮತ್ತು ಎಲಿನೊರ್ ಮಾರ್ಕ್ಸ್‌ವಾದಿ ಎಸ್‌ಡಿಎಫ್ ಸೇರಿದರು ಆದರೆ ಆದರ ನಾಯಕ, ಹೆನ್ರಿ ಹಿನ್ದ್‌ಮ್ಯಾನ್‌ರನ್ನು ಅವರು ನಂಬಲಿಲ್ಲ. ತಕ್ಷಣ ಅವರು ಕಲಾವಿದ ವಿಲ್ಲಿಯಂ ಮೊರ್ರಿಸ್ ಸುತ್ತ ಕಟ್ಟಿದ ಒಂದು ಮಾರ್ಕ್ಸ್‌ವಾದಿ ಸಣ್ಣ ವಿಭಜಿತ ಪಕ್ಷ ಸಮಾಜವಾದಿ ಲೀಗ್ ಸೇರಲು ಎಸ್‌ಡಿಎಫ್ ಬಿಟ್ಟರು. ಅನ್ನಿಯನ್ನು ಮಾರ್ಕ್ಸ್‌ವಾದಕ್ಕೆ ಪರಿವರ್ತಿಸುವಲ್ಲಿ ಮೊರ್ರಿಸ್ ಒಂದು ದೊಡ್ಡ ಪಾತ್ರವನ್ನು ವಹಿಸಿದ ಹಾಗೆ ತೊರುತ್ತದೆ, ಆದರ 1888 ರಲ್ಲಿ ಅದನ್ನು ಮಾಡಿದ್ದು ಎಸ್‌ಡಿಎಫ್ ಹೊರತೂ ಸೋಶಿಯಲಿಸ್ಟ್ ಲೀಗ್ ಅಲ್ಲ. ಆಕೆ ಸದಸ್ಯೆಯಾಗಿ ಹಲವು ವರ್ಷಗಳ ಕಾಲ ಉಳಿದರು ಮತ್ತು ಅದರ ಉತ್ತಮ ಭಾಷಣಗಾರರಲ್ಲಿ ಒಬ್ಬರಾದರು. ವಿಚಿತ್ರವೆಂದರೆ, ಆಕೆ ಇನ್ನೂ ಹ್ಯಾಬಿಯನ್ ಸೊಸೈಟಿಯ ಒಬ್ಬ ಸದಸ್ಯೆಯಾಗಿದ್ದರು. ಆಕೆ ಅಥವಾ ಬೇರೆಯಾರು ಎರಡು ಚಳುವಳಿಗಳು ಆ ಸಮಯದಲ್ಲಿ ಸಂಪೂರ್ಣವಾಗಿ ಸಾಮರಸ್ಯವಿಲ್ಲದವು ಎಂದು ಭಾವಿಸದ ಹಾಗೆ ಕಾಣುವುದಿಲ್ಲ. ಮಾರ್ಕ್ಸ್‌ವಾದಿಗಳನ್ನು ಸೇರಿದ ತಕ್ಷಣ, ಅನ್ನಿ ಲಂಡನ್ ಸ್ಕೂಲ್ ಬೋರ್ಡ್ ಚುನಾವಣೆಗೆ ಸ್ಪರ್ಧಿಸಿದರು. ಏಕೆಂದರೆ ಮಹಿಳೆಯರು ಸಂಸತ್ತಿನ ರಾಜಕೀಯದಲ್ಲಿ ಭಾಗವಹಿಸಲು ಅಸಮರ್ಥರಾಗಿದ್ದರು, 1918ರವರೆಗೆ ವರೆಗೆ ಅವರಿಗೆ ಮತದಾನವಿರಲಿಲ್ಲ ಎಂದು ಯಾವಾಗಲೂ ಭಾವಿಸಲಾಗುತ್ತಿತ್ತು. ವಾಸ್ತವವಾಗಿ, ಮಹಿಳೆ ಗೃಹಸ್ಥರನ್ನು 1881ರಲ್ಲಿ ಸ್ಥಳೀಯ ಮತದಾರರ ಸಮುದಾಯಕ್ಕೆ ಕರೆತರಲಾಯಿತು ಮತ್ತು ಶೀಘ್ರದಲ್ಲೇ ಸ್ಥಳೀಯ ರಾಜಕೀಯದಲ್ಲಿ ಗುರುತು ಮೂಡಿಸಲು ಪ್ರಾರಂಭಿಸಿದರು. ಅನ್ನಿ ತಮ್ಮ ತಲೆಕೂದಲಿಗೆ ಒಂದು ಕೆಂಪು ರಿಬ್ಬನ್ನನ್ನು ಹಾಕಿಕೊಂಡು ಪ್ರಯಾಣಿಸುತ್ತಾ ಗದ್ದಲದ ಸಭೆಗಳಲ್ಲಿ ಮಾತನಾಡುತ್ತಿದ್ದಳು. "ಇನ್ನು ಹಸಿದ ಮಕ್ಕಳಿರುವುದು ಬೇಡ," ಅವಳ ಪ್ರಣಾಳಿಕೆ ಉಚ್ಚರಿಸಿತು." ಆಕೆಯ ಸಮಾಜವಾದ ಒಂದು ಸ್ತ್ರೀ ಸಮಾನತಾವಾದಿ ಪಾರ್ಶ್ವವನ್ನು ಸಹ ಹೊಂದಿದೆ ಎಂದು ಆಕೆ ಸ್ಪಷ್ಟಪಡಿಸಿದರು: "ನಾನು ಮತದಾರ ಸಮುದಾಯಗಳಿಗೆ ನನಗೆ ಮತ ನೀಡಲು ಕೇಳುತ್ತೇನೆ, ಮತ್ತು ಮತದಾರರಲ್ಲವರಿಗೆ ನನಗಾಗಿ ಕೆಲಸ ಮಾಡಲು ಏಕೆಂದರೆ ಬೋರ್ಡ್‌ಗೆ ಮಹಿಳೆಯರು ಬೇಕಾಗಿದ್ದಾರೆ ಮತ್ತು ಅತ್ತಿ ಕಡಿಮೆ ಮಹಿಳಾ ಅಭ್ಯರ್ಥಿಗಳಿದ್ದಾರೆ." ಅಶ್ಚರ್ಯಕರವಾಗಿ, ಅನ್ನಿ ಟವರ್ ಹ್ಯಾಮ್ಲೆಟ್ಸ್‍ನಲ್ಲಿ ಸುಮಾರು 15,000 ಮತಗಳೊಂದಿಗೆ ಮತಗಟ್ಟೆಯ ಮೊದಲಿಗರಾಗಿ ಹೊರಹೊಮ್ಮಿದರು. ಅನ್ನಿ ನ್ಯಾಷನಲ್ ರಿಫಾರ್ಮ್‌ರ‍್ನಲ್ಲಿ ಬರೆಯುತ್ತಾರೆ: " ಹತ್ತು ವರ್ಷಗಳ ಹಿಂದೆ, ಒಂದು ಕ್ರೂರ ಕಾನೂನಿನ ಅಡಿಯಲ್ಲಿ, ಕ್ರಿಶ್ಚಿಯನ್ ಧರ್ಮಾಂಧತೆ ನನ್ನಿಂದ ನನ್ನ ಚಿಕ್ಕ ಮಗುವನ್ನು ಕಿತ್ತುಕೊಂಡಿತು. ಈಗ ಲಂಡನ್‌ನ 763,680 ಮಕ್ಕಳ ಕಾಳಜಿಯನ್ನು ಭಾಗಶಃ ನನ್ನ ಕೈಗಳಲ್ಲಿ ಇರಿಸಲಾಗಿದೆ." ಅನ್ನಿ "ಹಮಾಲಿ ಚರ್ಮಕಾರ"ರಿಗಾಗಿ ಹೋರಾಟದಲ್ಲಿ ಸಹ ನಿಕಟವಾಗಿ ಒಳಗೊಂಡಿದರು. ಹಮಾಲಿಗಳಿಗೆ ಕಠಿಣ ಮತ್ತು ಅಪಾಯಕಾರಿ ಕೆಲಸಗಾಗಿ ಕಡಿಮೆ ಸಂಬಳ ನೀಡಲಾಗುತ್ತಿತ್ತು. ಅವರು ಹಂಗಾಮಿ ಕೆಲಸಗಾರರು, ಒಮ್ಮೆ ಒಂದು ದಿನಕ್ಕಾಗಿ ಮಾತ್ರ ತೆಗೆದುಕೊಳ್ಳಲಾಗುತ್ತಿತ್ತು. ಬೆನ್ ಟಿಲ್ಲೆಟ್ಟ್ ಹಮಾಲಿಗಳಿಗಾಗಿ ಒಂದು ಸಂಘ ಸ್ಥಾಪಿಇಸ್ದರು. ಅದರಲ್ಲಿ ಅನ್ನಿ ಮಹತ್ವದವರು. ಆಕೆ ಟಿಲ್ಲೆಟ್ಟ್‌ಗೆ ಸಂಘದ ನಿಯಮಗಳನ್ನು ರಚಿಸಲು ಸಹಾಯ ಮಾಡಿದರು ಮತ್ತು ಸಭೆಗಳು ಮತ್ತು ಸಂಸ್ಥೆಯನ್ನು ರಚಿಸಿದ ಪ್ರತಿಭಟನೆಗಳಲ್ಲಿ ಮುಖ್ಯ ಪಾತ್ರ ವಹಿಸಿದರು. ಟಿಲ್ಲೆಟ್ಟ್ ಹಮಾಲಿಗಳ ಉತ್ತಮ ಸಂಬಳಕ್ಕಾಗಿ ಒಂದು ಹೋರಾಟದ ಮುಂದಳತ್ವ ವಹಿಸಿದರು: ಘಂಟೆಗೆ ಆರುಪೆನ್ಸ್ (2½p.) ನಂತೆ. ಅನ್ನಿ ಹಮಾಲಿಗಳಿಗಾಗಿ ಸಭೆಗಳಲ್ಲಿ ಮತ್ತು ರಸ್ತೆಯ ಮೂಲೆಗಳಲ್ಲಿ ಭಾಷಣ ಮಾಡಿದರು. ಬೆಂಕಿಕಡ್ಡಿ-ಹುಡುಗಿಯರ ಹಾಗೆ, ಹಮಾಲಿಗಳು ಅವರ ಹೋರಾಟಕ್ಕೆ ಹೆಚ್ಚಿನ ಸಾರ್ವಜನಿಕ ಬೆಂಬಲವನ್ನು ಗಳಿಸಿದರು. ಇಂಗ್ಲೆಂಡ್‌ನಲ್ಲಿ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥ, ಕಾರ್ಡಿನಲ್ ಮ್ಯಾನ್ನಿಂಗ್, ಸಹ ಅವರ ಪರವಹಿಸಿದರು. ಒಂದು ಕಟುವಾದ ಮುಷ್ಕರದ ನಂತರ " ಹಮಾಲಿ ಚರ್ಮಕಾರ"ರು ಜಯಗಳಿಸಿದರು.
ಕೋ-ಫ್ರೀಮ್ಯಾಸನ್ರಿ
[ಬದಲಾಯಿಸಿ]ಮಹಿಳೆಯರ ಹಕ್ಕುಗಳನ್ನು ಕಂಡುಕೊಳ್ಳುವಲ್ಲಿ, ಮಾನವೀಯತೆಯ ಕಾರ್ಯಗಳಲ್ಲಿ, ವಿಸ್ಮಯ ಮತ್ತು ಅತೀಂದ್ರಿಯ ಕಲಿಕೆಗಳಲ್ಲಿ ಅನ್ನಿ ಬೆಸೆಂಟ್ ಅವರ ಚಟುವಟಿಕೆಗಳನ್ನು ನೋಡಿದಾಗ ಆಕೆಯ ಫ್ರೀಮ್ಯಾನ್ಶನರಿ ಮತ್ತು ನಂತರದ ನಾಯಕತ್ವ ಮತ್ತು ಚಳುವಳಿಗೇನೂ ಅಚ್ಚರಿಕರವಲ್ಲ ಎನ್ನಿಸುತ್ತದೆ. "ಮಹಿಳೆಯರು ಮತ್ತು ಪುರುಷರನ್ನು ಒಟ್ಟಾಗಿ ಸ್ವೀಕರಿಸುವ" ಮಾನ್ಶನರಿ ಇದೆ ಎಂದು ಗೊತ್ತಾದ ನಂತರದಲ್ಲಿ ಆಕೆ ಫ್ರೀಮ್ಯಾನ್ಶನರಿಯನ್ನು ಕಂಡುಕೊಳ್ಳಲು ಹೆಚ್ಚು ಉತ್ಸುಕರಾದರು. ಮಹಿಳೆಯರ ಹಕ್ಕಿನ ಮತ್ತು ಮನುಷ್ಯನ ಉನ್ನತವಾದ ಬಾಂಧವ್ಯದ ಕುರಿತಾದ ತನ್ನ ಆಸಕ್ತಿಯ ಭಾಗವಾಗಿ ಆಕೆ ಫ್ರೀಮ್ಯಾನ್ಶನರಿ, ನಿರ್ಧಿಷ್ಟವಾಗಿ ಕೋ-ಫ್ರೀಮ್ಯಾಸನ್ರಿ, ಯನ್ನು ಕಂಡುಕೊಂಡರು ಮತ್ತುಕೋ-ಫ್ರೀಮ್ಯಾನ್ಶನರಿಯನ್ನು, "ನಿಜವಾದ ಬಾಂಧವ್ಯವನ್ನು ಅನುಸರಿಸುವ ಚಳುವಳಿ ಎಂದೂ, ಮತ್ತು ಮಾನವೀಯತೆಯನ್ನು ಅತ್ಯುತ್ತಮಗೊಳಿಸಲು ಅದರಲ್ಲಿ ಮಹಿಳೆಯರು ಮತ್ತು ಪುರುಷರು ಸಮನಾಗಿ ಕೆಲಸ ಮಾಡುವರೆಂಬುದನ್ನು ಆಕೆ ಕಂಡುಕೊಂಡರು. ಆಕೆ ಆ ಸಂಸ್ಥೆಗೆ ತಕ್ಷಣ ಸೇರಲು ಬಯಸಿದರು", ಅದು ಈಗ ದಿ ಇಂಟರ್‌ನ್ಯಾಷನಲ್ ಆರ್ಡರ್ ಅಫ್ ಕೋ-ಫ್ರೀಮ್ಯಾಸನ್ರಿ, Le Droit Humain ಎಂದು ಪರಿಚಿತವಾಗಿದೆ.
1902ರಲ್ಲಿ ಫ್ರಾನ್ಸೆಸ್ಕಾ ಅರುನ್ಡಾಲ್‌ನಿಂದ ಸಂಪರ್ಕ ಉಂಟಾಯಿತು, ಅವರು ಪ್ಯಾರಿಸ್‌ಗೆ ಆರು ಸ್ನೇಹಿತರೊಂದಿಗೆ ಅನ್ನಿ ಬೆಸೆಂಟ್‌ರನ್ನು ಜೊತೆಗೂಡಿದರು. "ಅವರನ್ನೆಲ್ಲ ಪ್ರಾರಂಭಿಸಿ, ಮೊದಲ ಮೂರು ಡಿಗ್ರೀಗಳಿಗೆ ಮೇಲೇರುವಂತೆ ಮಾಡಲಾಯಿತು. ನಂತರ ಅನ್ನಿ ಹಕ್ಕು ಪತ್ರ ಪಡೆದು ಇಂಗ್ಲೆಂಡಿಗೆ ಮರಳಿದರು ಮತ್ತು ಮೊದಲ ಲಾಡ್ಜ್ ಆಫ್ ಇಂಟರ್ನ್ಯಾಶನಲ್ ಮಿಕ್ಸ್‌ಡ್ ಮ್ಯಾಸನ್ರಿ, Le Droit Humain ಯನ್ನು ಪ್ರಾರಂಭಿಸಿದರು." ಅತಿ ಕಡಿಮೆ ಸಮಯದಲ್ಲಿ ಸಹೊದರಿ ಬೆಸೆಂಟ್ ಹೊಸ ವಸತಿಗಳನ್ನು ಸ್ಥಾಪಿಸಿದರು:ಲಂಡನ್‌ನಲ್ಲಿ ಮೂರು, ದಕ್ಷಿಣ ಇಂಗ್ಲೆಂಡ್‌ನಲ್ಲಿ ಮೂರು, ಉತ್ತರ ಮತ್ತು ಪಡುವಣದಲ್ಲಿ ಮೂರು; ಸ್ಕಾಟ್‌ಲ್ಯಾಂಡ್‌ನಲ್ಲಿ ಸಹ ಅವರು ಒಂದನ್ನು ಸಂಘಟಿಸಿದರು." 1904ರಲ್ಲಿ ಆಕೆಯ ಸಹೋದರಿಯರು ಮತ್ತು ಸಹೋದರರ ಜೊತೆ ಪ್ರಯಾಣಿಸುವಾಗ ಪುರುಷ ವೀದಯತೆಯ ಇತರೆ ಸಹೋದರರನ್ನು ಹಾಲೆಂಡಿನಲ್ಲಿ ಭೇಟಿಯಾದರು, ಅವರು ಆಸಕ್ತರಾಗಿದ್ದರು, Le Droit Humainನ ಹೆಚ್ಚಿನ ವಿಸ್ತರಣೆಯಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಿದರು." ಅನ್ನಿ ಆ ರೀತಿಯ ಉಗ್ರತಾಪದ ಜೊತೆಗೆ ಕೆಲಸ ಮುಂದುವರಿಸಿದರು ತಕ್ಷಣ ಹೊಸ ವಸತಿಗಳು ಗ್ರೇಟ್ ಬ್ರಿಟನ್, ದಕ್ಷಿಣ ಅಫ್ರಿಕಾ, ಕೆನಡಾ, ಭಾರತ, ಸಿಲೊನ್, ಅಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಕಟ್ಟಲ್ಪಟ್ಟವು. ಆ ಎಲ್ಲಾ ದೇಶಗಳಲ್ಲಿನ ವಸತಿಗಳು ಬ್ರಿಟಿಷ್ ಫೆಡೆರೇಷನ್ ಹೆಸರಿನಡಿಯಲ್ಲಿ ಒಂದಾದವು." [೨] ಅನ್ನಿ ಬೆಸೆಂಟ್, ಕೇವಲ ತಾವು ನಂತರದಲ್ಲಿ ಮೋಸ್ಟ್ ಪ್ಯೂಸಂಟ್ ಗ್ರಾಂಡ್ ಕಮ್ಯಾಂಡರ್ ಆದ ಬ್ರಿಟಿಶ್ ಫೆಡರೇಶನ್ ಆಫ್ಹ್ ಲೆ ಡ್ರೋಯ್ಟ್ ಹುಮೇನ್ ಅನ್ನು ಮಾತ್ರ ಕಂಡುಹಿಡಿಯಲಿಲ್ಲ, ಆಕೆ ಅಂತರರಾಷ್ಟ್ರೀಯವಾಗಿ ಒಂದು ವ್ಯವಸ್ಥೆಯ ಬೆಳವಣಿಗೆಗೆ ಆಕೆ ಅತ್ಯಂತ ಮಹತ್ತರವಾದ ಪರಿಣಾಮವನ್ನು ಉಂಟುಮಾಡಿದರು - ಆಕೆ ನಿಜವಾದ ರೀತಿಯಲ್ಲಿ ಬದ್ಧತೆಯುಳ್ಳ ಫ್ರೀಮ್ಯಾಸನ್ ಮತ್ತು ಒಬ್ಬ ಅಪರೂಪದ ವ್ಯಕ್ತಿಯಾಗಿದ್ದರು.
ಥಿಯೊಸೊಫಿಸ್ಟ್
[ಬದಲಾಯಿಸಿ]ಬೆಸೆಂಟ್ ಸಮೃದ್ಧ ಬರಹಗಾರ್ತಿ ಮತ್ತು ಪ್ರಬಲ ವಾಗ್ಮಿ. 1889ರಲ್ಲಿ, ದಿ ಸಿಕ್ರೆಟ್ ಡಾಕ್ಟರಿನ್ ಮೇಲೆ ಪಾಲ್ ಮಾಲ್ ಗೆಜೆಟ್ ಗೆ ಒಂದು ವಿಮರ್ಶೆಯನ್ನು ಬರೆಯಲು ಆಕೆಯನ್ನು ಕೇಳಲಾಯಿತು, ಎಚ್.ಪಿ. ಬ್ಲವಟ್ಸ್ಕಿಯ ಒಂದು ಪುಸ್ತಕ. ಅದನ್ನು ಓದಿದ ನಂತರ, ಆಕೆ ಅದರ ಲೇಖಕನ ಜೊತೆ ಒಂದು ಸಂದರ್ಶನವನ್ನು ಬಯಸಿದರು, ಬ್ಲಾವಟ್ಸ್ಕಿಯನ್ನು ಪ್ಯಾರಿಸ್‌ನಲ್ಲಿ ಭೇಟಿಮಾಡಿದರು. ಈ ರೀತಿ ಆಕೆ ಥಿಯೊಸೊಫಿಗೆ ಪರಿವರ್ತನೆ ಹೊಂದಿದರು. ಅನ್ನಿಯ ಬೌದ್ಧಿಕ ಪ್ರಯಾಣ ಯಾವಾಗಲೂ ಒಂದು ಆಧ್ಯಾತ್ಮಿಕ ಅಯಾಮವನ್ನು ಒಳಗೊಂಡಿತ್ತು, ಇಡೀ ವ್ಯಕ್ತಿಯ ಬದಲಾವಣೆಗೆ ಒಂದು ಅನ್ವೇಷಣೆ. ಥಿಯೊಸೊಫಿಯಲ್ಲಿ ಆಕೆಯ ಆಸ್ತಕಿ ಆಳವಾದ ಹಾಗೆ, ಫ್ಯಾಬಿಯನ್ ಸೊಸೈಟಿಯ ಆಕೆಯ ಸದಸ್ಯತ್ವ ರದ್ದಾಗಲು ಅವರು ಅವಕಾಶ ನೀಡಿದರು (1890) ಮತ್ತು ಮಾರ್ಕ್ಸ್‌ವಾದಿಗಳ ಜೊತೆಗಿನ ಆಕೆಯ ಸಂಪರ್ಕಗಳನ್ನು ಕಡಿದು ಕೊಂಡರು. 1891ರಲ್ಲಿ ಬ್ಲಾವಟ್ಸ್ಕಿ ಮರಣ ಹೊಂದಿದ್ದಾಗ, ಅನ್ನಿ ಥಿಯೊಸೊಫಿಯಲ್ಲಿ ಪ್ರಮುಖ ಅಕೃತಿಗಳಲ್ಲಿ ಒಬ್ಬರಾಗಿ ಉಳಿದರು. ಚಿಕಾಗೋ ವರ್ಲ್ಡ್ ಫೆರ್‌ನಲ್ಲಿ ಆಕೆ ಪ್ರದರ್ಶಿಸಲು ತೆರೆಳಿದ್ದಾಗ, ನಂಬಿಕೆಗೆ ಅವರ ಅತಿ ಮುಖ್ಯ ಸಾರ್ವಜನಿಕ ಬದ್ದತೆ 1893ರಲ್ಲಿ ಹೊರಹೊಮ್ಮಿತು. ಅವರು ಥಿಯೊಸೊಫಿಕಲ್ ಸೊಸೈಟಿಗೆ ಸದಸ್ಯರಾದ ತಕ್ಷಣ, ಭಾರತಕ್ಕೆ ಮೊದಲ ಬಾರಿಗೆ ಹೊರಟರು (1893ರಲ್ಲಿ). ವಿಲ್ಲಿಯಮ್ ಕ್ವಾನ್ ಜಡ್ಜ್, ಅಮೆರಿಕ ವಿಭಾಗದ ನಾಯಕ, ಮಾಲೀಕರ ಕಾಗದಗಳನ್ನು ವಿಕಾರಗೊಳಿಸಿದ/ಮೋಸದಿಂದ ತಿದ್ದಿದ ಅಪಾದನೆಯ, ಒಂದು ವಿವಾದದ ನಂತರ ್, ಅಮೇರಿಕದ ವಿಭಾಗ ಒಡೆದು ದೂರವಾಯಿತು. ಸೊಸೈಟಿಯ ಉಳಿದ ಭಾಗವನ್ನು ನಂತರ ಹೆನ್ರಿ ಸ್ಟೀಲ್ ಒಲ್ಕೊಟ್ಟ್ ಮತ್ತು ಬೆಸೆಂಟ್ ಮುಂದಾಳತ್ವ ವಹಿಸಿದರು, ಇಂದು ಭಾರತದ, ಚೆನ್ನೈನಲ್ಲಿ ಕೇಂದ್ರ ಕಾರ್ಯಸ್ಥಾನವಿದೆ ಮತ್ತು ಥಿಯೊಸೊಫಿಕಲ್ ಸೊಸೈಟಿ ಅದ್ಯರ್ ಎಂದು ಪರಿಚಿತ. ತರುವಾಯ ಅವರು ಅವರ ಹೆಚ್ಚಿನ ಶಕ್ತಿಯನ್ನು ಸೊಸೈಟಿಗೆ ಮಾತ್ರ ಅರ್ಪಿಸಲಿಲ್ಲ, ಹಾಗೂ ಭಾರತದ ಸ್ವಾತಂತ್ರ ಮತ್ತು ಅಭಿವೃದ್ಧಿಗಾಗಿ ಸಹ ಮುಡುಪಾಗಿಟ್ಟರು. ಬೆಸೆಂಟ್ ನಗರ್, ಚೆನ್ನೈನಲ್ಲಿನ ಥಿಯೊಸೊಫಿಕಲ್ ಸೊಸೈಟಿಯ ಹತ್ತಿರದ ಒಂದು ನೆರೆಹೊರೆ, ಅದಕ್ಕೆ ಆಕೆಯ ನೆನೆಪಿಗಾಗಿ ಅವರ ಹೆಸರಿಡಲಾಗಿದೆ.
ಥಿಯೊಸೊಫಿಕಲ್ ಸೊಸೈಟಿಯ ಅಧ್ಯಕ್ಷ
[ಬದಲಾಯಿಸಿ]1894ರ ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ಆಕೆ ಮೊದಲು ಅಸಾಧಾರಣ ಪ್ರಜ್ಞೆಯ ಥಿಯೊಸೊಫಿಸ್ಟ್ ಚಾರ್ಲ್ಸ್ ವೆಬ್‌ಸ್ಟೆರ್ ಲಿಡ್‌ಬೀಟರ್‌ರನ್ನು ಭೇಟಿ ಮಾಡಿದರು. ಅವರುಗಳು ಥಿಯೊಸೊಫಿಕಲ್ ಚಳುವಳಿಯಲ್ಲಿ ನಿಕಟ ಸಹ-ಕೆಲಸಗಾರಾದರು ಮತ್ತು ಅವರ ಉಳಿದ ಜೀವನದವರೆಗೆ ಹಾಗೆ ಉಳಿದರು. ಮುಂದಿನ ವರ್ಷಗಳಲ್ಲಿ ಬೆಸೆಂಟ್ ಅಸಾಧಾರಣ ಪ್ರಙ್ಞೆಯ ವ್ಯಕ್ತಿಯಾದರು. 25 ಅಗಸ್ಟ್ 1895ನೇ ದಿನಾಂಕದ ಒಂದು ಕಾಗದದಲ್ಲಿ ಫ್ರಾನ್ಸಿಸ್ಕಾ ಅರುನ್ಡಾಲ್, ಲೀಡ್‌ಬಿಟರ್ ಹೇಗೆ ಬೆಸೆಂಟ್ ತೀಕ್ಷ್ಣ ವಿವೇಚನೆಯವರಾದರು ಎಂದು ವಿವರಿಸುತ್ತಾರೆ.[೩] ಅವರು ಜೊತೆಯಾಗಿ ತೀಕ್ಷ್ಣ ವಿವೇಚನೆಯ ಮೂಲಕ ಜಗತ್ತು, ವಿಷಯ, ಅಭಿಪ್ರಾಯ-ಬಗೆಗಳು ಮತ್ತು ಮನುಕುಲದ ಇತಿಹಾಸವನ್ನು ಶೋಧಿಸಿದರು, ಮತ್ತು ಹಲವು ಪುಸ್ತಕಗಳ ಸಹ-ಲೇಖಕರಾಗಿದ್ದಾರೆ. ಲೀಡ್‌ಬಿಟರ್ ಯುವಕರ ಜೊತೆ ಮಲಗಿದರು ಮತ್ತು ಅವರೊಂದಿಗೆ ಪರಸ್ಪರ ಹಸ್ತಮೈಥುನದಲ್ಲಿ ತೊಡಗಿಸಿಕೊಂಡಿದರು ಎಂದು ಹುಟ್ಟಿ ಕೊಂಡಾಗ 1906ರಲ್ಲಿ ಲೀಡ್‌ಬಿಟರ್ ತಕ್ಷಣ ವಿವಾದದ ಕೇಂದ್ರವಾದರು- ಲೀಡ್‌ಬಿಟರ್ ಅವರಿಗೆ ಮಹಿಳೆಯರೊಂದಿಗೆ ಮಲಗುವುದರಿಂದ ಕಾಪಾಡಿಕೊಳ್ಳುವ ಸಲಹೆ ಮತ್ತು ಮಾರ್ಗದರ್ಶನ ನೀಡಲು ಕೇಳಲಾಗಿತ್ತು ಎಂದು ಲೀಡ್‌ಬೀಟರ್ ವಿವರಿಸಿದರು.[೪] 1906ರಲ್ಲಿ ಅವರನ್ನು ಥಿಯೊಸೊಫಿಕಲ್ ಸೊಸೈಟಿಯಿಂದ ರಾಜಿನಾಮೆ ನೀಡಲು ಬಲವಂತ ಮಾಡಲಾಯಿತು, ಆದರೆ ಮುಂದಿನ ವರ್ಷ ಅನ್ನಿ ಬೆಸೆಂಟ್ ಸೊಸೈಟಿಯ ಅಧ್ಯಕ್ಷರಾದರು ಮತ್ತು ಆಕೆಯ ಪಟ್ಟು ಹಿಡಿಯುವಿಕೆಯ ಮೇಲೆ 1908ರಲ್ಲಿ ಲೀಡ್‌ಬೀಟರ್ ಅವರನ್ನು ಪುನಃ ಸಂಸ್ಥೆಯ ಒಳಗೆ ತೆಗೆದುಕೊಳ್ಳಲಾಯಿತು. ಲೀಡ್‌ಬಿಟರ್ ಹುಡುಗರೊಂದಿಗಿನ ಅನುಚಿತ ಸಂಬಂಧಗಳ ಹಲವು ಅಪಾದನೆಗಳನ್ನು ಎದುರಿಸುತ್ತ ಹೋದರು, ಆದರೆ ಬೆಸೆಂಟ್ ಎಂದಿಗೂ ಅವರನ್ನು ಕೈಬಿಡಲಿಲ್ಲ. ಅನ್ನಿ ಬೆಸೆಂಟರ ಅಧ್ಯಕ್ಷೀಯತೆಯು ಇರುವವರೆಗೆ ಥೆರವಾಡಾ ಬುದ್ದಿಸಮ್ ಅನ್ನು ಮತ್ತು ಹೆನ್ರಿ ಒಲ್ಕೋಟ್ ತನ್ನ ಹೆಚ್ಚಿನ ಉಪಯುಕ್ತ ಕಾರ್ಯಗಳನ್ನು ಮಾಡಿದ್ದ ಸಿಲೋನ್ ದ್ವೀಪವನ್ನು ತನ್ನ ಕೇಂದ್ರವಾಗಿರಿಸಿಕೊಂಡಿತ್ತು. ಬೆಸೆಂಟ್‌ರ ನಾಯಕತ್ವದಡಿಯಲ್ಲಿ ಒಂದು ನಿರ್ಧಾರಕವಾದ ಬದಲಾವಣೆ ಉಂಟಾಯಿತು, ಮತ್ತು ಅವರು ತಮ್ಮ ಕಾರ್ಯದ ಕೇಂದ್ರವಾಗಿ "ದ ಆರ್ಯಾವರ್ತ" ಅಥವಾ ಮಧ್ಯ ಭಾರತವನ್ನು ಮಾಡಿಕೊಂಡರು. ಬೆಸೆಂಟ್ ಸಕ್ರಿಯವಾಗಿ ಹಿಂದೂ ಅಭಿಪ್ರಾಯವನ್ನು ಪೂರ್ವದ ಥಿಯೋಸೊಫಿಕಲ್ ನಾಯಕರ ಅಭಿಪ್ರಾಯಗಳಿಗಿಂತ ಹೆಚ್ಚಾಗಿ ಪರಿಗಣಿಸಿದರು. ಸಿಲೋನಿನಲ್ಲಿ ಸಾರ್ವಜನಿಕರನ್ನು ಬೌದ್ಧಧರ್ಮಕ್ಕೆ ಪರಿವರ್ತಿಸುವುದರಲ್ಲಿ ಮತ್ತು ಉಪಖಂಡದಲ್ಲಿ ಬೌದ್ಧಧರ್ಮವನ್ನು ಮರಳಿಸಲು ಮಾಡಿದ ಚಟುವಟಿಕೆಗಳಲ್ಲಿ ಬ್ಲಾವಟ್ಸ್ಕಿ ಮತ್ತು ಓಲ್ಕೊಟ್ ಇಬ್ಬರೂ ನೀತಿಗೆ ಸಂಪೂರ್ಣವಾಗಿ ವಿರೋಧವಾಗಿ ನಡೆದುಕೊಂಡರು (ಇದನ್ನೂ ನೋಡಿ: ಮಹಾ ಭೋದಿ ಸಮಾಜ). ಅನ್ನಿ ವಾರಣಾಸಿಯಲ್ಲಿ ಬಾಲಕರಿಗಾಗಿ ಹೊಸ ಶಾಲೆಯನ್ನು ಸ್ಥಾಪಿಸಿದರು: ಸೆಂಟ್ರಲ್ ಹಿಂದೂ ಕಾಲೇಜ್. ಭಾರತಕ್ಕೆ ಹೊಸ ನಾಯಕತ್ವವನ್ನು ಕಟ್ಟುವುದು ಅದರ ಗುರಿಯಾಗಿತ್ತು. ಬಾಲಕರು ಸಂನ್ಯಾಸಿಗಳ ರೀತಿಯಲ್ಲಿ ವಾಸಿಸಿದರು. ಅವರು ದಿನದ 90 ನಿಮಿಷ ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದರು ಮತ್ತು ಹಿಂದು ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದರು, ಆದರೆ ಅವರು ಅಧುನಿಕ ವಿಙ್ಞಾನವನ್ನು ಸಹ ಅಧ್ಯಯನ ಮಾಡುತ್ತಿದ್ದರು. CHCಗೆ ಹಣ ಸಂಗ್ರಹಿಸಲು 3 ವರ್ಷಗಳ ಕಾಲ ಹಿಡಿಯಿತು. ಹೆಚ್ಚಿನ ಹಣ ಭಾರತೀಯ ರಾಜಕುಮಾರರಿಂದ ಬಂದಿತು. ಏಪ್ರಿಲ್ 1911ರಲ್ಲಿ, ಅನ್ನಿ ಮತ್ತು ಪಂಡಿತ್ ಮದನ್ ಮೋಹನ್ ಮಾಲ್ವಿಯ ಭೇಟಿಯಾದರು ಮತ್ತು ಅವರ ಸಾಮರ್ಥ್ಯಗಳನ್ನು ಒಂದುಗೂಡಿಸಲು ಮತ್ತು ವಾರಣಾಸಿಯಲ್ಲಿ ಒಂದು ಸಾಮಾನ್ಯ ಹಿಂದು ವಿಶ್ವವಿದ್ಯಾನಿಲಯಕ್ಕಾಗಿ ಕೆಲಸ ಮಾಡಲು ನಿರ್ಧರಿಸಿದರು. ಕಾಲೇಜು ಹೊಸ ವಿಶ್ವವಿದ್ಯಾನಿಲಯದ ಒಂದು ಭಾಗಬೇಕು ಎಂಬ ಭಾರತದ ಸರ್ಕಾರದ ಪೂರ್ವಭಾವಿ ಷರತ್ತಿಗೆ ಅನ್ನಿ ಮತ್ತು ಕೇಂದ್ರಿಯ ಹಿಂದು ಕಾಲೇಜಿನ ಜತೆಗಾರ ಟ್ರಸ್ಟಿಗಳು ಸಹ ಒಪ್ಪಿದರು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ 1 ಅಕ್ಟೋಬರ್ 1917ರಿಂದ ಕೇಂದ್ರಿಯ ಹಿಂದು ಕಾಲೇಜ್ ಜೊತೆ ಅದರ ಮೊದಲ ಅಂಗ/ಘಟಕ ಕಾಲೇಜಿನ ಹಾಗೆ ಕಾರ್ಯನಿರ್ವಹಿಸಲು ಆರಂಭಿಸಿತು. 1889ಕ್ಕಿಂತ ಮೊದಲು, ಬ್ಲಾವಟ್ಸ್ಕಿ ಥಿಯೊಸೊಫಿಕಲ್ ವಿಧ್ಯಾರ್ಥಿಗಳ ಒಂದು ಗುಂಪಿಗೆ ಹೀಗೆ ಹೇಳಿದ್ದರು ಸೊಸೈಟಿಯನ್ನು ಸ್ಥಾಪಿಸಿದ ನಿಜವಾದ ಉದ್ದೇಶವೆಂದರೆ ಆತ ಮತ್ತೊಮ್ಮೆ ಭೂಮಿಯ ಮೇಲೆ ಕಾಣಿಸಿಕೊಂಡಾಗ ಜಗತ್ತಿನ ಶಿಕ್ಷಕನ ಸ್ವಾಗತಕ್ಕೆ ಮನುಷ್ಯತ್ವವನ್ನು ಸಿದ್ಧಗೊಳಿಸಿವುದು. ಬ್ಲಾವಟ್ಸ್ಕಿಯ ಮಅರ್ಣದ ಐದು ವರ್ಷದ ನಂತರ, ಅದನ್ನು ಬೆಸೆಂಟ್ ಸಾರ್ವಜನಿಕವಾಗಿ 1896ರಲ್ಲಿ ಪುನರಾವರ್ತಿಸಿದರು.[೫]
ಕೃಷ್ಣಮೂರ್ತಿ
[ಬದಲಾಯಿಸಿ]ಬೆಸೆಂಟ್‌ರ ಅಧ್ಯಕ್ಷ-ಸ್ಥಾನದ ಉತ್ತರಾಧಿಕಾರ ತಕ್ಷಣ, ಅದ್ಯರ್‌ನ ಸೊಸೈಟಿಯ ಕೇಂದ್ರ ಕಛೇರಿಗೆ ಅಂಟಿಕೊಂಡ ಖಾಸಗಿ ಸಮುದ್ರ ತೀರದಲ್ಲಿ ಜಿಡ್ಡು ಕೃಷ್ಣಮೂರ್ತಿಯನ್ನು 1909ರಲ್ಲಿ ಲೀಡ್‌ಬೀಟರ್ ಕಂಡು ಹಿಡಿದರು. ಕೃಷ್ಣಮೂರ್ತಿ ಅವರ ತಂದೆ ಮತ್ತು ಸಹೋದರನ ಜೊತೆ ಇದಕ್ಕಿಂತ ಕೆಲವು ತಿಂಗಳ ಮೊದಲು ಅಲ್ಲಿ ವಾಸವಾಗಿದ್ದರು. ಈ ಶೋಧನೆ ಅಧ್ಯರ್‌ನ ಥಿಯೊಸೊಫಿಕಲ್ ಸೊಸೈಟಿಯಲ್ಲಿ ಒಂದು ಮಹಾ ಪರಿವರ್ತನೆಯನ್ನೇ ಉಂಟುಮಾಡಿತು, ಏಕೆಂದರೆ ಆ ಹುಡುಗನನ್ನು ಕ್ರಿಸ್ತನ ಅವತಾರ ಎಂದೇ ಹೇಳಲಾರಂಭಿಸಿದ್ದರು. ಜಿಡ್ಡು ಕೃಷ್ಣಮೂರ್ತಿ ಮತ್ತು ಅವರ ಸಹೋದರ ನಿತ್ಯ ಅವರನ್ನು ಥಿಯಾಸೊಫಿಸ್ಟರು ಆ ಕ್ಷಣದಿಂದ ಬೆಳೆಸಲಾರಂಭಿಸಿದರು, ಮತ್ತು ನಂತರದಲ್ಲಿ ಆ ಮಕ್ಕಳ ತಂದೆ ಅವರನ್ನು ಮರಳಿ ಪಡೆಯಲು ಒಂದು ವಿಫಲ ಪ್ರಯತ್ನವಾಗಿ ಕಾನೂನು ಮೊಕದ್ದಮೆಯನ್ನು ಹೂಡಿದ್ದರು. ಕೃಸ್ಣಮೂರ್ತಿ ಮತ್ತು ಬೆಸೆಂಟ್ ಒಮ್ದು ಆತ್ಮೀಯ ಬಂಧವನ್ನು ಬೆಳೆಸಿಕೊಂಡರು ಮತ್ತು ನಂತರದಲ್ಲಿ ಕೃಷ್ಣಮೂರ್ತಿ ಬೆಸೆಂಟ್‌ರನ್ನು ’ಅಮ್ಮ’ ಅಥವಾ ತಾಯಿ ಎಂದು ಸಂಭೊಧಿಸುತ್ತಿದ್ದರು. ನಂತರದಲ್ಲಿ 1929 ರಲ್ಲಿ ಕೃಷ್ಣಮೂರ್ತಿಯವರು ಆ ವರೆಗೂ ತಮ್ಮನ್ನು ಬೆಳೆಸಿದ್ದ ಹಾಗೂ ತಾವು ನಂತರದಲ್ಲಿ ನಾಯಕರಾದ ಆರ್ಡರ್ ಆಫ್ ದ ಸ್ಟಾರ್ ಆಫ್ ದ ಈಸ್ಟ್ ಅನ್ನು ವಿಸರ್ಜಿಸಿದರು. ಆದರೂ, ಬೆಸೆಂಟ್ ಅವರ ಯೋಗಕ್ಷೇಮಕ್ಕಾಗಿ ಕಾಳಜಿ ಹೊಂದಿದರು ಮತ್ತು ಥಿಯೊಸೊಫಿಕಲ್ ಸೊಸೈಟಿಯ ಕೇಂದ್ರ ಕಛೇರಿ ಹತ್ತಿರದಲ್ಲಿ 6 acres (24,000 m2)ಯ ಭೂಮಿಯನ್ನು ಖರೀದಿಸಿದರು, ನಂತರ ಅದು ಭಾರತದಲ್ಲಿ ಕೃಷ್ಣಮೂರ್ತಿ ಫೌಂಡೆಶನ್‌ನ ಪ್ರಧಾನ ಕಛೇರಿಯಾಯಿತು.
ಹೋಮ್ ರೂಲ್ ಚಳುವಳಿ
[ಬದಲಾಯಿಸಿ]ಅನ್ನಿ ಅವರ ಥಿಯೊಸೊಫಿಕಲ್ ಚಟುವಟಿಕೆಯೊಂದಿಗೆ, ನಿರ್ದಿಷ್ಟ ರಾಜಕೀಯ ಹೋರಾಟಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು. ಹೆಸರೇ ಸೂಚಿಸುವ ಹಾಗೆ, ಇದು ಮೂಲತಃ ಒಂದು ಪರ್ಯಾಲೋಚಿಸುವ ಅಂಗ, ಅದು ಪ್ರತಿ ವರ್ಷ ರಾಜಕೀಯ ಅಂಶಗಳ ಮೇಲೆ ನಿರ್ಣಯಗಳನ್ನು ಪರಿಗಣಿಸಲು ಸೇರುತ್ತದೆ. ಹೆಚ್ಚಾಗಿ ಇದು ಬ್ರಿಟಿಷ್ ಭಾರತೀಯ ಸರ್ಕಾರದಲ್ಲಿ ಮಧ್ಯಮ ವರ್ಗದ ಭಾರತೀಯರಿಗೆ ಹೆಚ್ಚು ಅಭಿಪ್ರಾಯವನ್ನು ಬೇಡಿತು. ಇದು ಇನ್ನೂ ಸ್ಥಳೀಯ ಸಂಸ್ಥೆಯ ಜೊತೆ ಒಂದು ಶಾಶ್ವತ ಸಮೂಹ ಚಳುವಳಿಯಾಗಿ ಬೆಳೆದ್ದಿಲ್ಲ. ಆ ಸಮಯದಲ್ಲಿ ಅನ್ನಿ ಆಕೆಯ ತೀಕ್ಷ್ಣ ವೀವಚನೆಯನ್ನು ಕಳೆದು ಕೊಂಡರು ಮತ್ತು ಸಹ ಕೆಲಸಗಾರ ಸಿ,ಡಬ್ಲ್ಯೂ. ಲೀಡ್‌ಬಿಟರ್ ಸಿಡ್ನಿ, ಆಸ್ಟ್ರೇಲಿಯಾಕ್ಕೆ ತೆರೆಳಿದರು. 1914ರಲ್ಲಿ ಯುರೋಪಿನಲ್ಲಿ ಯುದ್ಧ ಶುರುವಾಯಿತು. ಬ್ರಿಟನ್‌ಗೆ ಜರ್ಮನಿಯ ವಿರುದ್ಧ ಹೋರಾಟದಲ್ಲಿ ಅದರ ಸಾಮ್ರಾಜ್ಯದ ಬೆಂಬಲ ಅವಶ್ಯಕವಾಗಿತ್ತು. ಅನ್ನಿ ಹೀಗೆ ಹೇಳುತ್ತಾರೆ: " ಭಾರತದ ಅವಕಾಶ ಇಂಗ್ಲೆಂಡ್‌ನ ಅವಶ್ಯ್ಕತೆ," ಇರಿಷ್ ರಾಷ್ಟ್ರೀಯತಾವಾದ ಘೋಷಣಾ ವಾಕ್ಯದ ಒಂಡು ಸ್ಪಷ್ಟ ಪ್ರತಿಧ್ವನಿ. ನ್ಯೂ ಇಂಡಿಯಾ ಹೆಸರಿನ ಒಂದು ವಾರ್ತಪತ್ರಿಕೆಯ ಸಂಪಾದಕಿಯಾಗಿ, ಅವರು ಭಾರತದ ಸರ್ಕಾರದ (ಬ್ರಿಟಿಷ್) ಮೇಲೆ ದಾಳಿ ಮಾಡಿದರು ಮತ್ತು ಸ್ವ-ಆಡಳಿತದೆಡೆಗೆ ಸ್ಪಷ್ಟ ಮತ್ತು ನಿರ್ಣಾಯಕ ಚಲನೆಗಳಿಗೆ ಕರೆ ನೀಡಿದರು. ಐರ್‌ಲ್ಯಾಂಡ್‌ನ ಜೊತೆಯ ಹಾಗೆ, ಸರ್ಕಾರ ಯಾವುದೇ ಬದಲಾವಣೆಗಳನ್ನು ಚರ್ಚಿಸಲು ನಿರಾಕರಿಸಿತು ಆಗ ಯುದ್ಧ ಮುಂದುವರಿಯಿತು.
1916ರಲ್ಲಿ ಹೋಮ್ ರೂಲ್ ಲೀಗ್‌ಅನ್ನು ಪ್ರಾರಂಭಿಸಿದರು, ಮತ್ತೊಮ್ಮೆ ಐರಿಷ್ ಮಾದರಿಯಲ್ಲಿ ಭಾರತಕ್ಕಾಗಿ ಬೇಡಿಕೆಗಳನ್ನು ರೂಪಿಸಿದರು. ಮೊದಲ ಬಾರಿಗೆ ಭಾರತ ಬದಲಾವಣೆಗಾಗಿ ಹೋರಾಡಲು ಒಂದು ರಾಜಕೀಯ ಪಕ್ಷವನ್ನು ಹೊಂದಿತ್ತು. ಕಾಂಗ್ರೆಸ್‌ನ ಹಾಗಲ್ಲದೇ, ಲೀಗ್ ವರ್ಷ ಪೂರ್ತಿ ಕೆಲಸ ಮಾಡಿತು. ಅದು ಸ್ಥಳೀಯ ಕೇಂದ್ರಗಳ ಒಂದು ಪ್ರಬಲ ವಿನ್ಯಾಸವನ್ನು ರಚಿಸಿತು, ಅವುಗಳನ್ನು ಪ್ರದರ್ಶನಗಳು, ಸಾರ್ವಜನಿಕ ಸಭೆಗಳು ಮತ್ತು ಪ್ರತಿಭಟನೆಗಳನ್ನು ಸಜ್ಜುಗೊಳಿಸಲು ಸಾಧ್ಯವಾಗಿಸುವುದು. ಜೂನ್ 1917ರಲ್ಲಿ ಅನ್ನಿಯನ್ನು ಬಂಧಿಸಲಾಯಿತು ಮತ್ತು ಒಂದು ಗಿರಿಧಾಮದಲ್ಲಿ ಕೂಡಿಟ್ಟರು. ಆಕೆಯ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಅವರು ಉದ್ಯಾನವನದಲ್ಲಿ ಒಂದು ಕೆಂಪು ಮತ್ತು ಹಸಿರು ಬಾವುಟವನ್ನು ಹಾರಿಸಿದರು. ಆಕೆಯನ್ನು ಬಂಧ ಮುಕ್ತಗೊಳಿಸದಿದ್ದರೆ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಜೊತೆಯಾಗಿ ಪ್ರತಿಭಟನೆಗಳನ್ನು ಆರಂಭಿಸುವುದಾಗಿ ಬೆದರಿಕೆ ಹಾಕಿದವು. ಅನ್ನಿಯ ಬಂಧನ ಪ್ರತಿಭಟನೆಗೆ ಒಂದು ಕೇಂದ್ರ ಬಿಂದುವನ್ನು ಸೃಷ್ಟಿಸಿತು, ಭಾರತಕ್ಕಾಗಿ ಧೀರ್ಘ-ಕಾಲದ ಸ್ವಾತಂತ್ರವನ್ನು ಬಯಸುತ್ತಿದ್ದವರಿಗೆ ಒಂದು ಸರಳ, ಸಾಧಿಸಬಲ್ಲ ಗುರಿಗಾಗಿ ಒಟ್ಟಿಗೆ ಕೆಲಸ ಮಾಡುವ ಒಂದು ಅವಕಾಶವನ್ನು ನೀಡಿತು. ಸರ್ಕಾರ ಬಲವಂತದಿಂದ ಬಿಟ್ಟುಕೊಟ್ಟಿತು ಮತ್ತು ಅಸ್ಪಷ್ಟ ಆದರೆ ಗಮನಾರ್ಹ ರಿಯಾಯಿತಿಗಳನ್ನು ನೀಡಿತು. ಭಾರತೀಯ ಸ್ವ-ಸರ್ಕಾರ ಬ್ರಿಟಿಷ್ ಆಡಳಿತದ ಸರ್ವೋಚ್ಚ ಗುರಿ ಎಂದು ಘೋಷಿಸಿತು ಮತ್ತು ಆ ದಿಕ್ಕಿನಲ್ಲಿ ಕಾರ್ಯಗಳನ್ನು ಅಶ್ವಾಸಿತು. ಅನ್ನಿಯನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು ಭಾರತದ ಎಲ್ಲಾ ಕಡೆಯಿಂದ ಜನಸಮೂಹದಿಂದ ಭರ್ಜರಿ ಸ್ವಾಗತ ದೊರೆಯಿತು. ಡಿಸೆಂಬರ್‌ನಲ್ಲಿ ಅವರು ಒಂದು ವರ್ಷ ಅವಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡರು. ಆಕೆಯ ಜೀವನದಲ್ಲಿ ಬಹುಶಃ ಇದು ಆಕೆ ಗಳಿಸಿದ ಅತಿ ಉನ್ನತ ಗೌರವವಾಗಿರಬಹುದು. ಯುದ್ಧದ ನಂತರ, ವಾಪಸ್ಸ್ ಹೋಗುವುದು ಇರಲಿಲ್ಲ. ಮೋಹನ್‌ದಾಸ್ ಕೆ. ಗಾಂಧಿ|ಮೋಹನ್‌ದಾಸ್ ಕೆ. ಗಾಂಧಿಯ ಸುತ್ತ ಒಂದು ಹೊಸ ನಾಯಕತ್ವ ಹುಟ್ಟಿಕೊಂಡಿತು- ಅನ್ನಿಯ ಬಿಡುಗಡೆಗಾಗಿ ಬರೆದವರಲ್ಲಿ ಒಬ್ಬರು. ಅವರು ಒಬ್ಬ ನ್ಯಾಯವಾದಿಯಾಗಿದ್ದರು, ಾವರು ದಕ್ಷಿಣ ಅಫ್ರಿಕಾದಲ್ಲಿನ ವರ್ಣಬೇಧ ನೀತಿಯ ವಿರುದ್ಧದ ಒಂದು ಶಾಂತಿಯುತ್ತ ಹೋರಾಟದಲ್ಲಿ ಏಷ್ಯಿಯಾದವರ ಮುಂದಾಳತ್ವ ವಹಿಸಿ ಮರಳಿದರು. ಜವಾಹರಲಾಲ್ ನೆಹರು, ಗಾಂಧಿಯ ಅಪ್ತ ಸಹೊದ್ಯಮಿ, ಅವರು ಒಂದು ಥಿಯೊಸೊಫಿಸ್ಟ್ ಶಾಲೆಯ ಮೂಲಕ ಶಿಕ್ಷಣವನ್ನು ನೀಡುತ್ತಿದ್ದರು. ಹೊಸ ನಾಯಕತ್ವ ಕೂಡಾ ಚಳುವಳಿಗಾಗಿ ನಿಶ್ಚಿತವಾಗಿತ್ತು ಮತ್ತು ಅದರಲ್ಲಿ ಅಹಿಂಸೆ ಮತ್ತು ತೀವ್ರಗಾಮಿತ್ವ ಎರಡೂ ಇತ್ತು, ಆದರೆ ಅವರಿಗೆ ಅನ್ನಿ ಅವರೊಂದಿಗೆ ಭಿನ್ನಾಭಿಪ್ರಾಯವಿತ್ತು. ಅವರ ಗತ ಜೀವನದ ಹೊರತಾಗಿ, ಅವರುಗಳ ಸಮಾಜವಾದಿ ಪ್ರವೃತ್ತಿಗಳ ಜೊತೆ ಸಂತೋಷವಾಗಿರಲಿಲ್ಲ. ಆದರೂ, ಆಕೆಯ ಜೀವನದ ಕೊನೆಯ ವರೆಗೆ, ಅವರು ಭಾರತದ ಸ್ವಾತಂತ್ರಕ್ಕಾಗಿ ಹೋರಾಟ ಮುಂದುವರಿಸಿದರು, ಭಾರತದಲ್ಲಿ ಮಾತ್ರವಲ್ಲ ಬ್ರಿಟನಿನ ಪ್ರವಾಸದಲ್ಲಿ ಸಹಾಯ ಮಾತನಾಡಿದರು. ಭಾರತೀಯ ಉಡುಪಿನ ಆಕೆಯ ಸ್ವಂತ ಆವೃತ್ತಿಯಲ್ಲಿ ಶ್ರೀಮತಿ ಬೆಸೆಂಟ್ ಭಾಷಣಗಾರ ವೇದಿಕೆಯ ಮೇಲೆ ಗಮನ ಸೆಳೆಯುವ ಉಪಸ್ಥಿತಿಯನ್ನು ಉಳಿಸಿಕೊಂಡರು. ಸ್ವಾತಂತ್ರವನ್ನು ಆಗ್ರಹಪೂರ್ವಕವಾಗಿ ಕೇಳುತ್ತ ಆಕೆ ಕಾಗದಗಳ ಮತ್ತು ಲೇಖನಗಳ ಒಂದು ಸುರಿಮಳೆಯನ್ನು ಮಂಡಿಸಿದರು.
ಕೊನೆಯ ವರ್ಷಗಳು
[ಬದಲಾಯಿಸಿ]ಅನ್ನಿ ಕೃಷ್ಣಮೂರ್ತಿಯ ದೃಷ್ಟಿಕೋನಗಳಿಗೆ ಆಕೆಯ ಜೀವನದಲ್ಲಿ ಅವಕಾಶ ಕಲ್ಪಿಸಿಕೊಡಲು ಪ್ರಯತ್ನಿಸಿದರು, ಆದರೆ ಎಂದಿಗೂ ನಿಜವಾಗಿ ಯಶಸ್ವಿಯಾಗಲಿಲ್ಲ. ಆದ್ಯಾಗಿಯೂ, ಆಕೆಯ ಜೀವನದ ಕೊನೆಯ ವರೆಗೆ, ಅವರಿಬ್ಬರು ಸ್ನೇಹಿತರಾಗಿ ಉಳಿದರು. ಅನ್ನಿ ಬೆಸೆಂಟ್ 1933ರಲ್ಲಿ ಮರಣ ಹೊಂದಿದರು ಮತ್ತು ಅವರ ಮಗಳು, ಮ್ಯಾಬೆಲ್ ಮೂಲಕ ಅಸ್ತಿತ್ವದಲ್ಲಿ ಉಳಿದರು. ಅವರ ಸಾವಿನ ನಂತರ, ಆಕೆಯ ಸಹೋದ್ಯೋಗಿಗಳಾದ, ಜೆ. ಕೃಷ್ಣಮೂರ್ತಿ, ಅಲ್ಡೊಸ್ ಹಕ್ಸ್‌ಲೆ. ಡಾ. ಗೈಡೊ ಫೆರ್ರನ್ಡೊ, ಮತ್ತು ರೊಸಲಿಂಡ್ ರಾಜಗೋಪಾಲ್, ಹ್ಯಾಪಿ ವ್ಯಾಲಿ ಶಾಲೆಯನ್ನು ಕಟ್ಟಿಸಿದರು, ಈಗ ಆಕೆ ಸ್ಮರಣಾರ್ತಕವಾಗಿ ಬೆಸೆಂಟ್ ಹಿಲ್ ಶಾಲೆ ಎಂದು ಪುನರ್‌ನಾಮಕರಣ ಮಾಡಲಾಗಿದೆ.
ಅನ್ನಿ ಬೆಸೆಂಟ್‌ರ ವಂಶಸ್ಥರು
[ಬದಲಾಯಿಸಿ]ಅನ್ನಿ ಬೆಸೆಂಟ್ ಜೀವಿಸಿದ ಯುಗದಿಂದ ಮುಂದಕ್ಕೆ 1940ರ ಕೊನೆಯಿಂದ ಕುಟುಂಬದ ಇತಿಹಾಸ ಪೂರ್ತಿಯಾಗಿ ಛಿದ್ರವಾಗಿದೆ. ಅನ್ನಿ ಬೆಸೆಂಟ್‌ರ ಹಲವು ವಂಶಸ್ಥರನ್ನು ಆಕೆಯ ಮಗ ಅರ್ಥುರ್ ಡಿಗ್ಬಿಯ ಸಂತತಿಯ ವಿವರದಿಂದ ಕಂಡುಹಿಡಿಯಲಾಗಿದೆ. ಅರ್ತುರ್ ಡಿಗ್ಬಿಯ ಮಗಳಲ್ಲಿ ಒಬ್ಬಳು ಸಿಲ್ವಿಯ ಬೆಸೆಂಟ್, ಆಕೆ ಕಮ್ಯಾಂಡರ್ ಕ್ಲೆಮ್ ಲೆವಿಸ್‌ರನ್ನು 1920ರಲ್ಲಿ ಮದುವೆಯಾದರು. ಅವರು ಒಂದು ಮಗಳನ್ನು ಹೊಂದಿದರು, ಕ್ಯಾಥ್ಲೀನ್ ಮೇರಿ, 1934ರಲ್ಲಿ ಜನಿಸಿದರು, ಆಕೆ ಜನಿಸಿದ ಮೂರು ವಾರದ ಒಳಗೆ ದತ್ತು ಕೊಡಲಾಯಿತು ಮತ್ತು ಲವಿನಿಯ ಪೊಲ್ಲಾಕ್ ಆಕೆಯ ಹೊಸ ಹೆಸರು. 1953ರಲ್ಲಿ ಲವಿನಿಯ ಫ್ರಾಂಕ್ ಕ್ಯಾಸ್ಟಲ್ ಅನ್ನು ಮದುವೆಯಾದಳು ಮತ್ತು ಐದು ಜನ ಮಕ್ಕಳ ಕುಟುಂಬವನ್ನು ಬೆಳೆಸಿದಳು (ಬೆಸೆಂಟ್‌ರ ಮೊಮ್ಮಕ್ಕಳ ಮೊಮ್ಮಕ್ಕಳು)- ಜೇಮ್ಸ್, ರಿಚರ್ಡ್, ಡೆವೀಡ್, ಫಿಯೊನಾ ಮತ್ತು ಅಂಡ್ರೆವ್ ಕ್ಯಾಸ್ಟಲ್ - ಕೊನೆಯ ಮತ್ತು ಕಿರಿಯ ಸಹೋದರ ಮಾಜಿ ಬ್ರಿಟಿಷ್ ವೃತ್ತಿಪರ ಟೆನಿಸ್ ಆಟಗಾರರಾಗಿದ್ದರು ಮತ್ತು ಈಗ ದೂರದರ್ಶನದ ನಿರೂಪಕ ಮತ್ತು ವ್ಯಕ್ತಿ.
ಆಯ್ದ ಕೃತಿಗಳು
[ಬದಲಾಯಿಸಿ]- ದಿ ಪೊಲಿಟಿಕಲ್ ಸ್ಟೇಟಸ್ ಅಫ್ ವಿಮೆನ್ (1874)
- ಮೈ ಪಾಥ್ ಟು ಅಥೆಸಿಮ್ (1877)
- ದಿ ಲಾ ಅಫ್ ಪಾಪ್ಯುಲೆಷನ್ (1877)
- ಮ್ಯಾರೇಜ್, ಯಾಸ್ ಇಟ್ ವಾಸ್, ಯಾನ್ ಇಟ್ ಇಸ್, ಎಂಡ್ ಯಾಸ್ ಇಟ್ ಶುಡ್ ಬಿ: ಎ ಪ್ಲಿ ಫಾರ್ ರಿಫಾರ್ಮ್ (1878)
- ಅಟೋಬೈಯೊಗ್ರಾಫಿಕಲ್ ಸ್ಕೇಚ್ಸ್ (1885)
- "ವೈ ಐ ಬಿಕೇಮ್ ಎ ಥಿಯೊಸೊಫಿಸಿಟ್"(1889)
- Annie Besant by Annie Wood Besant at Project Gutenberg(1893)
- ದಿ ಅನ್ಶಿಯಂಟ್ ವಿಸ್ಡಂ (1898)
- ಥಾಟ್ ಫಾರ್ಮ್ಸ್ (1901)
- ಭಗವದ್ ಗೀತ (ಅನುವಾದ) (1905)
- ಇನ್ಟ್ರೂಡಕ್ಷನ್ ಟು ಯೋಗ (1908)
- ಆಸ್ಟ್ರೇಲಿಯನ್ ಲೆಕ್ಚರ್ಸ್ (1908)
- ಒಕಲಟ್ ಕೆಮಿಸ್ತ್ರಿ
- ದಿ ಡಾಕ್ಟ್‌ರಿನ್ ಅಫ್ ದಿ ಹಾರ್ಟ್ (1920)
- ಎಸೊಟೆರಿಕ್ ಕೆಮಿಸ್ತ್ರಿ
- ದಿ ಫ್ಯುಚರ್ ಅಫ್ ಇಂಡಿಯನ್ ಪಾಲಿಟಿಕ್ಸ್ (ಕೈಪಿಡಿ), ಥಿಯೊಸೊಫಿಕಲ್ ಪಬ್ಲಿಷಿಂಗ್ ಹೌಸ್, ಅದ್ಯರ್, 1922
- The Case for India by Annie Wood Besant at Project Gutenberg ಕಲ್ಕತ್ತಾದಲ್ಲಿ 26 ಡಿಸೆಂಬರ್ 1917 ರಲ್ಲಿ ನಡೆದ ಮೂವತ್ತೆರಡನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅನ್ನಿ ಬೆಸೆಂಟ್.
- ಬೆಸೆಂಟ್, ಅನ್ನಿ ದಿ ಡೆವಚಾನಿಕ್ ಪ್ಲೇನ್ . ಥಿಯೊಸೊಫಿಕಲ್ ಪಬ್ಲಿಷಿಂಗ್ ಹೌಸ್,, ಲಂಡನ್, ca 1895.
- ಬೆಸೆಂಟ್, ಅನ್ನಿ. ಮ್ಯಾನ್ ಅಂಡ್ ಹಿಸ್ ಬಾಡಿಸ್ . ಥಿಯೊಸೊಫಿಕಲ್ ಪಬ್ಲಿಷಿಂಗ್ ಹೌಸ್,, London, 1911.
- ಬೆಸೆಂಟ್, ಅನ್ನಿ. ಮ್ಯಾನ್’ಸ್ ಲೈಫ್ ಇನ್ ದಿಸ್ ಅಂಡ್ ಅದರ್ ವರ್ಲ್ಡ್ಸ್. ಥಿಯೊಸೊಫಿಕಲ್ ಪಬ್ಲಿಷಿಂಗ್ ಹೌಸ್,, Adyar, 1913.
- ಬೆಸೆಂಟ್, ಅನ್ನಿ. ಸ್ಟಡಿ ಇನ್ ಕಾನ್ಶಿಯಸ್‌ನೆಸ್ - ಎ ಕಾನ್ಟ್ರುಬ್ಯೂಷನ್ ಟು ಸೈನ್ಸ್ ಟು ಸೈಕಾಲಜಿ. ಥಿಯೊಸೊಫಿಕಲ್ ಪಬ್ಲಿಷಿಂಗ್ ಹೌಸ್, ca 1907.
- ಬೆಸೆಂಟ್, ಅನ್ನಿ ಅಂಡ್ ಬ್ಲವಟ್ಸ್ಕಿ, H P - "ಮೆಮೊರಿ ಅಂಡ್ ಇಟ್ಸ್ ನೇಚರ್", ಥಿಯೊಸೊಫಿಕಲ್ ಪಬ್ಲಿಷಿಂಗ್ ಹೌಸ್,, ಮದ್ರಾಸ್, ca 1935.
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- ಬೆಸೆಂಟ್, ಅನ್ನಿ. ದ ಬಿಲ್ಡಿಂಗ್ ಆಫ್ ದ ಕಾಸ್ಮೊಸ್ ಆಯ್‌೦ಡ್ ಅದರ್ ಲೆಕ್ಚರ್ಸ್: ಡೆಲಿವರ್ಡ್ ಎಟ್ ದ ಎಟಿಂನ್ತ್. ದ ಪಾಥ್, 1894.
- ಚಂದ್ರಶೇಖರ್ ,ಎಸ್. " ಎ ಡೈರಿ, ಫಿಲ್ತಿ ಬುಕ್": ದ ರೈಟಿಂಗ್ ಆಫ್ ಚಾರ್ಲ್ಸ್ ನೊವ್ಲ್‌ಟನ್ ಆಯ್‌೦ಡ್ ಅನ್ನಿ ಬೆಸೆಂಟ್ ಆನ್ ರೀಪ್ರೊಡಕ್ಟಿವ್ ಫಿಲೊಸಫಿ ಆಯ್‌೦ಡ್ ಬರ್ತ್ ಕಂಟ್ರೋಲ್ ಆಯ್‌೦ಡ್ ಆಯ್‌ನ್ ಅಕೌಂಟ್ ಆಫ್ ದ ಬ್ರಾಡ್‌ಲಾಫ್-ಬೆಸೆಂಟ್ ಟಯಲ್. ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಬರ್ಕೆಲೆಯ್ 1981
- ಗ್ರೋವರ್, ವೆರಿಂದರ್ ಮತ್ತು ರಂಜನಾ ಅರೋರಾ (eds.) ಅನ್ನಿ ಬೆಸೆಂಟ್: ಗ್ರೇಟ್ ವುಮನ್ ಆಫ್ ಮಾಡರ್ನ್ ಇಂಡಿಯಾ – 1 : ದೀಪ್ ಆಫ್ ದೀಪ್ ಪಬ್ಲೀಕೇಷನ್‌ನಿಂದ ಪ್ರಕಟಣೆ, ನವ ದೆಹಲಿ, ಭಾರತ, 1993
- ಕುಮಾರ್, ರಾಜ್ ರಾಮೇಶ್ವರಿ ದೇವಿ ಮತ್ತು ರೋಮಿಲಾ ಪ್ರುಥಿ. ಅನ್ನಿ ಬೆಸೆಂಟ್: ಫೌಂಡರ್ ಆಫ್ ಹೋಮ್ ರೂಲ್ ಮೂವ್‌ಮೆಂಟ್ , ಪೇಂಟರ್ ಪಬ್ಲೀಷರ್ಸ್, 2003 ISBN 81-7132-321-9
- ಮಾನ್ವೆಲ್ ,ರೋಜರ್. ದ ಟ್ರಯಲ್ ಆಫ್ ಅನ್ನಿ ಬೆಸೆಂಟ್ ಆಯ್೦ಡ್ ಚಾರ್ಲ್ಸ್ ಬ್ರಾಡ್‌ಲಾಫ್. ಎಲೆಕ್, ಲಂಡನ್ 1976
- ನೆದರ್‌ಕೋಟ್, ಆರ್ಥರ್ ಎಚ್. ದ ಫಸ್ಟ್ ಲೈವ್ಸ್ ಆಫ್ ಅನ್ನಿ ಬೆಸೆಂಟ್ ಹಾರ್ಟ್-ಡೆವೀಸ್: ಲಂಡನ್, 1961
- ನೆದರ್‌ಕೋಟ್, ಆರ್ಥರ್ ಎಚ್. ದ ಫೋರ್ ಲೈವ್ಸ್ ಆಫ್ ಅನ್ನಿ ಬೆಸೆಂಟ್ ಹಾರ್ಟ್-ಡೆವೀಸ್: ಲಂಡನ್, 1961( ಚಿಕಾಗೋ ವಿಶ್ವವಿದ್ಯಾಲಯದ ಮುದ್ರಣಾಲಯ ಕೂಡ 1963) ISBN 0-226-57317-6
- ಟೇಲರ್, ಅನ್ನಿ. ಆನ್ನಿ ಬೆಸೆಂಟ್: ಎ ಬಯೋಗ್ರಫಿ , ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, 1991 (ಯುಎಸ್ ಆವೃತ್ತಿ ಕೂಡ 1992) ISBN 0-19-211796-3
ಇವನ್ನೂ ನೋಡಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ "The History of Birkbeck". Birkbeck, University of London. Retrieved 2006-11-26.
- ↑ ಅಂತರಾಷ್ಟ್ರೀಯ ಸುದ್ಧಿ, 20 ಸೆಪ್ಟೆಂಬರ್ 1933, ದ ಇಂಟರ್ನ್ಯಾಷನಲ್ ಆರ್ಡರ್ ಆಫ್ ಕೋ-ಫ್ರೀಮಸೊನ್ರಿ,ಲೆ ದ್ರೊಯ್‌ಟ್ ಹ್ಯೂಮೇನ್
- ↑ ಈ ಪತ್ರ ಈಗ ಆನ್‌ಲೈನ್‌ನಲ್ಲಿ ಮತ್ತು ಇಲ್ಲಿ Archived 2010-05-22 ವೇಬ್ಯಾಕ್ ಮೆಷಿನ್ ನಲ್ಲಿ. ಕ್ಲಿಕ್ ಮಾಡಿ ಓದಬಹುದು
- ↑ "ಚಾರ್ಲ್ಸ್ ವೆಬ್ಸ್‌ಟರ್ ಲೀಡ್‌ಬೀಟರ್ 1854-1934:ಗ್ರೇಗೊರಿ ಜಾನ್ ಟಿಲ್ಲೆಟ್‌ರಿಂದ ಒಂದು ಜೀವನಚಾರಿತ್ರಿಕ ಅಭ್ಯಾಸ, , 2008". Archived from the original on 2017-07-03. Retrieved 2010-05-06.
- ↑ ಲುಟಿಯೆನ್ಸ್, 'ಕೃಷ್ಣಮೂರ್ತಿ: ದ ಇಯರ್ಸ್ ಆಫ್ ಅವೇಕನಿಂಗ್' ಪುಟ 12
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about Annie_Besant at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- Works by Annie Wood Besant at Project Gutenberg
- ಸೂಸನ್ ದೋಬ್ರಾರಿಂದ ಅನ್ನಿ ವುಡ್ ಬೆಸೆಂಟ್: ವಾಗ್ಮಿ, ಚಳುವಳಿಗಾರರು, ಯೋಗಿ, ವಾಕ್ಪಟು Archived 2009-11-06 ವೇಬ್ಯಾಕ್ ಮೆಷಿನ್ ನಲ್ಲಿ.
- ಕಂಗಾಲುಮಾಡುವಿಕೆಯೊ ಅಥವಾ ಆಶ್ಚರ್ಯವೋ? Archived 2006-12-03 ವೇಬ್ಯಾಕ್ ಮೆಷಿನ್ ನಲ್ಲಿ.ಕರೋಲ್ ಹನ್ಬರಿ ಮ್ಯಾಕೆಯ್ರಿಂದ ಆನ್ನಿ ವುಡ್ ಬೆಸೆಂಟ್‌ರ ಹಲವಾರು ಮತಾಂತರ Archived 2006-12-03 ವೇಬ್ಯಾಕ್ ಮೆಷಿನ್ ನಲ್ಲಿ.
- ಜೀವನ ಚರಿತ್ರೆ Archived 2011-05-14 ವೇಬ್ಯಾಕ್ ಮೆಷಿನ್ ನಲ್ಲಿ.
- ಜೀವನ ಚರಿತ್ರೆ (ಬಿಬಿಸಿ)
- ಆನ್ನಿ ಬೆಸೆಂಟ್‌ರ ಸತ್ಯಕ್ಕಾಗಿ ಅನ್ವೇಷಣೆ : ಕ್ರಿಶ್ಚಿಯಾನಿಟಿ, ಜಾತ್ಯತೀತತೆ , ಮತ್ತು ಹೊಸ ಯುಗದ ವಿಚಾರ
- ಜೀವನ ಚರಿತ್ರೆ ಮತ್ತು ಕೊಂಡಿಗಳು Archived 2010-06-12 ವೇಬ್ಯಾಕ್ ಮೆಷಿನ್ ನಲ್ಲಿ.
- ಭಾರತೀಯ ಅಂಚೆಯಿಂದ ಅನ್ನಿ ಬೆಸೆಂಟ್ ಸ್ಮಾರಕ
- ಥಿಯೋಸೋಫಿಕಲ್ ಸೊಸೈಟಿಯ ಇತಿಹಾಸ ಅದ್ಯಾರ್ ಮತ್ತು ಬೆಸೆಂಟ್ Archived 2006-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಚಾರ ಶಕ್ತಿ, ಇದರ ನಿಂಯಂತ್ರಣ ಮತ್ತು ಸಂಸ್ಕೃತಿ ಕ್ಯಾಮೆಲ್ ವಿಶ್ವವಿದ್ಯಾಲಯದ ಗ್ರಂಥಾಲಯದ ಇತಿಹಾಸ ಪ್ರಬಂಧ ಸಂಗ್ರಹ
ಭಾರತದ ಸ್ವಾತಂತ್ರ್ಯ | |
---|---|
ಚರಿತ್ರೆ: | ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ |
ತತ್ವಗಳು: | ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ |
ಘಟನೆ-ಚಳುವಳಿಗಳು: | ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ |
ಸಂಘಟನೆಗಳು: | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ |
ನಾಯಕರು: | ಮಂಗಲ ಪಾಂಡೆ - ಝಾನ್ಸಿ ರಾಣಿ ಲಕ್ಷ್ಮೀಬಾಯಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್ |
ಬ್ರಿಟಿಷ್ ಆಡಳಿತ: | ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್ |
ಸ್ವಾತಂತ್ರ್ಯ: | ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ |
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages with unresolved properties
- Articles with hCards
- 1986ರಲ್ಲಿ ಜನಿಸಿದವರು
- 1564ರಲ್ಲಿ ಮರಣಿಸಿದವರು
- ಕ್ಲಾಪ್ಹಾಮ್ನ ಜನರು
- ಇಂಗ್ಲೀಷ್ ಹಿಂದುಗಳು
- ಇಂಗ್ಲೀಷ್ ಥಿಸೊಫಿಕಲ್ ವಾದಿಗಳು
- ಅತೀಂದ್ರಿಯ ಕ್ರಿಶ್ಚಿಯಾನಿಟಿ
- ಬ್ರಿಟಿಷ್ ಜನನ ನಿಯಂತ್ರಣ ಚಟುವಟಿಕೆಗಳು
- ಇಂಗ್ಲೀಷ್ ಅತೀಂದ್ರಿಯ ಬರಹಗಾರರು
- ಇಂಗ್ಲೀಷ್ ವಸ್ತುಭೂತವಾದ ವಿಷಯದ ಬರಹಗಾರರು
- ಇಂಗ್ಲೀಷ್ ಆಧ್ಯಾತ್ಮಿಕ ಬರಹಗಾರರು
- ಇಂಗ್ಲೀಷ್ ಚಳುವಳಿಗಾರರು
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು
- ವೀಕ್ಟೊರಿಯ ರಾಣಿಯ ಯುಗದ ಮಹಿಳೆಯರು
- ಬ್ರಿಟಿಷ್ ಮತಾಧಿಕಾರಿಗಳು
- ಸ್ತ್ರೀ ಸಮಾನತಾವಾದಿ ಕಲಾವಿದರು
- ಚೆನ್ನೈನ ಇತಿಹಾಸ
- ಇಂಗ್ಲೀಷ್ ಮಹಿಳಾ ಬರಹಗಾರರು
- ಧಾರ್ಮಿಕ ಬರಹಗಾರರು
- ಹಿಂದು ಧರ್ಮಕ್ಕೆ ಮತಾಂತರ
- ಬಿರ್ಕ್ಬೆಕ್ನ ಅಲುಮ್ನಿ, ಲಂಡನ್ ವಿಶ್ವವಿದ್ಯಾನಿಲಯ
- ವಾರಣಾಸಿಯ ಜನರು
- ಇಂಗ್ಲೀಷ್ ಸಸ್ಯಹಾರಿಗಳು
- ಮಾಜಿ ನಿರೀಶ್ವರವಾದಿಗಳು ಮತ್ತು ನಾಸ್ತಿಕವಾದಿಗಳು
- ಸ್ತ್ರೀ ಸಮಾನತಾವಾದ ಮತ್ತು ಆಧ್ಯಾತಿಕತೆ
- ಭಾರತದಲ್ಲಿ ಇಂಡಿಯಾ ಸ್ಕೌಟ್ ಮತ್ತು ಗೈಡ್
- ಬನರಾಸ್ ಹಿಂದೂ ವಿಶ್ವವಿದ್ಯಾನಿಲಯ
- ಸ್ವಾತಂತ್ರ್ಯ ಹೋರಾಟಗಾರರು
- Pages using ISBN magic links