ವಿಷಯಕ್ಕೆ ಹೋಗು

ಆಡಿ A4

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Audi A4
Audi A4 sedan (B9)
ManufacturerAudi AG
Production1994–present
AssemblyIngolstadt, ಜರ್ಮನಿ
PredecessorAudi 80 / 90 / Cabriolet
ClassCompact executive car
Layoutlongitudinal front engine;
front-wheel drive or
quattro permanent four-wheel drive
PlatformVolkswagen Group B platform series
RelatedAudi S4
Audi RS4
Volkswagen Passat
Skoda Superb
SEAT Exeo

ಆಡಿ A4 ಎಂಬುದು ಒಂದು ಕಾರ್ಯಕಾರಿ ಸಾಮರ್ಥ್ಯದ ಅಡಕ ಕಾರು ಆಗಿದ್ದು, ಆಡಿ AG ಎಂಬ ಜರ್ಮನ್‌‌ ಕಾರು ತಯಾರಕ ಕಂಪನಿಯಿಂದ 1994ರ ಅಂತ್ಯಭಾಗದಿಂದಲೂ ಉತ್ಪಾದಿಸಲ್ಪಡುತ್ತಿದೆ. ಆರಂಭಿಕ ಪೀಳಿಗೆಯ A4 ಕಾರು, ಆಡಿ 80 ಕಾರಿನ ಹಿಂದಿನ ನಾಲ್ಕು ಪೀಳಿಗೆಗಳನ್ನು ಅನುಸರಿಸಿತು. ಮತ್ತು ತನ್ನ ಪೂರ್ವವರ್ತಿಯಾದ ಆಡಿ 80 ಕಾರಿನ ರೀತಿಯಲ್ಲಿಯೇ, ಆಡಿ A4 ಕಾರಿನ ವಾಹನ ವಿನ್ಯಾಸವು ಅನುಲಂಬವಾಗಿ ತಿರುಗಿಸಲಾದ ಒಂದು ಎಂಜಿನ್‌ನ್ನು‌‌ ಮುಂಭಾಗದಲ್ಲಿ ಒಳಗೊಂಡಿರುತ್ತದೆ ಹಾಗೂ ಎಂಜಿನ್‌ನ ಹಿಂಭಾಗಕ್ಕೆ ಅತಿ ಸಮೀಪದಲ್ಲಿ, ಮತ್ತೊಮ್ಮೆ ಅನುಲಂಬವಾಗಿ ತಿರುಗಿಸಲಾದ ಆಚೆಯ-ಅಚ್ಚಿನ-ಬಗೆಯ ಶಕ್ತಿ ಸಂವಹನಗಳ ವ್ಯವಸ್ಥೆಯನ್ನು ಜೋಡಣೆ ಮಾಡಲಾಗಿರುತ್ತದೆ. ಚಾಲನೆಯ ಫಲಿತವು ಮುಂಭಾಗ ಚಕ್ರಗಳಿಗೆ ಸಂವಹಿಸಲ್ಪಡುತ್ತದೆ, ಅಥವಾ ಕೆಲವೊಂದು ಮಾದರಿಗಳಲ್ಲಿ, ಆಡಿಯ 'ಸರಕುಮುದ್ರೆ'ಯಾಗಿರುವ ಕ್ವಾಟ್ರೊವನ್ನು ಬಳಸಿಕೊಂಡು ಒಂದು ಟಾರ್ಸನ್‌‌ ಕೇಂದ್ರದ ಭೇದಾತ್ಮಕದ ಮೂಲಕ, ನಾಲ್ಕು-ಚಕ್ರ ಚಾಲನೆಯ ಕಾಯಮ್ಮಾದ ವ್ಯವಸ್ಥೆಗೆ ಸಂವಹಿಸಲ್ಪಡುತ್ತದೆ. ಆಡಿ A4 ಕಾರಿನ ಉಪಕ್ರಮವಾದಂದಿನಿಂದ ಅದು ನಾಲ್ಕು ಪೀಳಿಗೆಗಳಲ್ಲಿ ಲಭ್ಯವಿದ್ದು, ಇದು ವೋಕ್ಸ್‌‌ವ್ಯಾಗನ್‌ ಸಮೂಹದ 'B' ಶ್ರೇಣಿಯ ವಾಹನ ವೇದಿಕೆಗಳನ್ನು ಆಧರಿಸಿದೆ. ಆದ್ದರಿಂದ, ಆಡಿ ಕಾರಿನ ಆಂತರಿಕವಾಗಿ ಸಂಖ್ಯೆಯನ್ನು ನೀಡುವ ವಾಡಿಕೆಯ ಕ್ರಮವು A4 ಮಾದರಿಯನ್ನು ಆಡಿ 80 ಸರಣಿಯ ಒಂದು ತಾರ್ಕಿಕ ಮುಂದುವರಿಕೆಯಾಗಿ ಪರಿಗಣಿಸುತ್ತದೆ; ಹೀಗಾಗಿ ಆರಂಭಿಕ A4 ಮಾದರಿಯನ್ನು B5-ಶ್ರೇಣಿಯಾಗಿ ಹೆಸರಿಸಲಾಯಿತು ಹಾಗೂ ಇದನ್ನು ಅನುಸರಿಸಿಕೊಂಡು, ತರುವಾಯದ B6 ಮತ್ತು B7 ಶ್ರೇಣಿಗಳು, ಮತ್ತು ಈಗಿನ ಪ್ರಸಕ್ತ B8 ಶ್ರೇಣಿಯು ಬಂದಿವೆ. ಮುಖ್ಯವಾದ ಶರೀರ ಶೈಲಿಗಳ ಪೈಕಿ, ಇದು ಒಂದು ಸಲೂನ್ ಕಾರಿನ‌‌/ಮುಚ್ಚುಕಾರಿನ ರೂಪಾಂತರವಾಗಿ (ಮತ್ತು ಎಲ್ಲ ಸಮಯಗಳಲ್ಲೂ ಅದೇ ಸ್ವರೂಪದಲ್ಲಿ) ಲಭ್ಯವಿದೆ, ಮತ್ತು ಒಂದು ಎಸ್ಟೇಟ್‌‌/ವ್ಯಾಗನ್‌‌ ಮಾದರಿಗೆ ಆಡಿಯು ನೀಡಿರುವ ಹೆಸರಾದ ಒಂದು "ಆವಂತ್‌‌" ಸ್ವರೂಪದಲ್ಲಿ ಲಭ್ಯವಿದೆ. A4 ಕಾರಿನ ಎರಡನೇ (B6) ಮತ್ತು ಮೂರನೇ ಪೀಳಿಗೆಗಳೂ (B7) ಸಹ ಒಂದು ಮಡಚು ಚಾವಣಿಯ ಕಾರಿನ ಆವೃತ್ತಿಯನ್ನು ಹೊಂದಿದ್ದವು; ಆದರೆ, ಪ್ರಸಕ್ತ ನಾಲ್ಕನೇ ಪೀಳಿಗೆಗೆ (B8) ಸಂಬಂಧಿಸಿದಂತೆ ಮಡಚು ಚಾವಣಿಯ ಕಾರನ್ನು ಉಳಿಸಿಕೊಂಡಿಲ್ಲ. ಸಂಬಂಧಿಸಿದ ಆಡಿ A5 ಮತ್ತು S5 ಕೂಪೆ ಮಾದರಿಗಳ - ಮತ್ತು ಸಣ್ಣದಾದ ಆಡಿ A3 ಮಾದರಿಯ ಮಡಚು ಚಾವಣಿಯ ಆವೃತ್ತಿಗಳನ್ನು ಆಡಿ ಈಗ ಹೊಂದಿದೆ. ಹೆಚ್ಚುವರಿಯಾಗಿ, A4 ಕಾರಿಗೆ ನೇರವಾಗಿ ಸಂಬಂಧಿಸಿದ ಉನ್ನತ ಕಾರ್ಯಕ್ಷಮತೆ ಆವೃತ್ತಿಗಳಲ್ಲಿ ಆಡಿ S4, ಮತ್ತು ಸೀಮಿತ ಲಭ್ಯತೆಯ ಕ್ವಾಟ್ರೊ GmbH ಮಾದರಿಗಳು ಸೇರಿದ್ದು, ಇವು ಅತ್ಯಂತ ಉನ್ನತ ಕಾರ್ಯಕ್ಷಮತೆಯ ಆಡಿ RS4ನ್ನು ಅಭಿವೃದ್ಧಿಪಡಿಸಿದವು.

B5 (ಟೈಪ್‌‌‌ 8D, 1994–2001)

[ಬದಲಾಯಿಸಿ]
Audi A4 (B5)
1995–1999 Audi A4 (B5) quattro sedan (Australia)
Production1994–2001
Model years1996–2001
Body style4 door saloon/sedan,
5-door Avant (estate/wagon)
PlatformVolkswagen Group B5 (PL45) platform
Enginepetrol engines:
1.6 L I4
1.8 L I4 20v
1.8 L I4 20v Turbo
2.4 L V6 30v
2.6 L V6
2.8 L V6
2.8 L V6 30v
diesel engines:
1.9 L I4 TDI
2.5 L V6 24v TDI
Transmission5-speed Manual
4-speed Automatic
5-speed ZF 5HP19 Automatic
Wheelbase2,615 mm (103.0 in)
Length4,520 mm (178.0 in);
Avant: 4,488 mm (176.7 in)
Width1,730 mm (68.1 in)
Height1,415 mm (55.7 in);
Avant: 1,440 mm (56.7 in)
RelatedAudi S4 (B5),
Audi RS4 (B5)
Škoda Superb
Volkswagen Passat (B5)

ಮೊದಲ-ಪೀಳಿಗೆಯ ಆಡಿ A4 (ಒಳವಲಯಗಳಲ್ಲಿ ಇದನ್ನು ಟೈಪ್‌‌‌' 8D ಎಂದು ಕರೆಯಲಾಗುತ್ತಿತ್ತು) ಕಾರಿನ ಉತ್ಪಾದನೆಯು 1994ರ ನವೆಂಬರ್‌ನಲ್ಲಿ ಆರಂಭಗೊಳ್ಳುವುದರೊಂದಿಗೆ, ಅದು ಆಡಿ ಕಂಪನಿಯ ವತಿಯಿಂದ 1994ರಲ್ಲಿ[] ರಂಗಪ್ರವೇಶಮಾಡಿತು. ನಾಲ್ಕನೇ ಪೀಳಿಗೆಯ ವೋಕ್ಸ್‌‌ವ್ಯಾಗನ್‌ ಪ್ಯಾಸ್ಸಾಟ್‌‌ (B5, ಟೈಪ್‌‌‌ 3B) ಜೊತೆಯಲ್ಲಿ ತಾನು ಹಂಚಿಕೊಂಡಿದ್ದ ವೋಕ್ಸ್‌‌ವ್ಯಾಗನ್‌ ಸಮೂಹದ B5 (PL45) ವೇದಿಕೆಯ ಮೇಲೆ ಇದು ನಿರ್ಮಿಸಲ್ಪಟ್ಟಿತು. ಇದು ಮುಂಭಾಗದಲ್ಲಿ-ಜೋಡಣೆ ಮಾಡಲಾದ ಒಂದು ಅನುಲಂಬವಾದ ಎಂಜಿನ್‌‌‌‌ನ್ನು ಮತ್ತು ಪ್ರಮಾಣಕವಾದ ಮುಂಭಾಗದ-ಚಕ್ರ ಚಾಲನೆಯನ್ನು ಹೊಂದಿತ್ತು, ಮತ್ತು ಆಡಿ ಕಾರಿನ 'ಸರಕುಮುದ್ರೆ'ಯಾದ ಕ್ವಾಟ್ರೊ ನಾಲ್ಕು-ಚಕ್ರ ಚಾಲನೆಯ ವ್ಯವಸ್ಥೆಯೊಂದಿಗೆ A4 ಕಾರಿನ ಅನೇಕ ರೂಪಾಂತರಗಳೂ ಸಹ ಲಭ್ಯವಿದ್ದವು. ನಾಲ್ಕು-ಬಾಗಿಲಿನ ಒಂದು ಸಲೂನ್ ಕಾರು‌‌/ಮುಚ್ಚುಕಾರಿನ‌ ಸ್ವರೂಪದಲ್ಲಿ A4 ಕಾರು ಆರಂಭಿಕವಾಗಿ ಪರಿಚಯಿಸಲ್ಪಟ್ಟಿತು; ಒಂದು ವರ್ಷದ ನಂತರ ಆವಂತ್‌‌ (ಎಸ್ಟೇಟ್‌‌/ವ್ಯಾಗನ್‌‌) ಆಗಮಿಸಿತು.

1998–1999ರ ಆಡಿ A4 (B5) 1.8T ಕ್ವಾಟ್ರೊ ಆವಂತ್‌‌ (ಆಸ್ಟ್ರೇಲಿಯಾ)

ಪೆಟ್ರೋಲ್‌‌ ಎಂಜಿನ್‌‌‌ಗಳಿಗೆ ಸಂಬಂಧಿಸಿದಂತೆ 1.6 ಮತ್ತು 2.8 ಲೀಟರ್‌‌‌‌ಗಳ ಸಾಮರ್ಥ್ಯದ ನಡುವಿನ ಆಂತರಿಕ ದಹನದ ಎಂಜಿನ್‌‌‌‌ಗಳ ಒಂದು ವ್ಯಾಪಕ ಶ್ರೇಣಿಯು ಐರೋಪ್ಯ ಗ್ರಾಹಕರಿಗೆ ಲಭ್ಯವಿದ್ದವು; ಮತ್ತು ಒಂದು 90 PS (66 kW; 89 bhp) ಅಥವಾ 110 PS (81 kW; 108 bhp)ನ್ನು ಸಾಧಿಸಲು ಸಮರ್ಥವಾಗಿದ್ದ, ವೋಕ್ಸ್‌‌ವ್ಯಾಗನ್‌ ಸಮೂಹದ VE ತಂತ್ರಜ್ಞಾನದೊಂದಿಗಿನ 1.9 ಲೀಟರ್‌ ಸಾಮರ್ಥ್ಯದ ಒಂದು ಡೀಸೆಲ್‌‌ ಎಂಜಿನ್‌‌‌ ಲಭ್ಯವಿತ್ತು. ಆದರೂ, ಹಳೆಯ 80/90ನಿಂದ ಮುಂದುವರಿಸಿಕೊಂಡು ಬಂದಿದ್ದ ಆಡಿಯ 2.8 ಲೀಟರ್‌‌‌ ಸಾಮರ್ಥ್ಯದ V6 ಎಂಜಿನ್‌‌‌, 1997ರವರೆಗೂ ಉತ್ತರ ಅಮೆರಿಕಾದಲ್ಲಿನ ಏಕೈಕ ಎಂಜಿನ್‌‌‌ ಆಯ್ಕೆಯಾಗಿತ್ತು. ಪ್ರತಿ ಸಿಲಿಂಡರ್‌ಗೆ ಐದು ಕವಾಟಗಳನ್ನು‌‌‌‌ ಹೊಂದಿದ್ದ ಹೊಸ 1.8 ಲೀಟರ್‌‌‌ 20v ಎಂಜಿನ್‌‌‌ನ್ನು ಒಳಗೊಳ್ಳುವಲ್ಲಿ ಆಡಿ A4 ಕಾರು ವೋಕ್ಸ್‌‌ವ್ಯಾಗನ್‌ ಸಮೂಹದಲ್ಲಿನ ಮೊದಲ ಮಾದರಿಯಾಗಿತ್ತು; ಈ ವಿಶಿಷ್ಟ ವಿನ್ಯಾಸದ ಘಟಕವನ್ನು ಆಧರಿಸಿ ಆಡಿ ಸ್ಪೋರ್ಟ್‌ ತನ್ನ ಸೂಪರ್‌‌ಟೂರಿಂಗ್‌‌ ಓಟದ ಪಂದ್ಯ ಕಾರಿಗೆ ಸಂಬಂಧಿಸಿದಂತೆ ವಿನ್ಯಾಸವನ್ನು ಅಭಿವೃದ್ಧಿಪಡಿಸಿತ್ತು. ಒಂದು ಅನಿಲಚಕ್ರ-ಚಾಲಿತ ಆವೃತ್ತಿಯು 150 PS (110 kW; 148 bhp) ಮತ್ತು 210 newton-metres (155 lb⋅ft) ಟಾರ್ಕ್‌ ಭ್ರಾಮಕವನ್ನು ತಯಾರಿಸಿತು. 2.8 ಲೀಟರ್‌‌‌ V6 30vಯೊಂದಿಗೆ ಆರಂಭಗೊಳ್ಳುವ ಎಂಜಿನ್‌ಗಳ V6 ಬಳಗಕ್ಕೆ ಈ ತಂತ್ರಜ್ಞಾನವು 1996ರಲ್ಲಿ ಸೇರಿಸಲ್ಪಟ್ಟಿದ್ದು, ಅದೀಗ 193 PS (142 kW; 190 bhp)ನ್ನು ತಯಾರಿಸಿದೆ. B5 ವೇದಿಕೆಯ ಮೇಲೆ ಆಡಿ ಕಂಪನಿಯ ಹೊಸ ಟಿಪ್ಟ್ರೋನಿಕ್‌‌ ಸ್ವಯಂಚಾಲಿತ ಶಕ್ತಿ ಸಂವಹನವೂ ಸಹ ರಂಗಪ್ರವೇಶಮಾಡಿತು; ಇದು ಕಂಪನಿಯ 964-ಪೀಳಿಗೆಯ 911 ಮಾದರಿಗಾಗಿ ಪೋರ್ಷೆಯು ಅಭಿವೃದ್ಧಿಪಡಿಸಿದ್ದ ಘಟಕವನ್ನು ಆಧರಿಸಿತ್ತು. ಈ ಶಕ್ತಿ ಸಂವಹನ ವ್ಯವಸ್ಥೆಯು ಒಂದು ಸಾಂಪ್ರದಾಯಿಕ ಸ್ವಯಂಚಾಲಿತ ಗೇರ್‌‌ಪೆಟ್ಟಿಗೆಯಾಗಿದ್ದು ಒಂದು ಟಾರ್ಕ್‌ ಭ್ರಾಮಕ ಪರಿವರ್ತಕವನ್ನು ಹೊಂದಿದೆಯಾದರೂ, ಗೇರ್‌‌‌ ಅನುಪಾತಗಳಿಗೆ ಸಂಬಂಧಿಸಿದಂತೆ ಇದು ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುವ ಕಾರ್ಯನಿರ್ವಹಣೆ ಅಥವಾ ಕೈನಿಂದ ಮಾಡುವ ಆಯ್ಕೆಯನ್ನು ಚಾಲಕನಿಗೆ ನೀಡುತ್ತದೆ.

B5 ರೂಪವರ್ಧನೆ (1998–2001)

[ಬದಲಾಯಿಸಿ]
ಆಡಿ B5 A4 ಸಲೂನ್ ಕಾರಿನ‌‌ ಹಿಂಭಾಗದ ನೋಟ
1998–2001ರ ಆಡಿ A4 ಸಲೂನ್ ಕಾರು‌‌ (US)
1998–2001ರ ಆಡಿ A4 ಆವಂತ್‌‌

1997ರ ಫ್ರಾಂಕ್‌‌ಫರ್ಟ್‌ ಮೋಟಾರು ಪ್ರದರ್ಶನದಲ್ಲಿ ಕಾಣಿಸಿಕೊಂಡ ಒಂದು ಚುರುಕುಗೊಳಿಸಲ್ಪಟ್ಟ B5 A4 ಶ್ರೇಣಿಯ ಮಾರಾಟಗಳು ಯುರೋಪ್‌‌‌ನಲ್ಲಿ 1998ರ ಆರಂಭದಲ್ಲಿ ಪ್ರಾರಂಭವಾದವು. ಒಂದು 2.8 ಲೀಟರ್‌‌‌ ಸಾಮರ್ಥ್ಯದ 30-ಕವಾಟದ V6 ಎಂಜಿನ್‌‌‌ನ (2.8 ಲೀಟರ್‌‌‌ 12-ಕವಾಟವನ್ನು ಇದು ಬದಲಾಯಿಸಿತು) ಪರಿಚಯದ ಜೊತೆಗೆ, ಈ ಶ್ರೇಣಿಗೆ ಅತ್ಯಂತ ಮುಖ್ಯ ಸೇರ್ಪಡೆಗಳೂ ಮಾಡಲ್ಪಟ್ಟವು. ಅವುಗಳೆಂದರೆ: 150 PS (110 kW; 148 bhp) ಜೊತೆಗಿನ 2.5 ಲೀಟರ್‌‌‌ ಸಾಮರ್ಥ್ಯದ V6 ಅನಿಲಚಕ್ರ-ಚಾಲಿತ ನೇರ ಇಂಜೆಕ್ಷನ್‌‌ (TDI) ವಿಶಿಷ್ಟತೆಯ ಡೀಸೆಲ್‌‌ ಎಂಜಿನ್‌‌‌, ಪ್ರಮಾಣಕವಾದ ಕ್ವಾಟ್ರೊ ಹಾಗೂ ಕೈನಿಂದ ಮಾಡುವ ಒಂದು ಆರು-ವೇಗದ ಗೇರ್‌‌ಪೆಟ್ಟಿಗೆ. ಇಷ್ಟೇ ಅಲ್ಲ, ಈಗ A4 ಶ್ರೇಣಿಯ (ಹಿಂದಿನ S4 ಮಾದರಿಯು ಒಂದು ಆಡಿ 100 ಆಗಿತ್ತು) ಭಾಗವಾಗಿರುವ, ಉನ್ನತ-ಕಾರ್ಯಕ್ಷಮತೆಯ ಹೊಸ ಆಡಿ S4 ಕೂಡಾ ಪರಿಚಯಿಸಲ್ಪಟ್ಟಿತು. ಹೊಸ ಹಿಂಭಾಗ ದೀಪಗಳು, ಮುಂದೀಪಗಳು, ಬಾಗಿಲು ಹಿಡಿಕೆಗಳು, ಮತ್ತು ಇತರ ಕಿರು ಬಾಹ್ಯ/ಆಂತರಿಕ ಬದಲಾವಣೆಗಳು ಅಲಂಕಾರಿಕ ಪರಿಷ್ಕರಣಗಳನ್ನು ಸಂಪೂರ್ಣಗೊಳಿಸಿದವು. 1998ರ ಮಧ್ಯಭಾಗದಲ್ಲಿ, ಯುರೋಪ್‌ ಹೊರಗಡೆ ಲಭ್ಯವಿದ್ದ 1.8 20vT ಎಂಜಿನ್‌‌‌ ತನ್ನ ಶಕ್ತಿ ಫಲಿತವನ್ನು 170 PS (125 kW; 168 bhp)ಗೆ ಏರಿಸಿಕೊಂಡಿತ್ತು. ಹಿಂದಿನ KKK K03 ಅನಿಲಚಕ್ರಚಾಲಿತ ಪಂಪು ಮೂಲಭೂತವಾಗಿ ಬದಲಾಗದ ಸ್ಥಿತಿಯಲ್ಲಿ ಇತ್ತಾದರೂ, ಶಾಖದ ಕಾರಣದಿಂದಾಗಿ ಆಗುವ ಬಿರಿಯುವಿಕೆಯನ್ನು ತಡೆಗಟ್ಟಲು ಅನಿಲಚಕ್ರದ ಪಾರ್ಶ್ವದ ಮೇಲೆ ಕೆಲವೊಂದು ಪರಿಷ್ಕರಣೆಗಳಿಗೆ ಒಳಗಾಯಿತು.[ಸೂಕ್ತ ಉಲ್ಲೇಖನ ಬೇಕು] ಎರಡು ವರ್ಷಗಳವರೆಗೆ ಯುರೋಪ್‌‌‌ನಲ್ಲಿ ಲಭ್ಯವಿದ್ದ 30-ಕವಾಟದ ಘಟಕವು 12-ಕವಾಟದ V6ನ್ನು ಬದಲಾಯಿಸಿತು. 1999ರಲ್ಲಿ, ಇನ್ನೂ ಉನ್ನತವಾದ ಕಾರ್ಯಕ್ಷಮತೆಯನ್ನು ಹೊಂದಿದ R enn‌‌‌S port ಮಾದರಿಯನ್ನು ಆಡಿ ಕಂಪನಿಯು ಪರಿಚಯಿಸಿತು; RS4 ಆವಂತ್‌‌ ಎಂಬ ಈ ಮಾದರಿಯು ತನ್ನ ಪೂರ್ವವರ್ತಿಯಾದ RS2 ರೀತಿಯಲ್ಲಿ ಆವಂತ್‌‌ ಶೈಲಿಯ ಶರೀರವಿನ್ಯಾಸದಲ್ಲಿ ಮಾತ್ರವೇ ಲಭ್ಯವಿತ್ತು.

B5 ಎಂಜಿನ್‌‌‌ಗಳು

[ಬದಲಾಯಿಸಿ]

ಈ ಕೆಳಗೆ ನಮೂದಿಸಿದ ಎಂಜಿನ್‌ಗಳು ಲಭ್ಯವಿದ್ದವು:

ಎಂಜಿನ್‌‌‌ ಬಗೆ ಗರಿಷ್ಟ ಶಕ್ತಿ ಗರಿಷ್ಟ ಟಾರ್ಕ್‌ ಭ್ರಾಮಕ ಉನ್ನತ ವೇಗ (ಸಲೂನ್ ಕಾರು‌‌) 0–100 ಕಿ.ಮೀ./ಗಂಟೆಗೆ (62 ಮೈಲು ಪ್ರತಿ ಗಂಟೆಗೆ) (ಸಲೂನ್ ಕಾರು‌‌)(ಕೈನಿಂದ ಮಾಡುವ) ವರ್ಷಗಳು CO2 ಹೊರಸೂಸುವಿಕೆಗಳು[]
ಪೆಟ್ರೋಲ್‌‌ ಎಂಜಿನ್‌‌‌‌ಗಳು
ಎಲ್ಲವೂ ಇಂಧನ ಒಳಹೊಗಿಸಿದ ಮಾದರಿಗಳು
1.6 I4 8v SOHC 101 PS (74 kW; 100 bhp) 140 N⋅m (103 lbf⋅ft) 191 km/h (118.7 mph) 11.9 ಸೆಕೆಂಡು 1994–2001 174 ಗ್ರಾಂ/ಕಿ.ಮೀ.
1.6 I4 8v SOHC 102 PS (75 kW; 101 bhp) 148 N⋅m (109 lbf⋅ft) 11.9 ಸೆಕೆಂಡು 2000–2001 192 ಗ್ರಾಂ/ಕಿ.ಮೀ.
1.8 I4 20v DOHC 125 PS (92 kW; 123 bhp) 173 N⋅m (128 lbf⋅ft) 205 km/h (127.4 mph) 10.5 ಸೆಕೆಂಡು 1994–2001 182 ಗ್ರಾಂ/ಕಿ.ಮೀ.
1.8T I4 20v DOHC ಟರ್ಬೋ 150 PS (110 kW; 148 bhp) 210 N⋅m (155 lbf⋅ft) 222 km/h (137.9 mph) 8.3 ಸೆಕೆಂಡು 1994–2001 182 ಗ್ರಾಂ/ಕಿ.ಮೀ.
1.8T I4 20v DOHC ಟರ್ಬೋ 180 PS (132 kW; 178 bhp) 235 N⋅m (173 lbf⋅ft) 233 km/h (144.8 mph) 7.9 ಸೆಕೆಂಡು 1997–2001 194 ಗ್ರಾಂ/ಕಿ.ಮೀ.
2.4 V6 30v DOHC 165 PS (121 kW; 163 bhp) 230 N⋅m (170 lbf⋅ft) 225 km/h (139.8 mph) 8.4 ಸೆಕೆಂಡು 1997–2001 226 ಗ್ರಾಂ/ಕಿ.ಮೀ.
2.6 V6 12v SOHC 150 PS (110 kW; 148 bhp) 225 N⋅m (166 lbf⋅ft) 220 km/h (136.7 mph) 9.1 ಸೆಕೆಂಡು 1994–1997
2.8 V6 12v SOHC 174 PS (128 kW; 172 bhp) 245 N⋅m (181 lbf⋅ft) 230 km/h (142.9 mph) 8.2 ಸೆಕೆಂಡು 1994–1997
2.8 V6 30v DOHC 193 PS (142 kW; 190 bhp) 280 N⋅m (207 lbf⋅ft) 240 km/h (149.1 mph) 7.4 ಸೆಕೆಂಡು 1997–2001
ಡೀಸೆಲ್‌‌ ಎಂಜಿನ್‌‌‌ಗಳು
ಎಲ್ಲವೂ ನೇರ ಇಂಜೆಕ್ಷನ್‌‌ (DI) ಮಾದರಿಗಳು
1.9 DI I4 8v SOHC 75 PS (55 kW; 74 bhp) 150 N⋅m (111 lbf⋅ft) 158 km/h (98.2 mph) 1996–2001
1.9 TDI I4 8v SOHC 90 PS (66 kW; 89 bhp) 202 N⋅m (149 lbf⋅ft) 168 km/h (104.4 mph) 13.3 ಸೆಕೆಂಡು 1994–1997 125 ಗ್ರಾಂ/ಕಿ.ಮೀ.
1.9 TDI I4 8v SOHC 90 PS (66 kW; 89 bhp) 210 N⋅m (155 lbf⋅ft) 168 km/h (104.4 mph) 13.3 ಸೆಕೆಂಡು 1997–2001 143 ಗ್ರಾಂ/ಕಿ.ಮೀ.
1.9 TDI I4 8v SOHC 110 PS (81 kW; 108 bhp) 225 N⋅m (166 lbf⋅ft) 183 km/h (113.7 mph) 11.3 ಸೆಕೆಂಡು 1994–1997 114 ಗ್ರಾಂ/ಕಿ.ಮೀ.
1.9 TDI I4 8v SOHC 110 PS (81 kW; 108 bhp) 235 N⋅m (173 lbf⋅ft) 183 km/h (113.7 mph) 11.3 ಸೆಕೆಂಡು 1997–2000 114 ಗ್ರಾಂ/ಕಿ.ಮೀ.
1.9 TDI I4 8v SOHC 115 PS (85 kW; 113 bhp) 285 N⋅m (210 lbf⋅ft) 185 km/h (115.0 mph) 10.5 ಸೆಕೆಂಡು 2000–2001 123 ಗ್ರಾಂ/ಕಿ.ಮೀ.
2.5 V6 TDI 24v DOHC 150 PS (110 kW; 148 bhp) 310 N⋅m (229 lbf⋅ft) 210 km/h (130.5 mph) 9.0 ಸೆಕೆಂಡು 1997–2001 184 ಗ್ರಾಂ/ಕಿ.ಮೀ.

B5 ಸುರಕ್ಷತೆ

[ಬದಲಾಯಿಸಿ]

ಯುರೋ NCAPಯ ಸುರಕ್ಷತೆ ಮತ್ತು ಡಿಕ್ಕಿ ಪರೀಕ್ಷೆಗಳಲ್ಲಿ ಆಡಿ B5 A4 ಮಾದರಿಯು ಮುಂಭಾಗದ ಮತ್ತು ಪಾರ್ಶ್ವಭಾಗದ-ಬಡಿತದ ಸಂರಕ್ಷಣೆಗೆ ಸಂಬಂಧಿಸಿದಂತೆ 3 ನಕ್ಷತ್ರಗಳನ್ನು ಸ್ವೀಕರಿಸಿದೆಯಾದರೂ, ಪಾರ್ಶ್ವ ಬಡಿತದಲ್ಲಿ ಚಾಲಕನು ಎದೆ ಗಾಯದ ಒಂದು ಹೆಚ್ಚಿನ ಅಪಾಯಕ್ಕೆ ಈಡಾಗಬಹುದು ಎಂಬುದನ್ನು ಸೂಚಿಸಲು ಕೊನೆಯ ನಕ್ಷತ್ರವನ್ನು ಗುರುತುಮಾಡಲಾಗಿದೆ.[]

  • ಕಾರಿನಲ್ಲಿ ವಯಸ್ಕರಿಗೆ ಇರುವ ಅವಕಾಶ = 3/5 stars
  • ಪಾದಚಾರಿ = 2/4 stars (2002ಕ್ಕೆ ಮುಂಚಿನ ಶ್ರೇಯಾಂಕ)

B5 A4-ಜನ್ಯ ಸಂಕರ ಆವೃತ್ತಿ

[ಬದಲಾಯಿಸಿ]

1997ರಲ್ಲಿ, A4 ಆವಂತ್‌‌ ಮಾದರಿಯನ್ನು ಆಗ ಆಧರಿಸಿದ್ದ ಮೂರನೇ ಪೀಳಿಗೆಯ ಆಡಿ ಡ್ಯುಯೊ ಎಂಬ ಒಂದು ಸಂಕರ ವಾಹನವನ್ನು ಸರಣಿ ಉತ್ಪಾದನೆಗೆ ತೊಡಗಿಸುವಲ್ಲಿನ ಮೊದಲ ಐರೋಪ್ಯ ಕಾರು ತಯಾರಕ ಎಂಬ ಕೀರ್ತಿಗೆ ಆಡಿ ಕಂಪನಿಯು ಪಾತ್ರವಾಯಿತು‌‌.[][]

B6 (ಟೈಪ್‌‌‌ 8E/8H, 2000–2005)

[ಬದಲಾಯಿಸಿ]
Audi A4 (B6)

Audi B6 A4 1.8T sedan (US)
Production2000–2005
Model years2002–2005
Body style4-door saloon/sedan
5-door Avant (estate/wagon)
2-door Cabriolet
PlatformVolkswagen Group B6 (PL46) platform
Enginepetrol engines:
1.6L I4
2.0L I4 20v
2.0L I4 FSI 16v
1.8L I4 20v Turbo
2.4L V6 30v
3.0L V6 30v
diesel engines:
1.9L I4 TDI
2.5L V6 TDI
3.0L V6 TDI
Transmission5-speed and 6-speed Manual
5-speed and 6-speed Automatic
Wheelbase2,650 mm (104.3 in),
Cabriolet: 2,654 mm (104.5 in)
Length4,547 mm (179.0 in),
Avant: 4,544 mm (178.9 in); Cabriolet: 4,573 mm (180.0 in)
Width1,766 mm (69.5 in),
Cabriolet: 1,777 mm (70.0 in)
Height1,428 mm (56.2 in),
Cabriolet: 1,391 mm (54.8 in)
RelatedAudi S4 (B6)
ಆಡಿ A4 ಆವಂತ್‌‌ 3.0 (US)
ಆಡಿ A4 1.8T ಮಡಚು ಚಾವಣಿಯ ಕಾರು (US)
2005ರ A4 ಸಲೂನ್ ಕಾರಿನ‌‌ S ಶ್ರೇಣಿ (US)

ಒಳವಲಯದಲ್ಲಿ ಟೈಪ್‌‌‌ 8E ಎಂದು ಹೆಸರಿಸಲ್ಪಟ್ಟ, ಎಲ್ಲವೂ-ಹೊಸತಾಗಿರುವ ಒಂದು A4 ಮಾದರಿಯು 2000ನೇ ಇಸವಿಯ ಅಂತ್ಯವೇಳೆಗೆ ರಂಗಪ್ರವೇಶಮಾಡಿತು ಮತ್ತು ಅದೀಗ ಎಲ್ಲವೂ-ಹೊಸತಾಗಿರುವ ವೋಕ್ಸ್‌‌ವ್ಯಾಗನ್‌ ಸಮೂಹದ B6 (PL46) ವೇದಿಕೆಯ ಮೇಲೆ ತನ್ನ ಸವಾರಿಯನ್ನು ನಡೆಸುತ್ತಿದೆ. ಕಾರಿನ ಹೊಸ ವಿನ್ಯಾಸಗಾರಿಕೆಯು ಒಂದು ಮಹಾನ್‌‌ ಯಶಸ್ಸನ್ನು ದಾಖಲಿಸಿ, C5 (ಎರಡನೇ-ಪೀಳಿಗೆ) ಆಡಿ A6 ಮೇಲೆ ಪ್ರಭಾವ ಬೀರಿತು. 1.6 ಲೀಟರ್‌‌‌ ಮೂಲ ಮಾದರಿಯ ಶಕ್ತಿಸ್ಥಾವರವು ಬದಲಾಗದೆ ಉಳಿದಕೊಂಡಿತಾದರೂ, ಇತರ ಬಹುಪಾಲು ಪೆಟ್ರೋಲ್‌‌/ಗ್ಯಾಸೋಲಿನ್‌‌ ಎಂಜಿನ್‌‌‌ಗಳು ಪಲ್ಲಟನದಲ್ಲಿನ ಹೆಚ್ಚಳ ಅಥವಾ ಶಕ್ತಿ ಉನ್ನತೀಕರಣಕ್ಕೆ ಈಡಾದವು. 150 PS (110 kW; 148 bhp) ಅಥವಾ 180 PS (132 kW; 178 bhp) ಎಂಬ ಎರಡು ಹೆಚ್ಚುವರಿ ಆವೃತ್ತಿಗಳಲ್ಲಿ 1.8 ಲೀಟರ್‌‌‌ ಸಾಮರ್ಥ್ಯದ 20-ಕವಾಟದ ಟರ್ಬೋ ಈಗ ಲಭ್ಯವಾಯಿತು ಹಾಗೂ ಇದು ಆರು-ವೇಗದ ಒಂದು ಪ್ರಮಾಣಕ ಕೈಚಾಲಿತ ಗೇರ್‌‌ಪೆಟ್ಟಿಗೆಯನ್ನು ಹೊಂದಿತ್ತು; ಸಹಜವಾಗಿ ಹೀರಿತೆಗೆದ 1.8 ಲೀಟರ್‌‌‌ ಸಾಮರ್ಥ್ಯದ ಒಳಾವರಣದ-ನಾಲ್ಕು ಎಂಜಿನ್‌‌‌ ಮತ್ತು 2.8 ಲೀಟರ್‌‌‌ ಸಾಮರ್ಥ್ಯದ V6ಗಳು 2.0 ಲೀಟರ್ ಸಾಮರ್ಥ್ಯದ ಎಂಜಿನ್‌ನಿಂದ, ಮತ್ತು ಎಲ್ಲವೂ-ಅಲ್ಯೂಮಿನಿಯಂ ಮಿಶ್ರಲೋಹವೇ ಆಗಿರುವ 3.0 ಲೀಟರ್‌‌‌ ಘಟಕಗಳಿಂದ ಬದಲಾಯಿಸಲ್ಪಟ್ಟವು; ಇವು ಪ್ರತಿ ಸಿಲಿಂಡರ್‌ಗೆ ಐದು ಕವಾಟಗಳನ್ನು ಇನ್ನೂ ಒಳಗೊಂಡಿದ್ದ ಘಟಕಗಳಾಗಿದ್ದು, ಇವುಗಳ ಪೈಕಿಯ ಅತ್ಯಂತ ಶಕ್ತಿಯುತ ಘಟಕವು 220 PS (162 kW; 217 bhp) ಮತ್ತು 300 newton-metres (221 lb⋅ft)ನಷ್ಟು ಟಾರ್ಕ್‌ ಭ್ರಾಮಕವನ್ನು ಹೊಮ್ಮಿಸುವಲ್ಲಿ ಸಮರ್ಥವಾಗಿತ್ತು. 1.9 ಅನಿಲಚಕ್ರ-ಚಾಲಿತ ನೇರ ಇಂಜೆಕ್ಷನ್‌‌ (TDI) ಎಂಜಿನ್‌‌‌ನ್ನು ಪಂಪೆ ಡ್ಯೂಸ್‌‌ (ಘಟಕ ಅಂತಃಕ್ಷೇಪಕ) (PD) ತಂತ್ರಜ್ಞಾನದ ನೆರವಿನೊಂದಿಗೆ 130 PS (96 kW; 128 bhp)ಗೆ ಉನ್ನತೀಕರಿಸಲಾಯಿತು, ಮತ್ತು ಅದು ಕ್ವಾಟ್ರೊ ಕಾಯಮ್ಮಾದ ನಾಲ್ಕು-ಚಕ್ರದ ಚಾಲನೆಯೊಂದಿಗೆ ಈಗ ಲಭ್ಯವಾಯಿತು; ಅದೇ ವೇಳೆಗೆ, 2.5 V6 TDI ಉನ್ನತ-ಕಾರ್ಯಕ್ಷಮತೆಯ ಮಾದರಿಯು, 180 PS (132 kW; 178 bhp) ಮತ್ತು ಪ್ರಮಾಣಕ ಕ್ವಾಟ್ರೊದೊಂದಿಗೆ ಪರಿಚಯಿಸಲ್ಪಟ್ಟಿತು. ಕ್ವಾಟ್ರೊದ ಈ ಪೀಳಿಗೆಯು, 50:50 ಅನುಪಾತದ ಮುಂಭಾಗದಿಂದ ಹಿಂಭಾಗದವರೆಗಿನ ಚಲನಶೀಲ ಟಾರ್ಕ್‌ ಭ್ರಾಮಕ ವಿತರಣೆಯ ಮೂಲಸ್ಥಿತಿಯನ್ನು ಒಳಗೊಳ್ಳುತ್ತದೆ. ಆಂಟಿ-ಲಾಕ್‌ ಬ್ರೇಕಿಂಗ್‌ ಸಿಸ್ಟಮ್‌ (ABS), ಬ್ರೇಕ್‌ ನೆರವು, ಮತ್ತು ಇಲೆಕ್ಟ್ರಾನಿಕ್‌ ಬ್ರೇಕ್‌ಫೋರ್ಸ್‌ ಡಿಸ್ಟ್ರಿಬ್ಯೂಷನ್‌‌ (EBD) ವಿಶಿಷ್ಟತೆಗಳನ್ನು ಒಳಗೊಂಡಿರುವ ಒಂದು ಬಾಷ್‌ ESP 5.7 ಇಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಮ್‌‌ (ESP) ವ್ಯವಸ್ಥೆಯು ಈ ಶ್ರೇಣಿಯಾದ್ಯಂತದ ಪ್ರಮಾಣಕ ಮಾದರಿಯಾಗಿತ್ತು. 2001ರ ಮಧ್ಯಭಾಗದಲ್ಲಿ ಆವಂತ್‌‌ ಆಗಮಿಸಿತು. 2002ರ ವರ್ಷಕ್ಕೆ ಸಂಬಂಧಿಸಿದಂತೆ, 1.8 ಟರ್ಬೋ ಎಂಜಿನ್‌‌ಗಳಲ್ಲಿನ ಶಕ್ತಿಯನ್ನು 163 PS (120 kW; 161 bhp) ಮತ್ತು 190 PS (140 kW; 187 bhp)ಗೆ ಆಡಿ ಕಂಪನಿಯು ಉನ್ನತೀಕರಿಸಿತು- ಇದು ಡಿಕ್ಕಿಯ ಮುಚ್ಚಳದ ಮೇಲಿನ ಒಂದು ಕೆಂಪು 'T' ವಿನ್ಯಾಸದಿಂದ ಸೂಚಿಸಲ್ಪಟ್ಟ 190 PS ರೂಪಾಂತರವಾಗಿದ್ದು, ಎರಡೂ ಸಹ ಕ್ವಾಟ್ರೊದೊಂದಿಗೆ ಲಭ್ಯವಿದ್ದವು, ಮತ್ತು 2.5 TDI ಮಧ್ಯಸ್ಥ ಆವೃತ್ತಿಯಿಂದ 163 PS (120 kW; 161 bhp)ವರೆಗಿನ ಶ್ರೇಣಿಯಲ್ಲಿದ್ದವು. ಇಂಧನ ಸ್ತರೀಕೃತ ಇಂಜೆಕ್ಷನ್‌‌ (ಫ್ಯೂಯೆಲ್‌‌ ಸ್ಟ್ರಾಟಿಫೈಡ್‌ ಇಂಜೆಕ್ಷನ್‌-FSI) ಜೊತೆಗಿನ ಒಂದು 2.0 ಎಂಜಿನ್‌ ಕೂಡಾ ಲಭ್ಯವಿತ್ತು. ಒಂದು ವರ್ಷದ ನಂತರ, S4 ಮಾದರಿಯನ್ನು ಆಡಿ ಕಂಪನಿಯು ಮರುಪರಿಚಯಿಸಿತು; ಈ ಬಾರಿ ಅದು ಒಂದು 344 PS (253 kW; 339 bhp) 4.2 L V8 ಎಂಜಿನ್‌‌‌‌‌‌‌ನಿಂದ ಚಾಲಿಸಲ್ಪಟ್ಟಿತ್ತು ಹಾಗೂ ಮಡಚು ಚಾವಣಿಯ ಕಾರಿನ ಪರಿವರ್ತಿಸಬಲ್ಲ ಒಂದು A4 ರೂಪಾಂತರವಾಗಿತ್ತು (ಟೈಪ್‌‌‌ 8H ). ಇದು 1998ರಿಂದ ಸ್ಥಗಿತಗೊಳಿಸಲ್ಪಟ್ಟಿದ್ದ 80-ಆಧರಿತ ಆಡಿ ಮಡಚು ಚಾವಣಿಯ ಕಾರನ್ನು ಅಂತಿಮವಾಗಿ ಬದಲಾಯಿಸಿತು. ಒಂದು ಎಲೆಕ್ಟ್ರೊ-ಹೈಡ್ರಾಲಿಕ್‌ ಚಾಲಿತ ಮೇಲ್ಛಾವಣಿಯನ್ನು ಇದು ಒಳಗೊಂಡಿದ್ದು, ಅದು 30 ಸೆಕೆಂಡುಗಳ ಒಳಗಾಗಿ ಕೆಳಗಿಳಿಸಲ್ಪಡುತ್ತಿತ್ತು, ಮತ್ತು ವಿನ್ಯಾಸಗಾರಿಕೆಯಲ್ಲಿನ ಕೆಲವೊಂದು ಬದಲಾವಣೆಗಳನ್ನು ಒಳಗೊಂಡಿತ್ತು; ಈ ಬದಲಾವಣೆಗಳೇ ಅಂತಿಮವಾಗಿ ಸಲೂನ್ ಕಾರಿನ‌‌ ಆವೃತ್ತಿಯಲ್ಲಿ ತಮ್ಮ ಹಾದಿಯನ್ನು ಕಂಡುಕೊಂಡವು (ಬಂಪರ್‌‌ನ ಕೆಳಭಾಗ ಹಾಗೂ ಸ್ಥಿರಪಟ್ಟಿಗಳ ಭಾಗಗಳು ಕಾರಿನ ಶರೀರದ ಬಣ್ಣದಿಂದ ಕೂಡಿದ್ದು ಇದಕ್ಕೆ ನಿದರ್ಶನವಾಗಿತ್ತು). LuKನಿಂದ ಅಭಿವೃದ್ಧಿಪಡಿಸಲ್ಪಟ್ಟ ಮಲ್ಟಿಟ್ರಾನಿಕ್‌‌ ಎಂಬ ಹೆಸರಿನ, ಒಂದು ನಿರಂತರವಾಗಿ ಬದಲಾಗುವ ಶಕ್ತಿ ಸಂವಹನ ವ್ಯವಸ್ಥೆಯನ್ನೂ ಸಹ ಆಡಿ ಪರಿಚಯಿಸಿತು; ಇದು ಮುಂಭಾಗದ-ಚಕ್ರ ಚಾಲನೆಯ ಮಾದರಿಗಳಲ್ಲಿನ ಬಳಕೆಯಲ್ಲಿಲ್ಲದ ಸಾಂಪ್ರದಾಯಿಕ ಸ್ವಯಂಚಾಲಿತ ಶಕ್ತಿ ಸಂವಹನ ವ್ಯವಸ್ಥೆಯನ್ನು ಬದಲಾಯಿಸಿತು. ಮೋಟಾರು ವಾಹನಕ್ಕೆ ಸಂಬಂಧಿಸಿದ ಪತ್ರಿಕಾ ವಲಯದಿಂದ ಶಕ್ತಿ ಸಂವಹನಾ ವ್ಯವಸ್ಥೆಯು ಗಣನೀಯ ಮಟ್ಟದಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿತು. ಇದು ಹೊಂದಿರುವ ಹಗುರ ತೂಕ ಹಾಗೂ ಪ್ರತಿಕ್ರಿಯೆಯಲ್ಲಿನ ಚುರುಕುತನದಿಂದಾಗಿ, ಪ್ರಪಂಚದಲ್ಲಿನ ಈ ಬಗೆಯ ವ್ಯವಸ್ಥೆಗಳಲ್ಲಿ ಅತ್ಯುತ್ತಮವೆಂದು ಸಾರ್ವತ್ರಿಕವಾಗಿ ಪರಿಗಣಿಸಲ್ಪಟ್ಟಿದೆ. ಉನ್ನತ ಬಲದ ಸರಪಳಿಯಿಂದ ಪ್ರೇರಿತವಾಗಿರುವ ಈ CVTಯು ಅತೀವವಾಗಿ ಬಾಳಿಕೆ ಬರುವ ಲೋಹಗಳಿಂದ ಮಾಡಲ್ಪಟ್ಟಿದೆ ಮತ್ತು ಒಂದು ಅತ್ಯಂತ ಉನ್ನತ ದರ್ಜೆಯ, ನಿರ್ದಿಷ್ಟ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿರುವ, ಸಂಪೂರ್ಣವಾಗಿ-ಸಂಶ್ಲೇಷಿಸಲ್ಪಟ್ಟಿರುವ ಕೀಲೆಣ್ಣೆಯನ್ನು ಇದು ಬಳಸಿಕೊಳ್ಳುತ್ತದೆ. ಒಂದು ನಯವಾದ ಮಡಿಕೆಯ ಸಾಲಿನ್ನು ಬಳಸುವ ಮೂಲಕ ಉನ್ನತ ಅಂಚಿನ ವಿಸ್ತರಣೆಯನ್ನು ತೆಗೆದುಹಾಕಲು, ಆಡಿ A6 ಮಾದರಿಯಿಂದ ಎರವಲು ಪಡೆದುಕೊಂಡ ಡಿಕ್ಕಿಯನ್ನು ಮರುವಿನ್ಯಾಸಗೊಳಿಸಲಾಯಿತು, ಮತ್ತು ಹಿಂಭಾಗದ ಹಗುರ ಜೋಡಣೆಗಳು ಈಗ ಮೇಲಿನ ಸಾಲಿನ ಭಾಗವಾಗಿ ರೂಪುಗೊಂಡವು. ವಿನ್ಯಾಸಗಾರಿಕೆಯ ಈ ಮಾರ್ಗಸೂಚಿಗಳನ್ನು ಅಂತಿಮವಾಗಿ ಐರೋಪ್ಯ ವಲಯದ ಹಾಗೂ ಏಷ್ಯಾದ ತಯಾರಕರು ಎರವಲು ಪಡೆದುಕೊಂಡರು. 'ಅಲ್ಟ್ರಾ ಸ್ಪೋರ್ಟ್‌' ಎಂಬ ಹೆಸರಿನ ಒಂದು "ಅತೀವವಾದ ಕ್ರೀಡಾ ವಿನ್ಯಾಸದ" ಮಾದರಿಯು, B7ನಿಂದ B6 ಮಾದರಿಯು ಬದಲಾಯಿಸಲ್ಪಡುವುದಕ್ಕೆ ಕೆಲದಿನಗಳು ಮುಂಚಿತವಾಗಿ ಉತ್ತರ ಅಮೆರಿಕಾದ ಮಾರುಕಟ್ಟೆಯಲ್ಲಿ ಪರಿಚಯಿಸಲ್ಪಟ್ಟಿತು. ಒಳಾಂಗಣದ ಅಲ್ಯೂಮಿನಿಯಂ ಸಜ್ಜಿಕೆ ಮತ್ತು ಬಾಗಿಲಿನ ಅಡಿಹಲಗೆಗಳು, "S ಶ್ರೇಣಿಯ" ಸ್ಟೀರಿಂಗ್‌‌ ಚಕ್ರ, ಮುಂಭಾಗದ ಮತ್ತು ಹಿಂಭಾಗದ ಸ್ಪಾಯಿಲರ್‌‌ ಸಾಧನಗಳು, ಪಾರ್ಶ್ವದ ಇಳಿಭಾಗಗಳು, ಮತ್ತು ಕ್ವಾಟ್ರೊ GmbH ವಿನ್ಯಾಸದ 18" RS4 ಮಿಶ್ರಲೋಹದ ರಸ್ತೆಚಕ್ರಗಳನ್ನು ಇದು ಒಳಗೊಂಡಿತ್ತು.

B6 ಎಂಜಿನ್‌‌‌ಗಳು

[ಬದಲಾಯಿಸಿ]

ಈ ಕೆಳಕಂಡ ಎಂಜಿನ್‌‌‌ಗಳು ಲಭ್ಯವಿದ್ದವು:

ಸಿಲಿಂಡರ್‌‌ ಗರಿಷ್ಟ ಶಕ್ತಿ
ಪೆಟ್ರೋಲ್‌‌ ಎಂಜಿನ್‌‌‌‌‌‌‌ಗಳು
ಎಲ್ಲವೂ ಇಂಧನ ಒಳಹೊಗಿಸಿದ ಮಾದರಿಗಳು
1-6 I4 102 PS (75 kW; 101 bhp)
2.0 20v I4 136 PS (100 kW; 134 bhp)
2.0 FSI I4 150 PS (110 kW; 148 bhp)
1.8T 20v I4 150 PS (110 kW; 148 bhp) ಅಥವಾ 163 PS (120 kW; 161 bhp)
1.8T 20v 'S ಶ್ರೇಣಿ' I4 180 PS (132 kW; 178 bhp) ಅಥವಾ 190 PS (140 kW; 187 bhp)
2.4 V6 30v V6 170 PS (125 kW; 168 bhp)
3.0 V6 30v V6 220 PS (162 kW; 217 bhp)
ಡೀಸೆಲ್‌‌ ಎಂಜಿನ್‌‌‌‌‌‌ಗಳು
ಎಲ್ಲವೂ ಅನಿಲಚಕ್ರ-ಚಾಲಿತ ನೇರ ಇಂಜೆಕ್ಷನ್‌‌ (TDI) ಮಾದರಿಗಳು
1.9 TDI I4 100 PS (74 kW; 99 bhp) ಅಥವಾ 115 PS (85 kW; 113 bhp) ಅಥವಾ 130 PS (96 kW; 128 bhp)
2.5 V6 TDI 24v V6 155 PS (114 kW; 153 bhp) ಅಥವಾ 163 PS (120 kW; 161 bhp) ಅಥವಾ 180 PS (132 kW; 178 bhp)

B6 ಸುರಕ್ಷತೆ

[ಬದಲಾಯಿಸಿ]

ಆಡಿ A4 (B6 & B7) ಮಾದರಿಯು ಯುರೋ NCAPಯ ಸುರಕ್ಷತೆ ಮತ್ತು ಬಡಿತದ ಪರೀಕ್ಷೆಗಳಲ್ಲಿ ತೇರ್ಗಡೆಯಾಯಿತು, ಮತ್ತು ಈ ಕೆಳಕಂಡ ಕಾರು ಸುರಕ್ಷತಾ ಶ್ರೇಯಾಂಕಗಳನ್ನು ಅದಕ್ಕೆ ನೀಡಲಾಯಿತು:[]

  • ಕಾರಿನಲ್ಲಿ ವಯಸ್ಕರಿಗೆ ಇರುವ ಅವಕಾಶ = 4/5 stars
  • ಪಾದಚಾರಿ = 1/4 stars (2002ಕ್ಕೆ ಮುಂಚಿನ ಶ್ರೇಯಾಂಕ)

ಎದುರುಮುಖದ ಬಡಿತದ ಪರೀಕ್ಷೆಯಲ್ಲಿ B6 ಮತ್ತು B7 ಮಾದರಿಗಳೆರಡಕ್ಕೂ IIHS ವತಿಯಿಂದ ಒಂದು "ಉತ್ತಮ" ಶ್ರೇಯಾಂಕವು ದೊರಕಿತು; B7 ಮಾದರಿಯ ಮುಂಭಾಗವು ರಾಚನಿಕವಾಗಿ ಹೋಲುವಂತಿದ್ದುದರಿಂದ, ಅದನ್ನು ಮರುಪರೀಕ್ಷೆ ಮಾಡಲಿಲ್ಲ.[]

B7 (ಟೈಪ್‌‌‌ 8E/8H, 2005–2008)

[ಬದಲಾಯಿಸಿ]
Audi A4 (B7)
Audi B7 A4 saloon
Production2004–2008
Model years2006–2008
Body style4-door saloon/sedan,
5-door Avant (estate/wagon),
2-door Cabriolet
PlatformVolkswagen Group B7 (PL46) platform
Enginepetrol engines:
1.6L I4
1.8L I4 20v Turbo
1.8L I4 16v TFSI
2.0L I4 20v
2.0L I4 16v TFSI
3.2L V6 24v FSI
diesel engines:
1.9L I4 TDI
2.0L I4 TDI
2.7L V6 TDI
3.0L V6 TDI
Transmission5 speed and 6-speed Manual
6-speed ZF 6 hp Tiptronic
7-speed Multitronic
Wheelbase2,648 mm (104.3 in)
Length4,586 mm (180.6 in),
Cabriolet: 4,573 mm (180.0 in)
Width1,772 mm (69.8 in),
Cabriolet: 1,777 mm (70.0 in)
Height1,427 mm (56.2 in),
Cabriolet: 1,518 mm (59.8 in)
RelatedAudi S4 (B7),
Audi RS4 (B7)
SEAT Exeo
ಆಡಿ A4 2.0T ಆವಂತ್‌‌ (US)
ಆಡಿ A4 2.0T ಮಡಚು ಚಾವಣಿಯ ಕಾರು (US)
ಆಡಿ A4 DTM ಆವೃತ್ತಿ

ಒಳವಲಯದಲ್ಲಿ ನೀಡಲಾದ B7 ಎಂಬ ಪದನಾಮದೊಂದಿಗೆ, 2004ರ ಅಂತ್ಯದ ವೇಳೆಗೆ ಒಂದು ಪರಿಷ್ಕೃತ A4 ಮಾದರಿಯನ್ನು ಆಡಿ ಪರಿಚಯಿಸಿತು.

ಆದಾಗ್ಯೂ, ಬಹಿರ್ಗಾಮಿ B6 ಮಾದರಿಯಿಂದ ಜನ್ಯವಾಗಿರುವ ಒಂದು ಆಧಾರ ಚೌಕಟ್ಟಾದ, ಚಾಲ್ತಿಯಲ್ಲಿರುವ ವೋಕ್ಸ್‌‌ವ್ಯಾಗನ್‌ B6 (PL46) ವೇದಿಕೆಯನ್ನು ಹೊಸ ಶ್ರೇಣಿಯ A4 ಮಾದರಿಗಳು ಇನ್ನೂ ಬಳಸಿಕೊಂಡವು; ಆದರೆ ಅತೀವವಾಗಿ ಪರಿಷ್ಕೃತಗೊಂಡ ಚಾಲನ ಸಜ್ಜಿಕೆಗಳು, ಅಕ್ಷಾಧಾರದ ಸಾಪೇಕ್ಷ ವಿನ್ಯಾಸ, ಆಂತರಿಕ ದಹನದ ಎಂಜಿನ್‌‌‌‌‌ನ ಹೊಸ ಶ್ರೇಣಿಗಳು, ಪಥ-ನಿರ್ದೇಶನ ವ್ಯವಸ್ಥೆಗಳು ಮತ್ತು ಆಧಾರ ಚೌಕಟ್ಟಿನ ವಿದ್ಯುನ್ಮಾನ ವ್ಯವಸ್ಥೆಗಳನ್ನು (ಒಂದು ಹೊಸ ಮುಂದುವರಿದ ಬಾಷ್‌ ESP 8.0 ಇಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಮ್‌‌ (ESP) ವ್ಯವಸ್ಥೆಯೂ ಸೇರಿದಂತೆ) ಅವು ಹೊಂದಿದ್ದವು. ಮುಂಭಾಗದ ಮುಂಜಾಲರಿ ಜೋಡಣೆಯು ಒಂದು ಎತ್ತರದ ತ್ರಾಪಿಜ್ಯದಂಥ ಆಕಾರಕ್ಕೆ ಬದಲಾವಣೆಗೊಂಡಿದ್ದು, ಇದು C6 (ಮೂರನೇ-ಪೀಳಿಗೆ) ಆಡಿ A6 ಮಾದರಿಯ ರೀತಿಯಲ್ಲಿಯೇ ಇದೆ.

ಆಡಿಯ ಆಂತರಿಕ ವೇದಿಕೆಯ ನಾಮಕರಣ ಪದ್ಧತಿಯು B6 ಮತ್ತು B7 ಆಧಾರ ಚೌಕಟ್ಟುಗಳೆರಡಕ್ಕೂ PL46 (ಪ್ಯಾ ಸೆಂಜರ್‌‌ ಕಾರ್‌‌ ಲಾಂ ಗಿಟ್ಯೂಡಿನಲ್‌ ಪ್ಲಾಟ್‌ಫಾರಂ, ಗಾತ್ರ 4 , ಪೀಳಿಗೆ 6 ) ಎಂಬ ಹೆಸರನ್ನು ಬಳಸುತ್ತದೆ. ಟೈಪ್‌‌‌ 8E ಮತ್ತು ಟೈಪ್‌‌‌ 8H ಎಂಬ ಆಂತರಿಕ ಪದನಾಮಗಳು B6 A4 ಶ್ರೇಣಿಯಿಂದಲೂ ಮುಂದುವರಿಸಲ್ಪಟ್ಟಿವೆಯಾದರೂ, ಈಗ ಅವು ಒಂದು ಹೆಚ್ಚುವರಿ ಗುರುತುಕಾರಕ ಉತ್ತರ ಪ್ರತ್ಯಯವನ್ನು ಹೊಂದಿವೆ - ಅಂದರೆ, ಸಲೂನ್ ಕಾರಿಗೆ 8EC, ಆವಂತ್‌‌ಗೆ 8ED, ಮತ್ತು ಮಡಚು ಚಾವಣಿಯ ಕಾರಿಗೆ 8HE ಎಂಬ ಹೆಚ್ಚುವರಿ ಪದಗಳು ಸೇರಿಕೊಂಡಿವೆ. ಅನೇಕ ಸೇರ್ಪಡೆಗಳನ್ನು ಎಂಜಿನ್‌‌‌ ಶ್ರೇಣಿಯು ಸ್ವೀಕರಿಸಿದೆ. 2005ರಲ್ಲಿ, 2.0 TFSI ಮತ್ತು 3.2 V6 FSI ಪೆಟ್ರೋಲ್‌‌/ಗ್ಯಾಸೋಲಿನ್‌‌ ಎಂಜಿನ್‌‌‌ಗಳ ಮೇಲೆ ಆದ ಇಂಧನ ಸ್ತರೀಕೃತ ಇಂಜೆಕ್ಷನ್‌‌‌‌‌‌ನ (ಫ್ಯೂಯೆಲ್‌ ಸ್ಟ್ರಾಟಿಫೈಡ್‌ ಇಂಜೆಕ್ಷನ್‌‌-FSI) ಪರಿಚಯ ಮತ್ತು ಇತರ ಪರಿಷ್ಕರಣೆಗಳು, ಶಕ್ತಿ ಫಲಿತವನ್ನು ಕ್ರಮವಾಗಿ 200 PS (147 kW; 197 bhp) ಮತ್ತು 255 PS (188 kW; 252 bhp)ಗೆ ಹೆಚ್ಚಿಸಿದವು. ಈ ಎರಡೂ ಎಂಜಿನ್‌‌‌ಗಳು ಪ್ರತಿ ಸಿಲಿಂಡರ್‌‌‌‌ಗೆ ನಾಲ್ಕು-ಕವಾಟವಿರುವ ಒಂದು ವಿನ್ಯಾಸವನ್ನು ಅಳವಡಿಸಿಕೊಂಡಿವೆ. ಮುಂಚಿನ 5-ಕವಾಟದ ವಿನ್ಯಾಸವು FSI ನೇರ ಇಂಜೆಕ್ಷನ್‌‌ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳಲಿಲ್ಲ (ಈಗ ನೇರವಾಗಿ ದಹನದ ಅಂಕಣಕ್ಕೆ ವಿಸರ್ಜಿಸುತ್ತಿರುವ, ಇಂಧನ ಅಂತಃಕ್ಷೇಪಕದ ನೆಲೆಯು ಇದಕ್ಕೆ ಕಾರಣವಾಗಿತ್ತು). 2.0 ಅನಿಲಚಕ್ರ-ಚಾಲಿತ ನೇರ ಇಂಜೆಕ್ಷನ್‌‌‌‌‌‌ನ (ಟರ್ಬೋಚಾರ್ಜ್‌ಡ್‌ ಡೈರೆಕ್ಟ್‌ ಇಂಜೆಕ್ಷನ್‌-TDI) ಡೀಸೆಲ್‌‌ ಎಂಜಿನ್‌‌‌ ಈಗ ಮೊದಲ ಬಾರಿಗೆ, 16 ಕವಾಟಗಳೊಂದಿಗೆ ಪಂಪೆ ಡ್ಯೂಸ್‌‌ (ಘಟಕ ಅಂತಃಕ್ಷೇಪಕ) (PD) ತಂತ್ರಜ್ಞಾನವನ್ನು ಸಂಯೋಜಿಸಿದ್ದರೆ, ಅದೇ ವೇಳೆಗೆ ದೊಡ್ಡದಾದ 2.5 TDI V6 ಡೀಸೆಲ್‌‌ ಎಂಜಿನ್‌‌ನ ಜಾಗವನ್ನು ಒಂದು 3.0 V6 TDI ಎಂಜಿನ್‌‌ ‌ಆಕ್ರಮಿಸಿದೆ; ಇದರಿಂದಾಗಿ 2005ರ ವರ್ಷದ ಅವಧಿಯಲ್ಲಿ ಒಂದು 204 PS (150 kW; 201 bhp) ಮಾದರಿಯು ಹೊರಹೊಮ್ಮಿದ್ದು, ಇದನ್ನು 2006ರಲ್ಲಿ ಒಂದು 233 PS (171 kW; 230 bhp) ಮಾದರಿಯಾಗಿ ಉನ್ನತೀಕರಿಸಲಾಯಿತು. ಒಂದು 2.7 V6 TDIಯನ್ನು ನಂತರ ಸೇರ್ಪಡೆ ಮಾಡಲಾಯಿತು. ಟಾರ್ಸನ್‌‌ T-2 ಆಧರಿತ ಕ್ವಾಟ್ರೊ ಕಾಯಮ್ಮಾದ ನಾಲ್ಕು-ಚಕ್ರ ಚಾಲನೆಯು, ಬಹುಪಾಲು A4 ಮಾದರಿಗಳಲ್ಲಿ ಉಳಿದುಕೊಂಡಿದೆ. ಒಂದು ಹೊಸ ಗೆಟ್‌ರ್ಯಾಗ್‌‌ 6-ವೇಗದ ಸಂವಹನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಆಡಿ ಕಂಪನಿಯು ತನ್ನ 5-ವೇಗದ ಕೈಚಾಲಿತ ಶಕ್ತಿ ಸಂವಹನಗಳನ್ನು ಹಿಂತೆಗೆದುಕೊಂಡಿದೆ. ಹಿಂದೆ ಇದ್ದ ರೀತಿಯಲ್ಲಿ, ಮಲ್ಟಿಟ್ರಾನಿಕ್‌‌ ನಿರಂತರವಾಗಿ ಬದಲಾಗುವ ಶಕ್ತಿ ಸಂವಹನವು (ಕಂಟಿನ್ಯುಯಸ್ಲಿ ವೇರಿಯಬಲ್‌ ಟ್ರಾನ್ಸ್‌‌ಮಿಷನ್‌-CVT), ಈಗ ಆಯ್ಕೆಮಾಡಬಹುದಾದ 'ಏಳು ವೇಗಗಳೊಂದಿಗೆ' ಮುಂಭಾಗ-ಚಕ್ರ ಚಾಲನೆಯ ಮಾದರಿಗಳ ಮೇಲೆ ಲಭ್ಯವಿದ್ದರೆ, ಒಂದು ಸಾಂಪ್ರದಾಯಿಕ ZF 6HP 6-ವೇಗದ ಟಿಪ್ಟ್ರೋನಿಕ್‌‌ ಸ್ವಯಂಚಾಲಿತ ಶಕ್ತಿ ಸಂವಹನವು ಕ್ವಾಟ್ರೊ ನಾಲ್ಕು-ಚಕ್ರ ಚಾಲನೆಯ ಮಾದರಿಗಳ ಮೇಲೆ ಲಭ್ಯವಿದೆ. B6 S4 ಮಾದರಿಯಿಂದ ಶಕ್ತಿಸಾಗಣೆಯನ್ನು ಮುಂದುವರಿಸಿಕೊಂಡು ಬಂದಿರುವ ಉನ್ನತ-ಕಾರ್ಯಕ್ಷಮತೆಯ ಆಡಿ S4 ಜೊತೆಯಲ್ಲಿ, ಆಡಿ ಕಂಪನಿಯು ಅತ್ಯಂತ-ಉನ್ನತ ಕಾರ್ಯಕ್ಷಮತೆಯ, ಕ್ವಾಟ್ರೊ GmbHನಿಂದ ಅಭಿವೃದ್ಧಿಪಡಿಸಲ್ಪಟ್ಟ ಆಡಿ RS4ನ್ನು (RS ಎಂಬುದು ರೆ ನ್‌‌‌‌‌‌ಸ್ಪೋ ರ್ಟ್‌ ಎಂಬುದರ ಸಂಕ್ಷಿಪ್ತ ರೂಪ) ಶ್ರೇಣಿಗೆ ಮರು-ಪರಿಚಯಿಸಿತು; ಇದು ಮೊದಲ ಬಾರಿಗೆ ಸಲೂನ್ ಕಾರು‌‌/ಮುಚ್ಚುಕಾರು‌ ಮತ್ತು ಮಡಚು ಚಾವಣಿಯ ಕಾರುಗಳ ಶರೀರದ ಮೇಲೆ ನಡೆಯಿತು, ಮತ್ತು ಒಂದು ಸಹಜವಾಗಿ ಹೀರಿತೆಗೆದ, ಆದರೆ ಹೆಚ್ಚು-ಪರಿಭ್ರಮಿಸುವ 4.2 ಲೀಟರ್‌‌‌ ಸಾಮರ್ಥ್ಯದ V8 FSI ಎಂಜಿನ್‌‌‌ನ್ನು ಅದು ಒಳಗೊಂಡಿತ್ತು. ಇತ್ತೀಚಿನ ಪೀಳಿಗೆಯ ಟಾರ್ಸನ್‌‌ T-3 ಕ್ವಾಟ್ರೊ 4wd ವ್ಯವಸ್ಥೆಯು RS4 ಮೇಲಿನ ಮತ್ತೊಂದು ಗಮನಾರ್ಹ ಒಳಗೂಡಿಸುವಿಕೆಯಾಗಿದ್ದು, ಇದು ಒಂದು 'ಮೂಲಸ್ಥಿತಿಯ', ಅಸಮಪಾರ್ಶ್ವದ 40:60 ಅನುಪಾತದ, ಮುಂಭಾಗ-ಹಿಂಭಾಗದ ಚಲನಶೀಲ ಟಾರ್ಕ್‌ ಭ್ರಾಮಕ ವಿತರಣಾ ಭಾರದಾಣಿಯನ್ನು ಬಳಸುತ್ತದೆ. ಅಸಮಪಾರ್ಶ್ವದ ಕೇಂದ್ರದ ಈ ಹೊಸ ಭೇದಾತ್ಮಕ ವ್ಯವಸ್ಥೆಯು ಆರಂಭಿಕವಾಗಿ RS4 ಮೇಲೆ ಮಾತ್ರವೇ ಲಭ್ಯವಿತ್ತಾದರೂ, ಒಂದು ವರ್ಷದ ನಂತರ S4 ಮೇಲೂ ಅದನ್ನು ಸೇರ್ಪಡೆ ಮಾಡಲಾಯಿತು. B7 A4 ಶ್ರೇಣಿಯ ಉಳಿದಭಾಗವು T-2 50:50 ಅನುಪಾತದ ಮೂಲಸ್ಥಿತಿಯ ಚಲನಶೀಲ ಸೀಳುಕೇಂದ್ರದ ಡಿಫರೆನ್ಷಿಯಲ್‌ನ್ನು ಬಳಸಿಕೊಂಡಿತು. ಕ್ವಾಟ್ರೊ GmbHನಿಂದ ಅಭಿವೃದ್ಧಿಪಡಿಸಲ್ಪಟ್ಟ "ಆಡಿ A4 DTM ಆವೃತ್ತಿ" ಎಂಬ ಹೆಸರಿನ ಒಂದು ಸೀಮಿತ ಆವೃತ್ತಿಯ ರೂಪಾಂತರವು 2005ರ ಮೇ ತಿಂಗಳಲ್ಲಿ ಮೊದಲು ಪರಿಚಯಿಸಲ್ಪಟ್ಟಿತು. 2004ರ ಡ್ಯೂಷೆ ಟೂರೆನ್‌ವ್ಯಾಗನ್‌ ಮಾಸ್ಟರ್ಸ್‌‌‌‌ನ, ಆಡಿ ಕಂಪನಿಯ ಓಟದ ಪಂದ್ಯದ ಕಾರುಗಳಿಂದ ಇದು ಪ್ರೇರಿತವಾಗಿತ್ತು ಮತ್ತು ಒಂದು ನಿಯತವಾದ ಆಯ್ಕೆಯಾಗಿ 2006ರಲ್ಲಿ ಮರು-ಪರಿಚಯಿಸಲ್ಪಟ್ಟಿತು. 2.0T FSI ಎಂಜಿನ್‌‌‌ ECUಗೆ ಪರಿಷ್ಕೃತ ತಂತ್ರಾಂಶದ ವಿನ್ಯಾಸವನ್ನು ಕೈಗೊಳ್ಳಲಾಯಿತು; ಇದು ಫಲಿತವನ್ನು ಟಾರ್ಕ್‌ ಭ್ರಾಮಕದ 220 PS (162 kW; 217 bhp) ಮತ್ತು 300 N⋅m (221 lb⋅ft)ಕ್ಕೆ ಹೆಚ್ಚಿಸಿತು. ಮುಂಭಾಗದ-ಚಕ್ರ ಚಾಲನೆ, ಅಥವಾ ಕ್ವಾಟ್ರೊ ನಾಲ್ಕು-ಚಕ್ರ ಚಾಲನೆಯೊಂದಿಗೆ ಇದು ಲಭ್ಯವಿತ್ತು. B7 ಮಡಚು ಚಾವಣಿಯ ಕಾರಿನ ಮಾದರಿಯು ಇತರ ಎರಡು ಶರೀರ ರೂಪಾಂತರಗಳಿಗಿಂತ ತಡವಾಗಿ ಆಗಮಿಸಿತು ಮತ್ತು ಇದರ ಮಾರಾಟಗಳು 2006ರ ಫೆಬ್ರುವರಿಯಲ್ಲಿ ಪ್ರಾರಂಭವಾಯಿತು. ಒಂದು ಪ್ರವೇಶ-ಮಟ್ಟದ 2.0 TDI ಆವೃತ್ತಿಯು ಮಡಚು ಚಾವಣಿಯ ಕಾರಿನಲ್ಲಿನ ಒಂದು ಹೊಸ ಅಂಶವಾಗಿತ್ತು, ಆದರೆ ಇಂದಿನವರೆಗೆ ಮಲ್ಟಿಟ್ರಾನಿಕ್‌‌ CVT ಗೇರ್‌‌ಪೆಟ್ಟಿಗೆಯೊಂದಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿಲ್ಲ. 2007ರ ಸ್ವೀಡಿಷ್‌‌ ವಾಹನ ತಪಾಸಣಾ ದತ್ತಾಂಶದ ಅನುಸಾರ, ಡೀಸೆಲ್‌‌ ಎಂಜಿನ್‌‌‌‌ನೊಂದಿಗಿನ ಆಡಿ A4 ಆವಂತ್‌ ಮಾದರಿಯು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ವಿಶ್ವಾಸಾರ್ಹ ವಾಹನವಾಗಿದ್ದು, 3 ವರ್ಷದಷ್ಟು ಹಳೆಯ ವರ್ಗದಲ್ಲಿ 0.0%ನಷ್ಟು ವಾಹನ ತಪಾಸಣೆಯ ನಿರಾಕರಣ ಪ್ರಮಾಣವನ್ನು ಇದು ಹೊಂದಿದೆ.[] (ದಯವಿಟ್ಟು ಗಮನಿಸಿ: ಮಿಟ್ಸುಬಿಷಿ ಗ್ಯಾಲಂಟ್‌ ಎಸ್ಟೇಟ್‌‌, ವೋಕ್ಸ್‌‌ವ್ಯಾಗನ್‌ ಟೌವಾರೆಗ್‌‌ ಮತ್ತು ಟಯೋಟಾ ಹೈಏಸ್‌‌ ಟ್ರಾವೆಲರ್‌‌‌ ಮಾದರಿಗಳು 0.0%ನಷ್ಟಿರುವ ನಿರಾಕರಣ ಪ್ರಮಾಣವನ್ನು ಹಂಚಿಕೊಳ್ಳುತ್ತವೆಯಾದರೂ, A4ನ ಫಲಿತಾಂಶವು 111,000 kilometres (69,000 mi)ಗೂ ಹೆಚ್ಚಿನ ಸರಾಸರಿ ಕ್ರಮಿತ ಮೈಲಿಯೊಂದಿಗೆ ಸಾಧಿಸಲ್ಪಟ್ಟಿದ್ದರೆ, 0.0%ನಷ್ಟಿರುವ ನಿರಾಕರಣ ಪ್ರಮಾಣವನ್ನು ಸಾಧಿಸುವ ಇತರ ಕಾರುಗಳಿಗೆ ಸಂಬಂಧಿಸಿದ ಸರಾಸರಿ ಕ್ರಮಿತ ಮೈಲಿಯು 71,000 km (44,000 mi) ಮತ್ತು 77,000 km (48,000 mi)ರ ನಡುವಣ ಇರುತ್ತದೆ.) ಇದರ ಉತ್ತರಾಧಿಕಾರಿಯಾದ ಹೊಸ B8 A4 ಶ್ರೇಣಿಯು ಪರಿಚಯಿಸಲ್ಪಟ್ಟಾಗ, B7 ಶ್ರೇಣಿ A4ನ್ನು ರದ್ದಿಯಾತಿಗಾಗಿ ಉದ್ದೇಶಿಸಿ ತೆಗೆದಿಡಲಾಗಿರಲಿಲ್ಲ - ಇದನ್ನು 2008ರಲ್ಲಿ ಮರುವಿನ್ಯಾಸಗೊಳಿಸಿ SEAT ಎಕ್ಸಿಯೊ ಎಂಬುದಾಗಿ ಮರುನಾಮಕರಣ ಮಾಡಲಾಯಿತು; ಮುಂಭಾಗ ಮತ್ತು ಹಿಂಭಾಗಗಳಿಗೆ ಆದ ವಿನ್ಯಾಸಗಾರಿಕೆಯ ಬದಲಾವಣೆಗಳು, A4 ಮಡಚು ಚಾವಣಿಯ ಕಾರಿನಿಂದ ಪಡೆಯಲಾದ ಆಂತರಿಕ ಸಜ್ಜಿಕೆಯ ಅಳವಡಿಕೆ ಈ ಕ್ರಮಗಳು ಇದರಲ್ಲಿ ಸೇರಿದ್ದವು. ಆಡಿ B7 A4ರ ಸಮಗ್ರ ಉತ್ಪಾದನಾ ಶ್ರೇಣಿಯನ್ನು ಆಡಿ ಕಂಪನಿಯ ಇಂಗ್ಲೊಸ್ಟಾಟ್‌ ಘಟಕದಿಂದ ಕಳಚಿಹಾಕಲಾಯಿತು ಮತ್ತು ಸ್ಪೇನ್‌‌‌‌ನ ಮಾರ್ಟೊರೆಲ್‌‌‌ ಎಂಬಲ್ಲಿರುವ, ವೋಕ್ಸ್‌‌ವ್ಯಾಗನ್‌ ಸಮೂಹಕ್ಕೆ ಸಂಬಂಧಿಸಿದ SEAT ಕಾರ್ಖಾನೆಗೆ ಅದನ್ನು ಕಳಿಸಲಾಯಿತು.[]

B7 ಎಂಜಿನ್‌‌‌ಗಳು

[ಬದಲಾಯಿಸಿ]

ಈ ಕೆಳಗೆ ನಮೂದಿಸಿರುವ ಆಂತರಿಕ ದಹನದ ಎಂಜಿನ್‌‌‌‌‌‌ಗಳು ಲಭ್ಯವಿದ್ದವು:

ಎಂಜಿನ್‌‌‌ ಬಗೆ
ಚಾಲನೆ
ಗರಿಷ್ಟ ಶಕ್ತಿ ಸಲೂನ್ ಕಾರು‌‌ ಆವಂತ್‌‌ ಮಡಚು ಚಾವಣಿಯ ಕಾರು 0-100 km/h (62 mph)
(ಸಲೂನ್ ಕಾರು‌‌)
ಉನ್ನತ ವೇಗ
(ಸಲೂನ್ ಕಾರು‌‌)
ಪೆಟ್ರೋಲ್‌‌ ಎಂಜಿನ್‌‌‌‌ಗಳು
ಎಲ್ಲವೂ ಇಂಧನ ಒಳಹೊಗಿಸಿದ ಮಾದರಿಗಳು
1.6 102 PS (75 kW; 101 bhp) 12.6 ಸೆಕೆಂಡು 108.1 mph (174 km/h)
2.0 130 PS (96 kW; 128 bhp) 9.9 ಸೆಕೆಂಡು 124.5 mph (200 km/h)
1.8T 163 PS (120 kW; 161 bhp) 8.6 ಸೆಕೆಂಡು 133.6 mph (215 km/h)
1.8T ಕ್ವಾಟ್ರೊ 163 PS (120 kW; 161 bhp) 8.7 ಸೆಕೆಂಡು 133.6 mph (215 km/h)
2.0T FSI 200 PS (147 kW; 197 bhp) 7.3 ಸೆಕೆಂಡು 137 mph (220 km/h)
2.0T FSI ಕ್ವಾಟ್ರೊ 200 PS (147 kW; 197 bhp) 7.2 ಸೆಕೆಂಡು 135.5 mph (218 km/h)
2.0T FSI DTM ಆವೃತ್ತಿ 220 PS (162 kW; 217 bhp) 7.1 ಸೆಕೆಂಡು 141.7 mph (228 km/h)
3.2 V6 FSI 256 PS (188 kW; 252 bhp) 6.8 ಸೆಕೆಂಡು 155 ಮೈಲು ಪ್ರತಿ ಗಂಟೆಗೆ(ವಿದ್ಯುತ್‌‌ ಸೀಮಿತ)
3.2 V6 FSI ಕ್ವಾಟ್ರೊ 256 PS (188 kW; 252 bhp) 6.4 ಸೆಕೆಂಡು 155 ಮೈಲು ಪ್ರತಿ ಗಂಟೆಗೆ (ವಿದ್ಯುತ್‌‌ ಸೀಮಿತ)
ಡೀಸೆಲ್‌‌ ಎಂಜಿನ್‌‌‌‌‌‌‌ಗಳು
ಎಲ್ಲವೂ ಅನಿಲಚಕ್ರ-ಚಾಲಿತ ನೇರ ಇಂಜೆಕ್ಷನ್‌‌ (ಟರ್ಬೋಚಾರ್ಜ್‌ಡ್‌ ಡೈರೆಕ್ಟ್‌ ಇಂಜೆಕ್ಷನ್‌-TDI) ಮಾದರಿಗಳು
1.9 TDI 115 PS (85 kW; 113 bhp) 11.2 ಸೆಕೆಂಡು 115 mph (185 km/h)
2.0 TDI 140 PS (103 kW; 138 bhp) 9.7 ಸೆಕೆಂಡು 127.5 mph (205 km/h)
2.0 TDI 170 PS (125 kW; 168 bhp) 8.6 ಸೆಕೆಂಡು 134.2 mph (216 km/h)
2.0 TDI ಕ್ವಾಟ್ರೊ 170 PS (125 kW; 168 bhp) 8.5 ಸೆಕೆಂಡು 133.2 mph (214 km/h)
2.7 V6 TDI 180 PS (132 kW; 178 bhp) 8.4 ಸೆಕೆಂಡು 134.8 mph (217 km/h)
3.0 V6 TDI ಕ್ವಾಟ್ರೊ 233 PS (171 kW; 230 bhp) 6.8 ಸೆಕೆಂಡು 143 mph (230 km/h)

ಒಂದು 2.0 TDI SLine ವಿಶೇಷ ಆವೃತ್ತಿಯ ಆಯ್ಕೆಗೂ ಅಲ್ಲಿ ಅವಕಾಶವಿದ್ದು, ಅದು ಉನ್ನತ ವೇಗವನ್ನು ಗಂಟೆಗೆ 154 ಮೈಲುಗಳಿಗೆ ಹೆಚ್ಚಿಸಿತು.[ಸೂಕ್ತ ಉಲ್ಲೇಖನ ಬೇಕು]

B7 ಸುರಕ್ಷತೆ

[ಬದಲಾಯಿಸಿ]

ಆಡಿ A4 ಮಾದರಿಯು ಅನೇಕ ಪ್ರಮಾಣಕ ಸುರಕ್ಷತಾ ಲಕ್ಷಣಗಳನ್ನು ಒದಗಿಸುತ್ತದೆ. ಅವುಗಳೆಂದರೆ: ಆಂಟಿ-ಲಾಕ್‌ ಬ್ರೇಕಿಂಗ್‌ ಸಿಸ್ಟಮ್‌ (ABS) ಜೊತೆಗಿನ ಬಾಷ್‌ ESP 8.0 ಇಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಮ್‌‌ (ESP), ಆಸನಗಳಲ್ಲಿನ ಪಾರ್ಶ್ವ ಗಾಳಿಚೀಲಗಳು, 'ಪಾರ್ಶ್ವರಕ್ಷಣೆಯ' ಪರದೆಯ ಗಾಳಿಚೀಲಗಳು, ಮತ್ತು ಅದರ ಐಚ್ಛಿಕ ಅಂಶವಾದ ಕ್ವಾಟ್ರೊ ನಾಲ್ಕು-ಚಕ್ರ ಚಾಲನೆಯ ವ್ಯವಸ್ಥೆ. ಇನ್ಷೂರೆನ್ಸ್‌ ಇನ್‌‌ಸ್ಟಿಟ್ಯೂಟ್‌ ಫಾರ್‌ ಹೈವೇ ಸೇಫ್ಟಿ (IIHS) ವತಿಯಿಂದ ನೀಡಲಾದ "ಟಾಪ್‌ ಸೇಫ್ಟಿ ಪಿಕ್‌ ಫಾರ್‌ 2007" ಎಂಬ ಮಾನ್ಯತೆಯನ್ನೂ ಇದು ಸ್ವೀಕರಿಸಿತು.[೧೦][೧೧] B6 ಮಾದರಿಗೆ ಸಂಬಂಧಿಸಿದ ಯುರೋNCAPಯ ಬಡಿತದ ಪರೀಕ್ಷಾ ಫಲಿತಾಂಶಗಳು B7 ಮಾದರಿಗೂ ಅನ್ವಯಿಸುತ್ತವೆ.

B8 (ಟೈಪ್‌‌‌ 8K, 2008ರಿಂದ–ಇಂದಿನವರೆಗೆ)

[ಬದಲಾಯಿಸಿ]
Audi A4 (B8)
Audi A4 sedan (B8)
Production2008–present
Model years2009–present
AssemblyIngolstadt, Germany[೧೨]
Aurangabad, India (CKD)[೧೩]
Body style4-door saloon/sedan,
5-door Avant (estate/wagon)
PlatformVolkswagen Group B8 (MLB/MLP) platform
Enginepetrol engines:
1.8L TFSI I4
2.0L TFSI I4
3.2L V6 FSI
diesel engines:
2.0L TDI I4
2.7L V6 TDI
3.0L V6 TDI
Transmission6-speed Manual
6-speed Tiptronic
7-speed S tronic
8-speed Multitronic
Wheelbase2,808 mm (110.6 in)
allroad: 2,805 mm (110.4 in)
LWB: 2,869 mm (113.0 in)
Length4,703 mm (185.2 in)
allroad: 4,721 mm (185.9 in)
LWB: 4,763 mm (187.5 in)
Width1,826 mm (71.9 in)
allroad: 1,841 mm (72.5 in)
Height1,427 mm (56.2 in)
Avant: 1,436 mm (56.5 in)
allroad: 1,495 mm (58.9 in)
LWB: 1,426 mm (56.1 in)
RelatedAudi A5
Audi S4 (B8)
Audi Q5

B8 ಶ್ರೇಣಿ A4ರ ಮೊದಲ ಅಧಿಕೃತ ಚಿತ್ರಗಳನ್ನು ಆಡಿ ಕಂಪನಿಯು 2007ರ ಆಗಸ್ಟ್‌ನಲ್ಲಿ ಬಿಡುಗಡೆಮಾಡಿತು, ಮತ್ತು 2007ರ ಸೆಪ್ಟೆಂಬರ್‌‌‌‌ನಲ್ಲಿ ನಡೆದ ಫ್ರಾಂಕ್‌‌ಫರ್ಟ್‌ ಮೋಟಾರು ಪ್ರದರ್ಶನದಲ್ಲಿ ಕಾರನ್ನು ಸಾರ್ವಜನಿಕರಿಗಾಗಿ ಅನಾವರಣಗೊಳಿಸಿತು. ಸಲೂನ್ ಕಾರು‌‌/ಮುಚ್ಚುಕಾರು‌ ಮತ್ತು ಆವಂತ್‌‌ (ಎಸ್ಟೇಟ್‌‌/ವ್ಯಾಗನ್‌‌) ಮಾದರಿಗಳನ್ನು ಇಲ್ಲಿ ಪ್ರಸ್ತುತಪಡಿಸಲಾಯಿತು. 2008ರ ಮಾರ್ಚ್‌ನಲ್ಲಿ ನಡೆದ ಜಿನಿವಾ ಮೋಟಾರು ಪ್ರದರ್ಶನದಲ್ಲಿ ಆವಂತ್‌ ಮಾದರಿಯನ್ನು ಸಾರ್ವಜನಿಕರಿಗಾಗಿ ಅನಾವರಣಗೊಳಿಸಲಾಯಿತು.

ಭೂಮಿಯ ಮೇಲಿನ ವೇಗದ ದಾಖಲೆ

[ಬದಲಾಯಿಸಿ]

2009ರಲ್ಲಿ, ಹೋಹೆನ್‌‌ಎಸ್ಟರ್‌ ಸ್ಪೋರ್ಟ್‌ ಕಂಪನಿಯು ತನ್ನ ರೂಪಾಂತರಿತ HS 650 ಆಡಿ B7 A4 ಕ್ವಾಟ್ರೊ ಮಾದರಿಯು, ಪ್ಯಾಪೆನ್‌‌ಬರ್ಗ್‌ ಎಂಬಲ್ಲಿನ ಪರೀಕ್ಷಾಪಥದಲ್ಲಿ 364.6 km/h (226.6 mph)ನಷ್ಟಿರುವ ಒಂದು ಹೊಸ ವೇಗ ದಾಖಲೆಯನ್ನು ವಿಶ್ವ ಮಟ್ಟದಲ್ಲಿ ಸ್ಥಾಪಿಸಿದ್ದು, ಇದು ಜೈವಿಕ ಅನಿಲ-ಚಾಲಿತ ಕಾರುಗಳ ಪೈಕಿಯ ಅತ್ಯಂತ ವೇಗದ ದಾಖಲೆಯಾಗಿದೆ ಎಂದು ಘೋಷಿಸಿತು; ಜೂರ್ಗನ್‌‌ ಹೋಹೆನ್‌‌ಎಸ್ಟರ್‌ ಎಂಬಾತ ಈ ಕಾರಿನ ಚಾಲಕನಾಗಿದ್ದ. ಸದರಿ ವಾಹನವು 3.0 ಲೀಟರ್‌‌‌ ಸಾಮರ್ಥ್ಯದ ಒಂದು ಅವಳಿ-ಟರ್ಬೋ V6 ಎಂಜಿನ್‌‌‌‌‌ನ್ನು ಒಳಗೊಂಡಿದ್ದು, ಅದು ವಿದ್ಯುನ್ಮಾನೀಯವಾಗಿ ಸೀಮಿತವಾಗಿರುವ 700 PS (515 kW; 690 bhp) ಶ್ರೇಯಾಂಕವನ್ನು ಹೊಂದಿದೆ.[೧೪]

ಆಡಿ ಸ್ಪೋರ್ಟ್‌ A4 DTM

[ಬದಲಾಯಿಸಿ]

ಆಡಿ A4 DTM ಎಂದು ಕರೆಯಲ್ಪಡುವ, A4 ಸಲೂನ್ ಕಾರನ್ನು ಹೋಲುವಂತಿರುವ, ಒಂದು V8 ಎಂಜಿನ್‌‌‌ನ್ನು ಹೊಂದಿರುವ ಸಿಲೂಯೇಟ್‌ ರೇಸಿಂಗ್‌‌‌ ಕಾರಿನೊಂದಿಗೆ 2004ರಲ್ಲಿ ನಡೆದ ಡ್ಯೂಷೆ ಟೂರೆನ್‌ವ್ಯಾಗನ್‌ ಮಾಸ್ಟರ್ಸ್‌‌ (DTM) ಸರಣಿಯನ್ನು (ಎಬಿಟಿ ಸ್ಪೋರ್ಟ್ಸ್‌ಲೈನ್‌‌ ಆಡಿ TT-R ಮಾದರಿಯನ್ನು ಓಡಿಸುವುದಕ್ಕೆ ಸಜ್ಜಿತ ಖಾಸಗಿ ತಂಡಗಳಿಗೆ ಅವಕಾಶ ಕಲ್ಪಿಸಿದ ನಂತರ) ಆಡಿ ಸ್ಪೋರ್ಟ್‌ ಮರು-ಪ್ರವೇಶಿಸಿತು.[೧೫] ಹಿಂದಿನ ನಿದರ್ಶನಗಳಲ್ಲಿ, ಮೂಲ ಆಡಿ V8 ಕ್ವಾಟ್ರೊದೊಂದಿಗೆ ಒಂದು V8 ಎಂಜಿನ್‌‌‌ನ್ನು ಸದರಿ ಸರಣಿಯಲ್ಲಿ ಆಡಿ ಕಂಪನಿಯು ಬಳಸಿತ್ತು; ಆದರೆ ಯಾವುದೇ ಸಂಪನ್ಮೂಲಗಳನ್ನು ಹೊಂದಿಲ್ಲದ ಒಂದು ಅತೀವವಾಗಿ ಸಜ್ಜುಗೊಳಿಸಲಾದ V8ನ್ನು ಆಯ್ದುಕೊಂಡಿತ್ತು. ಆದ್ದರಿಂದ ಹೋಂಡಾ ಕಂಪನಿಯನ್ನು ಸಂಪರ್ಕಿಸಲಾಯಿತು; ಆ ಸಮಯದಲ್ಲಿ ಅವರು ಇಂಡಿ ರೇಸಿಂಗ್‌ ಲೀಗ್‌‌‌‌ನಲ್ಲಿ (IRL) V8 ಎಂಜಿನುಗಳನ್ನು ಬಳಸುತ್ತಿದ್ದರು. ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಇದೇ ರೀತಿಯ ಒಂದು ವಿಶಿಷ್ಟ ಲಕ್ಷಣವನ್ನು ಆಡಿ ಕಂಪನಿಯು ಬಯಸಿತ್ತು; ಆದ್ದರಿಂದ ಹೋಂಡಾ ಮತ್ತು ಮ್ಯೂಗೆನ್‌‌‌ (M-ಟೆಕ್‌) ಕಂಪನಿಗಳು ಒಟ್ಟಾಗಿ ಸೇರಿದವು ಮತ್ತು ಮ್ಯೂಗೆನ್‌‌‌/ಹೋಂಡಾ MF308 V8 ಎಂಜಿನ್‌‌‌ನ್ನು ಬಳಸಲು ಆಡಿ ಕಂಪನಿಗೆ ಅನುವುಮಾಡಿಕೊಡಲು ನಿರ್ಧರಿಸಿದವು.[೧೬] ಚಾಲಕದಂಡದಿಂದ ತೂಕವನ್ನು ತೆಗೆದುಹಾಕಿದ್ದು ರೇಸಿಂಗ್‌‌ ಎಂಜಿನ್‌ಗೆ ಆಡಿಯು ಮಾಡಿದ ಏಕೈಕ ಸುಧಾರಣೆಯಾಗಿತ್ತು; ಆ ವೇಳೆಗಾಗಲೇ ನೆಲದಿಂದ ಮೇಲಕ್ಕೆ ಎಂಜಿನ್‌‌‌ ವಿನ್ಯಾಸಗೊಳಿಸಲ್ಪಟ್ಟಿದ್ದರಿಂದಾಗಿ ಈ ಕ್ರಮ ಅನಿವಾರ್ಯವಾಗಿತ್ತು. ಆಡಿ ಸ್ಪೋರ್ಟ್‌ ಕಂಪನಿಯು 2004ರಲ್ಲಿ ಎಂಜಿನ್‌ನ್ನು ಸಿದ್ಧಪಡಿಸಿತು, ಪರೀಕ್ಷಿಸಿತು/ಕಾರ್ಯರೂಪಕ್ಕೆ ತಂದಿತು/ಅನುಮೋದಿಸಿತು ಮತ್ತು ಓಟದ ಪಂದ್ಯದಲ್ಲಿ ಅದನ್ನು ತೊಡಗಿಸಿತು; ಇದು 4.0 ಲೀಟರ್‌‌‌ ಸಜ್ಜಿಕೆಯಲ್ಲಿನ 460 PS (338 kW; 454 bhp) ಮತ್ತು 500 N⋅m (369 ft⋅lbf)ಗೂ ಹೆಚ್ಚಿನ ಟಾರ್ಕ್‌ ಭ್ರಾಮಕವನ್ನು ಉಂಟುಮಾಡಿತು, ಮತ್ತು ಇದು ಆಡಿ ಕಂಪನಿಯ DTM ಕಾರ್ಯಸೂಚಿಯಲ್ಲಿನ ಒಂದು ಆಧಾರಸ್ತಂಭವಾಗಿದೆ. A4 DTM ಕಾರುಗಳನ್ನು ಆಡಿ ಸ್ಪೋರ್ಟ್‌ನ "R"-ಪೂರ್ವಪ್ರತ್ಯಯದ ಪದನಾಮಗಳೊಂದಿಗೆ ಗುರುತಿಸಲಾಗುತ್ತದೆ.[೧೭] ಈ ಕೆಳಗೆ ಹೆಸರಿಸಲಾಗಿರುವ ರೂಪಾಂತರಗಳನ್ನು ತಯಾರಿಸಲಾಗಿದೆ:

ಆಡಿ R11 A4 DTM ಕಾರು, ಆಡಿ A4ರ B6 ಶರೀರಶೈಲಿಯನ್ನು ಹೋಲುತ್ತಿತ್ತು.

R12 (2005–2006)

[ಬದಲಾಯಿಸಿ]

ಆಡಿ R12 A4 DTM ಕಾರು, ಆಡಿ A4ರ 2005ರ B7 ಶರೀರಶೈಲಿಯನ್ನು ಹೋಲುತ್ತಿತ್ತು. R12 ಕಾರನ್ನು 2006ರ ಋತುವಿಗೆ ಸಂಬಂಧಿಸಿದಂತೆ R12+ ಎಂಬುದಾಗಿ ಪರಿಷ್ಕರಿಸಲಾಗಿತ್ತು.

ಆಡಿ R13 A4 DTM ಕಾರೂ ಸಹ ಆಡಿ A4ರ B7 ಶರೀರಶೈಲಿಯನ್ನು ಹೋಲುತ್ತಿತ್ತು.

  • ಎಂಜಿನ್‌‌‌: 4.0 ಲೀಟರ್‌‌‌ 90° V8 ಎಂಜಿನ್‌‌‌
  • ಶಕ್ತಿ: 460 bhp (343 kW; 466 PS)
  • ಟಾರ್ಕ್‌ ಭ್ರಾಮಕ: 500 N⋅m (370 ft⋅lbf)ಗೂ ಹೆಚ್ಚಿನದು
  • ಗೇರ್‌‌ಪೆಟ್ಟಿಗೆ: ಎಕ್ಸ್‌‌ಟ್ರಾಕ್‌ ಅಥವಾ ಹೆವ್‌ಲ್ಯಾಂಡ್‌‌ 6-ವೇಗದ ಅನುಕ್ರಮಿಕ ಕೈಚಾಲಿತ
  • ಆಧಾರ ಚೌಕಟ್ಟು: ಡಲ್ಲಾರಾದಿಂದ ಅಭಿವೃದ್ಧಿಪಡಿಸಲ್ಪಟ್ಟ ಅವಕಾಶ ಚೌಕಟ್ಟು
  • ಟೈರುಗಳು: ಡನ್‌ಲಪ್‌‌ ಓಟದ ಪಂದ್ಯದ ಟೈರುಗಳು
  • ಮುಂಭಾಗ: 265/660-R18
  • ಹಿಂಭಾಗ: 280/660-R18

ಆಡಿ R14 A4 DTM ಕಾರು, ಆಡಿ A4ರ ಇತ್ತೀಚಿನ B8 ಶರೀರಶೈಲಿಯನ್ನು ಹೋಲುತ್ತದೆ, ಮತ್ತು ಹಗಲು ವೇಳೆಯಲ್ಲಿ ಉರಿಯುವ LED ದೀಪಗಳನ್ನು ಒಳಗೊಳ್ಳುತ್ತದೆ.

2009ರಲ್ಲಿ ಹಾಕೆನ್‌ಹೀಮ್ರಿಂಗ್‌ನಲ್ಲಿ ಒಂದು ‌ಆಡಿ A4 DTMನ್ನು ಟಿಮೋ ಸ್ಕೀಡರ್‌ ಚಾಲಿಸುತ್ತಿರುವುದು.

ತಾಂತ್ರಿಕ ನಿರ್ದಿಷ್ಟತೆಗಳು

[ಬದಲಾಯಿಸಿ]
  • ಆಧಾರ ಚೌಕಟ್ಟು : ಅವಕಾಶದ ಚೌಕಟ್ಟು, ಚಾಲಕನ ಇಂಗಾಲದ-ನಾರಿನ ಸಂಯೋಜಿತ ಸುರಕ್ಷತಾ ಅಂಗಣ, ಇಂಗಾಲದ ನಾರಿನ ಸಂಯೋಜಿತ ಮುಂಭಾಗ ಮತ್ತು ಹಿಂಭಾಗದ ಡಿಕ್ಕಿಯ ರಚನೆಗಳು FIA/DMSB ಅನುಮೋದನೆಯ ಸುರಕ್ಷತಾ ಅಂಕಣವಾಗಿರಬೇಕು.
  • ಎಂಜಿನ್‌‌‌ : ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ನಿರ್ಮಿಸಿದ ಆಡಿ V8 ಎಂಜಿನ್‌‌‌.
  • ಎಂಜಿನ್‌‌‌ ಬಗೆ : 90 ಡಿಗ್ರಿಗಳು, 32-ಕವಾಟ, 2xDOHC, 9,000 rpm ಪರಿಭ್ರಮಣದ-ಮಿತಿ, ಪ್ರತಿ ಸಿಲಿಂಡರ್‌‌ಗೆ 4-ಕವಾಟಗಳು‌‌‌‌.
  • ಎಂಜಿನ್‌‌‌ ಪಲ್ಲಟನ : 4.0 L (4,000 cc) (245 in³).
  • ಪಿಸ್ಟನ್ನುಗಳು : ಮಾಹ್ಲೆ.
  • ಶೋಧಕ : ಡೊವ್‌‌.
  • ನಿರ್ವಾತಕ ವ್ಯವಸ್ಥೆಗಳು : ರೆಮಸ್‌‌ ಮೂರು-ಮಾರ್ಗದ ವೇಗವರ್ಧಕ ಪರಿವರ್ತಕ.
  • ಶಕ್ತಿ ಫಲಿತ : 7,500/ನಿಮಿಷ ಈ ಪ್ರಮಾಣದಲ್ಲಿ 460 hp (343 kW; 466 PS)ನಷ್ಟು.
  • ಟಾರ್ಕ್‌ ಭ್ರಾಮಕ : 500 N⋅m (370 ft⋅lbf)ಗೂ ಹೆಚ್ಚಿನದು.
  • ECU : ಬಾಷ್‌ MS 2.9.
  • ಇಂಧನ : ಅರಲ್‌‌ ಅಲ್ಟಿಮೇಟ್‌‌ 100% ಆಕ್ಟೇನ್‌‌ (RON) ಸೂಪರ್‌‌-ಲೆಡ್‌ರಹಿತವಾದದ್ದು.
  • ಇಂಧನ ವಿತರಣೆ : ಇಂಧನ ಇಂಜೆಕ್ಷನ್‌‌.
  • ತೈಲಲೇಪನ : ಕ್ಯಾಸ್ಟ್ರಾಲ್‌‌ ಮತ್ತು ಷೆಲ್‌‌‌ ಹೆಲಿಕ್ಸ್‌‌ ಶುಷ್ಕ ಕುಳಿ.
  • ಹೀರಿ ತೆಗೆಯುವಿಕೆ : ಸಾಮಾನ್ಯವಾದ ರೀತಿಯಲ್ಲಿ ಹೀರಿತೆಗೆದದ್ದು.
  • ಗೇರ್‌‌ಪೆಟ್ಟಿಗೆ : ಹೆವ್‌ಲ್ಯಾಂಡ್‌‌ ಅನುಕ್ರಮಿಕ 6-ವೇಗದ ಕ್ರೀಡಾ ಬಳಕೆಯ ಗೇರ್‌‌‌ (ನಿಯಂತ್ರಿತ DTM ಪ್ರಮಾಣಕ).
  • ಚಾಲನಾ ಸಾಗಣೆ : ಹಿಂಭಾಗ-ಚಕ್ರ ಚಾಲನೆ.
  • ಕ್ಲಚ್ಚು : ಸ್ಯಾಂಡ್‌ಟ್ಲರ್‌‌ 3-ಫಲಕದ ಇಂಗಾಲದ-ನಾರಿನ ಕ್ಲಚ್ಚು.
  • ಭೇದಾತ್ಮಕ ವ್ಯವಸ್ಥೆ : ಹೊಂದಿಕೊಳ್ಳಬಲ್ಲ ಬಹು-ಫಲಕದ LSD.
  • ರೇಡಿಯೇಟರ್‌ ದ್ರವ : ವೂರ್ಥ್‌.
  • ಚಾಲನೆ : ಸರ್ವೋ ನೆರವು ಪಡೆದ ಹಲ್ಲುಸರಳಿನ ಮತ್ತು ಸಣ್ಣ ಹಲ್ಲುಚಕ್ರದ ಚಾಲನೆ.
  • ಚಾಲನೆಯ ದಂಡಗಳು : ಸ್ಥಿರ-ವೇಗದ, ರಭಸದಿಂದ ನೂಕುವ ತ್ರಿಪಾದಿ ಜಂಟಿ ದಂಡಗಳು.
  • ಸ್ಪ್ರಿಂಗುಗಳು /ಅಕ್ಷಾಧಾರ : ಐಬ್ಯಾಕ್‌‌ ಸ್ವತಂತ್ರ ಮುಂಭಾಗ ಮತ್ತು ಹಿಂಭಾಗದ ಅಕ್ಷಾಧಾರ, ಜೋಡಿ-ಕವಲುಮೂಳೆಯಾಕಾರದ ಅಕ್ಷಾಧಾರ, ಸ್ಪ್ರಿಂಗ್‌‌/ಡ್ಯಾಂಪರ್‌‌‌ ಘಟಕದೊಂದಿಗಿನ ತಳ್ಳು-ದಂಡ ವ್ಯವಸ್ಥೆ, ಹೊಂದಿಕೊಳ್ಳಬಲ್ಲ ಅನಿಲ-ಭರಿತ ಡ್ಯಾಂಪರ್‌‌‌ಗಳು.
  • ಬ್ರೇಕುಗಳು : ಬ್ರೆಂಬೊ ಮತ್ತು AP ರೇಸಿಂಗ್‌‌‌ ಹೈಡ್ರಾಲಿಕ್‌‌‌ ಜೋಡಿ ಮಂಡಲದ ಬ್ರೇಕಿನ ವ್ಯವಸ್ಥೆ, ಹಗುರ ಮಿಶ್ರಲೋಹದ ಬ್ರೇಕಿನ ಕ್ಯಾಲಿಪರ್‌‌ಗಳು, ಮುಂಭಾಗ ಮತ್ತು ಹಿಂಭಾಗದ ಗಾಳಿಹಾಯಿಸಿದ ಇಂಗಾಲ ಬ್ರೇಕಿನ ತಟ್ಟೆಗಳು (DTM ಪ್ರಮಾಣಕ), ಚಾಲಕನು ಹೊಂದಿಸಬಲ್ಲ ಎಲ್ಲೆಯಿಲ್ಲದೆ ಬದಲಾಗುವ ಬ್ರೇಕಿನ-ಸಮತೋಲನ.
  • ಚಕ್ರಗಳು : OZ ರೇಸಿಂಗ್‌‌ ಮುನ್ನುಗ್ಗಿದ ಅಲ್ಯೂಮಿನಿಯಂ ಮಿಶ್ರಲೋಹದ ಚಕ್ರಗಳು.
    • ಮುಂಭಾಗ : 10 x 18".
    • ಹಿಂಭಾಗ : 11 x 18".
  • ಟೈರುಗಳು : ಡನ್‌ಲಪ್‌‌ SP ಸ್ಪೋರ್ಟ್‌ ಮ್ಯಾಕ್ಸ್‌‌ ರೇಡಿಯಲ್‌‌ ನುಣುಪಾದ ಮತ್ತು ತುಳಿಯಲ್ಪಟ್ಟ ಮಳೆಯ ಟೈರುಗಳು.
    • ಮುಂಭಾಗ : 265/660-R18.
    • ಹಿಂಭಾಗ : 280/660-R18.
  • ಉದ್ದ : [77]
  • ಎತ್ತರ : [93]
  • ಅಗಲ :1,850 mm (73 in)
  • ಚಕ್ರದ ಆಧಾರ : 2,795 mm (110 in).
  • ಕನಿಷ್ಟ ತೂಕ : 1,050 kg (2,315 lb) (ಮೇಲುಡುಪು ಮತ್ತು ಶಿರಸ್ತ್ರಾಣದೊಂದಿಗಿನ ಚಾಲಕನನ್ನು ಒಳಗೊಂಡಂತೆ).
  • ಇಂಧನ ಸಾಮರ್ಥ್ಯ : 15.4 imp gal (70 L; 18 US gal).
  • ಸುರಕ್ಷತೆ ಉಪಕರಣ : ಸಾಬೆಲ್ಟ್‌‌ 6-ಬಿಂದುಗಳ ಆಸನಪಟ್ಟಿ, HANS ಸಾಧನ.
  • ದಹನ : ಆಡಿ/ಎಬಿಟಿ ಸ್ಪೋರ್ಟ್ಸ್‌ಲೈನ್‌‌ CDI ಪ್ಲಗ್‌‌ ಬದಲಾಯಿಸಬಹುದಾದ ಚಾಲಿಸುವ/ಆರಿಸುವ ಎಂಜಿನ್‌‌‌.
  • ಕರ್ಷಣ ನಿಯಂತ್ರಣ : ಹೌದು.
  • ತಂಡ : ಆಡಿ ಸ್ಪೋರ್ಟ್‌ ತಂಡ ಎಬಿಟಿ ಸ್ಪೋರ್ಟ್ಸ್‌ಲೈನ್‌‌, ಫೀನಿಕ್ಸ್‌ ರೇಸಿಂಗ್‌, ಟೀಮ್‌ ರೋಸ್‌ಬರ್ಗ್‌, ಫ್ಯೂಚರ್‌‌ಕಾಮ್‌‌ TME.

Source: http://www.audi.com/com/brand/en/experience/motorsport/dtm/audi_a4_dtm/technical_data.html Archived 2011-03-08 ವೇಬ್ಯಾಕ್ ಮೆಷಿನ್ ನಲ್ಲಿ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಆಡಿ S4
  • ಆಡಿ RS4
  • ವೋಕ್ಸ್‌‌ವ್ಯಾಗನ್‌ ಸಮೂಹ ಚೀನಾ

ಉಲ್ಲೇಖಗಳು

[ಬದಲಾಯಿಸಿ]
  1. Buckley, Martin (12 January, 2002). "The 1990s: New Models, New Markets, New Directions". BMW Cars (1st ed.). Motorbooks. p. 158. ISBN 0-7603-0921-3. {{cite book}}: Check date values in: |date= (help)
  2. "Ultimate specs".
  3. "Audi A4". EuroNCAP.com. Retrieved 2008-06-01.
  4. Audi.com ಆಡಿ Q7 ಹೈಬ್ರಿಡ್‌ – ಮೇಕಿಂಗ್‌ ಎ ಕ್ಲೀನ್‌ ಸ್ಟಾರ್ಟ್‌ Archived 2008-01-25 ವೇಬ್ಯಾಕ್ ಮೆಷಿನ್ ನಲ್ಲಿ.
  5. Audi.com ಆಡಿ Q7 ಹೈಬ್ರಿಡ್‌ ಕಾನ್ಸೆಪ್ಟ್‌‌ – 15 ಇಯರ್ಸ್‌ ಆಫ್‌ ಪಯನೀರಿಂಗ್‌ ವರ್ಕ್‌ Archived 2008-08-08 ವೇಬ್ಯಾಕ್ ಮೆಷಿನ್ ನಲ್ಲಿ.
  6. "Audi A4". EuroNCAP.com. Retrieved 2008-06-01.
  7. "www.iihs.org/ratings/rating.aspx?id=163". Archived from the original on 2010-11-05. Retrieved 2010-09-21.
  8. Tuulilasi.fi ಕಾರ್‌‌ ಅನ್‌ಸರ್ವೀಸಬಿಲಿಟೀಸ್‌ ಫ್ರೀಕ್ವೆನ್ಸಿ ಸೀಕ್ವೆನ್ಸ್‌ Archived 2008-12-18 ವೇಬ್ಯಾಕ್ ಮೆಷಿನ್ ನಲ್ಲಿ.
  9. Kirk, Julian (2008-11-04). "Seat Exeo (2009) CAR review". Car Magazine. Retrieved 2009-01-13.
  10. IIHS.org IIHS-HLDI: ಆಡಿ A4 Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ.
  11. IIHS.org TOP SAFETY PICK ಪಾಸ್ಟ್‌‌ ವಿನ್ನರ್ಸ್‌‌ Archived 2007-05-20 ವೇಬ್ಯಾಕ್ ಮೆಷಿನ್ ನಲ್ಲಿ.
  12. "Audi UK site – production info".
  13. "Audi A4 CKD assembled in India too".
  14. Korzeniewski, Jeremy (28 May 2009). "227 mph Audi A4 beats Bugatti to set world record for fastest car powered by biogas". Autoblog. Retrieved 11 May 2010.
  15. Audi.co.uk ದಿ ಆಡಿ A4 DTM
  16. ರೇಸ್‌‌ಕೋರ್ಸ್‌ ಎಂಜಿನಿಯರಿಂಗ್‌‌ ಅಕ್ಟೋಬರ್‌‌ 2007 – DTM: ವಿಶ್ವದ ಅತ್ಯಂತ ನಿಕಟವಾದ ಓಟದ ಪಂದ್ಯದ ಸಲೂನ್ ಕಾರು‌‌ ಶ್ರೇಣಿ
  17. Fourtitude.com ಫೋರಮ್ಸ್‌‌ ಆಡಿ’ಸ್‌ “R” ನಂಬರ್ಸ್‌‌??


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Audi vehicles timeline (Europe) ಟೆಂಪ್ಲೇಟು:Audi vehicles timeline (North America)

"https://kn.wikipedia.org/w/index.php?title=ಆಡಿ_A4&oldid=1201599" ಇಂದ ಪಡೆಯಲ್ಪಟ್ಟಿದೆ