ಉದಯ ಮಾರ್ತಾಂಡ
ಗೋಚರ
ಉದಯ ಮಾರ್ತಾಂಡ(1383–1444)ಅಥವಾ ಚೇರ ಉದಯ ಮಾರ್ತಾಂಡ ವರ್ಮ ತಿರುವಾಂಕೂರಿನ ಒಂದು ಭಾಗವಾದ ವೈನಾಡಿನಲ್ಲಿ 15ನೆಯ ಶತಮಾನದಲ್ಲಿ ರಾಜ್ಯವಾಳಿದ ಚೇರಸಂತತಿಯ ದೊರೆ. ತಿರುವಾಂಕೂರಿನ ಇತಿಹಾಸದಲ್ಲಿ ಈತನಷ್ಟು ದೀರ್ಘಕಾಲ ಮತ್ಯಾರೂ ಆಳಿಲ್ಲ. ಈತ ತನ್ನ ರಾಜ್ಯದ ದಕ್ಷಿಣಕ್ಕಿದ್ದ ಪ್ರದೇಶವನ್ನು ಗೆದ್ದು ರಾಜ್ಯವನ್ನು ವಿಸ್ತರಿಸಿದ. ವಳ್ಳಿಯೂರಿನಲ್ಲಿ ಹೆಚ್ಚಾಗಿ ಇರುತ್ತಿದ್ದುದರಿಂದ ರಾಜ್ಯದ ಪೂರ್ವ ಭಾಗದಲ್ಲಿ ಅನೇಕ ಪಾಳೆಯಗಾರರು ದಂಗೆಯೆದ್ದು ಸ್ವಾತಂತ್ರ್ಯವನ್ನು ಘೋಷಿಸಿದರು. ಉದಯ ಮಾರ್ತಾಂಡ ತನ್ನ 28ನೆಯ ವಯಸ್ಸಿನಲ್ಲಿ ಮೃತಪಟ್ಟ (1444).
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |