ವಿಷಯಕ್ಕೆ ಹೋಗು

ಕಾರ್ಲ್ ಸಗಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Carl Sagan
ಜನನ(೧೯೩೪-೧೧-೦೯)೯ ನವೆಂಬರ್ ೧೯೩೪
Brooklyn, New York
ಮರಣDecember 20, 1996(1996-12-20) (aged 62)
Seattle, Washington, U.S.
ವಾಸಸ್ಥಳUnited States[]
ರಾಷ್ಟ್ರೀಯತೆAmerican
ಕಾರ್ಯಕ್ಷೇತ್ರAstronomy and planetary science
ಸಂಸ್ಥೆಗಳುCornell University
Harvard University
ಅಭ್ಯಸಿಸಿದ ವಿದ್ಯಾಪೀಠUniversity of Chicago
ಪ್ರಸಿದ್ಧಿಗೆ ಕಾರಣSearch for Extra-Terrestrial Intelligence (SETI)
Cosmos: A Personal Voyage
Cosmos
Voyager Golden Record
Pioneer plaque
Contact
Pale Blue Dot
ಗಮನಾರ್ಹ ಪ್ರಶಸ್ತಿಗಳುOersted Medal (1990)
NASA Distinguished Public Service Medal (twice)
Pulitzer Prize for General Non-Fiction (1978)
National Academy of Sciences Public Welfare Medal (1994)

ಕಾರ್ಲ್ ಎಡ್ವರ್ಡ್ ಸಗಾನ್ English pronunciation: /ˈseɪɡən/ ಅಮೇರಿಕಾದ ಪ್ರಖ್ಯಾತ ಖಗೋಳ ವಿಜ್ಞಾನಿ (ನವಂಬರ್ 9, 1934-ಡಿಸೆಂಬರ್ 20, 1996). ಜೊತೆಗೆ ಆತನೊಬ್ಬ ಪರಿಸರ ತಜ್ಞ, ಖ್ಯಾತ ಲೇಖಕನೂ ಹೌದು. ಜಗತ್ತಿಗೆ ಖಗೋಳ ಶಾಸ್ತ್ರ, ಖಗೋಳ-ಭೌತ ವಿಜ್ಞಾನದ ಬಗ್ಗೆ ಅಷ್ಟೇ ಅಲ್ಲದೆ, ಇತರ ಸಹಜ ವಿಜ್ಞಾನಗಳ ಬಗ್ಗೆಯೂ ತಿಳಿಸಿಕೊಟ್ಟ ಅತ್ಯಂತ ಯಶಸ್ವೀ ಖಗೋಳ-ಭೌತ ವಿಜ್ಞಾನಿ, ಕಾರ್ಲ್ ಸಗಾನ್. ತನ್ನ ಜೀವಿತಾವಧಿಯಲ್ಲಿ 600ಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನು, ಜನಪ್ರಿಯ ಉಪನ್ಯಾಸಗಳನ್ನು, ಪ್ರಬಂಧಗಳನ್ನು ಮಂಡಿಸಿರುವ ಸಗಾನ್ ತನ್ನ 20ಕ್ಕೂ ಹೆಚ್ಚು ಪುಸ್ತಕಗಳಿಗೆ ಸ್ವತಃ ಲೇಖಕ, ಸಹ-ಲೇಖಕ, ಮತ್ತು ಸಂಪಾದಕನಾಗಿ ಕೆಲಸ ಮಾಡಿದ್ದಾರೆ. ಅವರ ಕೃತಿಗಳಲ್ಲಿ, ಸಾಮಾನ್ಯವಾಗಿ ಆತ ಸ್ಕೆಪ್ಟಿಕಲ್ ಇನ್ಕ್ವಯರಿ ಮತ್ತು ಸೈಂಟಿಫಿಕ್ ಮೆಥಡ್ಡುಗಳ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಾನೆ. ಎಕ್ಸೋ-ಬಯಾಲಜಿಯನ್ನು ಮೊತ್ತ ಮೊದಲ ಬಾರಿಗೆ ಅಭ್ಯಸಿಸಿದ ಕಾರ್ಲ್, ಎಕ್ಸ್ಟ್ರಾ ಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್ ನ ಹುಡುಕಾಟ (SETI)ದ ಸಂಶೋಧನೆಗೂ ನಾಂದಿ ಹಾಡುತ್ತಾನೆ.

ಸಗಾನ್ ವಿಶ್ವಮಟ್ಟದ ಖ್ಯಾತಿಯನ್ನು ಪಡೆದದ್ದು ತನ್ನ ಜನಪ್ರಿಯ ವಿಜ್ಞಾನದ ಪುಸ್ತಕಗಳಿಗಾಗಿ ಮತ್ತು 1980ರಲ್ಲಿ ನಿರ್ಮಾಣವಾದ ಪ್ರಶಸ್ತಿ ಪುರಸ್ಕೃತ ಟೆಲಿವಿಶನ್ ಧಾರವಾಹಿಯೊಂದಕ್ಕೆCosmos: A Personal Voyage ಸಂಭಾಷಣೆ ಮತ್ತು ಪ್ರಸ್ತುತಿಯನ್ನು ರಚಿಸಿದ್ದಕ್ಕಾಗಿ.[] ಈ ಕಾರ್ಯಕ್ರಮದ ಪ್ರಸ್ತುತಿಯ ಕುರಿತಾಗಿ ಪುಸ್ತಕವೊಂದು ಕೂಡ ಪ್ರಕಟವಾಗಿದೆ. ಸಗಾನ್ ಕಾಂಟ್ಯಾಕ್ಟ್ ಹೆಸರಿನ ಕಾದಂಬರಿಯನ್ನೂ ಬರೆಯುತ್ತಾನೆ. ಮುಂದೆ 1997ರಲ್ಲಿ ಅದೇ ಹೆಸರಿನ ಚಲನಚಿತ್ರವೊಂದು ನಿರ್ಮಾಣವಾಗುತ್ತದೆ.

ಬಾಲ್ಯ ಜೀವನ

[ಬದಲಾಯಿಸಿ]

ಕಾರ್ಲ್ ಸಗಾನ್ ಜನಿಸಿದ್ದು, ನ್ಯೂಯಾರ್ಕ್[] ನಬ್ರೂಕ್ಲಿನ್ ನಲ್ಲಿ, ರಶಿಯನ್ ಯಹೂದಿ ಕುಟುಂಬವೊಂದರಲ್ಲಿ. ಆತನ ತಂದೆ ಸ್ಯಾಮ್ ಸಗಾನ್, ರಷಿಯಾದಿಂದ ವಲಸೆ ಬಂದು ನೆಲೆಸಿದ್ದ ಒಬ್ಬ ಗಾರ್ಮೆಂಟ್ ನೌಕರ; ತಾಯಿ ರಷೆಲ್ ಮೋಲಿ ಗ್ರಬರ್ ಗೃಹಿಣಿ. ರಷೆಲ್ ನ ಜೈವಿಕ ತಾಯಿಯಾಗಿದ್ದ ಚೈಯಾ ಕ್ಲಾರಾಳ ನೆನಪಿಗಾಗಿ, ಆತನಿಗೆ ಕಾರ್ಲ್ ಎಂಬ ಹೆಸರು. ಅವನದೇ ಮಾತುಗಳಲ್ಲಿ ಹೇಳುವುದಾದರೆ, 'ತಾಯಿ ಎಂಬುದೇ ಗೊತ್ತಿರದಿದ್ದ ತಾಯಿ'. ನ್ಯೂ ಜೆರ್ಸಿಯಲ್ಲಿರುವ ರಾಹ್ವೆಯ, ರಾಹ್ವೆ ಹೈಸ್ಕೂಲ್ ನಿಂದ ಕಾರ್ಲ್ 1951ರಲ್ಲಿ ಪದವಿಯಲ್ಲಿ ತೇರ್ಗಡೆ ಹೊಂದುತ್ತಾನೆ.[]

ಆತನಿಗೆ ಕರೋಲ್ ಎಂಬ ಒಬ್ಬ ತಂಗಿ. ಈ ಇಡೀ ಕುಟುಂಬ ಬ್ರೂಕ್ಲಿನ್ ನ ನೆರೆನಗರ ಬೆನ್ಸೋಹರ್ಸ್ಟ್ ನ ಅಟ್ಲಾಂಟಿಕ್ ಮಹಾಸಾಗರದ ಹತ್ತಿರದಲ್ಲಿ ಸುಸಜ್ಜಿತ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿರುತ್ತದೆ. ಸಗಾನ್ ನ ಪ್ರಕಾರ ಆತನ ಕುಟುಂಬದವರು ರಿಫಾರ್ಮ್ ಯಹೂದಿಗಳು. ಯಹೂದಿಗಳಲ್ಲಿರುವ ಮೂರು ಗುಂಪುಗಳಲ್ಲಿ ಇದು ಅತ್ಯಂತ ಪ್ರಮುಖ ಪಂಗಡ ಎಂಬುದು ಆತನ ಭಾವನೆಯಾಗಿತ್ತು. ಸಗಾನ್ ಮತ್ತು ಆತನ ತಂಗಿ ಹೇಳಿಕೊಳ್ಳುವ ಹಾಗೆ ಅವರ ತಂದೆ ಅಷ್ಟೇನೂ ದೈವಭಕ್ತ ವ್ಯಕ್ತಿಯಾಗಿರಲಿಲ್ಲ. ಆದರೆ ತಾಯಿ ಮಾತ್ರ ದೇವರಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದ ಮತ್ತು ಚರ್ಚುಗಳಿಗೆ ಹೋಗುವ ಅಭ್ಯಾಸವಿದ್ದ ಮಹಿಳೆ. ಅಲ್ಲದೆ, ಮನೆಯಲ್ಲಿ ಆಕೆ ತಯಾರಿಸುತ್ತಿದ್ದುದು ಕೋಶರ್ ಮಾಂಸದಡುಗೆಯನ್ನು ಮಾತ್ರ.[]: 12  ಡಿಪ್ರೆಶನ್(ಆರ್ಥಿಕ ಕುಸಿತದ) ಪರಮಾವಧಿಯಲ್ಲಿ ಆತನ ತಂದೆ ಥಿಯೇಟರ್ ಗೇಟ್ ಕೀಪರ್ ಆಗಿಯೂ ದುಡಿಯಬೇಕಾಗಿ ಬರುತ್ತದೆ.

ಆತ್ಮ ಚರಿತ್ರಕಾರ ಕೀ ಡೇವಿಡ್ಸನ್ ನ ಪ್ರಕಾರ, ಸಗಾನ್ ನ 'ಅಂತರ್ಯುದ್ಧ'ಕ್ಕೆ ಕಾರಣವಾಗಿದ್ದುದು, ಆತನಿಗೆ ಎಲ್ಲ ದಿಕ್ಕಿನಲ್ಲೂ 'ವಿರುದ್ಧ ಸ್ವಭಾವ' ಹೊಂದಿದ್ದ ಆತನ ಇಬ್ಬರೂ ಪಾಲಕರದ್ದು. ಎಷ್ಟೋ ದಿನಗಳ ನಂತರ ಸಗಾನ್ ನಿಗೆ ತನ್ನ ತಾಯಿಯ ಕುರಿತಾಗಿ ತನ್ನ ಮಾನಸಿಕ ಒತ್ತಡಗಳು ಏನಿದ್ದವು ಎಂಬುದು ಫ಼ೂಛ್ಖ್ ಕೊರೆಅನ್ ಥಿಸ್ ಶಿತ್ ಇಸ್ ವೊರ್ಥ್ಲೆಸ್ಸ್. ತನ್ನ ಬಾಲ್ಯದಲ್ಲಿ ಅತ್ಯಂತ ಕ್ರೂರ ಬಡತನದ ಬದುಕಿನ ಹಿನ್ನೆಲೆಯಿದ್ದ ಆಕೆ 1920ರ ದಶಕದಲ್ಲಿ, WWI ಹೊತ್ತಿಗೆ ಹೆಚ್ಚೂ ಕಡಿಮೆ ನಿರ್ಗತಿಕಳಾಗಿ ಬದುಕು ಸಾಗಿಸಿರುತ್ತಾಳೆ.[]: 2  ಒಬ್ಬ ತರುಣಿಯಾಗಿ ಆಕೆಯಲ್ಲಿ ಬದುಕಿನ ಬಗ್ಗೆ ಬೌದ್ಧಿಕವಾಗಿ ಅಪಾರವಾದ ಭರವಸೆಗಳು, ಕನಸುಗಳು ಇದ್ದರೂ, ಆಗಿನ ಸಾಮಾಜಿಕ ಕಟ್ಟಳೆಗಳು, ಆಕೆಯ ಕಡು ಬಡತನದ ಜೀವನ, ಒಬ್ಬ ಪತ್ನಿಯಾಗಿ, ಹೆಣ್ಣಾಗಿ, ಆಕೆ ಅನುಭವಿಸುತ್ತಿದ್ದ ಕೌಟುಂಬಿಕ ಒತ್ತಡಗಳು ಮತ್ತು ಎಲ್ಲಕ್ಕೂ ಹೆಚ್ಚಾಗಿ ಆಕೆಯ ಯಹೂದಿಯಾಗಿದ್ದದ್ದು, ಆಕೆಯ ಎಲ್ಲ ಆಶಯಗಳನ್ನು ಹೊಸಕಿ ಹಾಕಿ ಬಿಟ್ಟಿರುತ್ತವೆ. ಡೇವಿಡ್ಸನ್ ಹೇಳುವ ಪ್ರಕಾರ, "ಈ ಎಲ್ಲ ಕಾರಣಗಳಿಗಾಗಿಯೇ ಆಕೆ ತನ್ನ ಒಬ್ಬನೇ ಮಗ ಕಾರ್ಲ್ ನನ್ನು ಅಪಾರವಾಗಿ ಆರಾಧಿಸುತ್ತಿರುತ್ತಾಳೆ. ಆತನೊಬ್ಬನೇ ತನ್ನೆಲ್ಲ ಕನಸುಗಳನ್ನು ಈಡೇರಿಸಬಲ್ಲ ಆಶಾಕಿರಣವಾಗಿ ಆಕೆಗೆ ಕಾಣುತ್ತಾನೆ".[]: 2 

ಇಷ್ಟೆಲ್ಲದರ ನಡುವೆಯೂ ಕಾರ್ಲ್ ನಿಗೆ ಇದ್ದ 'ಅದ್ಭುತ ಆಲೋಚನಾ ಕ್ರಮ' ಆತನಿಗೆ ಒಲಿದು ಬಂದದ್ದು ತುಂಬಾ "ಸಮಾಧಾನಿಯೂ, ಮೃದು ಹೃದಯಿಯೂ ಆಗಿದ್ದ ಮತ್ತು ಝಾರ್ ನಿಂದ ತಪ್ಪಿಸಿಕೊಂಡು ಬದುಕಿ ಬಂದಿದ್ದ ಆತನ ತಂದೆಯಿಂದ". ನ್ಯೂಯಾರ್ಕಿನಲ್ಲಿದ್ದ ಟ್ಯೂಮಲ್ಟ್ಯುಅಸ್ ಗಾರ್ಮೆoಟ್ ಕೈಗಾರಿಕಾ ಆವರಣದಲ್ಲಿ, ಬಡ ಮಕ್ಕಳಿಗೆ ಸೇಬು ಹಂಚುತ್ತಲೋ, ಕಾರ್ಮಿಕರ ವೃತ್ತಿಪರ ಸಮಸ್ಯೆಗಳನ್ನು ನಿವಾರಿಸುತ್ತಲೋ ಆತ ತನ್ನ ಬಿಡುವಿನ ವೇಳೆಯನ್ನು ಕಳೆಯುವ ವ್ಯಕ್ತಿಯಾಗಿದ್ದ.[]: 2  ಇದೆಲ್ಲದರ ಮಧ್ಯೆಯೂ ಆತನಿಗೆ ಕಾರ್ಲ್ ನ ಅದ್ಭುತ ಜಾಣ್ಮೆಯ ಬಗ್ಗೆ ಅಪಾರವಾದ ಅಭಿಮಾನವಿತ್ತು. ಹಾಗೆಂದೇ ಆತ ಮಗನನ್ನು ಕೂರಿಸಿಕೊಂಡು ತಾರೆಗಳ ಬಗ್ಗೆ, ಡೈನೋಸಾರುಗಳ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿದ್ದ ಮತ್ತು ಮಗನ ಜಾಣ್ಮೆಯನ್ನು ಕೆದಕುವ, ಆಲೋಚನೆಗೆ ಹಚ್ಚುವ ಹಲವಾರು ಕೆಲಸಗಳನ್ನು ಮಾಡುತ್ತಿದ್ದ. ಕಾರ್ಲನ ಬೌದ್ಧಿಕ ಬೆಳವಣಿಗೆ ದಾಪುಗಾಲಿಟ್ಟು ನಡೆಯುವುದಕ್ಕೆ ಇದು ಸಹಾಯಕಾರಿಯೂ ಆಗಿತ್ತು.[]: 2  ಒಬ್ಬ ಬರಹಗಾರನಾಗಿ, ವಿಜ್ಞಾನಿಯಾಗಿ, ಕಾರ್ಲ್ ರೂಪುಗೊಂಡಾಗ, ಆತನಿಗೆ ಇವೆಲ್ಲ ಅಂಶಗಳು ನೆನಪಾಗುತ್ತಿದ್ದವು ಹಾಗೂ ತನ್ನ ವೈಜಾನಿಕ ಆಲೋಚನೆಗಳನ್ನು ಖಚಿತಪಡಿಸಿಕೊಳ್ಳಲು ಇವೇ ನೆನಪುಗಳು ಆತನಿಗೆ ನೆರವಾದ ಕ್ಷಣಗಳೂ ಇವೆ. ಇದನ್ನೇ ಆತ ತನ್ನ 'ಶ್ಯಾಡೋಸ್ ಆಫ್ ಫಾರ್ಗಾಟನ್ ಅನ್ಸೆಸ್ಟರ್ಸ್ ' ಪುಸ್ತಕದಲ್ಲಿ ಉಲ್ಲೇಖಿಸಿಕೊಂಡಿದ್ದಾನೆ.[]: 9  ತನ್ನ ಪಾಲಕರು ತನ್ನ ಆಮೇಲಿನ ಆಲೋಚನಾ ಸರಣಿಯ ಮೇಲೆ ಬೀರಿದ ಪ್ರಭಾವದ ಕುರಿತೂ ಆತ ಹೇಳಿಕೊಳ್ಳುತ್ತಾನೆ:

"ನನ್ನ ತಂದೆ ತಾಯಿಯರು ವಿಜ್ಞಾನಿಗಳೇನೂ ಆಗಿರಲಿಲ್ಲ. ವಿಜ್ಞಾನದ ಕುರಿತು ಅವರಿಗೇನೂ ಗೊತ್ತಿರಲಿಲ್ಲ. ಆದರೆ, ಜಗತ್ತಿನ ವಿಸ್ಮಯಗಳ ಕಡೆಗೆ, ಸ್ಕೆಪ್ಟಿಸಿಸಂನೆಡೆಗೆ ಅವರು ಏಕಕಾಲಕ್ಕೆ ನನ್ನ ಗಮನ ಸೆಳೆದಿದ್ದಾರೆ. ವೈಜ್ಞಾನಿಕ ಪದ್ಧತಿಗೆ ತುಂಬಾ ಮೂಲಭೂತವಾದದ್ದು ಎನ್ನುವಂತಹ ಮತ್ತು ಹೊಂದಾಣಿಕೆ ಸುಲಭಸಾಧ್ಯವಲ್ಲದ ಎರಡು ಮುಖ್ಯ ವೈಚಾರಿಕ ಮಾರ್ಗಗಳನ್ನು ಅವರು ನನಗೆ ಕಲಿಸಿಕೊಟ್ಟಿದ್ದಾರೆ. []

1939 World's Fair

[ಬದಲಾಯಿಸಿ]

ಸಗಾನ್ ನೆನಪಿಸಿಕೊಳ್ಳುವ ಹಾಗೆ ಆತನ ಸ್ಮರಣೆಯಲ್ಲಿ ಹಾಸುಹೊಕ್ಕಾಗಿ ಕೂತಿರುವ ಮರೆಯಲಾರದ ಅನುಭವ ಚಿತ್ರಣವೆಂದರೆ, ಆತ ನಾಲ್ಕೈದು ವಾರ್ಷದ ಬಾಲಕನಾಗಿದ್ದಾಗ, ಆತನ ತಾಯ್ತಂದೆಯರು, ಆತನನ್ನು 1939ರ ನ್ಯೂಯಾರ್ಕ್ ವರ್ಲ್ಡ್ ಫೇರ್ ಗೆ ಕರೆದುಕೊಂಡು ಹೋಗಿದ್ದು. ಅಲ್ಲಿ ಪ್ರದರ್ಶಿತವಾಗಿದ್ದ ಯೋಜನೆಗಳೇ ಆತನ ಬದುಕು ತಿರುವು ತೆಗೆದುಕೊಳ್ಳಲು ಕಾರಣವಾದವು. 'ನಾಳೆಯ ಅಮೇರಿಕಾ' ಎಂಬ ಚಲಿಸುವ ನಕಾಶೆಯ ಪ್ರದರ್ಶನವನ್ನು ಆತ ನೆನಪಿಸಿಕೊಂಡು ಹೇಳುತ್ತಾನೆ: "ಎಡಬಲಕ್ಕೆ ಕ್ಲೋವರ್ ಎಲೆಗಳ ಮರಗಳಿಂದ ಆವೃತವಾಗಿದ್ದ ಸುಂದರವಾದ ಹೆದ್ದಾರಿಗಳು, ಪುಟ್ಟ ಪುಟ್ಟ ಜನರಲ್ ಮೋಟಾರು ಕಾರುಗಳು ಮತ್ತು ಅವುಗಳಲ್ಲಿ ಕೂತು ಗಗನಚುಂಬಿ ಕಟ್ಟಡಗಳೆಡೆಗೆ, ಸುಂದರವಾದ ಮಿನಾರುಗಳೆಡೆಗೆ ಚಲಿಸುತ್ತಿರುವ ಜನರು, ಅಲ್ಲಲ್ಲಿ ಹಾರುತ್ತಿದ್ದ ಬಣ್ಣ ಬಣ್ಣದ ಚಿಟ್ಟೆಗಳು - ಇದೆಲ್ಲ ತುಂಬಾ ಅಧ್ಭುತವಾಗಿತ್ತು!"[]: 14  ಇನ್ನೊಂದೆಡೆ, ಫೋಟೋಎಲೆಕ್ಟ್ರಿಕ್ ಸೆಲ್ ವೊಂದರ ಮೇಲೆ ಕರ್ರ್ ಕರ್ರ್ ಶಬ್ದ ಮಾಡುತ್ತಾ ಹೊಳೆಯುತ್ತಿದ್ದ ಬಲ್ಬಿನ ಬೆಳಕು, ಮತ್ತು ಶ್ರುತಿಕವೆಯಿಂದ ಹೊರಡುತ್ತಿದ್ದ ಶಬ್ದವೊಂದು ಅದೆಷ್ಟು ಚೆನ್ನಾಗಿ ಆಸಿಲೋಸ್ಕೊಪ್ ಮೇಲೆ ಶಬ್ದ ತರಂಗಗಳನ್ನು ಉಂಟುಮಾಡುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾನೆ. ರೇಡಿಯೋ ಮತ್ತು ಟೆಲಿವಿಶನ್ ಗಳಿಗೆ ಪರ್ಯಾಯವಾದ ತಾಂತ್ರಿಕ ಮಾಧ್ಯಮಗಳ ನಮೂನೆಯನ್ನು ಕೂಡಾ ಆತ ಅಲ್ಲಿ ಗಮನಿಸುತ್ತಾನೆ. ಸಗಾನ್ ಒಂದೆಡೆ ಬರೆಯುತ್ತಾನೆ:

ಸೀದಾ ಸೀದಾ ಹೇಳುವುದಾದರೆ, ನಾನು ಊಹಿಸಲೂ ಆಗದಂಥ ಅದ್ಭುತ ನಮೂನೆಗಳು ಅಲ್ಲಿ ಪ್ರದರ್ಶನಕ್ಕಿದ್ದವು. ಶಬ್ದವೊಂದು ಚಿತ್ರವಾಗಿ, ಬೆಳಕಿನ ಅಲೆಯೊಂದು ಶಬ್ದ ತರಂಗವಾಗಿ ಮಾರ್ಪಡುವುದೆಂದರೆ, ಹೇಗೆ ಸಾಧ್ಯ? []: 14 

ತುಂಬ ಪ್ರಚಾರ ಪಡೆದುಕೊಂಡಿದ್ದ, ಹುಲ್ಲುಹಾಸಿನ ಕೆಳಗಿದ್ದ ಮೋರಿಯಲ್ಲಿ ಹೂತಿಡಲಾಗಿದ್ದ, ಟೈಮ್ ಕ್ಯಾಪ್ಸೂಲ್ಸ್ (ಕಾಲದ ಗುಳಿಗೆಗಳು) ಎಂಬ ಅಂಶ ಹೊಂದಿದ್ದ ಪ್ರದರ್ಶನವಂತೂ ಆತನ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಅದರಲ್ಲಿ ಇಟ್ಟಿದ್ದ 1930ರ ಕುರುಹುಗಳು ಮುಂದಿನ ಸಹಸ್ರಮಾನದಲ್ಲಿ, ಆಗಿನ ಜನರಿಂದ ಹೊರತೆಗೆಯಲ್ಪಡುತ್ತವೆ ಎಂಬ ಅಂಶ ಆತನ ಕುತೂಹಲ ಕೆರಳಿಸಿರುತ್ತದೆ. "ಕಾರ್ಲ್ ನನ್ನು ಬಹುವಾಗಿ ರೋಮಾಂಚನಗೊಳಿಸಿದ್ದೆಂದರೆ ಆ ಟೈಮ್ ಕ್ಯಾಪ್ಸೂಲ್ಸ್" ಎಂದು ಡೇವಿಡ್ಸನ್ ಕೂಡ ಉಲ್ಲೇಖಿಸುತ್ತಾನೆ. ಮುಂದೆ ವಿಜ್ಞಾನಿಯಾದ ಮೇಲೆ, ಆತ ಮತ್ತು ಆತನ ಸಹೋದ್ಯೋಗಿಗಳು ಇದೆ ಮಾದರಿಯಲ್ಲಿ ಟೈಮ್ ಕ್ಯಾಪ್ಸೂಲ್ ಗಳನ್ನು ಸೃಷ್ಟಿಸಿದರೂ, ಅವು ಅಂತರಿಕ್ಷಕ್ಕೆ ಕಳಿಸಲು ಮಾತ್ರವೇ ಉಪಯೋಗವಾಗಿರುತ್ತವೆ. ಇವು ಸಗಾನ್ ನ ನೆನಪಿನ ಪಯಣದ ಅದ್ಭುತ ಸುವರ್ಣ ಕ್ಷಣಗಳು ಹಾಗೂ ಮರೆಯದ ನೆನಪಿನ ಮೊಟ್ಟ ಮೊದಲ ಫಲಕಗಳು. ವರ್ಲ್ಡ್ ಫೇರ್ ಗೆ ಹೋಗಿದ್ದಾಗಿನ ಕ್ಷಣಗಳ ನೆನಪಿನ ನೂಲು ನೇಯುವ ಸಗಾನ್ ನ ಈ ಉಲ್ಲೇಖಗಳು ಅಪರೂಪದವು.[]: 15 

2ನೇ ಜಾಗತಿಕ ಸಮರ

[ಬದಲಾಯಿಸಿ]

ಎರಡನೇ ಜಾಗತಿಕ ಸಮರದ ವೇಳೆಗೆ, ಯೂರೋಪಿನ ತಮ್ಮ ಬಂಧುವರ್ಗದ ಬಗ್ಗೆ ಸಗಾನ್ ನ ಕುಟುಂಬ ತೀವ್ರ ಆತಂಕ ತಾಳಿತ್ತು. ಸಮುದ್ರ ತೀರದ ತನ್ನ ಮನೆಯ ಬಳಿಯೇ, ಕೂಗಳತೆಯ ದೂರದಲ್ಲಿ, ಹಿಟ್ಲರ್ ನ 'ವೂಲ್ಫ್ ಪ್ಯಾಕ್' ಸಬ್ ಮರೈನ್ ಗಳು ವರ್ತಕರ ಹಡಗುಗಳನ್ನು ಜಲಸಮ ಮಾಡುವುದನ್ನು, ಯುದ್ಧದ ತೀವ್ರತೆಯನ್ನು ಸಗಾನ್ ಗಮನಿಸುತ್ತಲೇ ಇದ್ದ. ಸಮುದ್ರ ತೀರದಗುಂಟ ನಡೆದು ಹೋಗುತಿದ್ದ ಮಕ್ಕಳಿಗೆ ಅಲ್ಲಲ್ಲಿ ಬಿದ್ದಿರುತ್ತಿದ್ದ ಹಡಗಿನ ಅವಶೇಷಗಳು, ಛಿದ್ರಛಿದ್ರವಾಗಿ ಬಿದ್ದಿರುತ್ತಿದ್ದ ದೇಹಗಳು ಇವೆಲ್ಲ ಸಾಮಾನ್ಯ ದೃಶ್ಯವಾಗಿದ್ದವು. ಆದರೂ ನಡೆಯುತ್ತಿದ್ದ ಯುದ್ಧದ ಕುರಿತಾಗಿ ಸಗಾನ್ ಗೆ ಹೆಚ್ಚಿನ ಮಾಹಿತಿಯೇನೂ ಇರಲಿಲ್ಲ. ಒಂದೆಡೆ ಆತ ಬರೆದುಕೊಳ್ಳುವ ಹಾಗೆ, "ಆಗ ನಡೆದ ಸಾಮೂಹಿಕ ಹತ್ಯಾಕಾಂಡದಲ್ಲಿ ತನ್ನ ಬಂಧುಗಳೂ ಇದ್ದರು. ನಮ್ಮ ಕುಟುಂಬಗಳಲ್ಲಿ ಹಿಟ್ಲರ್ ಅಷ್ಟು ಜನಪ್ರಿಯ ವ್ಯಕ್ತಿಯೇನೂ ಆಗಿರಲಿಲ್ಲ... ಆದರೆ ಇನ್ನೊಂದೆಡೆ, ಯುದ್ಧದ ತೀವ್ರತೆ, ರೌದ್ರತೆ ನನ್ನನ್ನು ತಟ್ಟದಂತೆ ಇರಿಸಲಾಗಿದ್ದಂತೂ ಹೌದು". ಆತನ ತಂಗಿ ಕರೋಲ್ ಹೇಳುವ ಹಾಗೆ ಆತನ ತಾಯಿಯ ಏಕಮಾತ್ರ ಉದ್ದೇಶ ಸಗಾನ್ ನನ್ನು ರಕ್ಷಿಸಿಕೊಳ್ಳುವುದಾಗಿತ್ತು... ಎರಡನೆಯ ಜಾಗತಿಕ ಯುದ್ಧ ಮತ್ತು ಸಾಮೂಹಿಕ ಹತ್ಯಾಕಾಂಡಗಳ ಸಮಯದಲ್ಲಿ ಆಕೆ ಅನುಭವಿಸಿದ ನೋವು, ಯಾತನೆಗಳು ಭಯಂಕರ ಎನಿಸುವ ಹಾಗಿದ್ದವು.[]: 15  ಸಗಾನ್ ನ ತನ್ನ 'ಡೆಮಾನ್ ಹಾಂಟೆಡ್ ವರ್ಲ್ಡ್ ' (1996), ಪುಸ್ತಕದಲ್ಲಿ ತನ್ನ ಸಂಕಷ್ಟದ ದಿನಗಳಲ್ಲಿ ಒಂದಾಗಿದ್ದ ಈ ಯುದ್ಧಾವಧಿಯ ದಿನಗಳ ಬಗ್ಗೆ ಬರೆಯುತ್ತಾನೆ. ಆಗ ಆತನ ಕುಟುಂಬ ಯೂರೋಪಿನಲ್ಲಿ ಹೇಗೆ ಯುದ್ಧಭೀತಿಯನ್ನು ಎದುರಿಸಿತ್ತು ಮತ್ತು ಹೇಗೆ ಅಷ್ಟು ಕಷ್ಟಗಳ ನಡುವೆಯೂ ಆತನ ಆಶಾವಾದೀ ಚೇತನವನ್ನು ಬೆಚ್ಚಗೆ ರಕ್ಷಿಸಿತ್ತು ಎಂಬುದನ್ನು ತುಂಬ ಹೃದಯಸ್ಪರ್ಶಿಯಾಗಿ ಬರೆದುಕೊಂಡಿದ್ದಾನೆ.[]

ಪ್ರಕೃತಿಯನ್ನು ಅರಿಯುವ ಕುತೂಹಲ

[ಬದಲಾಯಿಸಿ]

ಪೂರ್ವ ಪ್ರಾಥಮಿಕ ಶಾಲೆಯನ್ನು ಸೇರಿದೊಡನೆ ಸಗಾನ್ ಪ್ರಕೃತಿಯೆಡೆಗೆ ಗಾಢವಾದ ಮತ್ತು ವಿಶೇಷವಾದ ಕುತೂಹಲ ತಳೆಯುತ್ತಾನೆ. ಐದು ವರ್ಷದವನಿದ್ದಾಗ, ತನ್ನ ತಾಯಿ ತಂದುಕೊಟ್ಟಿದ್ದ ಲೈಬ್ರರಿ ಕಾರ್ಡನ್ನು ತೆಗೆದುಕೊಂಡು ತನ್ನ ಶಾಲೆಯ ಪಬ್ಲಿಕ್ ಲೈಬ್ರರಿಗೆ ತಾನೊಬ್ಬನೇ ಮೊದಲ ಸಲ ಹೋಗಿದ್ದನ್ನು ಸಗಾನ್ ನೆನಪಿಸಿಕೊಳ್ಳುತ್ತಾನೆ. ತನ್ನ ಗೆಳೆಯರಾಗಲಿ, ಅವರ ತಂದೆ ತಾಯಿಗಳಾಗಲಿ ಯಾರೊಬ್ಬರೂ ನಕ್ಷತ್ರಗಳೆಂದರೆ ಏನು ಎಂಬುದನ್ನು ಸರಿಯಾಗಿ ವಿವರಿಸಿರುವುದಿಲ್ಲವಾದ್ದರಿಂದ, ತಾನೊಬ್ಬನೇ ಸ್ವತಃ ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಗಾನ್ ಗೆ ಬಾಲ್ಯದಲ್ಲಿಯೇ ಇತ್ತು:

"ನಾನೊಬ್ಬನೇ ಲೈಬ್ರರಿಯನ್ ಹತ್ತಿರ ಹೋಗಿ ನಕ್ಷತ್ರಗಳ ಬಗ್ಗೆ ಯಾವುದಾದರೂ ಪುಸ್ತಕ ಇದ್ದರೆ ಕೊಡಿ ಎಂದು ಕೇಳಿದ್ದೆ... ಅವರು ಕೊಟ್ಟ ಉತ್ತರ ಮಾತ್ರ ಆಶ್ಚರ್ಯಕರವಾಗಿತ್ತು. ಸೂರ್ಯನೊಬ್ಬನೇ ನಮಗೆ ಹತ್ತಿರವಿರುವ ನಕ್ಷತ್ರ. ಉಳಿದ ನಕ್ಷತ್ರಗಳೆಲ್ಲ ಸೂರ್ಯರಾಗಿದ್ದು, ಅವು ನಮ್ಮಿಂದ ತುಂಬಾ ದೂರದಲ್ಲಿದ್ದು, ಬರಿಯ ಬೆಳಕಿನ ಕಿಡಿಗಳಂತೆ ಗೋಚರಿಸುತ್ತವೆ... ಅವರು ಹಾಗೆಂದಿದ್ದೆ, ನನಗೆ ಸಮಸ್ತ ಆಕಾಶಗಂಗೆಯೇ ಕಣ್ಮುಂದೆ ಹರಡಿಕೊಂಡತಾಯಿತು. ಅದೊಂದು ರೀತಿ ಯೋಗಿಕ ಅನುಭವವಾಗಿತ್ತು. ಅದೊಂಥರಾ ವೈಭವಯುತ ದೃಶ್ಯವಾಗಿತ್ತು. ತುಂಬಾ ಅದ್ದೂರಿಯಾದ ಆಕಾಶದ ಚಿತ್ರಣ. ಅದು ನನ್ನ ಯೋಚನಾಲಹರಿಯನ್ನು ಬಿಟ್ಟು ಕದಲಲೇ ಇಲ್ಲ. ಎಂದೆಂದಿಗೂ ನನ್ನ ಬಿಟ್ಟು ಕದಲಲೇ ಇಲ್ಲ .[]: 18 

ಅವನು ಆರೋ ಏಳೋ ವರ್ಷದವನಿದ್ದಾಗ, ಆಟ ಮತ್ತು ಆತನ ಖಾಸಾ ಗೆಳೆಯನೊಬ್ಬ ಸೇರಿಕೊಂಡು ನ್ಯೂಯಾರ್ಕ್ ಸಿಟಿಯ 'ಅಮೇರಿಕನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ'ಗೆ ಭೇಟಿ ನೀಡಿರುತ್ತಾರೆ. ಅಲ್ಲಿದ್ದಾಗ, ಅವರಿಬ್ಬರೂ ಹೇಡನ್ ಪ್ಲಾನಿಟೋರಿಯಂಗೂ ಕೂಡ ಹೋಗಿರುತ್ತಾರೆ. ಮ್ಯೂಸಿಯಮ್ಮಿನಲ್ಲಿ ಎಲ್ಲೆಲ್ಲಿ ಖಗೋಳಕ್ಕೆ ಸಂಬಂಧಿಸಿದ, ಮೆಟಿರಿಯೋರೈಟ್ಸ್ ಮತ್ತು ಡೈನೋಸಾರುಗಳ ಕೃತಕ ನಮೂನೆಗಳ ಪ್ರಾತ್ಯಕ್ಷಿಕೆಗಳಿದ್ದವೋ ಅಲ್ಲಿ ಮತ್ತು ನೈಜ ಪ್ರಾಣಿಗಳೇ ಎನಿಸುವಂತಹ ನಮೂನೆಗಳಿದ್ದವೋ, ಅಲ್ಲೆಲ್ಲ ಓಡಾಡಿಕೊಂಡು ಬರುತ್ತಾರೆ. ಸಗಾನ್ ತನ್ನ ಈ ಭೇಟಿಯ ಬಗ್ಗೆ ಒಂದೆಡೆ ಬರೆಯುತ್ತಾನೆ:

ನಿಜವಾದ ಡೈನೋಸಾರುಗಳಂತೆ ಕಾಣುತ್ತಿದ್ದ ಆ ನಮೂನೆಗಳನ್ನು ಮತ್ತು ಇತರ ವನ್ಯ ಜೀವಿಗಳ ಮತ್ತು ಪ್ರಪಂಚದಾದ್ಯಂತ ಅವು ಬದುಕುವ ಶೈಲಿಯ ಮಾದರಿಗಳನ್ನು ನೋಡಿ ನಾನಂತೂ ಮೂಕವಿಸ್ಮಿತನಾಗಿದ್ದೆ. ತುಸುವೇ ಮಂದ ಬೆಳಕಿನ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದ್ದ ಕೃತಕ ಅಂಟಾರ್ಕಟಿಕ್ ಮಂಜುಗಡ್ಡೆಯ ಮೇಲಿದ್ದ ಪೆಂಗ್ವಿನ್ ಗಳು, ಗೊರಿಲ್ಲಾವೊಂದರ ಕುಟುಂಬವೇನೋ ಅನಿಸುವಂತಹ ಗೊರಿಲ್ಲಾಗಳ ಗುಂಪು, ಅವುಗಳಲ್ಲಿ ಎದೆ ಕೆರೆದುಕೊಳ್ಳುತ್ತಿರುವ ಒಂದು ಗೋರಿಲ್ಲಾ,... ತನ್ನ ಹಿಂಗಾಲುಗಳ ಮೇಲೆ ನಿಂತಿರುವ, ಸುಮಾರು 12 ಅಡಿಗಳಷ್ಟು ಎತ್ತರದ, ಅಮೇರಿಕನ್ ಗ್ರಿಜ್ಲಿ ಕರಡಿ ನನ್ನನ್ನೇ ದಿಟ್ಟಿಸಿ ನೋಡುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು.[]: 18 

ಇದಕ್ಕೆ ಪೂರಕವಾಗಿ ಆತನ ತಾಯ್ತಂದೆಯರೂ ಕೂಡ ಅವನಿಗೆ ಅಗತ್ಯವಿದ್ದ ಕೆಮಿಸ್ಟ್ರಿ ಸೆಟ್ ಮತ್ತು ಓದುವ ಪರಿಕರಗಳು ಮುಂತಾದುವನ್ನು ಕೊಡಿಸುವ ಮೂಲಕ ಅವನ ಕುತೂಹಲಕ್ಕೆ ಪ್ರೋತ್ಸಾಹದ ನೀರೆರೆದು ಪೋಷಿಸುತ್ತಾರೆ. ಖಗೋಳದಲ್ಲಿ ಅವನಿಗಿದ್ದ ಆಸಕ್ತಿ ಮತ್ತು ಅದನ್ನು ಅಭ್ಯಸಿಸುವುದೇ ಅವನ ಏಕಮಾತ್ರ ಗುರಿಯಾಗಿತ್ತು. ಎಡ್ಗರ್ ರೈಸ್ ಬರ್ರೋಸ್ ಮೊದಲಾದವರು ಬರೆದಿದ್ದ 'ಮಾರ್ಸ್ ಮೊದಲಾದ ಇತರ ಗ್ರಹಗಳ ಮೇಲೆ ಮಾನವ ಜೀವನ' ಎನ್ನುವ ವಿಷಯದ ಕತೆಗಳು, ವೈಜ್ಞಾನಿಕ ಕಾದಂಬರಿಗಳು, ಆತನ ಕುತೂಹಲ ಆಗ್ನಿಗೆ ಮತ್ತಷ್ಟು ಹೆಚ್ಚು ಕೌತುಕದ, ಆಲೋಚನೆಯ ತುಪ್ಪ ಸುರಿಯುತ್ತವೆ. ಜೀವನ ಚರಿತ್ರಕಾರ ರೆ ಸ್ಪ್ಯಾಂಗೆನ್ಬರ್ಗ್ ನ ಪ್ರಕಾರ, ಸಗಾನ್ ತನ್ನ ಈ ಎಳೆಯ ವಯಸ್ಸಿನಲ್ಲಿಯೇ ಗ್ರಹಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದ. ಅವನ ಈ ಆಸಕ್ತಿಯೇ ಬಲಿಷ್ಠ ಬಲವಾಗಿ, "ಆತನ ಬೌದ್ಧಿಕ ಲೋಕದಲ್ಲೊಂದು ಕೌತುಕದ ಕಿಡಿ ಹೊತ್ತಿಸಿತ್ತು. ಹಾಗೆ ಆರಂಭವಾದ ಅವನ ಈ ಅನ್ವೇಷಣೆ ಎಂದೆಂದೂ ಮರೆಯಲಾಗದ್ದು".[]

ಶಿಕ್ಷಣ ಮತ್ತು ವೈಜ್ಞಾನಿಕ ಉದ್ಯೋಗ

[ಬದಲಾಯಿಸಿ]

1954ರಲ್ಲಿ, ಚಿಕಾಗೋ ಯೂನಿವರ್ಸಿಟಿಯಲ್ಲಿ ಜರುಗಿದ ರೆರ್ಸನ್ ಆಸ್ಟ್ರಾನಾಮಿಕಲ್ ಸೊಸೈಟಿ[] ಯವರು ಏರ್ಪಡಿಸಿದ್ದ ಸಮ್ಮೆಳನದಲ್ಲಿ ಭಾಗವಹಿಸಿದ್ದ ಸಗಾನ್, ಸಾಮಾನ್ಯ ಮತ್ತು ವಿಶೇಷ ಸಂದರ್ಭಗಳಲ್ಲಿ, ಗೌರವಾರ್ಥವಾಗಿ ಕೊಡುವ ಕಲಾ ವಿಭಾಗದ ಗೌರವ ಪದವಿಯಾದ ಬ್ಯಾಚಲರ್ ಆಫ್ ಆರ್ಟ್ಸ್ ನ್ನು ಸ್ವೀಕರಿಸುತ್ತಾನೆ. 1955ರಲ್ಲಿ ಬ್ಯಾಚಲರ್ ಆಫ್ ಸೈನ್ಸ್ ಪದವಿಯನ್ನು, 1956ರಲ್ಲಿ ಭೌತಶಾಸ್ತ್ರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಸ್ಟರ್ ಆಫ್ ಸೈನ್ಸ್, ಪಡೆಯುತ್ತಾನೆ. ಮುಂದೆ 1960ರಲ್ಲಿ ಆಸ್ಟ್ರಾನಮಿ ಮತ್ತು ಆಸ್ಟ್ರೋಫಿಸಿಕ್ಸ್ ವಿಷಯಗಳಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಗಳಿಸುತ್ತಾನೆ. ಪದವಿಪೂರ್ವ ವಿಭಾಗದ ವಿದ್ಯಾರ್ಥಿಯಾಗಿರುವಾಗಲೇ, ಸಗಾನ್ ತಳಿವಿಜ್ಞಾನಿ ಎಚ್.ಜೆ.ಮುಲ್ಲರ್ ಅವರ ಪ್ರಯೋಗಾಲಯದಲ್ಲಿ ಕೆಲಸ ಮಾಡಿರುತ್ತಾನೆ. 1960ರಿಂದ 1962ರವರೆಗೆ, ಸಗಾನ್ ಬರ್ಕೆಲಿಯ, ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ, ಮಿಲ್ಲರ್ ಫೆಲೋ ಆಗಿರುತ್ತಾನೆ. 1962ರಿಂದ 1968ರವರೆಗೆ, ಕ್ಯಾಂಬ್ರಿಡ್ಜ್ ನ ಮೆಸ್ಸಚೂಸೆಟಸ್ ನಲ್ಲಿ ಸ್ಮಿತ್ಸೋನಿಯನ್ ಆಸ್ಟ್ರೋಫಿಸಿಕಲ್ ಅಬ್ಸರ್ವೇಟರಿಯಲ್ಲಿ, ಸಗಾನ್ ಕೆಲಸ ನಿರ್ವಹಿಸಿರುತ್ತಾನೆ.

1968ರವರೆಗೂ, ಸಗಾನ್ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಉಪನ್ಯಾಸಕನಾಗಿ, ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾನೆ. ಇದು ಅವನು ನ್ಯೂಯಾರ್ಕ್ ನ ಕಾರ್ನೆಲ್ ಯೂನಿವರ್ಸಿಟಿಗೆ ಹೋಗುವತನಕವೂ ಮುಂದುವರೆಯುತ್ತದೆ. 1971ರಲ್ಲಿ ಅವನು ಕಾರ್ನೆಲ್ ಯೂನಿವರ್ಸಿಟಿಯಲ್ಲಿ ಪೂರ್ಣಾವಧಿ ಪ್ರಾಧ್ಯಾಪಕನಾಗಿ ನೇಮಕಗೊಂಡು, ಅಲ್ಲಿನ ಬಾಹ್ಯಾಕಾಶ ಅಧ್ಯಯನ ವಿಭಾಗದ ನಿರ್ದೇಶಕನಾಗಿ ಕೆಲಸ ಪ್ರಾರಂಭಿಸುತ್ತಾನೆ. 1972ರಿಂದ 1981ರವರೆಗೆ, ಸಗಾನ್ ಕಾರ್ನೆಲ್ ನ ರೇಡಿಯೋ ಫಿಸಿಕ್ಸ್ ಮತ್ತು ಸ್ಪೇಸ್ ರಿಸರ್ಚ್ ಕೇಂದ್ರದ ಸಹ ನಿರ್ದೇಶಕನಾಗಿಯೂ ಕಾರ್ಯನಿರ್ವಹಿಸುತ್ತಾನೆ.

ಅಮೇರಿಕನ್ ಸ್ಪೇಸ್ ಪ್ರೊಗ್ರಾಮ್ ಗಂತೂ ಅದರ ಶುರುವಾತಿನಿಂದಲೇ ಸಗಾನ್ ನ ಸಹಭಾಗಿತ್ವ, ಸಲಹೆ, ನಿರ್ದೇಶನಗಳು ದೊರೆತಿವೆ. 1950ರ ನಂತರ ಆತ NASAಗೆ ವಿಶೇಷ ಸಲಹೆಗಾರನಾಗಿ ಕೆಲಸ ಮಾಡುತ್ತಾನೆ. ಅಲ್ಲಿ, ಅಪೋಲೋ ಆಸ್ಟ್ರೋನಾಟ್ ಗಳು ಚಂದ್ರನೆಡೆಗೆ ಹಾರುವುದಕ್ಕೂ ಮೊದಲಿನ ಕೆಲ ನಿರ್ದೇಶನಗಳನ್ನು ನೀಡುವುದು ಆತನಿಗೆ ವಹಿಸಿದ ಕರ್ತವ್ಯವಾಗಿರುತ್ತದೆ. ಸೌರಮಂಡಲದ ಅನ್ವೇಷಣೆಗೆ ನೆರವಾದ ಹಲವಾರು ರೊಬೋಟಿಕ್ ರಾಕೆಟ್ ಉಡಾವಣೆಗಳ ವಿಷಯದಲ್ಲಿ ಸಗಾನ್ ನ ಸಲಹೆಗಳು ತುಂಬಾ ಅತ್ಯಮೂಲ್ಯವಾಗಿರುತ್ತವೆ. ಅಲ್ಲಿನ ಅನೇಕ ಪ್ರಯೋಗಾತ್ಮಕ ಉಡಾವಣೆಗಳ ಆಯೋಜನೆಯ ಹಿಂದೆ ಸಗಾನ್ ನ ಶ್ರಮ, ಪಾತ್ರ ಇಲ್ಲದಿಲ್ಲ. ಬದಲಾಯಿಸಲು ಸಾಧ್ಯವೇ ಇರದಂತಹ, ಜಾಗತಿಕ ಸಂದೇಶವೊಂದನ್ನು ಸಗಾನ್ ನೀಡಬಯಸಿದ್ದ. ಸೌರಮಂಡಲವನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳುವುದೇ ಮುಖ್ಯ ಗುರಿಯಾದ ಉಪಗ್ರಹವೊಂದನ್ನು ಸೃಷ್ಟಿಸುವುದು ಮತ್ತು ಯಾವುದೇ ಅನ್ಯಗ್ರಹ ಗುಪ್ತಮಾಹಿತಿಯ ಸಹಾಯವನ್ನೂ ಪಡೆಯುವುದು ಆತನ ಉದ್ದೇಶವಾಗಿತ್ತು. ಸಗಾನ್ ತನ್ನ ಮೊಟ್ಟಮೊದಲ ಭೌತಿಕ ಸಂದೇಶವನ್ನು ಒಟ್ಟುಗೂಡಿಸಿ, ಸ್ವರ್ಣಲೇಪವುಳ್ಳ ಅನೋಡೈಜ್ದ್ ಫಲಕವೊಂದನ್ನು, 1972ರಲ್ಲಿ ಹಾರಿಸಲಾದ ಪಯೋನಿಯರ್ 10 ರಾಕೆಟ್ಟಿನ ಜೊತೆಗೆ, ಅಂತರಿಕ್ಷಕ್ಕೆ ಕಳಿಸುತ್ತಾನೆ. ಪಯೋನಿಯರ್ 11, ಕೂಡ ಅಂತಹುದೇ ಫಲಕವೊಂದನ್ನು ತೆಗೆದುಕೊಂಡು, ಮರುವರ್ಷವೇ ಅಂತರಿಕ್ಷಕ್ಕೆ ಪಯಣ ಹೊರಡುತ್ತದೆ. ಇಲ್ಲಿಂದಾಚೆಗೆ ಆತ ತನ್ನ ವಿನ್ಯಾಸಗಳನ್ನು ನವೀಕರಿಸುತ್ತಲೇ ಹೋಗುತ್ತಾನೆ. ಆತನ ಅಂತರಿಕ್ಷ ಸಂದೇಶಗಳಲ್ಲೇ ಅತ್ಯಂತ ವಿಸ್ತೃತ, ದೀರ್ಘವಾದುದೆಂದರೆ, ಆತನೇ ಜೋಡಿಸಿ, ಸಿದ್ಧಪಡಿಸಿದ, ವೊಯೇಜರ್ ಗೋಲ್ಡನ್ ರೆಕಾರ್ಡ್ ಎಂಬ ಗಗನನೌಕೆ. ಇದನ್ನು 1977ರಲ್ಲಿ ವೊಯೇಜರ್ ಸ್ಪೇಸ್ ಪ್ರಾಬ್ ಗಳ ಜೊತೆಗೆ ಹಾರಿಬಿಡಲಾಗಿತ್ತು. ಇತರ ರೋಬೋಟಿಕ್ ಮಿಶನ್ನುಗಳನ್ನು ಅಳವಡಿಸಿ, ಬಾಹ್ಯಾಕಾಶ ಕೇಂದ್ರಗಳ ಮತ್ತು ರಾಕೆಟ್ ಉಡಾವಣಾ ಕೇಂದ್ರಗಳಿಗೆ ಖರ್ಚು ಮಾಡುವ ವಿಷಯದಲ್ಲಿ ಸಗಾನ್ ತುಂಬಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ಅಲ್ಲಿನ ನಿರ್ಧಾರಗಳು ಆತ ಒಮ್ಮೊಮ್ಮೆ ಸಿಡಿದೇಳುವ ಹಾಗೆ ಮಾಡುತ್ತಿದ್ದವು.[]

ಕಾರ್ನೆಲ್ ಯೂನಿವರ್ಸಿಟಿಯಲ್ಲಿ ಸಗಾನ್ ಕ್ರಿಟಿಕಲ್ ಥಿಂಕಿಂಗ್ ವಿಷಯವಾಗಿ ಕೋರ್ಸ್ ವೊಂದನ್ನು ಕಲಿಸುತ್ತಾನೆ. ಇದು 1996ರಲ್ಲಿ ಆತ ನ್ಯುಮೋನಿಯಾದಿಂದಾಗಿ ನಿಧನನಾಗುವವರೆಗೂ ಮುಂದುವರೆಯುತ್ತದೆ. ತಾನು ಮೈಲೋಡಿಸ್ಪ್ಲಾಸ್ಟಿಕ್ ಖಾಯಿಲೆಯಿಂದ ಬಳಲುತ್ತಿರುವುದನ್ನು ಆತ ತಾನು ಸಾಯುವುದಕ್ಕೂ ಕೆಲವೇ ದಿನಗಳ ಮೊದಲು ತಿಳಿದುಕೊಂಡಿರುತ್ತಾನೆ.

ವೈಜ್ಞಾನಿಕ ಸಾಧನೆಗಳು

[ಬದಲಾಯಿಸಿ]

ಸಗಾನ್ ನ ಸಾಧನೆಗಳು ಮುಖ್ಯವಾಗಿ ಶುಕ್ರ ಗ್ರಹದ ಮೇಲಿನ ಅತ್ಯುನ್ನತ ಮೇಲ್ಮಟ್ಟದ ತಾಪಮಾನವನ್ನು ಅನ್ವೇಷಿಸಿ, ಅಭ್ಯಸಿಸಿ ವರದಿ ಸಂಗ್ರಹಿಸುವುದರ ಸುತ್ತ ಕೆಂದ್ರೀಕೃತವಾಗಿದ್ದವು. 1960ರ ಆರಂಭದಲ್ಲಿ ಶುಕ್ರ ಗ್ರಹದ ಮೇಲ್ಮೈ ವಾತಾವರಣದ ಕುರಿತು ಯಾರಿಗೂ ಗೊತ್ತೇ ಇರಲಿಲ್ಲ. ಸಗಾನ್, ಜನಪ್ರಿಯತೆಗಾಗಿ ಹೊರಬಂದ ಟೈಮ್-ಲೈಫ್ ಪುಸ್ತಕ ಪ್ಲಾನೆಟ್ಸ್ ನಲ್ಲಿ, ಅಲ್ಲಿನ ಸಾಧ್ಯತೆಗಳ ಬಗ್ಗೆ ಬರೆಯುತ್ತಾನೆ. ಸಗಾನ್ ನೆ ಹೇಳುವಂತೆ ಶುಕ್ರ ಗ್ರಹದ ಮೇಲ್ಮೈಯಲ್ಲಿ ಒಣ ಮತ್ತು ತುಂಬಾ ಬಿಸಿಯಾದ ವಾತಾವರಣವಿದ್ದು, ಇತರರು ಊಹಿಸಿದಂತೆ ಸ್ವರ್ಗ ಸದೃಶ ಪರಿಸರವೇನೂ ಇರಲಿಲ್ಲ. ಶುಕ್ರ ಗ್ರಹದ ಮೇಲಿನಿಂದ ರೇಡಿಯೋ ವಿಕಿರಣಗಳು ಹೊರಹೊಮ್ಮುವುದನ್ನು ಅನ್ವೇಷಿಸಿದ್ದ ಸಗಾನ್ ಆ ಗ್ರಹ ಮೇಲ್ಮೈ ತಾಪಮಾನ ಹೊಂದಿರುವುದನ್ನು ತಿಳಿಸಿದ್ದ.500 °C (900 °F) NASAದ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿಯ ಅತಿಥಿ ವಿಜ್ಞಾನಿಯಾಗಿದ್ದ ಸಗಾನ್, ಶುಕ್ರಗ್ರಹಕ್ಕೆ ಮೊದಲಡಿಯಿಟ್ಟ ಮರೈನರ್ ಕೃತಕ ಉಪಗ್ರಹಗಳ ರಚನೆ ಮತ್ತು ವಿನ್ಯಾಸದಲ್ಲಿ, ವಿನ್ಯಾಸ ಮತ್ತು ನಿರ್ವಹಣೆ ವಿಭಾಗದಲ್ಲಿ ತನ್ನ ಸೇವೆ ಸಲ್ಲಿಸಿದ್ದ. 1962ರಲ್ಲಿ, ಮರೈನರ್ 2, ಶುಕ್ರಗ್ರಹದ ಮೇಲಿನ ವಾತಾವರಣವನ್ನು ಕುರಿತು ಸಗಾನ್ ನ ಅಬಿಪ್ರಾಯ ಚಿತ್ರಣಗಳನ್ನು ಧೃಡೀಕರಿಸುತ್ತದೆ.

ಶನಿಗ್ರಹದ ಉಪಗ್ರಹ ಟೈಟನ್ ನ ಮೇಲ್ಪದರದಲ್ಲಿ ದ್ರವರೂಪದ ಸಾಗರವೊಂದರ ಇರುವಿಕೆಯನ್ನು ಮತ್ತು ಗುರುಗ್ರಹದ ಉಪಗ್ರಹ ಯುರೋಪಾದ ಮೇಲ್ಪದರದಲ್ಲಿ ನೀರಿನ ಸಾಗರದ ಇರುವಿಕೆಯನ್ನು ಮೊದಲ ಸಲ ತಾರ್ಕಿಕವಾಗಿ ಸಾಧಿಸಿದವರಲ್ಲಿ ಸಗಾನ್ ಮೊದಲಿಗನಾಗಿ ನಿಲ್ಲುತ್ತಾನೆ. ಹೀಗಾಗಿ ಯುರೋಪಾದ ಮೇಲೆ ಜನಜೀವನ ರೂಪುಗೊಳ್ಳುವ ಎಲ್ಲ ಸಾಧ್ಯತೆಗಳೂ ಇದ್ದವು.[] ನಂತರ ಗೆಲಿಲಿಯೋ ಕೃತಕ ಉಪಗ್ರಹದಿಂದ ಪರೋಕ್ಷವಾಗಿ, ಯುರೋಪಾದ ಮೇಲ್ಮೈ ಮೇಲೆ ನೀರಿದೆ ಎಂಬ ಅಂಶ ಬೆಳಕಿಗೆ ಬಂತು. ಟೈಟನ್ ಉಪಗ್ರಹದ ಮೇಲೆ ಕಾಣಿಸಿದ, ಒಂದು ಬಗೆಯ ರಾಸಾಯನಿಕ ಅಣುಮಿಶ್ರಿತ ಕೆಂಪು ಮಸುಕು ಬೆಳಕಿನ ರಹಸ್ಯವನ್ನು ಬಯಲು ಮಾಡಿದ್ದು ಕೂಡ ಸಗಾನ್ ನೆ. ಅದೊಂದು

ಮುಂದುವರೆದು ಆತ ಶುಕ್ರ, ಗುರು ಮತ್ತು ಮಂಗಳ ಗ್ರಹಗಳ ಮೇಲಿನ ವಾತಾವರಣವನ್ನಷ್ಟೇ ಅಲ್ಲದೆ ಅಲ್ಲಿನ ಋತುಗಳ ಬಗ್ಗೆಯೂ ತನ್ನ ಒಳನೋಟಗಳನ್ನು ಹರಿಸುತ್ತಾನೆ. ಶುಕ್ರ ಗ್ರಹದ ಮೇಲಿನ ವಾತಾವರಣವಂತೂ ತೀರ ಬಿಸಿಯಾಗಿದ್ದು, ಅದರ ಮೇಲ್ಮೈ ಮೇಲೆ ಹೆಚ್ಚುತ್ತಲೇ ಇರುವ ಒತ್ತಡವನ್ನು ಕೂಡ ಆತ ಗುರುತಿಸಿದ್ದಾನೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮಾನವನ ಅಜ್ಞಾನದ ಪರಿಣಾಮ ಎಂದು ಸಗಾನ್ ಹೇಳಿರುವುದಲ್ಲದೆ, ಅದರಿಂದ ಭೂಮಿಗೆ ಭಾರೀ ಅಪಾಯ ಎದುರಾಗಲಿದೆ ಎಂದು ಸಹ ಆತ ಆತಂಕ ವ್ಯಕ್ತಪಡಿಸಿದ್ದಾನೆ. ಹಸಿರು ಮನೆಯ ಪರಿಣಾಮವಾಗಿ ಶುಕ್ರಗ್ರಹ ಒಂದು ಕೆಂಡದುಂಡೆಯಾಗಿ, ಪರಿಸರಕ್ಕೆ ಪ್ರತಿಕೂಲವಾದ ಗ್ರಹವಾಗಿ ಮಾರ್ಪಡುವ ಬಗ್ಗೆಯೂ ಆತಂಕ ಪಟ್ಟಿದ್ದಾನೆ. ಸಗಾನ್ ಮತ್ತು ಆತನ ಕಾರ್ನೆಲ್ ಸಹೋದ್ಯೋಗಿ, ಎಡ್ವಿನ್ ಅರ್ನೆಸ್ಟ್ ಸಾಲ್ಪಿಟಾರ್ ಜೊತೆಗೂಡಿ, ಗುರುಗ್ರಹದ ಮೋಡಗಳಲ್ಲಿ ಜೀವರಾಶಿಯ ಬಗ್ಗೆ ಸಂದೇಹ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಕಾರಣ, ಅಲ್ಲಿನ ವಾತಾವರಣದಲ್ಲಿರುವ ಆಳವಾದ ಹಾಗೂ ರಾಸಾಯನಿಕ ಪರಮಾಣುಗಳ ಮಿಶ್ರಣದ ಹೆಚ್ಚಳ. ಮಂಗಳ ಗ್ರಹದ ಮೇಲೆ ಬದಲಾಗುವ ಬಣ್ಣಗಳ ಕುರಿತು ಸಂಶೋಧನೆ ನಡೆಸಿದ ಸಗಾನ್, ಅಲ್ಲಿ ಬದಲಾಗುತ್ತ ಕಾಣಿಸುವ ಬಣ್ಣಗಳು, ಎಲ್ಲರೂ ಭಾವಿಸಿದಂತೆ ಪ್ರಾಕೃತಿಕ ಅಥವಾ ಋತುಮಾನದ ಬದಲಾವಣೆಗಳಲ್ಲ. ಅವು ಬಲವಾದ ಸುಂಟರಗಾಳಿಗಳು ಬೀಸಿದಾಗ ವಾತವರಣದಲ್ಲಿ ಹರಡಿಕೊಳ್ಳುವ ಧೂಳಿನ ಪರಿಣಾಮವಷ್ಟೇ ಎಂದು ಸಗಾನ್ ಪ್ರತಿಪಾದಿಸಿದ್ದಾನೆ.

ಇದೆಲ್ಲದರ ನಡುವೆಯೂ ಸಗಾನ್ ಹೆಚ್ಚು ಪ್ರಸಿದ್ಧನಾಗಿರುವುದು, ಆತ ಅನ್ಯಗ್ರಹ ಜೀವಸಂಕುಲದ ಸಾಧ್ಯತೆಗಳ ಬಗ್ಗೆ ಮಾಡಿರುವ ಸಂಶೋಧನೆ ಮತ್ತು ರೇಡಿಯೋ ವಿಕಿರಣತೆಯಿಂದ ಉತ್ಪನ್ನವಾಗುವ ಮೂಲವಸ್ತು ಅಮಿನೋ ಆಸಿಡ್ ನ ಉಂಟಾಗುವಿಕೆಯ ಬಗ್ಗೆ ಮಾಡಿರುವ ಪ್ರಾಯೋಗಿಕ ಉಪನ್ಯಾಸಗಳಿಂದ.[]

1994ರಲ್ಲಿ ಪಬ್ಲಿಕ್ ವೆಲ್ಫೇರ್ ಮೆಡಲ್ ನ್ನು ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಸಗಾನ್ ಪಾತ್ರನಾಗಿದ್ದಾನೆ. ಇದು ಸಾಮಾಜಿಕ ಸಂಪನ್ಮೂಲದ ಅಭಿವೃದ್ಧಿಯ ಸಲುವಾಗಿ ವಿಜ್ಞಾನ ಕೊಡಮಾಡುವ ವಿಶಿಷ್ಟ ಸಂಶೋಧನೆಗಳಿಗೆ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಕೊಡುವ ಅತ್ಯುಚ್ಚ ಪುರಸ್ಕಾರ.[೧೦]

ವೈಜ್ಞಾನಿಕ ಸಮರ್ಥನೆಗಳು

[ಬದಲಾಯಿಸಿ]
ಸಂಸ್ಥೆಯ ಆರಂಭೋತ್ಸವದಲ್ಲಿ ಪ್ಲಾನೆಟರಿ ಸೊಸೈಟಿ ಮೆಂಬರ್ಸ್. ಬಲಕ್ಕೆ ಕುಳಿತಿರುವ ಕಾರ್ಲ್ ಸಗಾನ್.

ವಿಶ್ವಕ್ಕೆ ಹೋಲಿಸಿದಾಗ ಭೂಮಿಗಿಲ್ಲದ ತುಲನಾತ್ಮಕ ಮಹತ್ವದ ಜೊತೆಜೊತೆಗೆ ಮಾನವಕುಲದ ಪ್ರಾಮುಖ್ಯತೆಯ ಬಗ್ಗೆ,ತನ್ನ ವಿಚಾರಗಳನ್ನು ಸ್ಪಷ್ಟವಾಗಿ ವಿವರಿಸುವ ಮತ್ತು ತಿಳಿಯಪಡಿಸುವ ಸಗಾನ್ ನ ವಿಶಿಷ್ಟ ಗುಣದಿಂದಲೇ, ಕಾಸ್ಮೊಸ್ ಕುರಿತಾದ ಆತನ ಅನ್ವೇಷಣೆಗಳನ್ನು ಹೆಚ್ಚು ಹೆಚ್ಚು ಜನರು ತಿಳಿಯಲು ಸಾಧ್ಯವಾಯಿತು. ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಶನ್ ನಲ್ಲಿ, 1977ರಲ್ಲಿ, ರಾಯಲ್ ಇನ್ಸ್ಟಿಟ್ಯೂಶನ್ ನ ಕ್ರಿಸ್ಮಸ್ ಉಪನ್ಯಾಸಗಳನ್ನು ಸಗಾನ್ ಮಂಡಿಸುತ್ತಾನೆ. ಆನ್ ಡ್ರುಯಾನ್ ನ ಜೊತೆಗೂಡಿ, ಆತ ಅತ್ಯಂತ ಜನಪ್ರಿಯ ಥರ್ಟೀನ್ ಪಾರ್ಟ್ ಪಿಬಿಎಸ್ ಟೆಲಿವಿಶನ್ ಸರಣಿCosmos: A Personal Voyage ಕಾರ್ಯಕ್ರಮವನ್ನು, ಸ್ವತಃ ಬರೆದು, ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡುತ್ತಾನೆ. ಕಾರ್ಯಕ್ರಮದ ಆಯೋಜನೆಯ ಹೊಣೆಯೂ ಆತನದೇ ಆಗಿರುತ್ತದೆ. ಈ ಸರಣಿಯು ಜೇಕಬ್ ಬೋವೆಸ್ಕೀಸ್ ನ ದಿ ಅಸೆಂಟ್ ಆಫ್ ಮ್ಯಾನ್ ನ್ನು ಆಧರಿಸಿ ಮಾಡಿದುದಾಗಿರುತ್ತದೆ.

ಸಗಾನ್ ನನ್ನು ಅನ್ಯಗ್ರಹ ಜೀವಸಂಕುಲದ ಅಸ್ತಿತ್ವದ ಬಗ್ಗೆ ನಡೆದ ಅನ್ವೇಷಣೆಗಳ ಪ್ರತಿಪಾದಕ ಎಂದು ಸಹ ಕರೆಯಬಹುದಾಗಿದೆ. ರೇಡಿಯೋ ಟೆಲಿಸ್ಕೋಪ್ ಗಳನ್ನಿಟ್ಟುಕೊಂಡು ಅನ್ಯಗ್ರಹ ಜೀವಸಂಕುಲದಿಂದ ಬರಬಹುದಾದ ಸೂಚನೆಗಳನ್ನು ಪಡೆಯುವಂತೆ ಆತ ವೈಜ್ಞಾನಿಕ ಕಮ್ಯೂನಿಟಿಗಳಿಗೆ ಒತ್ತಾಸೆ ನೀಡುತ್ತಲೇ ಇರುತ್ತಿದ್ದ. ಆ ವಿಷಯದಲ್ಲಿ ಆತ ಅದೆಷ್ಟು ಧ್ರುಡವಾಗಿದ್ದನೆಂದರೆ, 1982ರ ಹೊತ್ತಿಗೆ, ಏಳು ಮಂದಿ ನೊಬೆಲ್ ಪ್ರೈಜ್ ಪುರಸ್ಕೃತರು, 70 ಮಂದಿ ವಿಜ್ಞಾನಿಗಳಿಂದ ಸಹಿ ಹಾಕಲ್ಪಟ್ಟಿದ್ದ, ಜರ್ನಲ್ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ, SETI ಪರ ಮನವಿಯೊಂದನ್ನು ಜಾರಿಗೊಳಿಸುವಲ್ಲಿ ಸಗಾನ್ ಯಶಸ್ವಿಯಾಗಿದ್ದ. ಅತ್ಯಂತ ವಿವಾದಿತ ವಿಷಯವೆನಿಸಿದ್ದ ಈ ವಿಚಾರದಲ್ಲಿ, ಸಗಾನ್ ನ ಈ ಯಶಸ್ಸು ಅತ್ಯಂತ ಮಹತ್ವದ ತಿರುವಾಗಿ ಪರಿಣಮಿಸಿತ್ತು. 1974ರ ನವೆಂಬರ್ 16ರಂದು, ಡಾ. ಫ್ರಾಂಕ್ ಡ್ರೇಕ್, ಅರೆಸಿಬೋ ಮೆಸೇಜ್ ಎಂಬ ಹೆಸರಿನ ರೇಡಿಯೋ ಸಂದೇಶವನ್ನು, ಅಂತರಿಕ್ಷದೊಳಕ್ಕೆ, ಅರೆಸಿಬೋ ರೇಡಿಯೋ ಟೆಲಿಸ್ಕೋಪ್ ಮೂಲಕ ಕಲಿಸುವುದರ ಹಿಂದೆಯೂ ಸಗಾನ್ ನ ಬೆಂಬಲವಿತ್ತು. ಈ ಸಂದೇಶಗಳನ್ನು ಕಲಿಸುವ ಮೂಲ ಉದ್ದೇಶ ಅನ್ಯಗ್ರಹ ಜೀವಸಂಕುಲಕ್ಕೆ ಭೂಮಿಯ ಬಗ್ಗೆ ಮಾಹಿತಿ ತಿಳಿಸಿಕೊಡುವುದಾಗಿತ್ತು.

ಪ್ರೋಫೆಶನರಿ ಪ್ಲಾನೆಟರಿ ರಿಸರ್ಚ್ ಜರ್ನಲ್, 'ಇಕರಸ್ ' ಗೆ ಸಗಾನ್ ಸತತ 12 ವರ್ಷಗಳ ಕಾಲ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕೆಲಸ ಮಾಡಿರುತ್ತಾನೆ. ಪ್ರಪಂಚದ ಅತ್ಯಂತ ದೊಡ್ಡ, ಬಾಹ್ಯಾಕಾಶ ಸಂಬಂಧೀ ಸಮೂಹವಾದ, ಸುಮಾರು 149 ದೇಶಗಳಲ್ಲಿ, 100,000 ಸದಸ್ಯರುಗಳನ್ನುಳ್ಳ, ಪ್ಲಾನೆಟರಿ ಸೊಸೈಟಿ ಯ ಸಹ-ಸಂಸ್ಥಾಪಕನಾಗಿಯೂ ಸಗಾನ್ ಕಾರ್ಯನಿರ್ವಹಿಸಿದ್ದಾನೆ. ಇದಲ್ಲದೆಯೇ, SETI ಸಂಸ್ಥೆಯ ಬೋರ್ಡ್ ಆಫ್ ಟ್ರಸ್ಟೀಸ್ ಸದಸ್ಯನೂ ಆಗಿದ್ದ. ಅಮೇರಿಕನ್ ಆಸ್ಟ್ರಾನಾಮಿಕಲ್ ಸೊಸೈಟಿಯ, ಪ್ಲಾನೆಟರಿ ಸೈನ್ಸಸ್ ವಿಭಾಗದ ಚೇರ್ಮನ್ ಆಗಿ, ಅಮೇರಿಕನ್ ಜಿಯೋ-ಫಿಸಿಕಲ್ ಯೂನಿಯನ್ ನ ಪ್ಲಾನೆಟರಿ ವಿಭಾಗದ ಅಧ್ಯಕ್ಷನಾಗಿ, ಜೊತೆಗೆ, ಅಮೇರಿಕನ್ ಅಸೋಸಿಯೇಶನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ ನ, ಆಸ್ಟ್ರಾನಮಿ ವಿಭಾಗದ ಚೇರ್ಮನ್ ಆಗಿ - ಹೀಗೆ ಹಲವಾರು ಪ್ರತಿಷ್ಟಿತ ಸಂಸ್ಥೆಗಳಿಗೆ ಸಗಾನ್ ನ ಸೇವೆ ದೊರೆತಿದೆ.

ಶೀತಲ ಸಮರದ ಉತ್ತುಂಗದ ಕಾಲದಲ್ಲಿ, ಅಂದರೆ, ಗಣಿತಶಾಸ್ತ್ರದ ಹವಾಮಾನ ನಮೂನೆಯೊಂದು, ಗಣನೀಯ ಪ್ರಮಾಣದ ಪರಮಾಣು ವಿನಿಮಯ ಪ್ರಕ್ರಿಯೆಯು ಭೂಮಿಯ ಮೇಲಿನ ಸಮತೋಲಿತ ಜನಜೀವನವನ್ನು ಅಸ್ತವ್ಯಸ್ತಗೊಳಿಸಬಹುದು ಎನ್ನುವುದರ ಹಿನ್ನೆಲೆಯಲ್ಲಿ, ನ್ಯೂಕ್ಲಿಯರ್ ಯುದ್ಧದ ಕುರಿತು ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿಯೂ ಸಗಾನ್ ಮಹತ್ವದ ಪಾತ್ರ ವಹಿಸಿದ್ದ. TTAPS ರಿಪೋರ್ಟ್ ಎಂದು ಪ್ರಕಟವಾಗುತ್ತಿದ್ದ ರಿಸರ್ಚ್ ಪೇಪರ್ ಗಳ ಐವರು ಲೇಖಕರಲ್ಲಿ S ಅಕ್ಷರದ ಒಡೆಯ ಸಗಾನ್. ಕ್ರಮೇಣ, ಪರಮಾಣು ಯುದ್ಧದ ಹಿಂದೆಯೇ ಬಂದ ಜಾಗತಿಕ ಪರಮಾಣು ಚಳಿಗಾಲದ ಕುರಿತು ಊಹಾಪೋಹಗಳ ವರದಿಯನ್ನು ಬರೆಯುವಾಗ ಕೂಡ ಸಗಾನ್ ಒಬ್ಬ ಸಹಲೇಖಕನಾಗಿ ಕೆಲಸ ಮಾಡಿದ್ದಾನೆ.[೧೧] ಅ ಪಾತ್ ವ್ಹೇರ್ ನೋ ಮ್ಯಾನ್ ಥಾಟ್: ನ್ಯೂಕ್ಲಿಯರ್ ವಿಂಟರ್ ಅಂಡ್ ದಿ ಎಂಡ್ ಆಫ್ ದಿ ಆರ್ಮ್ಸ್ ರೇಸ್ ಕೃತಿಗೆ ಕೂಡ ಸಗಾನ್ ಸಹಲೇಖಕ. ಪರಮಾಣು ಚಳಿಗಾಲದ ಕುರಿತು ಇದೊಂದು ವಿಸ್ತೃತವಾದ ಸಮಗ್ರ ಕೃತಿ.

ಆತನ ಕಾಸ್ಮೊಸ್ ಕೃತಿಯು ಹಲವಾರು ವೈಜ್ಞಾನಿಕ ವಿಷಯಗಳನ್ನು ಒಳಗೊಂಡಿತ್ತಲ್ಲದೆ, ಸೃಷ್ಟಿಯ ಮೂಲ ಮತ್ತು ವಿಶ್ವದಲ್ಲಿ ನಮ್ಮ ಸ್ಥಾನದ ಬಗ್ಗೆ ಇರುವ ದೃಷ್ಟಿಕೋನದ ಬಗ್ಗೆಯೂ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸುತ್ತದೆ. ಪಬ್ಲಿಕ್ ಬ್ರಾಡ್ಕಾಸ್ಟಿಂಗ್ ಸರ್ವಿಸ್ ನಿಂದ ಮೊದಲ ಬಾರಿಗೆ, 1980ರಲ್ಲಿ ಪ್ರಸಾರವಾದ ಈ ಕಾರ್ಯಕ್ರಮ ಸರಣಿಗೆ, ಎಮ್ಮಿ ಮತ್ತು ಪೀಬಾಡಿ ಪುರಸ್ಕಾರಗಳೂ ಸಂದಿವೆ. 60ಕ್ಕೂ ಹೆಚ್ಚು ದೇಶಗಳಲ್ಲಿ, 500ಕ್ಕೂ ಹೆಚ್ಚು ಶ್ರೋತೃಗಳಿಗಾಗಿ,[][೧೨] ಈ ಕಾರ್ಯಕ್ರಮ ಪ್ರಸಾರವಾಗಿದೆ. ಇತಿಹಾಸದಲ್ಲಿಯೇ, ಅತ್ಯಂತ ಜನಪ್ರಿಯ PBS ಕಾರ್ಯಕ್ರಮವೆಂಬ ಹೆಗ್ಗಳಿಕೆ ಇದರದ್ದು.[೧೩]

ವಿಜ್ಞಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಸಗಾನ್ ಕಾಸ್ಮೊಸ್ ನಂತಹ ಹಲವಾರು ಕೃತಿಗಳನ್ನು ರಚಿಸಿದ್ದಾನೆ. ಇದು ವೈಯಕ್ತಿಕ ಅಂತರಿಕ್ಷಯಾನ ದ ವಿಷಯವಾಗಿ, ತುಂಬಾ ವಿಸ್ತೃತವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುತ್ತದೆ.[೧೪] ಇಂಗ್ಲಿಷ್ನಲ್ಲಿ ಪ್ರಕಟವಾದ ಪುಸ್ತಕಗಳ ಪೈಕಿ ಹೆಚ್ಚು ಜನಪ್ರಿಯತೆಯನ್ನು ಈ ಕೃತಿ ಸಾಧಿಸಿತ್ತು. ಆತನ ದಿ ಡ್ರ್ಯಾಗನ್ ಆಫ್ ಈಡನ್: ಸ್ಪೆಕ್ಯುಲೆಶನ್ಸ್ ಆನ್ ದಿ ಎವಲೂಶನ್ ಆಫ್ ಹ್ಯೂಮನ್ ಇಂಟೆಲಿಜೆನ್ಸ್ ಕೃತಿಯು ಕೂಡ ಪುಲಿಟ್ಜರ್ ಪ್ರಶಸ್ತಿಗೆ ಪಾತ್ರವಾಗುವುದರ ಮೂಲಕ ಹೆಚ್ಚು ಮಾನ್ಯತೆ ಗಳಿಸಿತ್ತು. ಮತ್ತು Broca's Brain: Reflections on the Romance of Science ಸಗಾನ್ ಕಾಂಟ್ಯಾಕ್ಟ್ ಎಂಬ ಅತ್ಯಂತ ಹೆಚ್ಚು ಜನಪ್ರಿಯ ವೈಜ್ಞಾನಿಕ ಕಾದಂಬರಿಯೊಂದನ್ನು ಸಹ ಬರೆದಿದ್ದಾನೆ. ಆದರೆ, 1997ರಲ್ಲಿ, ಅದನ್ನು ಚಲನಚಿತ್ರ ತೆರೆಗೆ ಅಳವಡಿಸಿದ್ದನ್ನು ನೋಡಲು ಸಗಾನ್ ಬದುಕಿರಲಿಲ್ಲ. ಪುಸ್ತಕದಷ್ಟೇ ಜನಪ್ರಿಯತೆ ಗಳಿಸಿದ ಈ ಚಿತ್ರದಲ್ಲಿ ಜೋಡೀ ಫಾಸ್ಟರ್ ಮುಂತಾದವರು ನಟಿಸಿದ್ದರಲ್ಲದೆ, 1998ರ ಹ್ಯೂಗೋ ಪ್ರಶಸ್ತಿಯನ್ನು ಕೂಡ ಈ ಚಿತ್ರ ತನ್ನದಾಗಿಸಿಕೊಂಡಿತ್ತು.

ಮಾಸಿದ ನೀಲಿ ಚುಕ್ಕಿ: ಆರು ದಶಲಕ್ಷ ಕಿಲೋಮೀಟರುಗಳಷ್ಟು ದೂರವಿರುವ "ವೊಯೇಜರ್ ೧"ನಿಂದ ಸೆರೆಹಿಡಿಯಲಾಗಿರುವ, ಭೂಮಿಯ ಪ್ರಕಾಶಮಾನವಾದ ಚಿತ್ರ. ಈ ಚಿತ್ರವನ್ನು ಸೆರೆಹಿಡಿಯಲು NASAಗೆ, ಸಗಾನ್ ನೆ ಸಲಹೆ ನೀಡಿದ್ದು ಎನ್ನಲಾಗುತ್ತದೆ.

ಕಾಸ್ಮೊಸ್ ನ ಮುಂದುವರೆದ ಭಾಗವಾಗಿ ಸಗಾನ್ ಪೇಲ್ ಬ್ಲೂ ಡಾಟ್: ಅ ವಿಶನ್ ಆಫ್ ದಿ ಹ್ಯೂಮನ್ ಫ್ಯೂಚರ್ ಇನ್ ಸ್ಪೇಸ್ ಕೃತಿಯನ್ನು ರಚಿಸುತ್ತಾನೆ. ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಆಯ್ಕೆ ಮಾಡಿದ, 1995ರ ಜನಪ್ರಿಯ ಪುಸ್ತಕಗಳ ಪೈಕಿ ಅದೂ ಒಂದು. 1995ರ ಜನವರಿಯ ಪಿಬಿಎಸ್ ಚಾರ್ಲೀ ರೋಸ್ ಕಾರ್ಯಕ್ರಮದಲ್ಲೂ ಆಟ ಭಾಗವಹಿಸುತ್ತಾನೆ.[೧೫] ಸ್ಟೀಫನ್ ಹಾಕಿಂಗ್ ನ ಅತ್ಯಂತ ಜನಪ್ರಿಯ ಪುಸ್ತಕ ಅ ಬ್ರೀಫ್ ಹಿಸ್ಟರಿ ಆಫ್ ಟೈಮ್ ಗೂ ಸಗಾನ್ ಪ್ರಾಸ್ತಾವನೆಯೊಂದನ್ನು ಬರೆಯುತ್ತಾನೆ. ವಿಜ್ಞಾನವನ್ನು ಜನಪ್ರಿಯಗೊಳಿಸುವ ವಿಷಯದಲ್ಲಿಯೂ ಸಗಾನ್ ತುಂಬಾ ಹೆಸರು ಮಾಡಿದ್ದಾನೆ. ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆತನ ಪ್ರಯತ್ನಗಳು ತುಂಬಾ ಶ್ಲಾಘನೀಯವೆನಿಸಿವೆ. ಅಲ್ಲದೇ, ಸೈಂಟಿಫಿಕ್ ಸ್ಕೆಪ್ಟಿಸ್ಮ್ ಮತ್ತು ಸುಳ್ಳುವಿಜ್ಞಾನ(ಸೂಡೋಸೈನ್ಸ್)ನ್ನು ವಿರೋಧಿಸಿ ಆತನ ಅನಿಸಿಕೆಗಳು ತುಂಬಾ ಖ್ಯಾತಿ ಪಡೆದಿವೆ. ಅದರಲ್ಲೂ, ಬೆಟ್ಟಿ ಮತ್ತು ಬರ್ನೀ ಹಿಲ್ ಅಪಹರಣದ ಹಿನ್ನೆಲೆಯನ್ನು ಬಯಲು ಮಾಡಿದ ಹೆಗ್ಗಳಿಕೆ ಸಗಾನ್ ನದ್ದು. ಸಗಾನ್ ನ 10ನೆಯ ವರ್ಷದ ಪುಣ್ಯತಿಥಿಯ ಸಂದರ್ಭದಲ್ಲಿ, ಸಗಾನ್ ನ ಹಳೆಯ ವಿದ್ಯಾರ್ಥಿ ಡೇವಿಡ್ ಮಾರಿಸನ್, ಖಗೋಳ ವಿಜ್ಞಾನದ ಸಂಶೋಧನೆಗಳಿಗೆ, ಜನಪರ ವಿಜ್ಞಾನದ ಜನಪ್ರಿಯತೆಗೆ, ಸ್ಕೆಪ್ಟಿಕಲ್ ಚಳುವಳಿ ಮುಂತಾದವಕ್ಕೆ ಸಗಾನ್ ನ ಕೊಡುಗೆಯನ್ನು ಕುರಿತು, 'ಸ್ಕೆಪ್ಟಿಕಲ್ ಎನ್ಕ್ವೈರರ್ ' ನಲ್ಲಿ ಅಪಾರವಾಗಿ ಕೊಂಡಾಡುತ್ತಾನೆ.[೧೬]

ಜನವರಿ 1991ರ ಕುವೈತ್ ತೈಲ ಜ್ವಾಲೆಗಳು ದಕ್ಷಿಣ ಏಶಿಯಾದ ಕೃಷಿಯನ್ನು ಅಪಾರ ಪ್ರಮಾಣದಲ್ಲಿ ಹಾನಿಗೊಳಿಸಲಿವೆ ಎಂಬ ಹೇಳಿಕೆಯನ್ನು ಅದೇ ವರ್ಷ ಸಗಾನ್ ನೀಡುತ್ತಾನೆ. ನಂತರ, ಆಶ್ಚರ್ಯಕರ ರೀತಿಯಲ್ಲಿ, ತಾನ್ ಈ ಹೇಳಿಕೆ ಕಲ್ಪಿತವಾದದ್ದೆಂದೂ, ಅದು ನಿಜವಾಗದ್ದರ ಬಗ್ಗೆ ದಿ ಡೆಮಾನ್ ಹಾಂಟೆಡ್ ವರ್ಲ್ಡ್ ನಲ್ಲಿ ಹೇಳಿಕೆ ಕೊಡುತ್ತಾನೆ. ಆತನ ಹೇಳಿಕೆಯ ಪ್ರಕಾರ: "ಆ ದಿವಸ ನಡುಮಧ್ಯಾಹ್ನದಲ್ಲೂ ಕಾರ್ಗತ್ತಲು ಕವಿದಂತೆಯೇ ಇತ್ತು . ಪರ್ಷಿಯನ್ ಗಲ್ಫಿನ ಮೇಲಣ ಉಷ್ಣಾಂಶವಂತೂ 4°–6°C ಗೆ ಇಳಿದಿತ್ತು. ಆದರೂ ಅಲ್ಲಿ ಕವಿದಿದ್ದ ಹೊಗೆಯ ಹೆಚ್ಚಿನ ಪ್ರಮಾಣವೇನೂ ಭೂಮಿಯಿಂದ ಎತ್ತರದ ಮಟ್ಟದಲ್ಲಿದ್ದ ಸ್ಟ್ರ್ಯಾಟೋಸ್ಫರಿಕ್ ರೇಖೆಗಳನ್ನಾಗಲಿ, ಏಶಿಯಾದ ಭಾಗವನ್ನಾಗಲಿ ತಲುಪಿರಲಿಲ್ಲ" ಎಂದು ತಿಳಿಸಿದ್ದಾನೆ.[೧೭] 2007ರ ಆಧುನಿಕ ಕಂಪ್ಯೂಟರ್ ಮಾದರಿಗಳ ವಿಸ್ತೃತ ವರದಿಗಳ ಪ್ರಕಾರ ಕುವೈತ್ ತೈಲ ಜ್ವಾಲೆಗಳು ನೇರವಾಗಿ ಭೂಮಿಯಿಂದ ಎತ್ತರದ ಮಟ್ಟದಲ್ಲಿದ್ದ ಸ್ಟ್ರ್ಯಾಟೋಸ್ಫರಿಕ್ ರೇಖೆಗಳನ್ನಾಗಲಿ, ಏಶಿಯಾದ ಭಾಗವನ್ನಾಗಲಿ ತಲುಪಿರಲಿಲ್ಲವಾದರೂ, ಅಲ್ಲಿಂದ ಏಳುತ್ತಿದ್ದ ಹೊಗೆಯು ಹೆಚ್ಚಿನ, ವಿಸ್ತಾರವಾದ ಪ್ರದೇಶವನ್ನು, ಕಾಡಿನ ಬೆಂಕಿಯಂತೆ, ನಗರವೊಂದು ಹೊತ್ತಿ ಉರಿಯುತ್ತಿದೆಯೇನೋ ಎಂಬಂತೆ ಆವರಿಸಿತ್ತು. ಪರಮಾಣು ಹೊಡೆತದಿಂದ ಉಂಟಾದ ಹೊಗೆಯು ಇಡೀ ಪ್ರದೇಶವನ್ನೇ ಆವರಿಸಿತ್ತು.[೧೮][೧೯][೨೦][೨೧]

ತನ್ನ ನಂತರದ ವರ್ಷಗಳಲ್ಲಿ, ಸಗಾನ್, ಭೂಮಿಗೆ ಹತ್ತಿರವಿರುವ ಆಕಾಶಕಾಯಗಳು ಭೂಮಿಗೆ ಉಂಟು ಮಾಡುವ ಪರಿಣಾಮಗಳನ್ನು ಅಧ್ಯಯನ ಮಾಡುವ ವ್ಯವಸ್ಥಿತ ಅನ್ವೇಷಣಾ ಯೋಜನೆಯೊಂದನ್ನು ಪ್ರಾರಂಭಿಸುವ ಸಲಹೆ ಕೊಡುತ್ತಾನೆ.[೨೨] ಇತರ ಖಗೋಳ ಶಾಸ್ತ್ರಜ್ಞರು ಬೃಹತ್ ಪರಮಾಣು ಬಾಂಬುಗಳನ್ನು ಸೃಷ್ಟಿಸಿ, NEOದ ವರ್ತುಲವನ್ನು ಬದಲಾಯಿಸುವ ಮತ್ತು ಭೂಮಿಯ ಹೊರ ಮೈಯನ್ನು ಸ್ಪರ್ಶಿಸಿ ಹಾನಿ ಉಂಟು ಮಾಡಲಿದೆ ಎನ್ನುವ ಅಂಶವನ್ನು ವ್ಯಕ್ತಪಡಿಸಿದಾಗ ಸಗಾನ್ ಅದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಾನೆ: "ನಾವು ಒಂದು ವೇಳೆ ಭೂಮಿಯ ಪಥದಲ್ಲಿನ ಆಕಾಶಕಾಯವೊಂದರ ಮಾರ್ಗವನ್ನು ಬದಲಾಯಿಸಬಲ್ಲೆವಾದರೆ, ಅದೇ ಆಕಾಶಕಾಯವು ಭೂಮಿಯೆಡೆಗೆ ತಿರುಗಿ ಬಂದು ಬಾಂಬ್ ಒಂದರ ಮಾದರಿಯಲ್ಲಿ ಭೂಮಿಯನ್ನು ಅಪ್ಪಳಿಸುವುದರ ಸಾಧ್ಯತೆಯನ್ನೂ ಸೃಷ್ಟಿಸಬಲ್ಲವರಾಗಿದ್ದೇವೆ. ನಿಶ್ಚಯವಾಗಿ ಅದೊಂದು ಪೈಶಾಚಿಕ ಕೃತ್ಯವೇ ಆಗಲಿದೆ'.[೨೩][೨೪]

ಬಿಲಿಯನ್ಸ್ ಅಂಡ್ ಬಿಲಿಯನ್ಸ್

[ಬದಲಾಯಿಸಿ]
ಚಿತ್ರ:Sagan Viking.jpg
ಮಂಗಳ ಗ್ರಹದ ಮೇಲೆ ಬಂದಿಳಿಯಬಹುದು ಎನ್ನಲಾಗುವ ವೈಕಿಂಗ್ ಲ್ಯಾಂದರ್ ಮಾದರಿಯ ಜೊತೆ ಸಗಾನ್. ಮೈಕ್ ಕಾರ್ ಮತ್ತು ಹಾಲ್ ಮಸರ್ಸ್ಕಿ ಜೊತೆಗೂಡಿ ಸಗಾನ್ ಪರೀಕ್ಷಿಸಿದ, ವೈಕಿಂಗ್ ಬಂದಿಳಿಯಬಹುದಾದ ಸಂಭವನೀಯ ಜಾಗಗಳು.

ಕಾಸ್ಮೊಸ್ ಮತ್ತು ತನ್ನ ಇತರ ಕಾರ್ಯಕ್ರಮಗಳಾದ, ಜಾನಿ ಕಾರ್ಸನ್ ನಟನೆಯ ದಿ ಟುನೈಟ್ ಷೋ ಗಳ ಮೂಲಕ ಸಗಾನ್ ಅತ್ಯಂತ ಜನಪ್ರಿಯ ಟಿವಿ ಹೇಳಿಕೆ ಬಿಲಿಯನ್ಸ್ ಅಂಡ್ ಬಿಲಿಯನ್ಸ್ ನ ಸೃಷ್ಟಿಕರ್ತ ಎಂಬ ಊಹಾಪೋಹಕ್ಕೆ ಗುರಿಯಾಗುತ್ತಾನೆ. ಆದರೆ, ಕಾಸ್ಮೊಸ್ ಸರಣಿ ಕಾರ್ಯಕ್ರಮದ ಆ ಹೇಳಿಕೆ ತನ್ನದಲ್ಲವೆಂದು ಸಗಾನ್ ವಾದಿಸುತ್ತಾನೆ.[೨೫] ಇದಕ್ಕೆ ತೀರ ಹತ್ತಿರದ ಅರ್ಥವಿದ್ದ ಬಿಲಿಯನ್ ಮೇಲೆ ಬಿಲಿಯನ್ ಗಳು ಎಂಬ ಪದವನ್ನು ಕಾಸ್ಮೊಸ್ ಪುಸ್ತಕದಲ್ಲಿ ಬಳಸಿದ್ದಾರ ಬಗ್ಗೆ ಆತ ಹೇಳಿಕೊಳ್ಳುತ್ತಾನೆ:[೨೬]

A galaxy is composed of gas and dust and stars—billions upon billions of stars.

—Carl Sagan, Cosmos, chapter 1, page 3[೨೭]

ಅದೇನೇ ಇದ್ದರೂ, ತಾನು ಮತ್ತೆ ಮತ್ತೆ ಬಿಲಿಯನ್ಸ್ ಪದ ಬಳಸಿದ್ದರ ಬಗ್ಗೆ (ಮತ್ತು ಆ ಪದ ಪ್ರತಿಯೊಂದು ಸನ್ನಿವೇಶದಲ್ಲಿಯೂ ಬೇರೆ ಬೇರೆ ಅರ್ಥಗಳನ್ನು ಕೊಡುವುದರ ಬಗ್ಗೆ ಹೇಳುತ್ತಾ ಸಗಾನ್ ತಾನು 'ಬಿಲಿಯನ್' ಪದ ಬಂದಾಗಲೆಲ್ಲ 'b' ಅಕ್ಷರವನ್ನು ಮಿಲಿಯನ್ಸ್ ಪದದಿಂದ ಬೇರ್ಪಡಿಸಲು, ಓದುಗರ ಮನಸಿನಲ್ಲಿ ಅದು ಉಳಿಯಲು ಪರ್ಯಾಯವಾಗಿ ಮತ್ತು ಬೇಕೆಂದೇ ಬಳಸಿದ್ದರ ಬಗ್ಗೆ ಹೇಳುತ್ತಾನೆ).[೨೫] ಇದೆ ಮುಂದೆ ಆತ ಹಾಸ್ಯಬ್ರಹ್ಮರೆನಿಸಿದ್ದ ಜಾನಿ ಕಾರ್ಸನ್,[೨೮] ಗೇರಿ ಕ್ರೋಗರ್, ಮೈಕ್ ಮೈಎರ್ಸ್, ಬ್ರೋನ್ಸನ್ ಪಿನ್ಕಟ್, ಪೆನ್ ಜಿಲ್ಲಿಯೆಟ್ ಮತ್ತು ಹ್ಯಾರಿ ಶಿಯರರ್ ಹಾಗೂ ಇತರರ ಹಾಸ್ಯ ಪ್ರದರ್ಶನದ ಮೂಲವನ್ನಾಗಿಸಲು ಕಾರಣ ಎಂದು ಹೇಳುತ್ತಾನೆ. ಫ್ರಾಂಕ್ ಜಪ್ಪಾ ಬಿ ಇನ್ ಮೈ ವೀಡಿಯೋದಲ್ಲಿ ವಿಡಂಬನಾತ್ಮಕವಾಗಿ "ಅಟೋಮಿಕ್ ಲೈಟ್" ಎಂಬ ಸಾಲನ್ನು ಬಳಸುತ್ತಾನೆ. ಸಗಾನ್ ಇದೆಲ್ಲವನ್ನೂ ತುಂಬಾ ತಮಾಷೆಯಾಗಿ, ಹಗುರವಾಗಿ ಸ್ವೀಕರಿಸುತ್ತಾನೆ. ತನ್ನ ಕಡೆಯ ಪುಸ್ತಕ ಬಿಲಿಯನ್ಸ್ ಅಂಡ್ ಬಿಲಿಯನ್ಸ್ ನಲ್ಲಿ ಕೆನ್ನೆಯಲ್ಲಿ ನಾಲಗೆ ಎಂಬಂತೆ ಚರ್ಚೆಯನ್ನು ಆರಂಭಿಸುತ್ತಾನೆ. ಅಲ್ಲಿ ಕಾರ್ಸನ್ ಸ್ವತಃ ಒಬ್ಬ ಅಮೆಚ್ಯೂರ್ ಖಗೋಳಜ್ಞನಾಗಿ ಕಾಣಿಸಿಕೊಂಡು, ತನ್ನ ಹಾಸ್ಯ ಪ್ರದರ್ಶನ ನಿಜಕ್ಕೂ ವಿಜ್ಞಾನದ ನೈಜ ದೃಶ್ಯ ಎಂಬಂತೆ ಅಭಿನಯಿಸುತ್ತಾನೆ.[೨೫]

ಈ ತರಹದ ಹಾಸ್ಯ ಪ್ರದರ್ಶನಗಳಲ್ಲಿ ತನ್ನ ವ್ಯಕ್ತಿತ್ವ ವಿಡಂಬನಾತ್ಮಕವಾಗಿ ಬಿಂಬಿತವಾಗಿರುವುದರ ಬಗ್ಗೆ ಸಗಾನ್ ಅದೊಂದು ಬೃಹತ್ ಕಾಸ್ಮಿಕ್ ಅಳತೆ ಎಂದು ಹೇಳುತ್ತಾನೆ. ಅದೊಂದು ಧನ್ಯತೆಯ ಮತ್ತು ಅಂತರಿಕ್ಷದ ವಿಶಾಲತೆಗೆ ಸಮನಾದ ಅನುಭೂತಿ ಎಂಬುದು ಆತನ ಅನಿಸಿಕೆ. ಹಾಗಾಗಿಯೇ "ವಿಶಾಲ ಅಂತರಿಕ್ಷದ ಸಹಸ್ರಾರು, ಲಕ್ಷಾಂತರ, ಕೋಟ್ಯಂತರ ನಕ್ಷತ್ರಗಳು ಎಲ್ಲ ಸಾಗರ ತೀರಗಳ ದಂಡೆಯ ಮರಳಿಗಿಂತಲೂ ಹೆಚ್ಚು" ಎಂಬುದು ಆತನ ವಿಸ್ಮಯದ ಭಾವನೆ. ಇಷ್ಟೆಲ್ಲದರ ನಡುವೆಯೂ, ಸರಣಿ 8ರಲ್ಲಿ "ಅಂತರಿಕ್ಷ ಮತ್ತು ಕಾಲದ ಜೊತೆ ಪಯಣ" ಆತನ "ಪ್ರಪಂಚವು ಇತಿಹಾಸದ ಗಂಭೀರ ವಿಭಾಗ" ಎಂಬ, ವಿಶಾಲಾರ್ಥದ ಹೇಳಿಕೆ ವ್ಯಾಪಕವಾಗಿ ತಪ್ಪು ಅರ್ಥ ಪಡೆದುಕೊಳ್ಳುವುದು ವಿಪರ್ಯಾಸ.Cosmos: A Personal Voyage

"ವಿಶಾಲ ಅಂತರಿಕ್ಷದ ಸಹಸ್ರಾರು, ಲಕ್ಷಾಂತರ, ಕೋಟ್ಯಂತರ ವಿಶ್ವಗಳು ಎಲ್ಲ ಸಾಗರ ತೀರಗಳ ದಂಡೆಯ ಮರಳಿಗಿಂತಲೂ ಹೆಚ್ಚು. ಅಲ್ಲಿನ ಪ್ರತಿಯೊಂದು ವಿಶ್ವವೂ ನಾವಿರುವಷ್ಟೇ ಸಹಜವಾಗಿ ಇರುವಂಥದು ಮತ್ತು ಅಲ್ಲಿನ ಪ್ರತಿಯೊಂದು ಗ್ರಹವೂ ಅದರ ಭವಿಷ್ಯವನ್ನು ಸೂಚಿಸುವ ಘಟನೆಗಳು, ಆಕಸ್ಮಿಕಗಳು ಮತ್ತು ಅಂಶಗಳಾಗಿವೆ. ಅಸಂಖ್ಯಾತ ವಿಶ್ವಗಳು, ಎಣಿಸಲಾರದಷ್ಟು ಕ್ಷಣಗಳು, ಅನಂತ ಅವಕಾಶದ ಮತ್ತು ಸಮಯದ ವಿಶಾಲತೆಗೆ ಹಿಡಿದ ಕನ್ನಡಿಯಾಗಿವೆ. ಈ ಇಂಥ ಕ್ಷಣದಲ್ಲಿ, ನಮ್ಮ ಪುಟ್ಟ ಗ್ರಹದಲ್ಲಿ ನಾವು ಪ್ರಪಂಚವು ಇತಿಹಾಸದ ಗಂಭೀರ ವಿಭಾಗದ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಇವತ್ತು ನಾವು ನಮ್ಮ ವಿಸ್ಗ್ವದೊಡನೆ ಏನು ಮಾಡುತ್ತೇವೆಯೋ, ಮುಂದಿನ ಹಲವಾರು ಶತಮಾನಗಳವರೆಗೆ, ಅದು ಪರಿಣಾಮಕಾರಿಯಾಗಿ ಮುಂದುವರೆಯುತ್ತಾ, ನಮ್ಮ ಸಂತತಿಯ ಮೇಲೂ ತನ್ನ ಪ್ರಭಾವ ಬೀರಲಿದೆ. ನಮ್ಮ ನಾಗರೀಕತೆಯನ್ನೇ ಅಥವಾ ನಮ್ಮ ಸಂತತಿಯನ್ನೇ ನಾಶಪಡಿಸಿಬಿಡುವ ಎಲ್ಲ ಶಕ್ತಿಯೂ ನಮ್ಮ ಕೈಯಲ್ಲೇ ಇದೆ".

ಸಗಾನ್ ಯುನಿಟ್ಸ್

[ಬದಲಾಯಿಸಿ]

ಹಾಸ್ಯರೂಪದಲ್ಲಿ ಸಗಾನ್ ನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ, ಸಗಾನ್ ನನ್ನು ಕನಿಷ್ಠ ನಾಲ್ಕು ಬಿಲಿಯನ್ ಗಳಿಗೆ ಸಮನಾದ ಒಂದು ಅಳತೆಗೋಲಾಗಿ ಬಿಂಬಿಸಲಾಗಿದೆ. ಕಾರಣವೇನೆಂದರೆ, ಬಿಲಿಯನ್ ಮತ್ತು ಬಿಲಿಯನ್ ಗಳ ಸಂಖ್ಯೆಯೊಂದರ ಜಾಗದಲ್ಲಿ ಮೊದಲಿನ ಸಂಖ್ಯೆಯನ್ನು ಬಿಲಿಯನ್ ಪ್ಲಸ್ ಟು ಬಿಲಿಯನ್ ಗೆ ಸೀಮಿತಗೊಳಿಸಲಾಗಿದೆ.[೨೯][೩೦]

ಸಾಮಾಜಿಕ ಕಾಳಜಿಗಳು

[ಬದಲಾಯಿಸಿ]

ನಿರ್ದಿಷ್ಟ ಅಳತೆಯ ಅಂದಾಜು ಸೇರ್ಪಡೆಯ ಬಗ್ಗೆ ಡ್ರೇಕ್ ಸಮೀಕರಣದ ಒಟ್ಟು ಸಾರವೇನೆಂದರೆ, ಹೆಚ್ಚಿನ ಸಂಖ್ಯೆಯ ಅನ್ಯಗ್ರಹ ಜೀವಿಗಳನ್ನು ಸೃಷ್ಟಿಸಬಹುದು ಎಂಬುದು. ಆದರೆ, ಈ ರೀತಿಯ ಜೀವಸಂಕುಲದ ಅಸ್ತಿತ್ವದ ಬಗ್ಗೆ ಸೂಕ್ತ ಪುರಾವೆಗಳು ಇಲ್ಲದಿದ್ದಕ್ಕೆ ಫರ್ಮಿ ಪ್ಯಾರಡಾಕ್ಸ್, ತಾಂತ್ರಿಕ ನಾಗರೀಕತೆಗಳು ತಮ್ಮನ್ನು ತಾವೇ ತುರ್ತಾಗಿ ನಾಶ ಮಾಡಿಕೊಳ್ಳುವ ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಊಹಿಸಲಾಗಿತ್ತು. ಮನುಕುಲವು ತನ್ನನ್ನು ತಾನೇ ನಾಶಪಡಿಸಿಕೊಳ್ಳುವ ಎಲ್ಲ ಸಾಧ್ಯತೆಗಳನ್ನು ಗುರುತಿಸುವ ಮತ್ತು ಪ್ರಚಾರ ಮಾಡುವ ಈ ಅಂಶಗಳನ್ನು ಸಗಾನ್ ಗುರುತಿಸುತ್ತಾನೆ. ಈ ತರಹದ ಪ್ರಳಯ ಸಂಧಿಗ್ದತೆಯನ್ನು ತಡೆಯಲು ಮತ್ತು ಕ್ರಮೇಣ ಭೂಮಿಯು ಸ್ವತಃ ತಾನೇ ಒಂದು ಬಾಹ್ಯಾಕಾಶಕಾಯವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಈ ಎಲ್ಲ ವಿಚಾರಗಳು ಸಗಾನ್ ನನ್ನು ಪ್ರಚೋದಿಸುತ್ತವೆ. ಪರಮಾಣು ಹತ್ಯಾಕಾಂಡದಿಂದ ಉಂಟಾಗಬಹುದಾಗಿದ್ದ ಸಮಸ್ತ ಮನುಕುಲದ ಸರ್ವನಾಶದ ಕುರಿತು ಸಗಾನ್ ನಿಗಿದ್ದ ಆಳವಾದ ಕಳಕಳಿ, ಕಾಸ್ಮೊಸ್ ನ ಕಡೆಯ ದೃಶ್ಯಸರಣಿಯಾದ 'ಹು ಸ್ಪೀಕ್ಸ್ ಫಾರ್ ಅರ್ತ್?'ನಲ್ಲಿ ಅತ್ಯಂತ ಮಾರ್ಮಿಕವಾಗಿ ಚಿತ್ರಿತವಾಗಿದೆ. ಆ ಹೊತ್ತಿಗಾಗಲೇ ಸಗಾನ್ ಏರ್ ಫೋರ್ಸ್ ಅಡ್ವೈಸರಿ ಬೋರ್ಡ್ ನಿಂದ ನಿವೃತ್ತಿ ಪಡೆದು, ಸ್ವಯಂ ಇಚ್ಛೆಯ ಮೇಲೆ, ವಿಯೆಟ್ನಾಂ ಯುದ್ಧದ ಸಮಯದಲ್ಲಿ, ತನ್ನ ಅತ್ಯಂತ ರಹಸ್ಯಾತ್ಮಕ ಹೇಳಿಕೆಗಳನ್ನು ಒಪ್ಪಿಸಿಯಾಗಿತ್ತು.[೩೧] 1981ರ ಜೂನ್ ನಲ್ಲಿ, ಕಾದಂಬರಿಕಾರ್ತಿ ಆನ್ ಡ್ರುಯಾನ್ ಜೊತೆಗಿನ ತನ್ನ ಮೂರನೆಯ ಮದುವೆಯ ಬೆನ್ನಲ್ಲೇ, ಸಗಾನ್, ಅಧ್ಯಕ್ಷ ರೋನಾಲ್ಡ್ ರೀಗನ್ ನ ಮಾರ್ಗದರ್ಶನದಲ್ಲಿ ಬೆಳವಣಿಗೆಯಲ್ಲಿದ್ದ ನ್ಯೂಕ್ಲಿಯರ್ ಆರ್ಮ್ಸ್ ರೇಸ್ ನ್ನು ಕಟುವಾಗಿ ವಿರೋಧಿಸುತ್ತ, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತಾನೆ.

1983ರ ಮಾರ್ಚಿನಲ್ಲಿ, ರೀಗನ್, ಶಕ್ತಿಶಾಲಿ ಪರಮಾಣು ದಾಳಿಗಳನ್ನು ತಡೆಯುವ ಯುದ್ಧವಿರೋಧೀ ನಿಟ್ಟಿನಲ್ಲಿ 'ಸ್ಟ್ರ್ಯಾಟೆಜಿಕ್ ಡಿಫೆನ್ಸ್ ಇನಿಶಿಯೇಟಿವ್' ಎಂಬ ಕೋಟ್ಯಂತರ ರೂಪಾಯಿ ವಹಿವಾಟಿನ ಯೋಜನೆಯೊಂದನ್ನು ರೂಪಿಸುವ ಘೋಷಣೆಯೊಂದನ್ನು ಪ್ರಕಟಿಸುತ್ತಾನೆ. ಶೀಘ್ರದಲ್ಲೇ ಈ ಯೋಜನೆ 'ಸ್ಟಾರ್ ವಾರ್ಸ್' ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಸಗಾನ್ ಕೂಡಲೇ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಾನೆ. ಬೇರಾವುದೇ ಮೂಲಗಳಿಂದ ತಡೆಯಬಹುದಾದ ಯುದ್ಧದಾಳಿಯನ್ನು ಅಥವಾ ಉಪಾಯವಾಗಿ ಶತ್ರುವನ್ನು ಸೆರೆಹಿಡಿಯುವ ಸರಳ ಕೆಲಸವನ್ನು, ಅಷ್ಟೊಂದು ಹಣ ವೆಚ್ಚ ಮಾಡಿ ನಿರ್ಮಿಸುವುಸುವ ಯೋಜನೆ ಮತ್ತು ಯೋಚನೆಗಳೇ, ವಾಸ್ತವಕ್ಕೆ ದೂರವಾದ ಆಲೋಚನೆಗಳು ಎಂಬುದು ಆತನ ಅನಿಸಿಕೆಯಾಗಿರುತ್ತದೆ ಅಲ್ಲದೆಯೇ, ಮತ್ತೂ ಮುಂದುವರಿಸು ಆ ಯೋಜನೆ, ಅಮೇರಿಕ ಮತ್ತು ಸೋವಿಯೆಟ್ ಯೂನಿಯನ್ ಗಳ ನಡುವಿನ ಪರಮಾಣು ಸಮತೋಲನವನ್ನು ದುರ್ಬಲಗೊಳಿಸುವಂಥದ್ದಾಗಿರುತ್ತದೆ ಎಂಬ ಆತಂಕವೂ ಆತನಿಗಿರುತ್ತದೆ. ಆ ಯೋಜನೆ ಸಂಪೂರ್ಣವಾಗಿ ತಾಂತ್ರಿಕತೆಗೆ ವಿರುದ್ಧವಾದುದು ಎಂಬುದು ಆತನ ವಾದವಾಗಿರುತ್ತದೆ. ವಾಸ್ತವದಲ್ಲಿ ಆ ಯೋಜನೆ ಪರಮಾಣು ನಿಶ್ಯಸ್ತ್ರೀಕರಣ ಸಾಧ್ಯವೇ ಇಲ್ಲ ಎಂಬುವುದನ್ನೇ ಎತ್ತಿ ಹಿಡಿದಿರುವ ಯೋಜನೆಯಾಗಿರುತ್ತದೆ.

ಸೋವಿಯೆಟ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್, 1985ರ ಆಗಸ್ಟ್ 6ರಂದು ಜಾರಿಗೆ ಬರುವಂತೆ, 40ನೆಯ ಹಿರೋಶಿಮಾ ಪರಮಾಣು ಬಾಂಬ್ ದಾಳಿಯ ನೆನಪಿನ ಸಂದರ್ಭದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯ ಮೇಲೆ ಯಾವಾಗ ಏಕಪಕ್ಷೀಯ ತಡೆಯೊಂದನ್ನ ಘೋಷಿಸಿದರೋ, ರೀಗನ್ ಆಡಳಿತವು ತನ್ನ ಯೋಜನೆಯನ್ನು ಕೇವಲ ಒಂದು ಪ್ರಚಾರವಷ್ಟೇ ಎಂದು ನಾಟಕೀಯ ರೀತಿಯಲ್ಲಿ ಹೇಳಿ, ಸಲೀಸಾಗಿ ಕೈಬಿಟ್ಟುಬಿಡುತ್ತದೆ. ಇದಕ್ಕುತ್ತರವಾಗಿ, ಅಮೇರಿಕಾದ ಪರಮಾಣು ವಿರೋಧಿ ಮತ್ತು ಶಾಂತಿಯ ಕಾರ್ಯಕರ್ತರು, ನೇವಾಡ ಟೆಸ್ಟ್ ಸೈಟ್ ಎಂಬಲ್ಲಿ ಸರಣಿ ಧರಣಿಗಳನ್ನು ಕೈಗೊಳ್ಳುತ್ತಾರೆ. ಇದು, 1986ರ ಈಸ್ಟರ್ ಭಾನುವಾರದಂದು ಪ್ರಾರಂಭವಾದದ್ದು, 1987ರವರೆಗೂ ಮುಂದುವರೆಯುತ್ತದೆ. ಸಗಾನ್ ನನ್ನೂ ಸೇರಿಸಿದಂತೆ ನೂರಾರು ಜನ ಕಾರ್ಯಕರ್ತರನ್ನು, ಟೆಸ್ಟ್ ಸೈಟಿನ ಬೇಲಿ ತಂತಿಯನ್ನು ಹಾರಿದ ಆರೋಪದ ಮೇಲೆ ಮತ್ತು ಇನ್ನಿತರ ಆರೋಪಗಳ ಹಿನ್ನೆಲೆಯಲ್ಲಿ ಬಂಧಿಸಲಾಗುತ್ತದೆ.[೩೨]

ಖಾಸಗಿ ಜೀವನ ಮತ್ತು ನಂಬುಗೆಗಳು

[ಬದಲಾಯಿಸಿ]

ಸಗಾನ್ ತನ್ನ ಜೀವಮಾನದಲ್ಲಿ ಮೂರು ಸಲ ಮದುವೆಯಾಗುತ್ತಾನೆ: 1957ರಲ್ಲಿ ಜೀವಶಾಸ್ತ್ರಜ್ಞೆ ಲಿನ್ ಮಾರ್ಗುಲಿಸ್ ಳೊಂದಿಗೆ ವಿವಾಹ. ಈಕೆಯಿಂದ ಡೋರಿಯನ್ ಸಗಾನ್ ಮತ್ತು ಜೆರೆಮಿ ಸಗಾನ್ ಎಂಬ ಇಬ್ಬರು ಮಕ್ಕಳು; 1968ರಲ್ಲಿ ಕಲಾವಿದೆ ಲಿಂಡಾ ಸಾಲ್ಜ್ಮನ್ ಳೊಂದಿಗೆ ವಿವಾಹ. ಈಕೆಯ ಮಗನೇ ನಿಕ್ ಸಗಾನ್; ಮತ್ತೊಮ್ಮೆ ಮೂರನೆಯ ಬಾರಿ, 1981ರಲ್ಲಿ ಆನ್ ಡ್ರುಯಾನ್ ಳೊಂದಿಗೆ ವಿವಾಹ. ಈಕೆಗೆ ಅಲೆಕ್ಸಾಂಡ್ರಿಯಾ ರಷೆಲ್ (ಸಾಷಾ) ಸಗಾನ್ ಮತ್ತು ಸ್ಯಾಮುಯೆಲ್ ಡೆಮೋಕ್ರಿಟಾಸ್ ಎಂಬ ಮಕ್ಕಳು. ಡ್ರುಯಾನ್ ಲೊಂದಿಗಿನ ಆತನ ವೈವಾಹಿಕ ಜೀವನ ಆತನ ಸಾವಿನವರೆಗೂ, ಅಂದರೆ, 1996ರವರೆಗೂ ಮುಂದುವರೆಯುತ್ತದೆ.

ಐಸಾಕ್ ಅಸಿಮೋವ್ 'ತನ್ನ ಅಪೂರ್ವ ಬುದ್ಧಿವಂತಿಕೆಗೆ ತಾನೇ ಸಾಟಿ' ಎಂಬ ವ್ಯಕ್ತಿಗಳು ತೀರ ವಿರಳ, ಅಂತಹ ಕೆಲವೇ ವ್ಯಕ್ತಿಗಳಲ್ಲಿ ಸಗಾನ್ ಒಬ್ಬ ಎಂದು ವರ್ಣಿಸುತ್ತಾನೆ. ಈ ಸಾಲಿಗೆ ಸೇರುವ ಮತ್ತೊಬ್ಬ ವ್ಯಕ್ತಿಯೆಂದರೆ, ಕಂಪ್ಯೂಟರ್ ವಿಜ್ಞಾನಿ ಮತ್ತು ಕೃತಕ ಗುಪ್ತಮಾಹಿತಿ ತಜ್ಞ ಮಾರ್ವಿನ್ ಮಿನ್ಸ್ಕಿ ಎಂದು ಹೇಳುತ್ತಾನೆ.[೩೩]

ಸಗಾನ್ ಮತ್ತೆ ಮತ್ತೆ ತನ್ನ ಧರ್ಮದ ಬಗ್ಗೆ, ಧರ್ಮ ಮತ್ತು ವಿಜ್ಞಾನದ ನಡುವಿನ ಸಂಬಂಧಗಳ ಬಗ್ಗೆ, ದೇವರ ಮಾನವತ್ವದ ಕುರಿತಾಗಿ ತನಗಿದ್ದ ರೂಢಿಗತ ವೈಚಾರಿಕತೆಗಳ ಬಗ್ಗೆ, ತನ್ನ ಸ್ಕೆಪ್ಟಿಕ್ ಮನೋಭಾವದ ಬಗ್ಗೆ ಬರೆದುಕೊಳ್ಳುತ್ತಾನೆ. ಉದಾಹರಣೆಗೆ:

ಕೆಲವರಿಗೆ ದೇವರೆಂದರೆ ಅಸಾಮಾನ್ಯ ಗಾತ್ರದ, ನಾಜೂಕು ತ್ವಚೆಯ, ಉದ್ದಗೆ ಬೆಳ್ಳಗೆ ಗಡ್ಡವಿರುವ, ಆಕಾಶದಲ್ಲೆಲ್ಲೋ ಸಿಂಹಾಸನದ ಮೇಲೆ, ಕೆಳಕ್ಕೆ ಬೀಳುವ ಪ್ರತಿಯೊಂದು ಗುಬ್ಬಿಯ ಬಗ್ಗೆ ಲೆಕ್ಕ ಇಡುತ್ತಾ ಕೂತಿರುವ ಪುರುಷ ರೂಪದ ವ್ಯಕ್ತಿ. ಇನ್ನು ಕೆಲವರಿಗೆ, ಅಂದರೆ, ಬರೂಕ್ ಸ್ಪಿನೋಜಾ ಮತ್ತು ಆಲ್ಬರ್ಟ್ ಐನ್ ಸ್ಟೀನ್ ನಂಥವರಿಗೆ, ದೇವರೆಂದರೆ ವಿಶ್ವವನ್ನು ಇಡಿಯಾಗಿ, ಒಟ್ಟುಗೂಡಿಸಿ, ವರ್ಣಿಸಿ ನೋಡುವ ಕೆಲ ಭೌತಿಕ ನಿಯಮಗಳು ಮತ್ತು ಅದರ ಒಟ್ಟು ರೂಪವೇ ದೇವರು. ಕಲೆಯ ಸತ್ವವನ್ನು ಹೊಂದಿರುವ ಯಾವ ದೇಶಭಕ್ತರೂ ಕೆಲ ಅದೃಶ್ಯ ಬಾಹ್ಯಾಕಾಶ ಕಾರಣವನ್ನೋ, ಪ್ರಯೋಜನವನ್ನೋ ಮುಂದಿಟ್ಟುಕೊಂಡು ಮಾನವನ ಗಮ್ಯವನ್ನು ನಿಯಂತ್ರಿಸಿದ ಬಗ್ಗೆ ಯಾವುದೇ ಬಲವಾದ ಪುರಾವೆಗಳನ್ನು ನಾನು ಈವರೆಗೆ ಕಂಡಿಲ್ಲ.[೩೪]

ದೇವರ ಬಗೆಗಿನ ತನ್ನ ಇನ್ನೊಂದು ವಿವರಣೆಯಲ್ಲಿ ಸಮರ್ಥವಾಗಿ ಆತ ಹೇಳುವುದೇನೆಂದರೆ:

ದೇವರೆಂದರೆ ಅಸಾಮಾನ್ಯ ಗಾತ್ರದ, ನಾಜೂಕು ತ್ವಚೆಯ, ಉದ್ದಗೆ ಬೆಳ್ಳಗೆ ಗಡ್ಡವಿರುವ, ಆಕಾಶದಲ್ಲೆಲ್ಲೋ ಸಿಂಹಾಸನದ ಮೇಲೆ, ಕೆಳಕ್ಕೆ ಬೀಳುವ ಪ್ರತಿಯೊಂದು ಗುಬ್ಬಿಯ ಬಗ್ಗೆ ಲೆಕ್ಕ ಇಡುತ್ತಾ ಕೂತಿರುವ ಪುರುಷ ರೂಪದ ವ್ಯಕ್ತಿ ಎಂಬ ಅಂಶವೇ ಅತ್ಯಂತ ಹಾಸ್ಯಾಸ್ಪದವಾದದ್ದು. ಆದರೆ, ಅದೇ ಇಡೀ ವಿಶ್ವವನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವಿರುವ, ಭೌತಿಕ ನಿಯಮಗಳ ಒಟ್ಟು ರೂಪವೇ ದೇವರು ಎನ್ನುವುದಾದರೆ, ಹೌದು ದೇವರಿದ್ದಾನೆ ಎಂದು ನಾನು ಒಪ್ಪುತ್ತೇನೆ. ಆದರೆ ಇವರು ಹೇಳುವ ದೇವರು ನನಗೆ ಭಾವನಾತ್ಮಕವಾಗಿ ಅತೃಪ್ತಿ ಮೂಡಿಸಿದೆ...ಗುರುತ್ವಾಕರ್ಷಣ ಬಲದ ಪರಿಣಾಮವನ್ನೇ ದೇವರೆಂದು ಕರೆಯುವುದರಲ್ಲಿ ನನಗೆ ಯಾವುದೇ ಅರ್ಥ ಕಾಣುತ್ತಿಲ್ಲ.[೩೫]

ಇಷ್ಟಾದರೂ ಸಗಾನ್ ತಾನೊಬ್ಬ ನಿರೀಶ್ವರವಾದಿ ಎನ್ನುವುದನ್ನು ತಳ್ಳಿಹಾಕುತ್ತಾನೆ. "ದೇವರ ಬಗ್ಗೆ, ನಿರೀಶ್ವರವಾದಿಗೆ ನನಗೆ ಗೊತ್ತಿರುವುದಕ್ಕಿಂತ ಹೆಚ್ಚು ಗೊತ್ತಿರಬೇಕು".[೩೬] 1996ರಲ್ಲಿ ಆತನ ಧಾರ್ಮಿಕ ನಂಬಿಕೆಗಳ ಕುರಿತಾಗಿ ಯಾರೋ ಪ್ರಶ್ನಿಸಿದಾಗ ಸಗಾನ್ "ನಾನೊಬ್ಬ ನಾಸ್ತಿಕವಾದಿ" ಎಂದೇ ಹೇಳುತ್ತಾನೆ.[೩೭] ವಿಶ್ವದ ಸೃಷ್ಟಿಕರ್ತನ ಅಸ್ತಿತ್ವದ ಬಗ್ಗೆ ಮಾತಾಡುವುದು, ಅಥವಾ ಇಲ್ಲ ಎಂದು ಅಲ್ಲಗಳೆಯುವುದು, ಇದೆ ಎಂದು ವಾದಿಸುವುದು, ಇವೆಲ್ಲ ತುಂಬಾ ಸಂಕೀರ್ಣ ವಿಚಾರಗಳು. ಅದಕ್ಕೆ ಸವಾಲು ಹಾಕಬಲ್ಲ ಏಕೈಕ ವೈಜ್ಞಾನಿಕ ಅನ್ವೇಷಣಾ ಮಾರ್ಗವೆಂದರೆ ಶಾಶ್ವತವಾದ ಪುರಾತನ ವಿಶ್ವ ಎಂಬ ನಿಲುವು ಸದಾ ಸಗಾನ್ ದಾಗಿತ್ತು.[೩೮] ಅವನ ಪತ್ನಿಯ ಪ್ರಕಾರ ಅವನು ಏನನ್ನೂ ನಂಬುತ್ತಿರಲಿಲ್ಲ.

When my husband died, because he was so famous and known for not being a believer, many people would come up to me—it still sometimes happens—and ask me if Carl changed at the end and converted to a belief in an afterlife. They also frequently ask me if I think I will see him again. Carl faced his death with unflagging courage and never sought refuge in illusions. The tragedy was that we knew we would never see each other again. I don't ever expect to be reunited with Carl.[೩೯]

ಆನ್ ಡ್ರುಯಾನ್ ಸಗಾನನ 1985ರ ನ್ಯಾಚುರಲ್ ಥಿಯಾಲಜಿಯಲ್ಲಿ ಗ್ಲಾಸ್ಗೋ ಜಿಫಾರ್ಡ್ ಉಪನ್ಯಾಸ ಗಳನ್ನು ಪುಸ್ತಕ ರೂಪದಲ್ಲಿThe Varieties of Scientific Experience: A Personal View of the Search for God ಸಂಪಾದಿಸುತ್ತ, ಅದರಲ್ಲಿ, ಸಗಾನ್ ನಿಗೆ ಸಹಜ ಪ್ರಪಂಚದಲ್ಲಿ ದೈವತ್ವದ ಬಗ್ಗೆ ಇದ್ದ ದೃಷ್ಟಿಕೋನಗಳ ಕುರಿತು ಬರೆಯುತ್ತಾನೆ.

1988ರಲ್ಲಿ ಸಿಡಿಸಿ ಉದ್ಯೋಗಿಗಳೊಂದಿಗೆ ಸಂಭಾಷಣೆ ನಿರತ (ನಿಂತಿರುವ) ಕಾರ್ಲ್ ಸಗಾನ್.

ಸಗಾನ್ ನ ಸಮಗ್ರ ವ್ಯಕ್ತಿತ್ವವನ್ನು ಗಮನಿಸಿದಾಗ ಆತನೊಬ್ಬ ಮುಕ್ತಚಿಂತಕ, ಸ್ಕೆಪ್ಟಿಕ್ ಎಂಬುದು ತಿಳಿದು ಬರುತ್ತದೆ. ಕಾಸ್ಮೊಸ್ ಜಗತ್ತಿನಲ್ಲಿ ಆತನ ಪ್ರಮುಖ ಮಾತೊಂದು ಹೀಗಿದೆ: "ಅಸಾಧಾರಣ ಕೋರಿಕೆಗಳಿಗೆ ಅಸಾಧಾರಣ ದಾಖಲೆಗಳೇ ಆಗಬೇಕು".[೪೦] ಈ ಹೇಳಿಕೆ, ಪ್ಯಾರಾನಾರ್ಮಲ್ ವೈಜ್ಞಾನಿಕ ಸಂಶೋಧನಾ ದಾವೆಗಳ ಕಮಿಟಿಯಲ್ಲಿನ ಆತನ ಸಹವರ್ತಿ ಮಾರ್ಸೆಲೋ ಟ್ರುಜಿಯ ಇಂತಹುದೇ ಹೇಳಿಕೆಯೊಂದರ ಮೇಲೆ ರಚಿತವಾದದ್ದು. "ಅಸಾಧಾರಣ ಕೋರಿಕೆಗಳಿಗೆ ಅಸಾಧಾರಣ ಪುರಾವೆಗಳೇ ಬೇಕು".[೪೧] ಈ ವಿಚಾರವು ಫ್ರೆಂಚ್ ಗಣಿತಜ್ಞ ಮತ್ತು ಬಾಹ್ಯಾಕಾಶ ವಿಜ್ಞಾನಿಯಾಗಿರುವ ಪಿಯರೆ-ಸಿಮೊನ್ ಲ್ಯಾಪ್ಲೇಸ್ (1749–1827) ನ ವಿಚಾರಗಳನ್ನು ಅವಲಂಬಿಸಿದೆ. ಆತನ ಪ್ರಕಾರ, ಅಸಾಧಾರಣ ಕೋರಿಕೆಯೊಂದರ ಪುರಾವೆಯು ಅದರ ಅಪರಿಚಿತತೆಗೆ ಸಮತೋಲದಲ್ಲಿರಬೇಕು.[೪೨]

ಸಗಾನ್ ನಂತರದ ದಿನಗಳಲ್ಲಿ, ಆತನ ಪುಸ್ತಕಗಳು ಜಗತ್ತಿನೆಡೆಗೆ ಆತನಿಗೆ ಇದ್ದ ನೈಸರ್ಗಿಕ ಮತ್ತು ಸ್ಕೆಪ್ಟಿಕ್ ಆದ ದೃಷ್ಟಿಕೋನವನ್ನು ವಿಸ್ತರಿಸಿ ಬರೆಯುತ್ತವೆ. ವಾದಗಳನ್ನು ಒರೆಗೆ ಹಚ್ಚುವ ಮತ್ತು ದಾರಿ ತಪ್ಪಿಸುವ, ಮೋಸದ ವಾಗ್ವಾದಗಳನ್ನು ಪರೀಕ್ಷಿಸುವ ಉಪಕರಣಗಳನ್ನು The Demon-Haunted World: Science as a Candle in the Dark ರಲ್ಲಿ ಮಂಡಿಸುತ್ತಾನೆ. ಅವು ಹೆಚ್ಚಿನ ಸಮಯ, ನಿರ್ಣಾಯಕ ಆಲೋಚನೆಗಳ ಮತ್ತು ವೈಜ್ಞಾನಿಕ ಪಧ್ಧತಿಗಳ ಬಳಕೆಗೆ ಹೆಚ್ಚು ಮಹತ್ವ ಕೊಟ್ಟಂತೆ, ಅವುಗಳನ್ನೇ ಕಂಡುಬರುತ್ತದೆ. ಅನುಮೋದಿಸಿದಂತೆ ಸಗಾನ್ ನ ಮರಣಾನಂತರ 1997ರಲ್ಲಿ ಪ್ರಕಟವಾದ ಆತನ ಸಮಗ್ರ ಕೃತಿಗಳುBillions and Billions: Thoughts on Life and Death at the Brink of the Millennium ಪುಸ್ತಕದಲ್ಲಿ, ಆತನೇ ಬರೆದಿರುವ, ಗರ್ಭಪಾತದ ಬಗ್ಗೆ ಮತ್ತು ಪತ್ನಿ ಆನ್ ಡ್ರುಯಾನ್ ಆತನನ್ನು ಒಬ್ಬ ಸ್ಕೆಪ್ಟಿಕ್, ನಾಸ್ತಿಕ ಮತ್ತು ಮುಕ್ತಚಿಂತಕ ಎಂದು ಕರೆಯುವುದರ ಬಗ್ಗೆ ನೆನಪುಗಳನ್ನು ದಾಖಲಿಸುತ್ತಾ ಹೋಗುತ್ತಾನೆ.

ಮಾನವನೇ ಮುಖ್ಯ ಕೇಂದ್ರವಾಗುಳ್ಳ ಮಾನವರ ನಡುವಿನ ವ್ಯವಸ್ಥೆ ಮತ್ತು ಮನಸ್ಥಿತಿಯನ್ನು ಸಗಾನ್ ಸದಾ ವಿರೋಧಿಸುತ್ತಿದ್ದ. ಕಾರ್ನೆಲ್ ವಿದ್ಯಾರ್ಥಿಗಳಿಗೆ ಆತ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ವಿಷಯದ ಕುರಿತು ಸಲಹಾ ಪ್ರಾಧ್ಯಾಪಕನಾಗಿದ್ದ. ಕಾಸ್ಮೊಸ್ ಕೃತಿಯಲ್ಲಿನ, ಬ್ಲೂಸ್ ಫಾರ್ ಅ ರೆಡ್ ಪ್ಲಾನೆಟ್ ಅಧ್ಯಾಯದಲ್ಲಿ, ಸಗಾನ್ ಬರೆಯುತ್ತಾನೆ: "ಮಂಗಳದ ಅಂಗಳದ ಮೇಲೆ ಜೀವಸಂಕುಲ ಇರುವುದೇ ಆದಲ್ಲಿ, ಮಂಗಳನಿಗೆ ನಾವೇನೂ ಮಾಡಬಾರದು ಎಂಬುದೇ ನನ್ನ ನಂಬುಗೆ". ಆಗ ಮಂಗಳ ಗ್ರಹದ ಜೀವಿಗಳು ಬರಿಯ ಮೈಕ್ರೋಬ್ಸ್ ಗಳಾಗಿದ್ದರೂ ಕೂಡ ಅದು ಅವರಿಗೆ ಸೇರಿದ ಗ್ರಹ, ನಮ್ಮದಲ್ಲ".[೪೩]

ಸಗಾನ್ ಸ್ವತಃ ಮರಿಜುವಾನದ ಬಳಕೆದಾರನೂ, ಅದನ್ನು ಅನುಮೊದಿಸುವವನೂ ಆಗಿದ್ದ. ಮಿ. ಎಕ್ಸ್, ಎಂಬ ಸುಳ್ಳು ಹೆಸರಿನಲ್ಲಿ ಆತ ಧೂಮಪಾನ ಮಾಡುವ ಕ್ಯಾನ್ನಬೀಸ್ ಗಳ ಬಗ್ಗೆ 1971ರಲ್ಲಿ ಪ್ರಕಟವಾದ ಆತನ ಕೃತಿ 'ಮರಿಹುಆನ ರೀ ಕನ್ಸಿಡರ್ಡ್ ' ದಲ್ಲಿ ಬರೆಯುತ್ತಾನೆ.[೪೪][೪೫] ಮಾರಿಜುಆನಾದ ಬಳಕೆ ಸಗಾನ್ ಬರವಣಿಗೆಗೆ ಸ್ಫೂರ್ತಿ ನೀಡುವಲ್ಲಿ ತುಂಬಾ ಸಹಾಯ ಮಾಡಿದ ಬಗ್ಗೆ ಪ್ರಸ್ತುತ ಪ್ರಬಂಧದಲ್ಲಿ ಉಲ್ಲೇಖವಿದೆ. ಆತನ ಬೌದ್ಧಿಕ ಮತ್ತು ಸೂಕ್ಷ್ಮ ಮನೋಜ್ಞಾನದ ಅನುಭವದ ಹಿಂದೆಯೂ ಅದು ಅದಕವಗಿರುವುದಾಗಿ ತಿಳಿದುಬರುತ್ತದೆ. ಸಗಾನ್ ನ ಸಾವಿನ ನಂತರ ಆತನ ಸ್ನೇಹಿತ ಲೆಸ್ಟರ್ ಗ್ರಿನ್ಸ್ಪೂನ್ ಈ ಮಾಹಿತಿಯನ್ನು ಸಗಾನ್ ಆತ್ಮಚರಿತಕಾರ ಕೀ ಡೇವಿಡ್ಸನ್ ನಿಗೆ ತಿಳಿಸುತ್ತಾನೆ. 1999ರಲ್ಲಿ ಪ್ರಕಟವಾದ ಕಾರ್ಲ್ ಸಗಾನ್: ಒಂದು ಬದುಕು ಎಂಬ ಹೆಸರಿನ ಜೀವನಚರಿತ್ರೆಯ ಪ್ರಕಟಣೆಯು, ಸಗಾನ್ ಜೀವನದ ಈ ಎಳೆಯನ್ನು ಮಾಧ್ಯಮದವರ ಮುಂದೆ ಬಿಚ್ಚಿಟ್ಟಿತು.[೪೬][೪೭][೪೮]

1994ರಲ್ಲಿ, ಆಪಲ್ ಕಂಪ್ಯೂಟರ್ ನ ಎಂಜಿನಿಯರುಗಳು ಪವರ್ ಮ್ಯಾಕ್ 7100 ನ್ನು ಮಾರಾಟ ಮಾಡಿ ಲಕ್ಷಗಟ್ಟಲೆ ಲಾಭ ಪಡೆಯುವ ಉದ್ದೇಶದಿಂದ ಅದನ್ನು 'ಪವರ್ ಮಸಿಂತೊಶ್ 7100 ಕಾರ್ಲ್ ಸಗಾನ್' ಹೆಸರಿನಿಂದ ಕರೆಯುತ್ತಾರೆ.[] ಅದು ಉತ್ಪನ್ನವೊಂದನ್ನು ಮಾರಾಟ ಮಾಡಲು ತಾನು ಕೊಡಬಹುದಾದ ಒಪ್ಪಿಗೆ ಎಂಬುದರ ಸೂಚನೆ ದೊರೆತ ಸಗಾನ್, ಅಲ್ಲಿಯವರೆಗೆ ಆಂತರಿಕವಾಗಿ ಬಳಕೆಯಲ್ಲಿದ್ದ ಆ ಹೆಸರನ್ನು ಕೂಡಲೇ ನಿಲ್ಲಿಸಿಬಿಡುವಂತೆ, ಕೊಟ್ಟ ಹಕ್ಕುಪತ್ರವನ್ನು ಹಿಂಪಡೆಯುವ ನಿರ್ಧಾರಕ್ಕೆ ಬರುತ್ತಾನೆ. ಆಪಲ್ ಕಂಪನಿಯು ಒಪ್ಪಿದರೂ, ಅಲ್ಲಿನ ಎಂಜಿನೀರುಗಳು BHAನ ಒಳ ಕೋಡನ್ನು ಬಟ್-ಹೆಡ್ ಆಸ್ಟ್ರಾನಮರ್ ಎಂದು ಬದಲಾಯಿಸುವುದರ ಮೂಲಕ ಆತನಿಗೆ ಮೋಸ ಮಾಡುತ್ತಾರೆ.[೪೯][೫೦] ಸಗಾನ್ ತನಗಾದ ನಷ್ಟವನ್ನು ವಿರೋಧಿಸಿ, ಆಪಲ್ ಕಂಪನಿಯ ವಿರುದ್ಧ, ಫೆಡರಲ್ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತಾನೆ. ಕೋರ್ಟ್ ಆಪಲ್ ಕಂಪನಿಗೆ ಸಗಾನ್ ನ ದಾವೆಯನ್ನು ವಜಾ ಮಾಡಲು ಆದೇಶ ನೀಡುತ್ತದೆ ಹಾಗೂ ತೀರ್ಪಿನಲ್ಲಿ, 'ಇದರ ಅರಿವಿರುವ ಯಾವುದೇ ಓದುಗನೂ, ಆಪಲ್ ಕಂಪನಿಯು ಅದನ್ನು ಕೇವಲ ಮನರಂಜನಾತ್ಮಕವಾಗಿ ಮತ್ತು ವ್ಯಂಗ್ಯವಾಗಿ ಬಿಂಬಿಸಿದೆ ಎಂಬುದನ್ನು ಒಪ್ಪಿಕೊಳ್ಳದೆ ಇರಲಾರ; ಹಾಗಾಗಿ, ಖಗೋಳಜ್ಞನಾಗಿರುವ ಅರ್ಜಿದಾರ ಸಗಾನ್ ನ ಹೆಸರನ್ನು ವಿಮರ್ಶೆ ಮಾಡುವುದಕ್ಕಾಗಿ ಮತ್ತು ಕುಚೋದ್ಯಕ್ಕಾಗಿ, ಪ್ರತಿವಾದಿಯು ಈ ಕೆಲಸವನ್ನು ಮಾಡಿದೆ' ಎಂದು ಬರೆಯುತ್ತದೆ. ಯಾವೊಬ್ಬನೂ ಖ್ಯಾತ ಖಗೋಳಜ್ಞನೊಬ್ಬನ, ಇನ್ನೂ ವ್ಯಾಖ್ಯಾನಿಸದ ಪದವನ್ನು ಬಟ್-ಹೆಡ್ ಎಂದು ಉಡಾಫೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ.[೪೯][೫೧] ನಂತರ ಸಗ್ಗಾನ್ ಆಪಲ್ ಕಂಪನಿಯ ವಿರುದ್ಧ, ಅದು ತನ್ನ ಮೂಲ ಹೆಸರನ್ನು ಬಳಸಿಕೊಂಡಿದೆ ಎಂದು ಮತ್ತೊಂದು ದಾವೆ ಹೂಡುತ್ತಾನೆ ಆದರೆ ಮತ್ತೆ ಸೋಲುತ್ತಾನೆ.[೫೨] ಸಗಾನ್ ಮತ್ತೆ ಮೇಲ್ಮನವಿಯೊಂದನ್ನು ಸಲ್ಲಿಸುತ್ತಾನೆ.[೫೨] 1995ರ ನವೆಂಬರ್ ನಲ್ಲಿ ಬಾಹ್ಯವಾಗಿ ನೀಡಲಾದ ಕೋರ್ಟ್ ಒಪ್ಪಂದವೊಂದರಲ್ಲಿ, ಆಪಲ್ ಮತ್ತು ಅದರ ವ್ಯಾಪಾರೀ ಪೇಟೆಂಟ್ ಗಳು ಸಮಾಧಾನ ನೀಡುವಂತಿದ್ದ ಹೇಳಿಕೆಯೊಂದನ್ನ ಪ್ರಕಟಿಸುತ್ತದೆ. ಅದರಲ್ಲಿ, "ಆಪಲ್ ಸದಾ ಡಾ.ಸಗಾನ್ ಬಗ್ಗೆ ಅತ್ಯುಚ್ಚ ಗೌರವವನ್ನು ಹೊಂದಿದೆ. ಡಾ. ಸಗಾನ್ ಅಥವಾ ಅವರ ಕುಟುಂಬ ವರ್ಗದವರಿಗಾಗಲಿ, ನೋವುಂಟು ಮಾಡುವುದು ಅದರ ಉದ್ದೇಶವಾಗಿರಲಿಲ್ಲ".[೫೩]

ಸಗಾನ್ ನಂತರ ಸ್ಟಾನ್ಲೀ ಕ್ಯುಬ್ರಿಕ್ ನಿರ್ಮಿತ '2001: ಅ ಸ್ಪೇಸ್ ಒಡಿಸ್ಸಿ' ಚಿತ್ರದಲ್ಲಿ ಸ್ವಲ್ಪ ದಿನಗಳಿಗಾಗಿ ಮಾತ್ರ ಸಲಹಕಾರನಾಗಿ ಕೆಲಸ ಮಾಡುತ್ತಾನೆ.[] ಈ ಚಿತ್ರ ಅನ್ಯಗ್ರಹ ಜೀವಿಗಳ ಸುಪರ್ ಇಂಟೆಲಿಜೆನ್ಸ್ ನ್ನು ಪ್ರತಿಬಿಂಬಿಸುವುದಕ್ಕಿಂತ ಹೆಚ್ಚಾಗಿ ಸೂಚಿಸುತ್ತದೆ[೫೪] ಎಂಬ ಅನಿಸಿಕೆ ಸಗಾನ್ ನದಾಗಿತ್ತು.

ಸಗಾನ್ ಮತ್ತು UFOಗಳು

[ಬದಲಾಯಿಸಿ]

ಸಗಾನ್ ನಿಗೆ UFO(Unidentified flying object) ಗಳ ಮಾಹಿತಿಗಳ ಬಗ್ಗೆ ತೀವ್ರವಾದ ಆಸಕ್ತಿಯಿತ್ತು. ಕಡೆಯ ಪಕ್ಷ ಜೇಕ್ಸ್ ವಲ್ಲೀ ಜೊತೆಗೆ ಆತ ನಡೆಸಿದ ಚರ್ಚೆಗಳಿಂದೀಚೆಗೆ, ಅಂದರೆ ಸುಮಾರು 1964ರಿಂದಲಾದರೂ ಆತ ಇದರಲ್ಲಿ ಅಪಾರ ಆಸಕ್ತಿ ತಳೆದದ್ದು ಗೋಚರವಾಗುತ್ತದೆ.[೫೫] UFOಗಳ ಬಗ್ಗೆ ಯಾವುದೇ ಅಸಾಮಾನ್ಯವಾದ, ಅತಿಶಯವಾದ ಉತ್ತರ ಕೊಡಲು ಸಗಾನ್ ಸಿದ್ಧನಿಲ್ಲದಿದ್ದರೂ, ಬಾಹ್ಯಾಕಾಶ ವಿಜ್ಞಾನಿಗಳು ಅವುಗಳು ರವಾನಿಸುವ ಮಾಹಿತಿಗಳ ಬಗ್ಗೆ ತಕ್ಕ ಮತ್ತು ಅಗತ್ಯ ಸಂಶೋಧನೆ ಕೈಗೊಳ್ಳುವುದು ಅವಶ್ಯಕವೆಂದು ಸಗಾನ್ ಭಾವಿಸಿದ್ದ. ಕಡೆಯ ಪಕ್ಷ ಸಾರ್ವಜನಿಕರ ಕುತೂಹಲ ತಣಿಸುವುದಕ್ಕಾದರೂ ವಿಜ್ಞಾನಿಗಳು ಸಂಶೋಧನೆಯನ್ನು ಕೈಗೊಳ್ಳಬೇಕೆಂದು ಆತ ಬಯಸುತ್ತಿದ್ದ.

ಒಂದೆಡೆ ಸ್ಟುವರ್ಟ್ ಅಪ್ಪೆಲ್ಲೇ ಬರೆಯುವಂತೆ, ಸಗಾನ್ ಆಗಿಂದಾಗ್ಗೆ ತಾನು UFOಗಳ ಬಗ್ಗೆ ಅರ್ಥೈಸಿಕೊಂಡ ತಾರ್ಕಿಕ ಹಾಗೂ ಪ್ರಾಯೋಗಿಕ ಭ್ರಮೆಗಳ ಬಗ್ಗೆ ಮತ್ತು ಒಂದು ರೀತಿಯ ಅಪಹರಣಕ್ಕೊಳಪಟ್ಟ ಗುಂಗಿನಲ್ಲಿ ಬರೆಯುತ್ತಲೇ ಇರುತ್ತಿದ್ದ. ತೀರ ಅತಿಶಯವೆನಿಸುವ ವಿವರಣೆ ಕೊಡಲು ಸಗಾನ್ ಬಯಸುತ್ತಿರಲಿಲ್ಲವಾದರೂ, ಒಂದೆಡೆ ಪ್ರಾಯೋಗಿಕ ಮತ್ತು ಶೈಕ್ಷಣಿಕ ಆಯಾಮಗಳಿದ್ದ ಅಂಶಗಳು UFOಗಳ ಪರೀಕ್ಷೆಗೆ ತೊಡಗುವಂತೆ ಪ್ರಚೋದಿಸುತ್ತಿದ್ದವು. ಹಾಗಾಗಿಯೇ, ಈ ವಿಷಯ ಆತನಿಗೆ ಅಧ್ಯಯನಯೋಗ್ಯವೆಂದು ತೋರಿದ್ದಲ್ಲಿ ಅಚ್ಚರಿಯೇನೂ ಇರಲಿಲ್ಲ.[೫೬]

1966ರಲ್ಲಿ ಸಗಾನ್ ಆಡ್ ಹಾಕ್ ಕಮಿಟಿಯ ಸದಸ್ಯನಾಗಿ, ಯು.ಎಸ್. ಏರ್ ಫೋರ್ಸ್ ನ UFO ಇನ್ವೆಸ್ಟಿಗೇಶನ್ ಯೋಜನೆಯಾಗಿದ್ದ, ಪ್ರಾಜೆಕ್ಟ್ ಬ್ಲೂ ಬುಕ್ ನ ಪರಿಶೀಲನೆಯ ಜವಾಬ್ದಾರಿ ಹೊತ್ತಿರುತ್ತಾನೆ. ಆದರೆ ಕಮಿಟಿಯು ಬ್ಲೂ ಬುಕ್ ಅಧ್ಯಯನಾಂಶಗಳು ವೈಜ್ಞಾನಿಕವಾಗಿ ದುರ್ಬಲವಾಗಿವೆ ಎಂಬ ಹೇಳಿಕೆ ನೀಡಿ, ಮುಂದೆ ಅದನ್ನು ಯೂನಿವರ್ಸಿಟಿಯ ಮೂಲದ ಪ್ರಾಜೆಕ್ಟ್ವೊಂದು ಅದನ್ನು ಪರಿಶೀಲಿಸಿ, UFOಗೆ ಹೆಚ್ಚು ವೈಜ್ಞಾನಿಕ ತಿರುವು ಕೊಡುವಂತೆ ಆದೇಶ ಹೊರಡಿಸುತ್ತದೆ. ಇದರ ಫಲವಾಗಿ ಭೌತಶಾಸ್ತ್ರಜ್ಞ ಎಡ್ವರ್ಡ್ ಕೊಂಡೋನ್ ನ ನೇತೃತ್ವದಲ್ಲಿ ಕೊಂಡೋನ್ ಕಮಿಟಿಯು (1966–1968) ರೂಪುಗೊಳ್ಳುತ್ತದೆ. ಅವರ ಸಂಶೋಧನೆಗಳ ಅಂತಿಮ ವರದಿಗಳ ಪ್ರಕಾರ, UFOಗಳು ಮೂಲದಲ್ಲಿ ಏನೇ ಆಗಿದ್ದರೂ, ರಾಷ್ಟ್ರದ ರಕ್ಷಣೆಯ ವಿಷಯವಾಗಿ ಅವುಗಳಿಂದ ಯಾವುದೇ ಹಾನಿಯಿಲ್ಲ ಎಂಬ ಅಂಶವನ್ನು ಒತ್ತಿ ತಿಳಿಸುತ್ತವೆ.

ರಾನ್ ವೆಸ್ಟ್ರಂ ಬರೆಯುವ ಹಾಗೆ UFOಗಳ ಕುರಿತಾದ ಪ್ರಶ್ನೆಗಳ ಬಗ್ಗೆ ಸಗಾನ್ ನ ಅತ್ಯುಚ್ಚ ಅನಿಸಿಕೆ ಮತ್ತು ಗಮನಿಸುವಿಕೆಯ ಪರಿಣಾಮವೇ 1969ರ AAASನ ಚರ್ಚಾಗೋಷ್ಠಿ. ಈ ವಿಷಯವಾಗಿ ಹಲವಾರು ವಿಭಿನ್ನ ಶಿಕ್ಷಿತ ಅಭಿಪ್ರಾಯಗಳು ಅಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರನ್ನೊಡಗೂಡಿ, ಜೇಮ್ಸ್ ಮೆಕ್ಡೋನಲ್ಡ್, ಮತ್ತು ಜೆ. ಅಲೆನ್ ಹೈನೆಕ್ ಮೊದಲಾದವರಿಂದ ಅಷ್ಟೇ ಅಲ್ಲದೆ, ಸ್ಕೇಪ್ಟಿಕ್ ಖಗೋಳಜ್ಞರಾಗಿದ್ದ ವಿಲಿಯಂ ಹಾರ್ಟ್ಮನ್ ಮತ್ತು ಡೋನಲ್ಡ್ ಮೆನ್ಜೆಲ್ ಮುಂತಾದವರಿಂದಲೂ ವ್ಯಕ್ತವಾಗುತ್ತವೆ. ಅಲ್ಲಿ ಮಾತಾಡುತ್ತಿರುವವರ ಸರದಿ ಕೂಡ ಸಮತೋಲಿತವಾದುದಾಗಿರುತ್ತದೆ. ಅದರ ಯಶಸ್ಸಿನ ರೂವಾರಿ ಸಗಾನ್. ಎಡ್ವರ್ಡ್ ಕಾಂಡೋನ್ ನಿಂದ ವಿಪರೀತ ಒತ್ತಡವಿದ್ದರೂ, ಸಮ್ಮೇಳನ ಶಾಂತವಾಗಿ, ನಿರುದ್ವಿಜ್ಞವಾಗಿ ನಡೆದದ್ದು ಸಗಾನ್ ನಿಂದಾಗಿ.[೫೫] ಭೌತಶಾಸ್ತ್ರಜ್ಞರಾದ ಥಾರ್ಟನ್ ಪೇಜ್ ನ ಜೊತೆಗೂಡಿ ಸಗಾನ್, ಸಿಪೋಸಿಯಂ ನಲ್ಲಿ ಕೊಡಲಾದ ಉಪನ್ಯಾಸಗಳನ್ನು ಮತ್ತು ಚರ್ಚೆಗಳನ್ನು ಪರಿಷ್ಕರಿಸುತ್ತಾನೆ. ಅವು 1972ರಲ್ಲಿ UFOs:ಅ ಸೈಂಟಿಫಿಕ್ ಡಿಬೇಟ್ ಹೆಸರಿನಲ್ಲಿ ಪ್ರಕಟವಾಗುತ್ತವೆ. ಸಗಾನ್ ನ ಹಲವಾರು ಪುಸ್ತಕಗಳ ಪೈಕಿ ಬಹುತೇಕ ಪುಸ್ತಕಗಳು UFOಗಳನ್ನು ಪರೀಕ್ಷಾತ್ಮಕವಾಗಿ ಅಭ್ಯಸಿಸಿದ ಬಗ್ಗೆಯೇ ಇವೆ. (ಅವುಗಳಲ್ಲಿ ಕಾಸ್ಮೊಸ್ ಸರಣಿ ಕೂಡ ಒಂದು) ಹಾಗೆಯೆ ಆತ ಕಾಸ್ಮೊಸ್ ಪ್ರಕ್ರಿಯೆಯಲ್ಲಿ ದೈವಿಕವಾದ ಯಾವುದೋ ಶಕ್ತಿ ಅಥವಾ ಪ್ರವಾಹದಂಥದ್ದು ಹರಿಯುತ್ತಿದೆ ಎಂದು ಬಲವಾಗಿ ವಾದಿಸುತ್ತಾನೆ.

ಮತ್ತೊಮ್ಮೆ ತನ್ನ ಕಾಸ್ಮೊಸ್ ಸರಣಿಯಲ್ಲಿ ನಕ್ಷತ್ರ ಪುಂಜಗಳ ನಡುವಿನ ಅಂತರಿಕ್ಷ ಪಯಣದ ಬಗ್ಗೆ ಸಗಾನ್ ತನ್ನ ನಿಲುವುಗಳನ್ನು ಪ್ರಚುರಪಡಿಸುತ್ತಾನೆ.

ತನ್ನ ಕಡೆಯ ಪುಸ್ತಕಗಳಲ್ಲಿ ಒಂದರಲ್ಲಿ ಸಗಾನ್ ವಾದಿಸುವುದೇನೆಂದರೆ, ಅನ್ಯಗ್ರಹ ಬಾಹ್ಯಾಕಾಶ ಸ್ಪೇಸ್ ಕ್ರಾಫ್ಟ್ ಗಳು ಭೂಮಿಯನ್ನು ತಲುಪಿವೆ ಎಂಬ ಊಹೆ ಅಥವಾ ಸಂಭವಗಳು ತೀರಾ ತೀರಾ ಕಡಿಮೆ.   ಏನೇ ಆದರೂ, ಶೀತಲ ಸಮರದ ಕಳಕಳಿಗಳು, UFOಗಳ ವಿಷಯವಾಗಿ ಸರಕಾರದ ಮತ್ತು ಪ್ರಜೆಗಳ ಆಲೋಚನೆಯ ಗುರಿ ತಪ್ಪಿಸಿವೆ ಎಂಬುದು ಗೊತ್ತಾಗಿತ್ತು. ಅಲ್ಲದೆ, "ಕೆಲ UFO ವರದಿಗಳು ಮತ್ತು ವಿಶ್ಲೇಷಣೆಗಳು, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಗಜಗಾತ್ರದ ಕಡತಗಳು, ಜನಸಾಮಾನ್ಯರಿಗೆ ಕೈಗೆಟುಕದೆ ಇದ್ದದ್ದೂ ಒಂದು ಕಾರಣ ಮತ್ತು ಅದರ ಬೆಲೆಯನ್ನು ಅವರೀಗ ತೆರಬೇಕಾಗಿದೆ ಎಂದೂ ಸಹ ಸಗಾನ್ ನಿಗೆ ತಿಳಿದಿತ್ತು... ಹಾಗಾಗಿಯೇ, ಇದ್ದ ಕಡತಗಳನ್ನೆಲ್ಲ ಮರು ವಿಂಗಡಣೆ ಮಾಡಿ, ಅವನ್ನು ಜನರಿಗೆ ಸಿಗುವ ವ್ಯವಸ್ಥೆ ಮಾಡಬೇಕಾಗಿದೆ" ಎಂಬುದು ಆತನಿಗೆ ಮನದಟ್ಟಾಗಿತ್ತು.  ಬಹಿರಂಗಪಡಿಸದೇ ಮುಚ್ಚಿಟ್ಟಿದ್ದ UFO ಮಾಹಿತಿಯ ಬಗ್ಗೆ ಸಗಾನ್ ತೀವ್ರ ವಿರೋಧ ವ್ಯಕ್ತಪಡಿಸಿ, ಅನ್ಯಗ್ರಹ ಜೀವಿಗಳು ಭೂಮಿಯನ್ನು ಈಗಾಗಲೇ ತಲುಪಿವೆ ಅಥವಾ ಇನ್ನೇನು ತಲುಪಲಿವೆ ಎಂಬ ಮಾಹಿತಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡಲು ಶತಾಯಗತಾಯ ಪ್ರಯತ್ನಿಸುತ್ತಾನೆ.[೫೭]
ಬ್ರೂಕ್ಲಿನ್ ನ ಬೋಟಾನಿಕ್ ಗಾರ್ಡನ್ನಿನಲ್ಲಿ ಸೆಲೆಬ್ರಿಟಿ ಪಾತ್ ನಲ್ಲಿ, ಕಾರ್ಲ್ ಸಗಾನ್ ನ ಸ್ಮರಣಾರ್ಥ ನಿಲ್ಲಿಸಲಾಗಿರುವ ಶಿಲಾಸ್ಮಾರಕ.

ಮೂರು ಮೂಳೆ ಜೋಡಣೆ ಶಸ್ತ್ರಚಿಕಿತ್ಸೆಗಳು, ನ್ಯುಮೋನಿಯಾ ಜ್ವರ ಸಗಾನ್ ನನ್ನು ಸಾವಿನಂಚಿಗೆ ತಂದು ನಿಲ್ಲಿಸಿಬಿಡುತ್ತವೆ. ಕಡೆಗೊಮ್ಮೆ ಹಲವಾರು ದಿನಗಳವರೆಗೆ ಮೈಲೋಡಿಸ್ಪ್ಲಾಸಿಯ ಖಾಯಿಲೆಯೊಂದಿಗೆ ಹೋರಾಡಿ, ತನ್ನ 62ನೆಯ ವಯಸ್ಸಿನಲ್ಲಿ, ಸೀಟಲ್ ವಾಶಿಂಗ್ಟನ್ನಿನ ಫ್ರೆಡ್ ಹಚಿನ್ಸನ್ ಕ್ಯಾನ್ಸರ್ ರಿಸರ್ಚ್ ಸೆಂಟರ್ ನಲ್ಲಿ, 1996ರ ಡಿಸೆಂಬರ್ 20ರಂದು, ಸಗಾನ್ ಚಿರನಿದ್ರೆಗೆ ಜಾರುತ್ತಾನೆ.[೫೮] ನ್ಯೂಯಾರ್ಕಿನ ಇಥಾಕಾ ಲೇಕ್ ವ್ಯೂ ಸಿಮೆಟರಿಯಲ್ಲಿ, ಆತನನ್ನು ಸಂಸ್ಕಾರ ಮಾಡಲಾಗುತ್ತದೆ.

ಮರಣಾನಂತರದ ಪ್ರಸಿದ್ಧಿ

[ಬದಲಾಯಿಸಿ]

ಕಾರ್ಲ್ ನ ಕಾದಂಬರಿ, ಕಾಂಟ್ಯಾಕ್ಟ್ ಆಧಾರಿತ ಚಲನಚಿತ್ರವಾದ ಕಾಂಟ್ಯಾಕ್ಟ್ ಅದೇ ಹೆಸರಿನೊಂದಿಗೆ ಕಾರ್ಲ್ ನ ಮರಣಾ ನಂತರ ಚಿತ್ರೀಕರಣ ಮುಗಿಸುತ್ತದೆ. ಚಿತ್ರ "ಕಾರ್ಲ್ ಗಾಗಿ" ಎನ್ನುವ ಅರ್ಪಣೆಯೊಂದಿಗೆ ಮುಕ್ತಾಯವಾಗುತ್ತದೆ.

1997ರಲ್ಲಿ, ನ್ಯೂಯಾರ್ಕ್ ನ ಇಥಾಕದಲ್ಲಿ, ದಿ ಸಗಾನ್ ಪ್ಲಾನೆಟ್ ವಾಕ್ ಆರಂಭವಾಗುತ್ತದೆ. ಇದು ಸೌರಮಂಡಲದ ಚಲನೆಗೆ ಸಂಬಂಧಿಸಿದ ಮಾದರಿಯಾಗಿದ್ದು, ಡೌನ್ ಟೌನ್ ನ ಇಥಾಕದ ಸೆಂಟರ್ ಆಫ್ ದಿ ಕಾಮನ್ಸ್ ನಿಂದ ಸೈನ್ಸ್ ಸೆಂಟರ್ ಎನ್ನುವ ಹ್ಯಾಂಡ್ಸ್-ಆನ್ ಮ್ಯೂಸಿಯಂ ತನಕ ಸುಮಾರು 1.2 ಕಿ.ಮಿ.ಗಳವರೆಗೆ ನಿರ್ಮಿತವಾಗಿದೆ. ಕಾರ್ನೆಲ್ ನಲ್ಲಿ ಅಧ್ಯಾಪಕನಾಗಿದ್ದ ಹಾಗೂ ಇಥಾಕದ ನಿವಾಸಿಯಾಗಿದ್ದ ಕಾರ್ಲ್ ಸಗಾನ್ ನ ನೆನಪಿನಲ್ಲಿ ಈ ವಸ್ತು ಪ್ರದರ್ಶನವನ್ನು ಸೃಷ್ಟಿಸಲಾಗಿದೆ. ಈ ವಸ್ತು ಸಂಗ್ರಹಾಲಯದ ಸಲಹಾ ಸಮಿತಿಯಲ್ಲಿ ಪ್ರೊಫೆಸರ್ ಕಾರ್ಲ್ ಸ್ಥಾಪಕ ಸದಸ್ಯನಾಗಿದ್ದ.[೫೯]

ನಿರ್ಜನ ಮಂಗಳ ಗ್ರಹದ ಅಂಗಳದಲ್ಲಿ ಆತ ಗುರುತಿಸಿದ ಲ್ಯಾಂಡಿಂಗ್ ಸೈಟಿನ ಮಾರ್ಸ್ ಪಾತ್ ಫೈಂಡರ್ ಕೃತಕ ಉಪಗ್ರಹವನ್ನೇ ನಂತರ 1997ರ ಜುಲೈ 5ರಂದು ಕಾರ್ಲ್ ಸಗಾನ್ ಮೆಮೋರಿಯಲ್ ಸ್ಟೇಶನ್ ಎಂದು ಕರೆಯಲಾಯಿತು.

ಸಗಾನ್ ನ ಪುತ್ರ ನಿಕ್ ಸಗಾನ್ ಕೂಡ ಸ್ಟಾರ್ ಟ್ರೆಕ್ ಫ್ರಾಂಚೈಸ್ ನ ಹಲವಾರು ಸರಣಿಗಳನ್ನು ಬರೆದಿದ್ದಾನೆ. Star Trek: Enterprise ಟೆರ್ರಾ ಪ್ರೈಮ್ ಸರಣಿಯೊಂದರಲ್ಲಿ, ಮಾರ್ಸ್ ಪಾತ್ ಫೈಂಡರ್ ಮಿಶನ್ ನ ಒಂದು ಭಾಗವಾದ ರೆಲಿಕ್ ರೋವರ್ ಸೋಜೋರ್ನರ್ ಮೇಲೆ ಒಂದು, ಅಲ್ಪಾವಧಿಯ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದರ ನಮೂನೆಯನ್ನೇ ಮಾರ್ಟಿನ್ ಸರ್ಫೇಸ್ ಮೇಲಿನ ಕಾರ್ಲ್ ಸಗಾನ್ ಮೆಮೋರಿಯಲ್ ಸ್ಟೇಶನ್ ನಲ್ಲಿಯೂ ಇರಿಸಲಾಗಿದೆ. ಈ ಸ್ಮಾರಕದ ಮೇಲೆ, ಸಗಾನ್ ನ ಸಂದೇಶವೊಂದು ಹೀಗಿದೆ: "ಯಾವುದೇ ಕಾರಣಗಳಿಂದ ನೀನು ಮಂಗಳನ ಅಂಗಳದ ಮೇಲೆ ಕಾಲಿರಿಸಿದ್ದರೂ, ನನಗೆ ಆ ಬಗ್ಗೆ ಅತ್ಯಂತ ಹೆಮ್ಮೆಯಿದೆ. ನಿನ್ನೊಂದಿಗೆ ನಾನೂ ಇರಬೇಕಿತ್ತೆಂಬ ಆಸೆಯೂ ಇದೆ. ಸಗಾನ್ ನ ವಿದ್ಯಾರ್ಥಿ ಸ್ಟೀವ್ ಸ್ಕ್ವಿರೆಸ್ ನ ನಾಯಕತ್ವದಲ್ಲಿಯೇ ಸ್ಪಿರಿಟ್ ರೋವರ್ ಮತ್ತು ಅಪಾರ್ಚುನಿಟಿ ರೋವರ್ ಎಂಬ ಅಂತರಿಕ್ಷ ಯಾನದ ಗುಂಪುಗಳು ಮೊದಲ ಸಲ ಮಂಗಳ ಗ್ರಹದ ಮೇಲೆ, 2004ರಲ್ಲಿ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದು.

2709 ಸಗಾನ್ ಎಂಬ ಆಕಾಶಕಾಯದ ಹೆಸರು ಕೂಡ ಸಗಾನ್ ನ ಗೌರವಾರ್ಥವೇ ಇಟ್ಟಿರುವುದಾಗಿದೆ.

2001ರ ನವೆಂಬರ್ 9ರಂದು, ಸಗಾನ್ ನ 67ನೆಯ ಜನ್ಮದಿನದ ನೆನಪಿನಲ್ಲಿ, NASA ಅಮೆಸ್ ರಿಸರ್ಚ್ ಸೆಂಟರ್ ಎಂಬ, ಪೂರ್ತಿಯಾಗಿ ಕಾಸ್ಮೊಸ್ ನಲ್ಲಿ ಜೀವಸೆಲೆಯ ಕುರಿತಾಗಿಯೇ ಸಂಶೋಧನೆ ಮಾಡುವ ಕೇಂದ್ರಕ್ಕೆ ಚಾಲನೆ ದೊರೆತಿತ್ತು. ಆ ಜಾಗವನ್ನು ಸಂಪೂರ್ಣವಾಗಿ ಆ ವಿಷಯದ ಅಧ್ಯಯನ ಮತ್ತು ಸಂಶೋಧನೆಗಳಿಗೆ ಮಾತ್ರವೇ ಮೀಸಲಿರುವಂತೆ ಅದನ್ನು ಸಗಾನ್ ನ ಹೆಸರಿನಲ್ಲಿ ಅರ್ಪಣೆ ಮಾಡಲಾಗಿತ್ತು. ಕಾರ್ಲ್ ಒಬ್ಬ ಅತ್ಯಂತ ಅದ್ಭುತ ದಾರ್ಶನಿಕ ಮತ್ತು ಕನಸುಗಾರ. ಈಗ ಆತನ ಎಲ್ಲ ಧ್ಯೇಯಗಳನ್ನು, ಅದಮ್ಯ ಗುರಿಗಳನ್ನು 21ನೇ ಶತಮಾನದಲ್ಲಿ, ವಿಶ್ವದಲ್ಲಿ ಮಾನವ ಜೀವನ, ಅದನ್ನು ನಾವು ಅರ್ಥೈಸಿಕೊಂಡಿರುವ ಬಗೆ, ಖಗೋಳ ವಿಜ್ಞಾನವನ್ನು ಯಾವ ಕಾಲಕ್ಕೂ ಸಲ್ಲುವ ರೀತಿ ಸಂಶೋಧನೆಗೆ ಗುರಿಪಡಿಸುವುದು, ಆ ನಿಟ್ಟಿನಲ್ಲಿ ಅಗತ್ಯ ಶಿಕ್ಷಣ, ಸೌಲಭ್ಯಗಳನ್ನು ಕಲ್ಪಿಸುವುದು, ಇವೆ ಮೊದಲಾದುವನ್ನು ನಾವು ಸಗಾನ್ ನ ನೆನಪಿನಲ್ಲಿ, ಆತ ಹಾಕಿ ಕೊಟ್ಟಿರುವ ಅಭೂತಪೂರ್ವ ಮಾರ್ಗದರ್ಶನದಲ್ಲಿ ಮುಂದುವರೆಸಿಕೊಂಡು ಹೋಗಲೇಬೇಕಾಗಿದೆ - ಹೀಗೆಂದು ಹೇಳಿದವರು NASAದ ಆಡಳಿತಾಧಿಕಾರಿ ಡೇನಿಯಲ್ ಗೋಲ್ಡಿನ್. 2006ರ ಅಕ್ಟೋಬರ್ 2ರಂದು NASAದಲ್ಲಿ ಹೀಗೆ ಆರಂಭಗೊಂಡ ಕೇಂದ್ರದ ಉದ್ಘಾಟನ ಸಮಾರಂಭದಲ್ಲಿ ಡೇನಿಯಲ್ ನ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ, ಆನ್ ಡ್ರುಯಾನ್.

ಸಗಾನ್ ನ ಹೆಸರಿನಲ್ಲಿಯೇ ಆ ದಿನ ಮೂರು ಪುರಸ್ಕಾರಗಳು ಘೋಷಿತವಾದವು.

  • ದಿ ಕಾರ್ಲ್ ಸಗಾನ್ ಮೆಮೋರಿಯಲ್ ಅವಾರ್ಡ್ - ಅಮೇರಿಕನ್ ಆಸ್ಟ್ರಾನಾಟಿಕಲ್ ಸೊಸೈಟಿ (AAS)ಮತ್ತು ಪ್ಲಾನೆಟರಿ ಸೊಸೈಟಿಯವರು ಜಂಟಿಯಾಗಿ ಆಯೋಜಿಸುವ ಈ ಪುರಸ್ಕಾರವನ್ನು 1997ರಿಂದ ಕೊಡಲಾಗುತ್ತಿದೆ;
  • ಸಾರ್ವಜನಿಕ ಸಂವಹನದಲ್ಲಿ ಮಾಡುವ ಅಪೂರ್ವ ಸಾಧನೆಗಳಿಗಾಗಿ ದಿ ಕಾರ್ಲ್ ಸಗಾನ್ ಮೆಡಲ್ ನ್ನು ಕೊಡಲಾಗುತ್ತದೆ. ಇದರ ಆಯೋಜಕರು ಅಮೇರಿಕನ್ ಆಸ್ಟ್ರಾನಾಟಿಕಲ್ ಸೊಸೈಟಿಯ ಒಂದು ಭಾಗವಾಗಿರುವ ಡಿವಿಷನ್ ಫಾರ್ ಪ್ಲಾನೆಟರಿ ಸೈನ್ಸಸ್ (AAS/DPS). ಈ ಪುರಸ್ಕಾರವನ್ನು ಖಗೋಳ ವಿಜ್ಞಾನಿಯೊಬ್ಬರು ಗೈಯ್ಯುವ ಅತ್ಯಪೂರ್ವ ಬಾಹ್ಯಾಕಾಶ ಸಂಶೋಧನೆಗಳಿಗಾಗಿ ಮತ್ತು ಅದರಿಂದ ಅವರು ಸಮೂಹವನ್ನು ಸಂಪರ್ಕಿಸುವ ಮತ್ತು ಪರಿಣಾಮಕಾರಿಯಾಗಿ ತಲುಪುವ ಸಾಧನೆಗಳಿಗಾಗಿ ಕೊಡುತ್ತಾರೆ. ಈ ಪ್ರಶಸ್ತಿ ಸಮಿತಿಯ ಮೂಲ ಸಂಸ್ಥಾಪನ ಸದಸ್ಯರುಗಳಲ್ಲಿ ಕಾರ್ಲ್ ಸಗಾನ್ ಕೂಡ ಒಬ್ಬ. ಮತ್ತು
  • ಸಮಾಜವು ವಿಜ್ಞಾನವನ್ನು ಅರ್ಥೈಸಿಕೊಂಡಿರುವ ರೀತಿ ಎಂಬ ವಿಷಯವಾಗಿ ಕೊಡಲಾಗುವ ಕಾರ್ಲ್ ಸಗಾನ್ ಅವಾರ್ಡ್ ಫಾರ್ ಪಬ್ಲಿಕ್ ಅಂಡರ್ಸ್ಟ್ಯಾಂಡಿಂಗ್ ಗಾಗಿ ಕೌನ್ಸಿಲ್ ಆಫ್ ಸೈಂಟಿಫಿಕ್ ಸೊಸೈಟಿ ಪ್ರೆಸಿಡೆಂಟ್ಸ್ (CSSP) - 1993ರಲ್ಲಿ ಈ ಪುರಸ್ಕಾರಕ್ಕೆ ಮೊಟ್ಟಮೊದಲು ಪಾತ್ರನಾದ ವ್ಯಕ್ತಿ ಸಗಾನ್.[೬೦]

2006ರಲ್ಲಿ, ಕಾರ್ಲ್ ಸಗಾನ್ ಪ್ರಶಸ್ತಿಯು, ಸಗಾನ್ ನ ಸ್ನೇಹಿತ ಲೆಸ್ಟರ್ ಗ್ರಿಸ್ಪೂನ್ ನ ಮಗ, ಜೀವ ಖಗೋಳ ಶಾಸ್ತ್ರಜ್ಞ ಮತ್ತು ಬರಹಗಾರ ಡೇವಿಡ್ ಗ್ರಿನ್ಸ್ಪೂನ್ ನಿಗೆ ಕೊಡಮಾಡಲಾಗಿತ್ತು.

2006ರ ಡಿಸೆಂಬರ್ 20ರಂದು, ಸಗಾನ್ ಹತ್ತನೆಯ ವರ್ಷದ ಪುಣ್ಯತಿಥಿಗೆ, ಅಂತರಜಾಲ ಬ್ಲಾಗರ್, ಜೋಎಲ್ ಶ್ಲೋಸ್ಬರ್ಗ್ ಬ್ಲಾಗಥಾನ್ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾನೆ. ಸಗಾನ್ ನ ಸಾಧನೆಗಳನ್ನು ನೆನಪಿಸಿಕೊಳ್ಳುವ ಮತ್ತು ಆ ಮೂಲಕ ಅವನಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ಸಗಾನ್ ನ ಮಗ ನಿಕ್ ಸಗಾನ್ ನ ಸಹಕಾರದೊಂದಿಗೆ ಈ ಯೋಜನೆ ಯಶಸ್ವಿಯಾಗಿ ಆಯೋಜಿತವಾಗಿರುತ್ತದೆ.[೬೧] ಬ್ಲಾಗ್ ಜಗತ್ತಿನ ಹಲವಾರು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುತ್ತಾರೆ.

2008ರಲ್ಲಿ ಫ್ಲ್ಯಾಶ್ ಬಲ್ಬ್ ಎಂದೇ ಖ್ಯಾತಿ ಹೊಂದಿರುವ ಬೆನ್ ಜೋರ್ಡನ್, ಪೇಲ್ ಬ್ಲೂ ಡಾಟ್: ಆ ಟ್ರಿಬ್ಯೂಟ್ ಟು ಕಾರ್ಲ್ ಸಗಾನ್ ಎಂಬ ಧ್ವನಿಸುರುಳಿಯನ್ನು ಬಿಡುಗಡೆ ಮಾಡುತ್ತಾನೆ.

2009ರಲ್ಲಿ ಕಾರ್ಲ್ ಸಗಾನ್ ನ ಕಾಸ್ಮೊಸ್ ನಿಂದಾಯ್ದ ಭಾಗಗಳನ್ನು, 'ಅ ಗ್ಲೋರಿಯಸ್ ಡಾನ್ ' ಎಂಬ ಧ್ವನಿಸುರುಳಿಗೆ ಆಕರವಾಗಿ ಬಳಸಿಕೊಳ್ಳಲಾಗಿತ್ತು. ಇದು, ಸಿಂಫೋನಿ ಆಫ್ ಸೈನ್ಸ್ ಎಂಬ ಶೈಕ್ಷಣಿಕ ಸಂಗೀತ ಮತ್ತು ದೃಶ್ಯ ಮಾಧ್ಯಮದವರಿಗಾಗಿ ಜಾನ್ ಬೋಸ್ವೆಲ್ ನ ನಿರ್ದೇಶನದಲ್ಲಿ, ಆಯೋಜಿಸಿ, ನಿರ್ಮಿಸಲಾಗಿದ್ದ ಮೊದಲ ಸಾಕ್ಷ್ಯಚಿತ್ರವಾಗಿತ್ತು. ನಂತರ, ಈ ಗೀತೆಯನ್ನು ಸಂಗೀತ ನಿರ್ದೇಶಕ ಜ್ಯಾಕ್ ವ್ಹೈಟ್, ವಿನೈಲ್ ಸಿಂಗಲ್ ಹೆಸರಿನ ತನ್ನ ಥರ್ಡ್ ಮ್ಯಾನ್ ರೆಕಾರ್ಡ್ಸ್ ಗೀತೆಗಳ ಸಂಗ್ರಹದಲ್ಲಿ ಬಿಡುಗಡೆ ಮಾಡಿದ್ದಾನೆ.[೬೨] ಇದರ ಹೊರತಾಗಿಯೂ, ಸಗಾನ್, ಇತರ ಕೆಲವು ಖ್ಯಾತ ವಿಜ್ಞಾನಿಗಳ ಮತ್ತು ತಾರ್ಕಿಕ ಪ್ರತಿಪಾದಕರುಗಳಾಗಿದ್ದ, ರಿಚರ್ಡ್ ಡಾಕಿನ್ಸ್, ರಿಚರ್ಡ್ ಫೆನ್ಮನ್, ಬ್ರಿಯನ್ ಗ್ರೀನೆ, ಲಾರೆನ್ಸ್ ಎಂ. ಕ್ರಾಸ್, ಬಿಲ್ ನೇ, ಮತ್ತು ನೀಲ್ ಡೆಗ್ರಾಸ್ ಟೈಸನ್ ಮುಂತಾದವರೊಡನೆ ಇದ್ದಾಗಿನ, ಹಲವಾರು ಹೆಚ್ಚುವರಿ ಸುರುಳಿಗಳನ್ನು ಇದರೊಂದಿಗೆ ಸೇರಿಸಿ ಚಿತ್ರಿಸಲಾಗಿತ್ತು. ಸೈನ್ಸ್ ವೀಡಿಯೋ ಸಿಂಫೊನಿಯ ಪ್ರತಿಯೊಂದು ಚಿತ್ರಗಳಲ್ಲಿ ಕಾಣಿಸಿಕೊಂಡ ಏಕೈಕ ವಿಜ್ಞಾನಿ ಕಾರ್ಲ್ ಸಗಾನ್.

ಹಾಗೆಯೇ, 2009ರಲ್ಲಿ, ಸಗಾನ್ ನ 75ನೆಯ ಜನ್ಮಾಚರಣೆಯ ಸಂದರ್ಭದಲ್ಲಿ, ಮೊಟ್ಟ ಮೊದಲ ಸಲ, ನವೆಂಬರ್ 7ರಂದು 'ಕಾರ್ಲ್ ಸಗಾನ್ ಡೇ' ಎಂದು ಆಚರಿಸಲಾಯಿತು.[೬೩]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
NASA ಕೊಡಮಾಡುವ ವಿಶೇಷ ಪಬ್ಲಿಕ್ ಸರ್ವಿಸ್ ಮೆಡಲ್.
  • ಟೆಲಿವಿಶನ್ ಎಕ್ಸಲೆನ್ಸ್ ಗಾಗಿ ನೀಡುವ ವಾರ್ಷಿಕ ಪ್ರಶಸ್ತಿ - 1981 ಓಹಿಯೋ ಸ್ಟೇಟ್ ಯೂನಿವರ್ಸಿಟಿ - ಪಿಬಿಎಸ್ ಕಾಸ್ಮೊಸ್ ಸರಣಿ
  • ಅಪೋಲೋ ಅಚೀವ್ಮೆಂಟ್ ಅವಾರ್ಡ್ - ನ್ಯಾಷನಲ್ ಏರೊನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೆಶನ್
  • ನಾಸಾ ಡಿಸ್ಟಿoಗ್ವಿಶ್ಡ್ ಪಬ್ಲಿಕ್ ಸರ್ವಿಸ್ ಮೆಡಲ್ - ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೆಶನ್ (ಎರಡು ಬಾರಿ)
  • ಎಮ್ಮಿ - ಔಟ್ ಸ್ಟ್ಯಾಂಡಿಂಗ್ ಇಂಡಿವಿಜ್ಯುವಲ್ ಅಚೀವ್ಮೆಂಟ್ - 1981 - ಪಿಬಿಎಸ್ ಸೀರೀಸ್ ಕಾಸ್ಮೊಸ್
  • ಎಮ್ಮಿ - ಔಟ್ ಸ್ಟ್ಯಾಂಡಿಂಗ್ ಇನ್ಫಾರ್ಮೆಶನಲ್ ಸೀರೀಸ್ - 1981 - ಪಿಬಿಎಸ್ ಸೀರೀಸ್ ಕಾಸ್ಮೊಸ್
  • ಎಕ್ಸೆಪ್ಶನಲ್ ಸೈಂಟಿಫಿಕ್ ಅಚೀವ್ಮೆಂಟ್ ಮೆಡಲ್ - ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೆಶನ್.
  • ಹೆಲೆನ್ ಕಾಲ್ಡಿಕಾಟ್ ಲೀಡರ್ಶಿಪ್ ಅವಾರ್ಡ್ - ವಿಮೆನ್ಸ್ ಆಕ್ಷನ್ ಫಾರ್ ನ್ಯೂಕ್ಲಿಯರ್ ಡಿಸಾರ್ಮಮೆಂಟ್.
  • ಹ್ಯೂಗೋ ಅವಾರ್ಡ್ - 1981 -ಕಾಸ್ಮೊಸ್
  • ಹ್ಯೂಮನಿಸ್ಟ್ ಆಫ್ ದಿ ಇಯರ್ - 1981 - ಅಮೇರಿಕನ್ ಹ್ಯೂಮನಿಸ್ಟ್ ಅಸೋಸಿಯೇಶನ್ ನಿಂದ ಪುರಸ್ಕೃತ.
  • ಇನ್ ಪ್ರೇಸ್ ಆಫ್ ರೀಸನ್ ಅವಾರ್ಡ್ - 1987 - ಕಮಿಟೀ ಫಾರ್ ದಿ ಸೈಂಟಿಫಿಕ್ ಇನ್ವೆಸ್ಟಿಗೇಶನ್ ಆಫ್ ಕ್ಲೈಮ್ಸ್ ಆಫ್ ದಿ ಪ್ಯಾರಾನಾರ್ಮಲ್.
  • ಐಸಾಕ್ ಅಸಿಮೋವ್ ಅವಾರ್ಡ್ - 1994 ಕಮಿಟೀ ಫಾರ್ ದಿ ಸೈಂಟಿಫಿಕ್ ಇನ್ವೆಸ್ಟಿಗೇಶನ್ ಆಫ್ ಕ್ಲೈಮ್ಸ್ ಆಫ್ ದಿ ಪ್ಯಾರಾನಾರ್ಮಲ್
  • ಜಾನ್ ಎಫ್. ಕೆನೆಡಿ ಆಸ್ಟ್ರೋನಾಟಿಕ್ಸ್ ಅವಾರ್ಡ್ - ಅಮೇರಿಕನ್ ಆಸ್ಟ್ರೋನಾಟಿಕಲ್ ಸೊಸೈಟಿ.
  • ಜಾನ್ ಡಬ್ಲ್ಯೂ. ಕ್ಯಾಂಪ್ಬೆಲ್ ಮೆಮೋರಿಯಲ್ ಅವಾರ್ಡ್ - 1974 .Cosmic Connection: An Extraterrestrial Perspective
  • ಜೋಸೆಫ್ ಪ್ರಿಸ್ಟ್ಲೀ ಅವಾರ್ಡ್ - "ಫಾರ್ ಡಿಸ್ಟಿoಗ್ವಿಶ್ಡ್ ಕಂಟ್ರಿಬ್ಯೂಶನ್ಸ್ ಆಫ್ ವೆಲ್ಫೇರ್ ಟು ದಿ ಮನ್ಕೈಂಡ್"
  • ಕ್ಲಂಪ್ಕೆ-ರಾಬರ್ಟ್ಸ್ ಅವಾರ್ಡ್ ಆಫ್ ದಿ ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ದಿ ಪೆಸಿಫಿಕ್ - 1974.
  • ಕಾನ್ಸ್ಟಾoಟಿನ್ ಸಿಯೋಲ್ಕೊವ್ಸ್ಕಿ ಮೆಡಲ್ - ಅವಾರ್ಡೆಡ್ ಬೈ ದಿ ಸೋವಿಯತ್ ಕಾಸ್ಮೋನಾಟ್ಸ್ ಫೆಡರೇಶನ್.
  • ಲೋಕಸ್ ಅವಾರ್ಡ್ - 1986 - ಕಾಂಟ್ಯಾಕ್ಟ್
  • ಲೋವೆಲ್ ಥಾಮಸ್ ಅವಾರ್ಡ್ - ಎಕ್ಸ್ಪ್ಲೋರರ್ಸ್ ಕ್ಲಬ್ - 75ನೆಯ ವಾರ್ಷಿಕೋತ್ಸವ.
  • ಮೆಸರ್ಸ್ಕಿ ಅವಾರ್ಡ್ - ಅಮೇರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿ.
  • ಮಿಲ್ಲರ್ ರಿಸರ್ಚ್ ಫೆಲ್ಲೋಶಿಪ್ - ಮಿಲ್ಲರ್ ಇನ್ಸ್ಟಿಟ್ಯೂಟ್ (1960–1962)
  • ಒಯಿರ್ಸ್ಟೆಡ್ ಮೆಡಲ್ - 1990 - ಅಮೇರಿಕನ್ ಅಸೋಸಿಯೇಶನ್ ಆಫ್ ಫಿಸಿಕ್ಸ್ ಟೀಚರ್ಸ್.
  • ಪೀಬಾಡಿ ಅವಾರ್ಡ್ - ೧೯೮೦ - ಪಿಬಿಎಸ್ ಸೀರೀಸ್ ಕಾಸ್ಮೊಸ್ .
  • ಪ್ರಿಕ್ಸ್ ಗಾಲ್ಬರ್ಟ್ - ದಿ ಇಂಟರ್ನ್ಯಾಷನಲ್ ಪ್ರೈಜ್ ಆಫ್ ದಿ ಆಸ್ಟ್ರೋನಾಟಿಕ್ಸ್.
  • ಪಬ್ಲಿಕ್ ವೆಲ್ಫೇರ್ ಮೆಡಲ್ - 1994 - ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್.
  • ಪುಲಿಟ್ಜರ್ ಪ್ರೈಜ್ ಫಾರ್ ಜನರಲ್ ನಾನ್-ಫಿಕ್ಷನ್ - 1978 - ದಿ ಡ್ರ್ಯಾಗನ್ಸ್ ಆಫ್ ಈಡನ್ .
  • ಎಸ್ಎಫ್ ಕ್ರಾನಿಕಲ್ ಅವಾರ್ಡ್ - 1998 - ಕಾಂಟ್ಯಾಕ್ಟ್ .
  • ಡಿಸ್ಕವರಿ ಚಾನೆಲ್ಲಿನ ಅತಿ ದೊಡ್ಡ ಕಾರ್ಯಕ್ರಮವಾದ ಗ್ರೇಟೆಸ್ಟ್ ಅಮೇರಿಕನ್ ಕಾರ್ಯಕ್ರಮದಲ್ಲಿ, 2005ರ ಜೂನ್ 5ರಂದು ನಡೆದ ಸಮಾರಂಭದಲ್ಲಿ 99ನೆಯ ಅತ್ಯಂತ ಶ್ರೇಷ್ಠ ಅಮೇರಿಕನ್ ಪ್ರಶಸ್ತಿಗೆ ಪಾತ್ರ.

ಪ್ರಕಟಣೆಗಳು

[ಬದಲಾಯಿಸಿ]
  • ಪ್ಲಾನೆಟ್ಸ್ LIFE ಸೈನ್ಸ್ ಲೈಬ್ರರಿ, ಸಗಾನ್, ಕಾರ್ಲ್, ಜೊನಾಥನ್ ನಾರ್ಟನ್ ಲಿಯೋನಾರ್ಡ್ ಅಂಡ್ ಎಡಿಟರ್ಸ್ ಆಫ್ ಲೈಫ್, ಟೈಮ್, ಇನ್ಕ್. 1966.
  • ಇಂಟಿಲಿಜೆಂಟ್ ಲೈಫ್ ಇನ್ ದಿ ಯೂನಿವರ್ಸ್ , ಐ.ಎಸ್. ಶ್ಲೋವ್ಸ್ಕಿ, ಕೋ-ಆಥರ್, ರಾಂಡಂ ಹೌಸ್, 1966, 509 ಪುಟಗಳು.
  • UFOs: ಅ ಸೈಂಟಿಫಿಕ್ ಡಿಬೇಟ್ , ಥಾರ್ನ್ಟನ್ ಪೇಜ್ ಕೋ-ಆಥರ್, ಕಾರ್ನೆಲ್ ಯುನಿವರ್ಸಿಟಿ ಪ್ರೆಸ್, 1972, 312 ಪುಟಗಳು.
  • ಕಮ್ಯೂನಿಕೇಶನ್ ವಿತ್ ಎಕ್ಸ್ಟ್ರಾಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್ . ಎಂಐಟಿ ಪ್ರೆಸ್, 1973, 428 ಪುಟಗಳು.
  • ಮಾರ್ಸ್ ಅಂಡ್ ದಿ ಮೈಂಡ್ ಆಫ್ ಮ್ಯಾನ್ , ಸಗಾನ್ ಕಾರ್ಲ್, ಎಟ್ ಆಲ್., ಹಾರ್ಪರ್ ಅಂಡ್ ರೋ, 1973, 143 ಪುಟಗಳು.
  • Cosmic Connection: An Extraterrestrial Perspective ಜೆರೋಮ್ ಆಗೆಲ್, ಕೋ-ಆಥರ್, ಆಂಕರ್ ಪ್ರೆಸ್, 1973, ISBN 0-521-78303-8, 301 ಪುಟಗಳು.
  • ಅದರ್ ವರ್ಲ್ಡ್ಸ್ ಬನ್ಟಂ ಬುಕ್ಸ್, 1975
  • ಮರ್ಮರ್ಸ್ ಆಫ್ ಅರ್ತ್: ದಿ ವೋಯೆಜರ್ ಇಂಟರ್ ಸ್ಟೆಲ್ಲಾರ್ ರೆಕಾರ್ಡ್ , ಸಗಾನ್, ಕಾರ್ಲ್, ಎಟ್. ಅಲ್. ರಾಂಡಂ ಹೌಸ್, ISBN 0-394-41047-5, 1978.
  • ದಿ ಡ್ರ್ಯಾಗನ್ಸ್ ಆಫ್ ಈಡನ್: ಸ್ಪೆಕ್ಯುಲೆಶನ್ಸ್ ಆನ್ ದಿ ಎವಲೂಶನ್ ಆಫ್ ಹ್ಯೂಮನ್ ಇಂಟೆಲಿಜೆನ್ಸ್ . ಬಲ್ಲಾಂಟಿನ್ ಬುಕ್ಸ್, 1978, 1978, ISBN 0-345-34629-7, 288 ಪುಟಗಳು.
  • Broca's Brain: Reflections on the Romance of Science . ಬಲ್ಲಾಂಟಿನ್ ಬುಕ್ಸ್, 1979, ISBN 0-345-33689-5, 416 ಪುಟಗಳು.
  • ಕಾಸ್ಮೊಸ್ . ರಾಂಡಂ ಹೌಸ್‌, 2005. ರಾಂಡಂ ಹೌಸ್ ನ್ಯೂ ಎಡಿಶನ್, ಮೇ 7, 2002, ISBN 0-375-50832-5, 384 ಪುಟಗಳು.
  • The Cold and the Dark: The World after Nuclear War ಸಗಾನ್ ಕಾರ್ಲ್, ಎಟ್. ಆಲ್, ಸಿಡ್ವಿಕ್ ಅಂಡ್ ಜಾಕ್ಸನ್, 1985.
  • ಕಾಮೆಟ್ , ಆನ್ ಡ್ರುಯಾನ್ ಕೋ-ಆಥರ್, ಬಲ್ಲಾಂಟಿನ್ ಬುಕ್ಸ್, 1985, ISBN 0-345-41222-2, 496 ಪುಟಗಳು.
  • ಕಾಂಟ್ಯಾಕ್ಟ್‌ :ಸಿಮೊನ್ ಅಂಡ್ ಶುಸ್ಟರ್, ೧೯೮೫, ರೀ-ಇಷ್ಯೂಡ್ ಆಗಸ್ಟ್ 1997 ಬೈ ಡಬಲ್ಡೇ ಬುಕ್ಸ್, ISBN 1-56865-424-3, 352 ಪುಟಗಳು.
  • ಅ ಪಾತ್ ವೇರ್ ನೋ ಮ್ಯಾನ್ ಥಾಟ್: ನ್ಯೂಕ್ಲಿಯರ್ ವಿಂಟರ್ ಅಂಡ್ ದಿ ಎಂಡ್ ಆಫ್ ದಿ ಆರ್ಮ್ಸ್ ರೇಸ್ , ರಿಚರ್ಡ್ ಟರ್ಕೋ ಕೋ-ಆಥರ್, ರಾಂಡಂ ಹೌಸ್, 1990, ISBN 0-394-58307-8, 499 ಪುಟಗಳು.
  • ಶ್ಯಾಡೋಸ್ ಆಫ್ ಫಾರ್ಗಾಟನ್ ಎನ್ಸೆಸ್ಟರ್ಸ್: ಅ ಸರ್ಚ್ ಫಾರ್ ದಿ ಹೂ ವಿ ಆರ್ , ಆನ್ ಡ್ರುಯಾನ್ ಕೋ-ಆಥರ್, ಬಲ್ಲಾಂಟಿನ್ ಬುಕ್ಸ್, ಅಕ್ಟೋಬರ್, 1993, ISBN 0-345-38472-5, 528 ಪುಟಗಳು.
  • 153 ರಾಂಡಂ ಹೌಸ್, ನವೆಂಬರ್, 1994, ISBN 0-679-43841-6, 429 ಪುಟಗಳು.
  • ದಿ ಡೆಮಾನ್ ಹಾಂಟೆಡ್ ವರ್ಲ್ಡ್: ಸೈನ್ಸ್ ಅಸ್ ಅ ಕ್ಯಾಂಡಲ್ ಇನ್ ದಿ ಡಾರ್ಕ್ . ಬಲ್ಲಾಂಟಿನ್ ಬುಕ್ಸ್, ಮಾರ್ಚ್, 1996, ISBN 0-345-40946-9, 480 ಪುಟಗಳು. (ನೋಟ್: ಎರ್ರಾಟ ಸ್ಲಿಪ್ ನೊಂದಿಗೆ, 1995ರಲ್ಲಿ, ಕೃತಿ ಸ್ವಾಮ್ಯದೊಂದಿಗೆ ಮೊದಲ ಬಾರಿ ಪ್ರಕಟವಾಯಿತು.
  • Billions and Billions: Thoughts on Life and Death at the Brink of the Millennium ಆನ್ ಡ್ರುಯಾನ್ ಕೋ-ಆಥರ್, ಬಲ್ಲಾಂಟಿನ್ ಬುಕ್ಸ್, ಜೂನ್, 1997, ISBN 0-345-37918-7, 320 ಪುಟಗಳು.
  • ದಿ ವೆರೈಟೀಸ್ ಆಫ್ ಸೈಂಟಿಫಿಕ್ ಎಕ್ಸ್ಪೀರಿಯೆನ್ಸ್: ಅ ಪರ್ಸನಲ್ ವ್ಯೂ ಅಸ್ ದಿ ಸರ್ಚ್ ಫಾರ್ ಗಾಡ್ . ಕಾರ್ಲ್ ಸಗಾನ್ (ಲೇಖಕ) ಅಂಡ್ ಆನ್ ಡ್ರುಯಾನ್ (ಸಂಪಾದಕ), 1985, ಜಿಫ್ಫಾರ್ಡ್ ಲೆಕ್ಚರ್ಸ್, ಪೆಂಗ್ವಿನ್ ಪ್ರೆಸ್ ಎಚ್ ಸಿ, ನವೆಂಬರ್ 2006, ISBN 1-59420-107-2, 304 ಪುಟಗಳು.

ಉಲ್ಲೇಖಗಳು

[ಬದಲಾಯಿಸಿ]
  1. Sagan, Carl (1994). Pale Blue Dot: A Vision of the Human Future in Space (1st ed.). New York: Random House. p. 68. ISBN 0-679-43841-6.
  2. ೨.೦ ೨.೧ "StarChild: Dr. Carl Sagan". NASA. Retrieved 2009-10-08.
  3. ೩.೦ ೩.೧ Poundstone, William (1999). Carl Sagan: A Life in the Cosmos. New York: Henry Holt & Company. pp. 363–364, 374–375. ISBN 0-805-05766-8.
  4. ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ ೪.೧೦ ೪.೧೧ ೪.೧೨ ೪.೧೩ Davidson, Keay; Sagan, Carl (1999). Carl Sagan: a life. Wiley. p. 168. ISBN 0-471-25286-7.
  5. ೫.೦ ೫.೧ ೫.೨ ಸ್ಪ್ಯಾನ್ಜೆನ್ಬರ್ಗ್, ರೆ; ಮೋಸರ್, ಡಿಯನೇ. ಕಾರ್ಲ್ ಸಗಾನ್: ಅ ಬಯೋಗ್ರಫಿ , ಗ್ರೀನ್ವುಡ್ ಪಬ್ಲಿಕೇಷನ್ಸ್. (2004) 2-5 ಪುಟಗಳು.
  6. "ಆರ್ಕೈವ್ ನಕಲು". Archived from the original on 2012-09-19. Retrieved 2010-10-05.
  7. ಚಾರ್ಲಿ ರೋಸ್ ಸಂದರ್ಶನ. ಜನವರಿ 5, 1994.
  8. ಕಾರ್ಲ್ ಸಗಾನ್ ನ ಖಗೋಳ ವಿಜ್ಞಾನದ ಸಂಶೋಧನೆಯ ಹೆಚ್ಚಿನ ಭಾಗದ ರೂಪುರೇಷೆಗಳನ್ನು ಸಿದ್ಧಪಡಿಸಿದ ವಿಲಿಯಂ ಪೌಂಡ್ ಸ್ಟೋನ್. ಪೌಂಡ್ ಸ್ಟೋನ್ ಬರೆದಿರುವ ಕಾರ್ಲ್ ಸಗಾನ್ ಜೀವನಚರಿತ್ರೆಯಲ್ಲಿ, 1957ರಿಂದ 1998ರವರೆಗೆ ಪ್ರಕಟವಾದ, ಸುಮಾರು 8 ಪುಟಗಳಷ್ಟು ವಿಸ್ತೃತವಾದ ವೈಜ್ಞಾನಿಕ ಲೇಖನಗಳ ಪಟ್ಟಿಯೇ ಇದೆ. ಸಗಾನ್ ನ ವೈಜ್ಞಾನಿಕ ಸಂಶೋಧನೆಗಳ ಬಗೆಗಿನ ಹೆಚ್ಚಿನ, ವಿಸ್ತೃತ ಮಾಹಿತಿಯು ಅವನ ಪ್ರಾಥಮಿಕ ಹಂತದ ಸಂಶೋಧನಾ ಲೇಖನಗಳಿಂದಲೇ ಸಿಗುತ್ತದೆ. ಉದಾಹರಣೆಗೆ: ಸಗಾನ್, ಸಿ., ಥಾoಪ್ಸನ್ ಡಬ್ಲ್ಯೂ.ಆರ್. ಅಂಡ್ ಖೇರ್, ಬಿ.ಎನ್.Titan: A Laboratory for Prebiological Organic Chemistry Titan: A Laboratory for Prebiological Organic Chemistry ರಾಸಾಯನಿಕ ಸಂಶೋಧನೆಯ ವಿವರಗಳು, ಸಂಪುಟ 25, ಪುಟ 286 (1992). ಟೈಟನ್ ಕುರಿತಾದ ಈ ಸಂಶೋಧನಾ ಲೇಖನದ ಬಗ್ಗೆ ದಿ ಆಸ್ಟ್ರೋಬಯಾಗ್ರಫಿ ಆಫ್ ಆಸ್ಟ್ರಾನಮಿ ಮತ್ತು ಸ್ಪೇಸ್ ಲೈಟ್ ಎನ್ಸೈಕ್ಲೋಪೀಡಿಯ ದಲ್ಲಿ, ವಿವರಣೆಗಳಿವೆ.
  9. The Columbia Encyclopedia. "Sagan, Carl Edward". Sixth Edition. Columbia University Press. Retrieved 2007-05-02.
  10. The Planetary Society. "Carl Sagan". The Planetary Society. Archived from the original on 2007-05-01. Retrieved 2007-05-14.
  11. ತರ್ಕೋ ಆರ್ ಪಿ, ಟೂನ್ ಓಬಿ, ಅಕೆರ್ಮನ್ ಟಿಪಿ, ಪೊಲ್ಲಾಕ್ ಜೆಬಿ, ಸಗಾನ್ ಸಿ.Climate and smoke: an appraisal of nuclear winter '' Climate and smoke: an appraisal of nuclear winterಸೈನ್ಸ್, ಸಂಪುಟ 247, ಪುಟ 166-176 (1990). ಪಬ್ ಮೆಡ್ ಅಬ್ಸ್ ಟ್ರ್ಯಾಕ್ಟ್ JSTOR ಪೂರ್ಣಲೇಖನಕ್ಕೆ ಕೊಂಡಿ. ಕಾರ್ಲ್ ಸಗಾನ್, ತನ್ನ ದಿ ಡೆಮಾನ್ ಹಾಂಟೆಡ್ ವರ್ಲ್ಡ್ ಕೃತಿಯಲ್ಲಿ, ನ್ಯೂಕ್ಲಿಯರ್ ವಿಂಟರ್ ಕುರಿತಾದ ರಾಜಕೀಯ ಚರ್ಚೆಗಳಲ್ಲಿ ತಾನು ಪಾಲ್ಗೊಂಡ ಕಾರಣಗಳನ್ನು ಮತ್ತು ಗಲ್ಫ್ ಯುದ್ಧದ ಕಾವಿಗಾಗಿ ಸಂಭವನೀಯ ಗ್ಲೋಬಲ್ ಕೂಲಿಂಗ್ ಕುರಿತಾದ ವಿಚಾರಗಳನ್ನು ಬರೆಯುತ್ತಾನೆ.
  12. "Carl Sagan". EMuseum@Minnesota State University. Archived from the original on 2010-05-28. Retrieved 2009-10-08.
  13. "CosmoLearning Astronomy". CosmoLearning. Archived from the original on 2012-05-29. Retrieved 2009-10-08.
  14. "Meet Dr. Carl Sagan". The Science Channel. Archived from the original on 2007-05-18. Retrieved 2007-05-02.
  15. Carl Sagan, Astronomer: Author of Pale Blue Dot: A Vision of the Human Future in Space, Carl (1995-01-05) (.SWF). ಆರ್ಕೈವ್ ನಕಲು. Interview with Charlie Rose. Charlie Rose. PBS. New York. Archived from the original on 2012-01-05. https://web.archive.org/web/20120105125348/http://video.google.com/videoplay?docid=-1127834163386485385#2370s. Retrieved 2007-04-25. 00:39:29 ಕ್ಕೆ ಪ್ರಾರಂಭವಾಗುತ್ತದೆ.
  16. ಮಾರ್ರಿಸನ್, ಡೇವಿಡ್ (2007). ಮ್ಯಾನ್ ಫಾರ್ ದಿ ಕಾಸ್ಮೊಸ್: ಖಗೋಳ ವಿಜ್ಞಾನಿಯಾಗಿ, ಶಿಕ್ಷಕನಾಗಿ, ಸ್ಕೆಪ್ಟಿಕ್ ಆಗಿ ಕಾರ್ಲ್ ಸಗಾನ್ ನ ಜೀವನವನ್ನು ಈ ಕೃತಿ ಚಿತ್ರಿಸುತ್ತದೆ. ಸ್ಕೆಪ್ಟಿಕಲ್ ಇನ್ಕ್ವೈರರ್ Archived 2009-08-13 ವೇಬ್ಯಾಕ್ ಮೆಷಿನ್ ನಲ್ಲಿ. ಜನವರಿ/ಫೆಬ್ರವರಿ, 31 , ಪುಟ 29-38.
  17. Sagan, Carl (1996). The demon-haunted world: science as a candle in the dark. New York: Random House. p. 257. ISBN 0-394-53512-X.
  18. ಮಧ್ಯ-ಲ್ಯಾಟಿಟ್ಯೂಡ್ ನ ಅಗ್ನಿಜ್ವಾಲೆಗಳು ಭೂಮಿಯ ಮೇಲೆ 15.5 ಕಿಲೋ ಮೀಟರ್ ಎತ್ತರವಿರುವ ವಾತಾವರಣದಲ್ಲಿ ಉಂಟುಮಾಡುವ ಇನ್-ಸಿಟ್ಯು ಪರಿಣಾಮಗಳ ನೋಟ Archived 2008-04-10 ವೇಬ್ಯಾಕ್ ಮೆಷಿನ್ ನಲ್ಲಿ..
  19. ಇಒ ನ್ಯೂಸ್ ರೂಂ: ನವೀನ ಚಿತ್ರಗಳು - ಭೂಮಿಯ ಮೇಲೆ 15.5 ಕಿಲೋ ಮೀಟರ್ ಎತ್ತರವಿರುವ ವಾತಾವರಣದಲ್ಲಿ ಹೊಗೆ ಹರಡಿದಾಗಿನ ನೋಟ Archived 2007-08-02 ವೇಬ್ಯಾಕ್ ಮೆಷಿನ್ ನಲ್ಲಿ..
  20. ಭೂಮಿಯ ಮೇಲೆ 15.5 ಕಿಲೋ ಮೀಟರ್ ಎತ್ತರವಿರುವ ವಾತಾವರಣದಲ್ಲಿ ಬಾರಿಯಲ್ ಅರಣ್ಯದ ಅಗ್ನಿ ಜ್ವಾಲೆಗಳು ಉಂಟುಮಾಡುವ ಹೊಗೆಯ ನೋಟ Archived 2009-01-06 ವೇಬ್ಯಾಕ್ ಮೆಷಿನ್ ನಲ್ಲಿ..
  21. Fromm (2006). "Smoke in the Stratosphere: What Wildfires have Taught Us About Nuclear Winter". Eos Trans. AGU. 87 (52 Fall Meet. Suppl.): Abstract U14A–04. Archived from the original on 2008-01-24. Retrieved 2010-10-05.
  22. Head, Tom (2006). Conversations With Carl Sagan. University Press of Mississippi. pp. 86–87. ISBN 1-578-06736-7.
  23. "David Morrison - Taking a Hit: Asteroid Impacts & Evolution". Silicon Valley Astronomy Lectures. Season 2007-2008. 2007-10-03. http://www.astrosociety.org/education/podcast/index.html. 
  24. Sagan, Carl; Ostro (1994). "Long-Range Consequences of Interplanetary Collisions". Issues in Science and Technology. X (4).
  25. ೨೫.೦ ೨೫.೧ ೨೫.೨ Sagan, Carl (1998). Billions and Billions. New York: Ballantine Books. ISBN 0-345-37918-7. {{cite book}}: Unknown parameter |coauthors= ignored (|author= suggested) (help)
  26. Fred R. Shapiro and Joseph Epstein (2006). "Carl Sagan". The Yale Book of Quotations. Yale University Press. p. 660. ISBN 0-300-10798-6. {{cite encyclopedia}}: Unknown parameter |isnb13= ignored (help)
  27. Carl Sagan (1980). Cosmos. Ballantine Books. ISBN 0-345-33135-4. {{cite book}}: Unknown parameter |isbn13= ignored (help)
  28. "Carl Sagan Takes Questions: More From His 'Wonder and Skepticism' CSICOP 1994 Keynote". The Committee for Skeptical Inquiry. 1994-06-26. Archived from the original on 2016-12-21. Retrieved 2010-03-25.
  29. ಡಿಕ್ಷನರಿ.ಕಾಂ ನಲ್ಲಿ ಸಗಾನ್. (ಜಾರ್ಗನ್ ಫೈಲ್ ಆಧಾರಿತ ಅರ್ಥ)
  30. ವಿಲಿಯಂ ಸಫೈರ್, ಆನ್ ಲ್ಯಾಂಗ್ವೇಜ್; ಇನ್ಫಾಬಾನ್ ಮೇಲಿನ ಹೆಜ್ಜೆಗುರುತುಗಳು, ನ್ಯೂಯಾರ್ಕ್ ಟೈಮ್ಸ್ ಪ್ರಕಟಣೆ, ಏಪ್ರಿಲ್ 17, 1994.
  31. "ಆರ್ಕೈವ್ ನಕಲು". Archived from the original on 2012-05-29. Retrieved 2012-05-29.
  32. Spangenburg, Ray; Moser, Kit; Moser, Diane (2004). Carl Sagan: a biography. Greenwood Publishing Group. p. 106. ISBN 0-313-32265-1., Chapter 8, page 106
  33. Asimov, Isaac (1980). In Joy Still Felt: The Autobiography of Isaac Asimov, 1954-1978. Doubleday/Avon. pp. 217, 302. ISBN 0-380-53025-2.
  34. Sagan, Carl (1986-02-12). "Chapter 23". Broca's Brain: Reflections on the Romance of Science. Ballantine Books. p. 330. ISBN 0345336895.
  35. "ಆರ್ಕೈವ್ ನಕಲು". Archived from the original on 2012-02-07. Retrieved 2010-10-05.
  36. Achenbach, Joel (2006-04-23). "Worlds Away". Washington Post. p. W15.
  37. Head, Tom. "Conversations with Carl". Skeptic. 13 (1): 32–38.ದಿಂದ ಆಯ್ದುಕೊಳ್ಳಲಾಗಿದೆ Head, Tom, ed. (2006). University of Mississippi Press. ISBN 1-57806-736-7. {{cite book}}: |author= has generic name (help); Missing or empty |title= (help); Unknown parameter |unused_data= ignored (help)CS1 maint: multiple names: authors list (link)
  38. Sagan, Carl (1996). The Demon Haunted World: Science as a Candle in the Dark. New York: Ballantine Books. p. 278. ISBN 0-345-40946-9.
  39. Druyan, Ann (2003). "Ann Druyan talks about science, religion, wonder, awe… and Carl Sagan". Skeptical Inquirer. 27 (6). Committee for Skeptical Inquiry. ISSN 0194-6730. Retrieved July 27, 2010. {{cite journal}}: Unknown parameter |month= ignored (help)
  40. Carl Sagan (writer/host) (1980-12-14). "Encyclopaedia Galactica". Cosmos. Episode 12. 01:24 minutes in. PBS. 
  41. Truzzi, Marcello (1998). "On Some Unfair Practices towards Claims of the Paranormal". Oxymoron: Annual Thematic Anthology of the Arts and Sciences, Vol.2: The Fringe. Oxymoron Media. Archived from the original on 2007-04-28. Retrieved 2007-05-02.
  42. ಅ ಸೆನ್ಸ್ ಆಫ್ ಪ್ಲೇಸ್ ಇಂದಿ ಹಾರ್ಟ್ ಲ್ಯಾಂಡ್ Archived 2008-03-06 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಮಿಲ್ವಾಕೀ ಜರ್ನಲ್ ಸೆಂಟೆನೆಲ್ ಆನ್ಲೈನ್.
  43. Sagan, Carl (1985-10-12). Cosmos. Ballantine Books. p. 108. ISBN 0345331354.
  44. Grinspoon, Lester (1994). Marihuana Reconsidered (2nd ed.). Oakland, CA: Quick American Archives. ISBN 0-932-55113-0.
  45. Sagan, Carl. "Mr. X". Marijuana-Uses.com. Retrieved 2009-08-07.
  46. Whitehouse, David (1999-10-15). "Carl Sagan: A Life in the Cosmos". BBC News. Retrieved 2007-05-02.
  47. Davidson, Keay (1999-08-22). "US: Billions and Billions of '60s Flashbacks". San Francisco Examiner. Retrieved 2007-05-02.
  48. Larsen, Dana (1999-11-01). "Carl Sagan: Toking Astronomer". Cannabis Culture Magazine. Archived from the original on 2011-09-27. Retrieved 2007-05-02.
  49. ೪೯.೦ ೪೯.೧ ಪೌಂಡ್ ಸ್ಟೋನ್, ಪುಟ 364.
  50. "This Week in Apple History: November 14–20". The Mac Observer.
  51. ಸಗಾನ್ ವಿ. ಆಪಲ್ ಕಂಪ್ಯೂಟರ್, ಇನ್ಕ್., ಸಪ್ಲಿಮೆಂಟರಿ ಪುಟ 874. 1072 (ಯು ಎಸ್ ಡಿ ಸಿ. ಕಾಲ್. 1994), ಸಿವಿ 94-2180 ಎಲ್ ಜಿ ಬಿ (BRx); 1994 ಯು.ಎಸ್ ಡಿಸ್ಟ್. LEXIS 20154.
  52. ೫೨.೦ ೫೨.೧ ಪೌಂಡ್ ಸ್ಟೋನ್, ಪುಟ 374.
  53. ಪೌಂಡ್ ಸ್ಟೋನ್, ಪುಟ 374-375.
  54. Sagan, Carl (2000). Carl Sagan's cosmic connection: an extraterrestrial perspective (2 ed.). Cambridge University Press. p. 183. ISBN 0-521-78303-8.ಚಾಪ್ಟರ್ 25, ಪುಟ 183.
  55. ೫೫.೦ ೫೫.೧ Westrum, Ron (2000). "Limited Access: Six Natural Scientists and the UFO Phenomenon". UFOs and abductions: Challenging the Borders of Knowledge. Lawrence, Kansas: University Press of Kansas. pp. 30–55. ISBN 0-700-61032-4. {{cite book}}: Unknown parameter |coauthors= ignored (|author= suggested) (help)
  56. Appelle, Stuart (2000). "Ufology and Academia: The UFO Phenomenon as a Scholarly Discipline". UFOs and abductions: Challenging the Borders of Knowledge. Lawrence, Kansas: University Press of Kansas. pp. 7–30. ISBN 0-700-61032-4. {{cite book}}: Unknown parameter |coauthors= ignored (|author= suggested) (help)
  57. ಸಗಾನ್, 1996: 81-96, 99-104
  58. "Carl Sagan dies at 62". CNN. Retrieved 2010-04-28.
  59. "ಆರ್ಕೈವ್ ನಕಲು". Archived from the original on 2013-02-05. Retrieved 2010-10-05.
  60. "Sagan Award for Public Understanding of Science". The Council of Scientific Society Presidents. Archived from the original on 2007-07-26. Retrieved 2007-05-02.
  61. ಜೋಎಲ್ಸ್ ಹ್ಯೂಮನಿಸ್ಟಿಕ್ ಬ್ಲಾಗ್; ಕಾರ್ಲ್ ಸಗಾನ್ ಸ್ಮರಣಾರ್ಥದ ಬ್ಲಾಗ್ ನ್ನು ಆರಂಭಿಸುತ್ತಿದೆ.
  62. "Jack White: Carl Sagan's Biggest Fan". The Washington Post. Archived from the original on 2011-06-24. Retrieved 2009-11-11.
  63. http://www.carlsaganday.com/


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • Davidson, Keay (1999). Carl Sagan: A Life. New York: John Wiley & Sons. pp. 33–41. ISBN 0471252867.
  • Head, Tom (ed.) (2005). Conversations with Carl Sagan. Jackson, Mississippi: University Press of Mississippi. ISBN 1578067367. {{cite book}}: |first= has generic name (help); Cite has empty unknown parameter: |coauthors= (help)
  • Poundstone, William (1999). Carl Sagan: A Life in the Cosmos. New York: Henry Holt & Company. ISBN 0805057668.
  • Morrison, David (2006). "Carl Sagan: The People's Astronomer". AmeriQuests. 3 (2). Archived from the original (PDF) on 2011-07-20. Retrieved 2010-10-05.
  • Achenbach, Joel (1999). Captured by Aliens: the search for life and truth in a very large universe. New York: Simon & Schuster. ISBN 0-684-84856-2. {{cite book}}: Unknown parameter |laysummary= ignored (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]