ವಿಷಯಕ್ಕೆ ಹೋಗು

ಢಾಕ ಮಸ್ಲಿನ್ ಬಟ್ಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಮಿರ್ಪುರದ ಮಸ್ಲಿನ್ ಸೀರೆ'

'ಢಾಕಮಸ್ಲಿನ್,' [] ಭಾರತದ ಅತ್ಯಂತ ನವಿರಾದ ಬಟ್ಟೆಗಳ ಒಂದು ಪ್ರಕಾರ, ಹಾಗೂ ಅಲ್ಲಿನ ಪ್ರಮುಖ ಗೄಹ ಕೈಗಾರಿಕೆ. ಇದನ್ನು ಮುಖ್ಯವಾಗಿ ಬಂಗಾಳದ (ಈಗಿನ ಬಾಂಗ್ಲಾದೇಶದ) ಢಾಕ, ಎಂಬ ಊರಿನಲ್ಲಿ ತಯಾರು ಮಾಡುತ್ತಿದ್ದರು.[] ಇದನ್ನು ತಯಾರಿಸುವ ಕುಶಲಕರ್ಮಿಗಳು, ತಮ್ಮ ತಮ್ಮ ಮನೆಗಳಲ್ಲೇ ವಸ್ತ್ರಗಳನ್ನು ನೇಯ್ದು, ಅವುಗಳನ್ನು ಚಕ್ರವರ್ತಿಗಳು ಅಥವ ರಾಜರಿಗೆ ಮಾರುತ್ತಿದ್ದರು. ರಾಜಾಶ್ರಯದಲ್ಲಿದ್ದ ಸಾಮಂತರು, ಪಾಳೆಯಗಾರರು, ರಾಜಾಸ್ಥಾನದ ಅಂತಃಪುರದ ನೃತ್ಯಾಂಗನೆಯರು, ಮಂತ್ರಿಗಳು, ಸರದಾರರು ಸಾಮಾನ್ಯವಾಗಿ ಮಸ್ಲಿನ್ ಬಟ್ಟೆಯನ್ನು ತೊಡಲು ಕಾತುರರಾಗಿದ್ದ ವ್ಯಕ್ತಿಗಳು. ಭಾರತದ ಮದ್ರಾಸ್, ಕೋರಮಂಡಲ, ಆಂಧ್ರಪ್ರದೇಶ, ಒರಿಸ್ಸ, ಪ್ರಾಂತ್ಯಗಳಲ್ಲಿ ಹತ್ತಿ ಬಟ್ಟೆಗಳನ್ನು ತಯಾರಿಸಿದಾಗ್ಯೂ, ಗುಣಮಟ್ಟ' ಬರುತ್ತಿರಲಿಲ್ಲ. ಮೊಘಲರ ಕಾಲದಲ್ಲಿ ಉಚ್ಛ್ರಾಯಸ್ಥಿತಿಯಲ್ಲಿದ್ದ, ಈ 'ಗೃಹೋದ್ಯೋಗ' ಮುಂದೆ ಯೂರೋಪಿಯನ್ ವಲಸೆಗಾರರು ನಮ್ಮದೇಶಕ್ಕೆ ಬಂದಾಗ ಅತ್ಯಂತ ಬೃಹತ್ ಪ್ರಮಾಣದಲ್ಲಿ ಬೆಳೆದು ವಿಶ್ವಖ್ಯಾತಿಯನ್ನು ಗಳಿಸಿತು. ಅವರಿಗೆಲ್ಲ ಇದೊಂದು ಪ್ರಮುಖ ಆಕರ್ಷಣೆಗಳಲ್ಲೊಂದಾಗಿತ್ತು.[]

ಚಿತ್ರ:Jamdani saree.jpg
ಜಮ್ ದಾನಿ ಸೀರೆ'

'ಢಾಕ ಮಸ್ಲಿನ್' ಬಟ್ಟೆಗಳ ಸುಮಾರು ೧೫ ಪ್ರಕಾರ ಗಳನ್ನು, ಚರಿತ್ರೆಯಲ್ಲಿ ದಾಖಲು ಮಾಡಿದ್ದಾರೆ. ಅವುಗಳ ವಿವರಗಳು ಕೆಳಗೆ ಕಂಡಂತಿವೆ

[ಬದಲಾಯಿಸಿ]
ಕ್ರ. ಸಂ. ಬಟ್ಟೆಯ ವಿಧ ಎಳೆಗಳು ತೂಕ.(ಡ್ರಾಂ ಮತ್ತು ಔನ್ಸ್) ಉದ್ದಗಲ ವಿವರಗಳು
ಮಲ್ ಮಲ್ ಖಾಸ್ 1800-1900 3 ಔಂಸ್.214 ಡ್ರಾಮ್ಸ್ 10x1 ಅತಿ ಶ್ರೀಮಂತರು. ರಾಜರು ಮತ್ತು ಅವರ ಪರಿವಾರದವರು, ರಾಣಿವಾಸದವರು ಬಳಸುವ ಉತ್ಕೃಷ್ಟ ವಸ್ತ್ರಗಳು.
ಝೂನ 1000 8.5 20x1 ಸೊಳ್ಳೆಪರದೆ ತರಹ ಕಾಣಿಸುವ. ರಾಜನರ್ತಕಿಯರಿಗೆ ಹೇಳಿ ಮಾಡಿಸಿದ ಬಟ್ಟೆ.
ರಂಗ 1200 8 ಔಂ. 4 ಡ್ರಾಮ್ಸ್ 20x1 ಜಾಲರಿಯ ತರಹ. 1/ಡೆಂಟ್.
ಅಬ್ರವಾನ್ 700-1400 9-11.5 20x1 ಅಬ್-ನೀರು. ರೆವಾನ್–ಹರಿಯುವುದು, (ಪರ್ಶಿಯನ್ )
ಸರ್ಕ್ಯುರಾಲಿ 1900 4,/ 4.5 10x1 ನವಾಬರಿಗಾಗಿಯೇ ಮೀಸಲು
ಖಾಸ್ 1400-2800 10.5-21 20x1 to 1.5 ನವಿರಾದ ಬಟ್ಟೆ.
ಶಬ್ನಮ್ 700-1300 10-13 20x1 ಸಂಜೆಯ ಮಂಜಿನ ಹನಿಯ ತರಹ ಕಾಣುವ ಬಟ್ಟೆ.
ಅಲಬೆಲ್ಲೆ 1100-1900 9.75-17 20x1 ತುಂಬಾ ಮೃದುವಾದ ಬಟ್ಟೆ.
ತೌಜಾಬ್ 1900 10-18 20x1 ತನುವಿಗಾಭರಣದ ತರಹ.
೧೦ ತರುಂಡಮ 1900-2700 15-27 20x1 ಸೊಗಸಾದ ವಸ್ತ್ರ.
೧೧ ನಯನ್ ಸುಖ್ 2200-2700 - 20x1.5 ನಯನ ಮನೋಹರವಾದ ಬಟ್ಟೆ.
೧೨ ಬುದ್ಧನ್ ಖಾಸ್ 2200 12 10x24x1.5,20x24x1.5 ಇಲ್ಲಿ ಬಳಸುವ ಹೊಕ್ಕು ಅಷ್ಟು ಬಿಗಿಯಿಲ್ಲ.
೧೩ ಸರ್ಬಂದ್ 2100 12 20x24x1.5 ಟೋಪಿಯಂತೆ ತಲೆಉಡುಪು.
೧೪ ಕುಮಿಸ್ 1400 10 20x1 ಈಗಿನ ಸ್ಕರ್ಟ್ಸ್ ತರಹ ಬಳಸಬಹುದು.
೧೫ ಜಮ್ದಾನಿ 1700 - - ಮಗ್ಗದ ಮೇಲೆ ಎಂಬ್ರಾಯ್ಡರಿ ಮಾಡಬಹುದು.

ಮೂಲ : " Practical Cotton Mill Manufacture ", P. 14, B. S. Benjamin, 1934.[]

'ಮಸ್ಲಿನ್', ಪದದ ಉತ್ಪತ್ತಿ

[ಬದಲಾಯಿಸಿ]

ಮಸ್ಲಿನ್, ಅಂದರೇನು ಅನ್ನುವುದು ಮುಖ್ಯ. ಅದರ ಸರಿಯಾದ ವಿವರಣೆ. ಇದು 'mousseline,' ಎಂಬ ಫ್ರೆಂಚ್ ಶಬ್ದದಿಂದ ಉದ್ಭವವಾಗಿದೆ. ಅಂದಿನ, 'ಮೆಸಪೊಟೋಮಿಯ' ದ ಒಂದು ಚಿಕ್ಕ ನಗರದಲ್ಲಿ ಇದರ ಪುರಾವೆಗಳಿವೆ. ಇಂದಿನ ಇರಾಕ್ ನ ಹತ್ತಿರದಲ್ಲಿದೆ. ಇಂದಿಗೂ ಇದನ್ನು 'ಮುಸಲ್ 'ಎಂದು ಕರೆಯುತ್ತಾರೆ. ಅತ್ಯಂತ ನವಿರಾದ ಶುಭ್ರವಾದ, ಹತ್ತಿ ಬಟ್ಟೆಗಳ ಹೆಸರು. ಈ ಪದ, ಹತ್ತಿಬಟ್ಟೆಗಳ ಅನೇಕ ಪ್ರಕಾರಗಳಿಗೆ ಅನ್ವಯಿಸುತ್ತದೆ. ಉದಾ : ಬಾಟಿಸ್ಟ್, ನೈನ್ ಸುಖ್, ಬಟ್ಟೆಗಳಿಂದ ಹಿಡಿದು ಲಾಂಗ್ ಕ್ಲಾತ್, ಪರ್ಕೇಲ್ ವರೆಗೂ. ೧ ನೆಯ ಶತಮಾನದಲ್ಲಿ, 'ರೋಮ್ ಸಾಮ್ರಾಜ್ಯ' ದಲ್ಲಿ ಭಾರತದ ಹತ್ತಿಬಟ್ಟೆಗಳು, 'ನೆಬ್ಯುಲಾ', 'ಗಂಗೆಟಿಕ','ವೆಂಟಿ' ಹೆಸರಿನ,'ಇಂಡಿಗೋ', ಬಣ್ಣ ಹಾಕಿದ, ಕೆಲವು ನಮೂನೆಗಳು ಮಾರಲ್ಪಡುತ್ತಿದ್ದವು. ಅವುಗಳ ಕೆಲವು ಸೂಕ್ಷ್ಮ ಮಾದರಿಗಳನ್ನು ನಾವು, ಮಹಾರಾಷ್ಟ್ರದ ಔರಂಗಾಬಾದಿನ ಬಳಿಯಲ್ಲಿರುವ 'ಅಜಂತಗುಹೆ', ಯ ಗೋಡೆಗಳ ಮೇಲೆ ಮಾಡಿರುವ, ೬ ನೆ ಶತಮಾನದ ಪೇಂಟಿಂಗ್ ನಲ್ಲಿ, ನೋಡಬಹುದು. ನಮ್ಮ ಹಿರಿಯರು ಮಸ್ಲಿನ್ ಬಟ್ಟೆಗಳ ಬಗ್ಗೆ ಅಭಿಮಾನದಿಂದ ಹೊಗಳಿ, ಹೇಳುವುದನ್ನು ನಾವೆಲ್ಲಾ ಬಲ್ಲೆವು. ಅವು ಎಷ್ಟರಮಟ್ಟಿಗೆ ನಿಜ, ಎನ್ನುವುದನ್ನು ನಾವು ಪತ್ತೆ ಹಚ್ಚಬೇಕು. ಅದಕ್ಕೆ ಹತ್ತಿ ಬಟ್ಟೆ ತಯಾರಿಕೆಯ ತಂತ್ರಜ್ಞಾನದ ಅರಿವಿದ್ದರೆ, ಅರ್ಥವಾಗುವುದು ಬಹಳ ಸುಲಭ.

'ಮಸ್ಲಿನ್ ಬಟ್ಟೆಗಳ ಗುಣ-ವಿಶೇಷ

[ಬದಲಾಯಿಸಿ]

ಮಸ್ಲಿನ್ ಬಟ್ಟೆಗಳು, ಎಷ್ಟು ಮಹೀನವಾಗಿದ್ದವೆಂದರೆ, ಅವನ್ನು ಧರಿಸಿದ ಮೇಲೂ ದೇಹದ ಒಳಭಾಗಗಳು ಗೋಚರವಾಗುತ್ತಿದ್ದುವಂತೆ. ಹಾಗೂ ಸಾಮಾನ್ಯವಾಗಿ ಉಡಬಹುದಾದ ಒಂದು ಸೀರೆಯನ್ನು 'ಬೆಂಕಿಪೊಟ್ಟಣ' ದಲ್ಲಿ ಮಡಿಸಿಟ್ಟಿರುತ್ತಿದ್ದರಂತೆ. ಈ ವಾಕ್ಯಗಳನ್ನು ನಾವೆಲ್ಲ ಒಂದಲ್ಲ ಒಂದು ಬಾರಿ, ಬಾಲ್ಯದಿಂದ ಕೇಳಿಬಲ್ಲೆವು. ಇಂತಹ ಅತ್ಯಂತ ಉನ್ನತ ಕಲೆ ನಶಿಸಿ ಹೋದ ರೀತಿಯನ್ನು ಹುಡುಕುವುದು ಆವಶ್ಯಕ. ಅದನ್ನು ಪುನರ್ಸ್ಥಾಪಿಸುವುದು ಕಷ್ಟ. ಇಂದು ಅದೇ ತರಹೆಯ ವಸ್ತ್ರವಿನ್ಯಾಸ ಮಾಡುವ ಕಾರಿಗರ್ ಗಳು ನಮ್ಮ ದೇಶದಲ್ಲಿ ಬೆರೆಳೆಣಿಕೆಯಷ್ಟು ಮಾತ್ರ ಇದ್ದಾರೆ. ಹಿಂದಿನವರು ಬಳಸುತ್ತಿದ್ದ ಹತ್ತಿ. 'ಇಜಿಪ್ಷಿಯನ್', ಅಥವಾ 'ಅಮೆರಿಕನ್' ಬಗೆಯಲ್ಲ. ಇವೆಲ್ಲಾ ನಮ್ಮ ದೇಶದ ಗೃಹ ಕಲೆಗಳ ಬಗ್ಗೆ, ಆಸ್ತೆಯಿರುವವರೆಲ್ಲಾ ಕೆಲವು ಬಾರಿ ತಿಳಿದುಕೊಳ್ಳಲು ಪ್ರಯತ್ನಿಸುವ ಪರಿ. ಅದರೆ, ಅವರಿಗೆ ಸಾಮಾನ್ಯವಾಗಿ ಸಮಾಧಾನಕರವಾದ ಉತ್ತರಗಳು ಸಿಗುವುದು ಅಪರೂಪ. ನೈಜಸ್ಥಿತಿಯನ್ನು ತಿಳಿಯುವುದು ಬಹು ಮುಖ್ಯ. ಇಂದಿಗೂ ಹಲವರು ಇದೇ ಪ್ರಶ್ನೆಯನ್ನು ಕೇಳುತ್ತಾರೆ. ಮೇಲೆ ದಾಖಲಿಸಿದ ಮಾದರಿಗಳಲ್ಲಿ, 'ಮಲ್ ಮಲ್ ಖಾಸ್ ಬಟ್ಟೆ', ಅತ್ಯಂತ ನವಿರಾದದ್ದು ಹಾಗೂ ತುಟ್ಟಿ. ಇದನ್ನು ರಾಜರು, ಅತ್ಯಂತ ಪ್ರಮುಖವ್ಯಕ್ತಿಗಳು, ಹಾಗೂ ಅವರ ಹತ್ತಿರದ ಪರಿವಾರದವರು ಮಾತ್ರ ಧರಿಸುತ್ತಿದ್ದರು.

ಹತ್ತಿದಾರದ, ಮಹೀನತೆಯನ್ನು ಅಂಕಗಳಲ್ಲಿ ನಮೂದಿಸಬೇಕು

[ಬದಲಾಯಿಸಿ]

ದಾರ ಎಷ್ಟು ನವಿರಾಗಿದೆ, ಮತ್ತು ಅದರ ಮಹೀನತೆಯನ್ನು ಮಾಪಿಸಲು, 'ಬ್ರಿಟಿಷ್' ಹಾಗೂ 'ಫ್ರೆಂಚ್ ಪದ್ಧತಿಗಳು' ಬಳಕೆಯಲ್ಲಿವೆ. ಉದಾಹರಣೆಗೆ : ದಾರದ ಫೈನ್ ನೆಸ್, 'ಕೌಂಟ್' ಅಥವಾ ಅಂಕಗಳಲ್ಲಿ ನಮೂದಿಸಲಾಗುತ್ತದೆ. ಅಂಕಗಳು ಹೆಚ್ಚಾದಂತೆ, ಅದರ ಗರಿಮೆಯೂ ಹೆಚ್ಚಾಗುತ್ತದೆ. ಹತ್ತಿಯಿಂದ ತಯಾರಾದ ದಾರಗಳು, ಮಾರುಕಟ್ಟೆಯಲ್ಲಿ, ೦.೫ s ನಿಂದ ಹಿಡಿದು, ೧೨೦ s ವರೆಗೂ ಇವೆ. ಇದಕ್ಕಿಂತ ಅತಿ ಸೂಕ್ಷ್ಮದಾರಗಳನ್ನು ಮಾಡುವುದು ಕಷ್ಟ. ಏಕೆಂದರೆ ಅವು ಬಹಳ ದುರ್ಬಲವಾಗಿದ್ದು ಬಟ್ಟೆಮಾಡುವ ಪ್ರಕ್ರಿಯೆಯಲ್ಲಿ , ಹರಿದುಹೋಗುತ್ತವೆ. ಬಟ್ಟೆಯೂ ಶಕ್ತಿಯುತವಾಗಿರುವುದಿಲ್ಲ. ೧ ಪೌಂಡ್ ಹತ್ತಿಯಲ್ಲಿ ೮೪೦ ಗಜ ದಾರವನ್ನು ನೂಲಬಹುದಾದರೆ, ಅದರ ಅಂಕ (ಕೌಂಟ್) ೧ s ಎನ್ನುತ್ತಾರೆ. ೮೪೦ ಗಜ, ಹತ್ತಿದಾರದ ೧೨೦ ಲಡಿಗಳು , ೧ ಪೌಂಡ್ ಹತ್ತಿಯಿಂದ ತಯಾರಾಗುತ್ತವೆ. ಅದು ೧೨೦ s ಕೌಂಟ್ ದಾರ. ಅದನ್ನು ಹೀಗೂ ಹೇಳಬಹುದು. ೧ ಪೌಂಡ್ ಹತ್ತಿಯಿಂದ ೮೪೦ ಗಜ ದಾರದ ಲಡಿಗಳ, ಒಟ್ಟು, ೧,೦೦೮೦೦ , ಗಜದಾರವನ್ನು ನೂಲಬಹುದು.

ಆಡುಮಾತಿನಲ್ಲಿ ಜನರು ಹೇಳುತ್ತಿದ್ದ ಬಟ್ಟೆಯ ವಿವರಗಳು, ಹಲವು ಬಗೆಯವು. ಬರವಣಿಗೆಯಲ್ಲೂ ಬರೆದ ಅಂಶಗಳು, ಕೆಲವು ವೈಯಕ್ತಿಕ ಅಭಿಪ್ರಾಯಗಳು. ಕೆಲವು ಅವೈಜ್ಞಾನಿಕವೂ ಅಗಿದ್ದವು. ಕೆಲವೇ ಕುಶಲ ಕರ್ಮಿಗಳು ಮರಣ ಹೊಂದಿದಾಗ, ಆ ತಿಳುವಳಿಕೆ ಅವರ ಜೊತೆಗೇ ಸಾಯುತ್ತಿತ್ತು. ಇಬ್ಬರು ಅರಬ್ಬಿ ನಾವಿಕರ ಪ್ರಕಾರ, ಇಂತಹ ನವಿರಾದ ವಸ್ತ್ರವನ್ನು ಒಂದು ಕೈಉಂಗುರದ ಮೂಲಕ ತೂರಿಸಬಹುದಾಗಿತ್ತಂತೆ. ಕ್ರಿ. ಶ. ೧೨೯೦ ರಲ್ಲಿ ಮಾರ್ಕೊಪೋಲೊ ಗ್ರೀಕ್ ನಾವಿಕ, ಕೂಡ, ಕೋರಮಂಡಲದಲ್ಲಿ ಕಂಡ ಮಸ್ಲಿನ್ ಬಟ್ಟೆಗಳ ಗುಣವನ್ನು ಕೊಂಡಾಡಿದ್ದಾನೆ. ಒಂದು ಪೌಂಡ್ ಹತ್ತಿಯಲ್ಲಿ ೨೫೩ ಮೈಲಿ ಉದ್ದದ ದಾರವನ್ನು ನೇಯ್ದು, ಅದರಿಂದ ಅತ್ಯಂತ ಹಗುರವಾದ ಮತ್ತು ನಯವಾದ ವಸ್ತ್ರವನ್ನು ಮಾಡುತ್ತಿದ್ದುದಾಗಿ ವರದಿಗಳು ತಿಳಿಸುತ್ತವೆ. ಬಹುಶಃ ಅವುಗಳ ಕೌಂಟ್, ೫೩೦ಸ್ ಆಗಿರಬಹುದೆಂದು ಅಂದಾಜು ಮಾಡಲಾಗಿದೆ. ಭೂಕಂಪ, ಅತಿವೃಷ್ಟಿಮಳೆ, ಮತ್ತು ಕ್ಷಾಮಗಳು ತಲೆದೋರಿದಾಗ ಹೆಚ್ಚು ತೊಂದರೆಗೀಡಾದವರು, ಕೆಲವು ಪ್ರಾಂತ್ಯದ ಜನ. ಗುಜರಾತ್ ನ ಪಟಾನ್ ಹಳ್ಳಿಯ ರೈತಾಪಿ ಜನ, ಅತ್ಯಂತ ಉತ್ತಮ ಮಟ್ಟದ ಕೆಲಸಗಾರರು. ಲೆಕ್ಕವಿಲ್ಲದಷ್ಟು ಜನ ಸತ್ತರು. ೧೭ ಶತಮಾನದಲ್ಲಿ ದಾಖಲಿಸಿರುವಂತೆ, ೧೫ ಅಡಿ ಉದ್ದ ಹಾಗೂ ೧ ಅಡಿ ಅಗಲದ ಬಟ್ಟೆಯ ತೂಕ, ೯೦೦ ಗ್ರೇನ್ ಗಳು, ಅಥವಾ, ೬೦ ಗ್ರೇನ್ಸ್/ಚದರಗಜ. ಅಂದರೆ, ೭೩ ಗಜ/ಪೌಂಡ್ ಗೆ. ಸ್ವಿಟ್ಸರ್ ಲ್ಯಾಂಡ್ ನ ಕೈಮಗ್ಗದಲ್ಲಿ ತಯಾರಿಸುವ ಅತ್ಯಂತ ಹಗುರವಾದ ಬಟ್ಟೆ, ೧೬.೫ ನಿಂದ ೧೬ ಗಜವಿತ್ತು. [೧ ಪೌಂಡ್ ಗೆ]

'ದಾರ' ಅಥವಾ 'ವಸ್ತ್ರ' ದ ಮಹೀನತೆ ಆಡುಮಾತಿನಲ್ಲಿ,

[ಬದಲಾಯಿಸಿ]

ಔರಂಗಝೇಬ್ ನ ಮಗಳು, 'ಜಬರುನ್ನೀಸ' ಉಟ್ಟಿದ್ದ ಉಡುಪು ಎಷ್ಟು ಮಹೀನವಾಗಿತ್ತೆಂದರೆ, ೭ ಸುತ್ತು ಸುತ್ತಿ ಆಕೆ ಉಟ್ಟಿದ್ದರೂ ಒಳಮೈ ಭಾಗ ಕಾಣಿಸುತ್ತಿದ್ದಿತಂತೆ. ಹೀಗೆ ಮಸ್ಲಿನ್ ಬಗ್ಗೆ ಅರಿಯಲು ಆಸಕ್ತರು ಅನೇಕರು. ದಾರ ಇಲ್ಲವೇ ವಸ್ತ್ರದ ಮಹೀನತೆಯನ್ನು ಅಳೆಯುವ ಸಾಧನಗಳಿರಲಿಲ್ಲ, ಒಮ್ಮೆ ಅವರಿಗೂ ಸಂದೇಹ ಬಂತು. ನಿಜಸ್ಥಿತಿ ತಿಳಿಯಲು ಅವರು, ೧೯೩೫ ನೆ ಜುಲೈ ತಿಂಗಳಿನಲ್ಲಿ, 'ಇಂಡಿಯನ್ ಸೆಂಟ್ರಲ್ ಕಾಟನ್ ಕಮಿಟಿ', ಯ ಆಗಿನ ಸೆಕ್ರೆಟರಿ, 'ಸರ್. ಬ್ರೈಸ್ ಬರ್ಟ್' ರವರು ಎರಡು ಬಟ್ಟೆಯ ಸ್ಯಾಂಪಲ್ ಗಳನ್ನು ಲಂಡನ್ ಮ್ಯೂಸಿಯಂನಿಂದ ತರಿಸಿ, ತಮ್ಮ 'ಬೊಂಬಾಯಿನ ಟೆಕ್ನೊಲಾಜಿಕಲ್ ಲ್ಯಾಬೋರೇಟೊರಿ', ಈಗಿನ (CIRCOT) ಯಲ್ಲಿ ಮಾಡಿಸಿದ ಪರೀಕ್ಷಣದಿಂದ ಕಂಡುಬಂದ ತಥ್ಯಗಳು ಹೀಗಿವೆ :

ದೇಸಿ ಮಸ್ಲಿನ್ ಬಟ್ಟೆ

[ಬದಲಾಯಿಸಿ]

ಇವುಗಳಲ್ಲಿ ಒಂದು ಬಟ್ಟೆ ನಮೂನೆ, 'ದೇಸಿಹತ್ತಿಬಟ್ಟೆ'-ನಮ್ಮ ಕಾರೀಗರ್ಗಳಿಂದ ತಯಾರಾದದ್ದು. ನಮ್ಮ ಭಾರತದ, ದೇಸಿಹತ್ತಿ, 'ಹರ್ಬೇಷಿಯಮ್' ನಿಂದ ಮಾಡಿದ್ದು. ೩೫೦ ಸ್ ಕೌಂಟ್, ೦.೯೪, ಮತ್ತು, ೦.೭೪ ಕ್ರಮವಾಗಿ. 'ಫೂಟಿ' ಮತ್ತು 'ಬೈರಟ್ಟ' ಹತ್ತಿ ಜಾತಿ.

ಇಂಗ್ಲೆಂಡ್ ನಲ್ಲಿ ಯಂತ್ರಗಳಿಂದ ತಯಾರಾದ ವಸ್ತ್ರ

[ಬದಲಾಯಿಸಿ]

ಇನ್ನೊಂದು ವಿಶ್ವದಲ್ಲೆಲ್ಲಾ ಉತ್ಕೃಷ್ಟವಾಗಿದ್ದ (ಈಗ 'ಸೀ ಐಲೆಂಡ್ ಹತ್ತಿ' ಸಿಗುವುದಿಲ್ಲ) ಅತ್ಯಮೂಲ್ಯವಾದ, 'ಸೀ ಐಲೆಂಡ್ ಹತ್ತಿ' ಯನ್ನುಪಯೋಗಿಸಿ ಇಂಗ್ಲೆಂಡ್ ನ ಹೊಸ ಯಂತ್ರಗಳಲ್ಲಿ ತಯಾರಾದ ವಸ್ತ್ರ. ದಾರವನ್ನೂ ಯಂತ್ರದಲ್ಲಿ ಮಾಡಿದ್ದು.

ಭಾರತದ ಕುಶಲಕರ್ಮಿಗಳ ವಿಧಾನ

[ಬದಲಾಯಿಸಿ]

ನಮ್ಮ ಭಾರತೀಯ ಕುಶಲ ನೂಲುಗಾರರ ಕೈನಲ್ಲಿ ನೂಲುವ ಪದ್ಧತಿಯಲ್ಲಿ, ತಮ್ಮ ಉಗುರಿನ ಅಂಚಿನಕಣ್ಣಿನಲ್ಲಿ ಸರಿಯಾದ ತಿರುವು ಕೊಡಬಹುದಾಗಿತ್ತು. ಮೇಲಾಗಿ ಸುತ್ತುಗಳನ್ನು ಆಷ್ಟೆ. ಇಲ್ಲಿ ಬಳಸುವ ಹತ್ತಿ ಕಡಿಮೆ ಉದ್ದವಾದಾಗ್ಯೂ, ಅದನ್ನು ಹಿಂಜಿ ಉದ್ದವಾಗಿ ಎಳೆಯಬಹುದಾದ ಕ್ರಿಯೆಯಗುಟ್ಟು, ಕುಶಲ ಕಾರಿಗಾರರಿಗೆ ಮಾತ್ರ ಗೊತ್ತು. ಆದರೆ ಇಂತಹದೇ ಗುಣ ಮಟ್ಟದ ದಾರ, ಯಂತ್ರದಲ್ಲಿ ತಯಾರಿಸಬೇಕಾದರೆ, ಅದಕ್ಕೆ ಅಳವಡಿಸಬೇಕಾದ, ಪದ್ಧತಿ ಮತ್ತು ಹೊಂದಿಸಬೇಕಾದ ಪರಿಕರಗಳು ಬೇರೆ.

'ಯಂತ್ರದಿಂದ ಮೂಲ್ಯಾಂಕನ' ಮಾಡುವ ಕ್ರಮ ಬಳಕೆಗೆ ಬಂತು

[ಬದಲಾಯಿಸಿ]

ಉದ್ದದ ಹತ್ತಿ ತಂತುಗಳಿಲ್ಲದೆ ದಾರಮಾಡುವ ಪ್ರಕ್ರಿಯೆ ಅಸಾಧ್ಯ. ಇದನ್ನು ಹಲವು ದಶಕಗಳಿಂದ ಯಂತ್ರನಿರ್ಮಾಪಕರು, ಗಮನಿಸುತ್ತಿದ್ದು, ಕೆಲವು ಮಾರ್ಪಾಡುಗಳನ್ನು ಒದಗಿಸಿದ್ದಾರೆ. ೩೦೦ ಸ್ ವರೆಗೂ ಮಾಡುವ ತಂತ್ರಜ್ಞಾನವನ್ನು ರೈಟರ್ ಎಂಬ ಕಂಪೆನಿ ಕಂಪೆನಿ, ಮಾಡಿ ತೋರಿಸಿದೆ. [ಜಿ. ೩೦ ಮತ್ತು ಜಿ. ೩೩ ಮಾಡೆಲ್ ಮೆಶಿನ್ ಗಳು] ಅದಕ್ಕೆ ಪ್ರಶಸ್ತಿಯೂ ಬಂದಿದೆ. ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ದಾಖಲಾಗಿದೆ. ಭಾರತೀಯ ಕೈಮಗ್ಗದ ಪ್ರವೀಣರ ಕೆಲಸವನ್ನು ಮೂಲ ತತ್ವವನ್ನಾಗಿಟ್ಟುಕೊಂಡು, 'ಮ್ಯೂಲ್', ಎಂಬ ಯಂತ್ರದ ನಿರ್ಮಾಣವಾಗಿತ್ತು. ಅದರ ಕಾರ್ಯವಿಧಾನಗಳು, ತಕಲಿ, ಅಥವಾ ಚರಕವನ್ನು ಆಧಾರಿಸಿದ್ದವು. ಇಲ್ಲಿ ದಾರಗಳು ಅತ್ಯಂತ ನವಿರಾದ ೩೫೦ ಅಂಕಗಳ ದಾರದ ನಮೂನೆಗಳು. ಈಗಲೂ ೮೦೦ಸ್ ಅಂಕದ ಮ್ಯೂಲ್ ಮೆಶಿನ್ ಮೂಲಕ ತಯಾರಾದ ದಾರದ ಒಂದು ನಮೂನೆ, 'ಲಂಡನ್ ನ ಸಂಗ್ರಹಾಲಯ' ದಲ್ಲಿದೆ. ಇವೆಲ್ಲಾ ಕೇವಲ ಕೌತುಕಕ್ಕಾಗಿ, ಗಾಜಿನ ಕಪಾಟಿನಲ್ಲಿಟ್ಟು ಅವಲೋಕನಕ್ಕಾಗಿ ಅಷ್ಟೆ. ಅವುಗಳ ಉಪಯೋಗ ಸಾಧ್ಯವೇ ಇಲ್ಲ.

ಹತ್ತಿಯ ದಾರ ಮಾಡುವ ಪ್ರಕ್ರಿಯೆಯ ಹಲವಾರು ಸೂಕ್ಷ್ಮವಿಷಯಗಳು

[ಬದಲಾಯಿಸಿ]

ಕೈಕಸುಬಿಗೂ, ಯಂತ್ರದ ಕಾರ್ಯವಿಧಿಗಳಿಗೂ, ಅಜಗಜಾಂತರ ವ್ಯತ್ಯಾಸವಿದೆ. ಎರಡರಲ್ಲೂ ಅವುಗಳದೇ ಆದ, ಸೌಕರ್ಯಗಳೂ, ನ್ಯೂನತೆಗಳಿವೆ. ಅತಿ ಸಮಯ ತೆಗೆದು ಕೊಳ್ಳುವ ಕೈಕೆಲಸ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ. ಉತ್ಪಾದನೆ ಅತಿ ಕಡಿಮೆ. ಪರಿಶ್ರಮ, ತಾಳ್ಮೆ, ಹಾಗೂ ಕೌಶಲ್ಯಗಳಿದ್ದರೆ ಮಾತ್ರ ಕೆಲಸ ಮುಂದುವರೆಸಲು ಸಾಧ್ಯ. ಮೆಶಿನ್ ನಲ್ಲಿ ಹಾಗಲ್ಲ. ಕೆಲವು ಸಮಯ ಕೆಲಸ ಮಾಡಿ ಅನುಭವ ಪಡೆದಮೇಲೆ, ಕೆಲಸ ಮಾಡುವುದು ಸುಲಭ. ಹೆಚ್ಚಿಗೆ ಶ್ರಮವಿಲ್ಲ. ಉತ್ಪಾದನೆ ಖಂಡಿತವಾಗಿ ಹತ್ತು ಹಲವಾರು ಪಟ್ಟು ಹೆಚ್ಚು. ಪ್ರತಿ ಲಾಟ್ ಗಳೂ ಬೇರೆ ಬೇರೆಯಾಗಿ ಕಾಣುವುದು ಸಹಜ. ಬಟ್ಟೆಗಳಿಗೆ ಬಣ್ಣ ಹಾಕುವಾಗ ಅದರ 'ಶೇಡ್' ನಲ್ಲಿ ' ತ್ರುಟಿ' ಕಾಣುತ್ತದೆ. ಸುಮಾರು ೩೫೦-೪೦೦ ವರ್ಷಗಳ ಹಿಂದೆಯೇ ನಮ್ಮ ದೇಶದ ಹೆಸರಾಂತ ನೇಕಾರರು ತಮ್ಮ ಕಸುಬಿನಲ್ಲಿ ಹೊಸತನ ಹಾಗೂ ಮಾರ್ಪಾಡುಗಳನ್ನು ಮಾಡಿ ಕೊಳ್ಳಬೇಕಾಯಿತು. ಕೆಲವರಿಗೆ, ಮ್ಯಾಂಚೆಸ್ಟರ್ ನಲ್ಲಿ ಕೆಲಸ ಮಾಡಲು ಆಹ್ವಾನ ಬಂದಿತ್ತು. ಮತ್ತೆ ಕೆಲವರು ಮ್ಯಾಂಚೆಸ್ಟರ್ ನಲ್ಲಿ ಯಂತ್ರಗಳ ಸಹಾಯದಿಂದ ನೂತ ಹತ್ತಿದಾರಗಳನ್ನು ತಂದು ಕೊಟ್ಟು ತಮ್ಮ ವಿನ್ಯಾಸಗಳಿಗುಗುಣವಾಗಿ ಮನೆಯಲ್ಲಿ ನೇಯ್ದು ಕೊಡುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ನಿಜವೆಂದರೆ, ಈ ಕಸುಬಿಗೆ ಹೆಚ್ಚಿಗೆ ಬಾಡಿಗೆ ದೊರೆಯುತ್ತಿತ್ತು. ಹೀಗೆ, ವಿದೇಶಿ ಪರತಂತ್ರಗಳಿಗೆ ತಮ್ಮ ಮಾರಿಕೊಳ್ಳುವ ಪರಿಸ್ಥಿತಿ ಎದುರಿಸಬೇಕಾಯಿತು. ದಿನಕಳೆದಂತೆ ಅಂತಹ ಅನುಕೂಲಗಳೂ ಕೈತಪ್ಪಿಹೋದವು. ಸ್ವಯಂಚಾಲಿತ ವಿದ್ಯುತ್ ಮಗ್ಗಗಳು ಭಾರತದಾದ್ಯಂತ ವ್ಯಾಪಕವಾಗಿ ದಾಳಿಯಿಟ್ಟು, ಎಲ್ಲರ ಆಸೆ ಆಕಾಂಕ್ಷೆಗೆ ತಣ್ಣೀರೆರಚಿದವು. ಕೆಲವು ಕ್ಷೇತ್ರಗಳಾದ ರೇಷ್ಮೆ ಸೀರೆ ಉದ್ಯೋಗಕ್ಕೆ ಇದರ ಶಾಖ ತಟ್ಟಲಿಲ್ಲ. ಕೈಮಗ್ಗದಲ್ಲಿ ತಯಾರಾದ ರೇಷ್ಮೆಸೀರೆಗಳಿಗೆ ದಕ್ಷಿಣ ಭಾರತದ ಸ್ತ್ರೀಯರ ಬಹುದೊಡ್ಡ ಮಾರುಕಟ್ಟೆಯಿದೆ. ಅದಕ್ಕೆ ಚ್ಯುತಿಯಿಲ್ಲ.

ಮಸ್ಲಿನ್ ವಸ್ತ್ರಗಳನ್ನು ಕಂಡವರಿಲ್ಲ

[ಬದಲಾಯಿಸಿ]

ವಿಪರ್ಯಾಸವೆಂದರೆ, ನಮ್ಮದೇಶದ ಬಹುಪಾಲು ಜನ, ಮಸ್ಲಿನ್ ಬಟ್ಟೆಯನ್ನು ನೋಡಿಯೇ ಇಲ್ಲ ; ಅದು ದಂತಕಥೆಯಾಗಿದೆ. ಅವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಯಾರೂ ಹೊಂದದಿರುವುದು ಇದಕ್ಕೆ ಕಾರಣವಾಗಿದೆ. ಎಲ್ಲರೂ ಮಹಾನ್ ಪದವನ್ನು ಬಳಸುವವರೆ. ಆದರೆ ಮಹಾನ್ ಅರ್ಥ ಯಾರಿಗೂ ತಿಳಿಯದು. ಈಗಿನ ಪೀಳಿಗೆಯಾಗಲೀ ಅಥವಾ ನಮ್ಮ ಹಿಂದಿನವರು ಯಾರೂ ನಮ್ಮ ದೇಶದಲ್ಲಿ ಮಸ್ಲಿನ್ ಬಟ್ಟೆಗಳನ್ನು ಕಂಡಿಲ್ಲ. ಅವುಗಳ ನಮೂನೆಗಳು,'ವಿಕ್ಟೋರಿಯ ಆಲ್ಬರ್ಟ್ ಮ್ಯೂಸಿಯಮ್, ಲಂಡನ್ 'ಮತ್ತು 'ನ್ಯೂಯಾರ್ಕ್ ನ ಮ್ಯೂಸಿಯಮ್ ಗಳಲ್ಲಿ', ಅಥವಾ 'ಹಾಲೆಂಡ್ ದೇಶದ (ಡಚ್),ಮ್ಯೂಸಿಯಂಗಳಲ್ಲಿ ಕಾಣಬಹುದು. ಭಾರತದಲ್ಲಿ 'ಅಹ್ಮದಾಬಾದಿನ ವಸ್ತ್ರ ಸಂಗ್ರಹಾಲಯ' ದಲ್ಲಿ ಇದ್ದರೂ ಇರಬಹುದು, ಗೊತ್ತಿಲ್ಲ. ಮಹಾತ್ಮ ಗಾಂಧಿಯವರು ನೂಲುತ್ತಿದ್ದ ದಾರದ ಅಂಕ, ೨೦-ರಿಂದ ೨೨ ಸ್ ಇತ್ತೆಂದು ದಾಖಲಾಗಿದೆ. ಫೋರ್ಬ್ಸ್ ವ್ಯಾಟ್ಸನ್, ವೃತ್ತಿಯಲ್ಲಿ ವೈದ್ಯರಾಗಿದ್ದವರು. ಅವರಿಗೆ ಭಾರತದ ಕರಕುಶಲ ವಸ್ತುಗಳು , ಬಹಳ ಪ್ರಿಯವಾದವು.

ಇದರ ಸಂಪಾದನೆಯನ್ನು ಆಗ ಅವರು ಹೇಗೆ ಮಾಡಿದರೆಂದು, ಊಹಿಸಲೂ ಅಸಾಧ್ಯ.

ಮೊಟ್ಟಮೊದಲು ಮಹಾ ವಸ್ತುಪ್ರದರ್ಶನ, ಲಂಡನ್ ನಲ್ಲಿ

[ಬದಲಾಯಿಸಿ]

೧೮೬೫ ರಲ್ಲಿ,ಲಂಡನ್ ನಲ್ಲಿ ನಡೆದ 'ಮಹಾವಸ್ತುಪ್ರದರ್ಶನ', ದಲ್ಲಿ ಭಾರತೀಯ ಕರಕುಶಲ ವಸ್ತುಗಳ ಪ್ರದರ್ಶನದ ವಿಭಾಗದಲ್ಲಿ, ಇವುಗಳ ಭರ್ಜರಿ ಪ್ರದರ್ಶನವಾಗಿತ್ತು. ಅಲ್ಲಿ ಬಂದಿದ್ದ ವಿಶ್ವದ ಕಲಾರಸಿಕರು ನೋಡಿ ಆಶ್ಚರ್ಯಚಕಿತರಾಗಿದ್ದರು. ಇಂಗ್ಲೆಂಡಿನ ರಾಣಿಯಿಂದ ಹಿಡಿದು, ಯೂರೋಪಿನ ಸಾರ್ವಜನಿಕರಿಗೆಲ್ಲ, ಹತ್ತಿಬಟ್ಟೆಗಳು ಬಹಳ ಪ್ರಿಯವಾದವು. ರಾಣಿಯವರು, ಅಲ್ಲಿನ ಕುಶಲ ಕರ್ಮಿಗಳಿಗೆ ಚೆನ್ನಾಗಿ ಶ್ರಮವಹಿಸಿ ಕೆಲಸ ಮಾಡಿ, ಭಾರತ ದೇಶದ ಮಸ್ಲಿನ್ ತರಹದ್ದೇ ವಸ್ತ್ರಗಳನ್ನು ತಮ್ಮ ದೇಶಲ್ಲೇ ಸಂರಚಿಸುವ ಯಂತ್ರಗಳನ್ನು ನಿರ್ಮಿಸಲು ಕರೆಕೊಟ್ಟರು. ಬ್ರಿಟಿಷ್ ಕೆಲಸಗಾರರು, ತಮ್ಮ ಪರಿಶ್ರಮ ಹಾಗೂ ಮುಂದುವರಿಯುವ ತೀಕ್ಷ್ಣ ಬುದ್ಧಿಮತ್ತೆಯಿಂದಾಗಿ, ಎಲ್ಲವನ್ನೂ ಸಾಧಿಸುತ್ತಾ ಬಂದು, ಕಟ್ಟಕಡೆಗೆ ನಮ್ಮ ದೇಶದ 'ಗೃಹಕೈಗಾರಿಕೆ' ಗಳ ಉಳಿವಿಗೆ ದೊಡ್ಡ ಸವಾಲಾದರು.

ಭಾರತೀಯರ ಅಸಡ್ಡೆಯಿಂದಾಗಿ ಮಸ್ಲಿನ್ ಬಟ್ಟೆಗಳು ಅವನತಿ

[ಬದಲಾಯಿಸಿ]

'ಮಸ್ಲಿನ್ ಬಟ್ಟೆಗಳ ಅಳಿವಿಗೆ ಹಲವಾರು ಸಂಗತಿಗಳು ಕಾರಣ ; ಭಾರತೀಯರ ಉದಾಸೀನ ಪ್ರವೃತ್ತಿಯೇ ಹೆಚ್ಚು ಪ್ರಸ್ತುತವಾಗಿದೆ. ಬ್ರಿಟಿಷ್ ಸರಕಾರ ಹಾಗೂ ಅಲ್ಲಿನ ಉದ್ಯಮಿಗಳು ಭಾರತದ ಮಹಾನ್ ವಸ್ತ್ರ ನಿರ್ಮಾಣದ ಮೂಲಗಳನ್ನು ಅತ್ಯಂತ ಏಕಾಗ್ರತೆ ಹಾಗೂ ಪರಿಶ್ರಮದಿಂದ ಪತ್ತೆ ಹಚ್ಚಿ ಆ ಕೈಚಳಕಗಳನ್ನೆಲ್ಲಾ ಯಂತ್ರಗಳಲ್ಲಿ ಸೆರೆ ಹಿಡಿಯಲು ಭಗೀರಥ ಯತ್ನವನ್ನು ಮಾಡಿ ಕೊನೆಗೆ ಜಯಶಾಲಿಗಳಾದರು. ಎಷ್ಟರ ಮಟ್ಟಿಗೆ ಆ ಕಲೆ ಅವರಿಗೆ ಒಲಿಯಿತೆಂದರೆ, ಭಾರತೀಯರೆ ಖುದ್ದಾಗಿ ಇಂಗ್ಲೆಂಡ್ ನಲ್ಲಿ ತಯಾರಾಗಿ ಬಂದ ಬಟ್ಟೆಗಳನ್ನು ಮೆಚ್ಚಿ ಕೊಳ್ಳಲು ಮುಂದೆ ಬಂದರು. ಭಾರತೀಯರೇ ನಮ್ಮ ಗೃಹೋದ್ಯೋಗಕ್ಕೆ ಮಾರಕರಾದರು. ಇದಲ್ಲದೆ ನಮ್ಮ ಗೃಹೋದ್ಯೋಗಗಳ ಮಹತ್ವವನ್ನು ಅರಿತೂ, ಅವುಗಳನ್ನು ಅಭಿವೃದ್ಧಿ ಪಡೆಸದೆ ಹೋದದ್ದು ಗ್ರಾಮೋದ್ಯೋಗ ನೆಲ ಹಿಡಿಯಲು ಕಾರಣವಾಯಿತು. ಮಸ್ಲಿನ್ ವಸ್ತ್ರಗಳನ್ನು ನಾವು ಪುನರ್ ನಿರ್ಮಿಸಿ ನಮ್ಮ ವಿಶೇಷತೆ ಯಾಗಿ ಮಾರುಕಟ್ಟೆಯಲ್ಲಿ 'Brand Image,' ಆಗಿ ಉಪಯೋಗಿಸಬಹುದು.

ಆಂಗ್ಲರಿಂದಾಗಿ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದವು

[ಬದಲಾಯಿಸಿ]

ಮಸ್ಲಿನ್ ಬಟ್ಟೆಗಳು ಖಂಡಿತವಾಗಿಯೂ ಅತ್ಯಂತ ನವಿರಾದ ಬಟ್ಟೆಗಳು. ಅವುಗಳನ್ನು ಗೃಹ ಕೈಗಾರಿಕೆಯಲ್ಲಿ ತಯಾರಿಸಲಾಗುತ್ತಿದ್ದಾಗ್ಯೂ, ಅವುಗಳ ಉತ್ಕೃಷ್ಟತೆ, ಯಂತ್ರಗಳ ತಲೆಯ ಮೇಲೆ ಹೊಡೆದಂತಿತ್ತು.'ಸರ್ ಬ್ರೈಸ್ ಬ್ರೈಟ್', ಎಂಬ ಆಂಗ್ಲ ಅಧಿಕಾರಿ, ಮಸ್ಲಿನ್ ಬಟ್ಟೆಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಲು ಆಸಕ್ತಿವಹಿಸಿದರು. ಅವರ ಪ್ರಕಾರ, ಅವುಗಳ ಸೂತ್ರಾಂಕ, ಸಂಖ್ಯೆ,೩೫೦s ನಿಂದ ೪೫೦s ವರೆಗೆ ಇತ್ತೆಂದು, ವೈಜ್ಞಾನಿಕವಾಗಿ ಪ್ರಸಿದ್ಧಿ ಪಡಿಸಿರುತ್ತಾರೆ. ಈ ವಸ್ತ್ರಗಳಿಗೆ ಉಪಯೋಗಿಸುತ್ತಿದ್ದ ದಾರವನ್ನು ದೇಸಿ ಹತ್ತಿ, ನಮೂನೆಗಳಾದ,ಬೈರಟ್ಟ, ಹಾಗೂ ಫೂಟಿ ಗಳು. ಈಗ ಇಂತಹ ನವಿರಾದ ಹತ್ತಿದಾರವನ್ನು ಮಾಡುವ ಕಾರಿಗರ್ ಗಳು ನಮ್ಮದೇಶದಲ್ಲಿ ಬೆರಳೆಣಿಕೆಯಷ್ಟು ಇರಬಹುದು. ಉತ್ಪಾದನೆ ಬಹಳ ಪಟ್ಟು ಕಡಿಮೆ. ಆದ್ದರಿಂದ ತಯಾರಾದ ಉತ್ಪನ್ನಗಳು ಬಹಳ ದುಬಾರಿ. ಕೆಲವು 'NGO' ಗಳು ಇದರ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಮಾನವ ನಿರ್ಮಿತ ಫೈಬರ್ ಬಟ್ಟೆಗಳು ಲಭ್ಯ

[ಬದಲಾಯಿಸಿ]

ಈಗ ಅನೇಕ 'ಮಾನವನಿರ್ಮಿತ ಫೈಬರ್ 'ಗಳು ಮಾರುಕಟ್ಟೆಯಲ್ಲಿ ಬಂದಿವೆ. ಅವೆಲ್ಲಾ ಹತ್ತಿಬಟ್ಟೆಗೆ ಹೋಲಿಸಿದರೆ, ಕಡಿಮೆ ಬೆಲೆಯಲ್ಲಿ ಸಿಕ್ಕುತ್ತವೆ. ಅವುಗಳ ಗುಣಮಟ್ಟ, ಹತ್ತಿಗಿಂತ ಹಲವು ಪಟ್ಟು ಉತ್ತಮ. 'ಗಟ್ಟಿತನ', 'ತಾಳಿಕೆ-ಬಾಳಿಕೆ','ಸಮನಾದ ಬಣ್ಣ ಹಾಗೂ ತಯಾರಿಕೆ', ಇತ್ಯಾದಿ. ಯಂತ್ರಗಳಲ್ಲೂ ಅತಿ ನವಿರಾದ ಹತ್ತಿದಾರವನ್ನು ಸೂಲುವ ಹಾಗೂ ಬಟ್ಟೆನೇಯುವ ಅನುಕೂಲಗಳನ್ನು ನಾವು ಕಾಣಬಹುದು. ಈಗ ಹತ್ತಿ ಬೆಳೆಯುವ ವಿಧಾನಗಳಲ್ಲಿ ಅತ್ಯಂತ ಗಮನಾರ್ಹ ಪ್ರಗತಿಯಾಗಿದೆ. ಅದು ಹೆಚ್ಚು ಕಡಿಮೆ, 'High Tech,' ಉದ್ಯೋಗದ ಶ್ರೇಣಿಗೆ ಬಂದಿದೆ. ಬೀಜಬಿತ್ತುವ ಪ್ರಕ್ರಿಯೆಯಿಂದ 'ಬೆಳೆ ಕಟಾವ್','Ginning', 'Processing', 'Fabric Manufacuring', 'Marketing', ಎಲ್ಲವೂ 'High Tech' ಆಗಿವೆ.

Suggested Readings

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

<References / >