ವಿಷಯಕ್ಕೆ ಹೋಗು

ಪಟ್ಟದಕಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ*
UNESCO ವಿಶ್ವ ಪರಂಪರೆಯ ತಾಣ

Virupaksha Temple, Dravidian style
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು iii, iv
ಆಕರ 239
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1987  (11ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಪಟ್ಟದಕಲ್ಲು ಭಾರತಕರ್ನಾಟಕ ರಾಜ್ಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗುoಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ - ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ - ಎರಡನ್ನೂ ಇಲ್ಲಿ ಕಾಣಬಹುದು.

ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವoಶದ ರಾಜಧಾನಿಯಾಗಿತ್ತು . ಚಾಲುಕ್ಯ ವoಶದ ಅರಸರು ಏಳನೇ ಮತ್ತು ಎoಟನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒoಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿoತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಲಾಯಿತು. ಇದು ಕಂಚಿಯ ಕೈಲಾಸನಾಥ ದೇವಾಲಯದಂತೆ ಇದ್ದು ಅದನ್ನು ನೋಡಿ ಸ್ಫೂರ್ತಿಗೊಂಡು ಕಟ್ಟಿಸಲಾಗಿದೆ.ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ.

ಈ ಸ್ಥಳ ಚಾಳುಕ್ಯರ ಮಟ್ಟಿಗೆ ಅತ್ಯಂತ ಪ್ರಮುಖ ಸ್ಥಳ. ಚಾಳುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಗೈದ ನಂತರವೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ 'ಪಟ್ಟದಕಲ್ಲು' ಎಂಬ ಹೆಸರು ಬಂದಿದೆ. ಕ್ರಿ ಶ 150ರಷ್ಟು ಹಿಂದೆಯೇ ಇತಿಹಾಸದಲ್ಲಿ ಈ ಊರಿನ ಪ್ರಸ್ತಾಪ ಸಿಗುತ್ತದೆ. ಪ್ರಸಿದ್ಧ ಇತಿಹಾಸಕಾರ ಟಾಲೆಮಿ ಉಲ್ಲೇಖದಲ್ಲಿ ಇದು 'ಪೇತಗಲ್' ಎಂದು ಅನೇಕ ಶಾಸನಗಳ್ಲಿ 'ಪಟ್ಟದ ಕಿಸುವೊಳಲ್' ಎಂದೂ ಉಲ್ಲೇಖಿತವಾಗಿದೆ. ಇಲ್ಲಿರುವ ಅನೇಕ ದೇವಾಲಯಗಳಲ್ಲಿ ಹತ್ತು ದೇವಾಲಯಗಳು ಶೈವ ಸಂಪ್ರದಾಯದವುಳಾಗಿದ್ದರೆ ಉಳಿದವು ಜೈನ ಹಾಗು ಇತರ ಮತಗಳ ದೇವಾಲಯಗಳಾಗಿವೆ. ಇಲ್ಲಿನ ದೇವಾಲಯಗಳಲ್ಲಿ ವಾಸ್ತುವಿನ್ಯಾಸ ಉತ್ತುಂಗವನ್ನು ತಲುಪಿದ್ದನ್ನು ಕಾಣುತ್ತೇವೆ.ಆ ಕಾರಣಕ್ಕಾಗೇ ಇಂದಿಗೂ ಅಸಂಖ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ.

ಈ ಸಮುಚ್ಚಯದಲ್ಲಿನ ಗಮನಸೆಳೆಯುವ ಪ್ರಮುಖ ದೇವಾಲಯಗಳೆಂದರೆ ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳು. ಈ ಎರಡೂ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು ೨ನೇ ವಿಕ್ರಮಾದಿತ್ಯನು ತಮ್ಮ ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ ಇಬ್ಬರು ರಾಣಿಯರು ಕಟ್ಟಿಸಿರುವುದು. ಇವು ಕಂಚಿಯಲ್ಲಿನ ಕೈಲಾಸ್ ನಾಥರ್ ದೇವಾಲಯದ ವಾಸ್ತುವಿನಿಂದ ಪ್ರಭಾವಿತವಾಗಿರುವುದು ಎದ್ದು ಕಾಣುತ್ತದೆ.

ಮಲ್ಲಿಕಾರ್ಜುನ ದೇವಾಲಯ
ಮಲ್ಲಿಕಾರ್ಜುನ ದೇವಾಲಯ

ಅದರಲ್ಲೂ ವಿರೂಪಾಕ್ಷ ದೇವಾಲಯ ಒಂದು ಪರಿಪೂರ್ಣ ದೇವಾಲಯ ವಾಸ್ತುವಿಗೆ ಉದಾಹರಣೆಯಾಗಿದೆ. ಇದು ಕ್ರಿ ಶ 740ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು ಮುಂದಿರುವ ತೆರೆದ ಮಂಟಪದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಉಳಿದೆಲ್ಲ ದಿಕ್ಕುಗಳಲ್ಲಿ ಮುಖಮಂಟಪವಿದ್ದು ದೇವಾಲಯದ ಒಳಗೆ ಸಭಾಮಂಟಪ ಹಾಗು ಪ್ರದಕ್ಷಿಣಾ ಪಥವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ. ಇವು ವಿಕ್ರಮಾದಿತ್ಯ ಹಾಗು ರಾಣಿ ಲೋಕಮಹಾದೇವಿಯನ್ನು ಬಿಂಬಿಸುತ್ತವೆ(?). ಈ ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿ ಎಂಬುವವನು.ಇವನಿಗೆ ವಿಕ್ರಮಾದಿತ್ಯನು 'ಪೆರ್ಜೆರಿಪು' ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿರುವ ಬಗ್ಗೆ ಶಾಸನ ಬರೆಸಲಾಗಿದೆ. ಇಂಥ ಸುಂದರ ದೇವಾಲಯವೇ ಮುಂದೆ ರಾಷ್ಟ್ರಕೂಟರ ೧ನೇ ಕೃಷ್ಣನು ಎಲ್ಲೋರದಲ್ಲಿ ಕಟ್ಟಿಸಿದ ಕೈಲಾಸನಾಥ ಗುಹಾಲಯಕ್ಕೆ ಮುಖ್ಯ ಸ್ಫೂರ್ತಿಯಾಯಿತು.

ಇದರ ಪಕ್ಕದಲ್ಲಿರುವುದೇ ಮಲ್ಲಿಕಾರ್ಜುನ ದೇವಾಲಯ. ಇದನ್ನು ವಿಕ್ರಮಾದಿತ್ಯನ ಮತ್ತೊಬ್ಬ ರಾಣಿ ತ್ರೈಲೋಕ್ಯದೇವಿಯು ಕ್ರಿ ಶ 743ರಲ್ಲಿ ನಿರ್ಮಿಸಿದಳು. ಈಗ ಇದು ಬಹುತೇಕ ಹಾಳಾಗಿದ್ದು ನೋಡುಗರಿಗೆ ಹಿಂದೊಮ್ಮೆ ಇದ್ದಿರಬಹುದಾದ ವೈಭವವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಇದು ಕೂಡ ವಾಸ್ತು ವಿನ್ನ್ಯಾಸದಲ್ಲಿ ವಿರುಪಾಕ್ಷ ದೇವಾಲಯವನ್ನು ಹೋಲುತ್ತದೆ. ಇದನ್ನೂ ಅದೇ ಶಿಲ್ಪಿಗಳು ನಿರ್ಮಿಸಿರುವ ಸಾಧ್ಯತೆ ಇದೆ.

ಇವೆರಡು ದೇವಾಲಯಗಳ ಹೊರತಾಗಿ ಇಲ್ಲಿನ ಸಮುಚ್ಚಯದಲ್ಲಿ ಕಾಶಿ ವಿಶ್ವನಾಥ, ಪಾಪನಾಥ ಹಾಗು ಜಿನಾಲಯಗಳೂ ಇವೆ. ಜಿನಾಲಯದಲ್ಲಿನ ಕಲ್ಲಿನ ಆನೆಗಳು ಹಾಗು ಮೇಲ್ಮಹಡಿಗೆ ಹೋಗಲು ಇರುವ ಕಲ್ಲಿನ ಏಣಿಗಳು ತುಂಬ ಆಕರ್ಶಕವಾಗಿದೆ.

ಇಲ್ಲಿರುವ ಸ್ಮಾರಕಗಳ ಗುoಪನ್ನು ಯುನೆಸ್ಕೋ ೧೯೮೭ ರಲ್ಲಿ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ