ವಿಷಯಕ್ಕೆ ಹೋಗು

ಹಳ್ಳಿಕಾರ್ (ಗೋವಿನ ತಳಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಳ್ಳಿಕಾರ್
ತಳಿಯ ಹೆಸರುಹಳ್ಳಿಕಾರ್
ಮೂಲಕರ್ನಾಟಕದ ಹಳೇ ಮೈಸೂರು ಪ್ರಾಂತ್ಯ
ವಿಭಾಗಕೆಲಸಗಾರ ತಳಿ
ಬಣ್ಣಬೂದು
ಕೊಂಬುಹಿಂದಕ್ಕೆ ಬಗ್ಗಿದಂತಿರುವ ಕೋಡುಗಳು

ಭಾರತದ ಗೋ ಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿರುವ ತಳಿಗಳಲ್ಲಿ ಹಳ್ಳಿಕಾರ್ ಕೂಡ ಒಂದು.[][] ಈ ತಳಿಯ ಉಪಾಸಕರು ಯದುವಂಶ ಪಂಗಡಕ್ಕೆ ಸೇರಿದ ಯದುವಂಶಿ ಹಳ್ಳಿಕಾರ ಸಮುದಾಯ.[] ಈ ಸಮುದಾಯದ ಹೆಸರಿನಿಂದಲೇ ಈ ತಳಿ ಗುರುತಿಸಿಕೊಂಡಿದೆ. ಭಾರತದ ಗೋ ತಳಿಗಳಲ್ಲಿರುವ ಮೂರು ವಿಭಾಗಗಳಲ್ಲಿ ಹಳ್ಳಿಕಾರ್‌ ಅನ್ನು ಅಪ್ಪಟ ಕೆಲಸಗಾರ ತಳಿಯಾಗಿ ಗುರುತಿಸುತ್ತಾರೆ. ಸತತ ೨೪ ಗಂಟೆ ಕೆಲಸ ಮಾಡಿ ೧೦-೧೪ ಟನ್ ಭಾರ ಎಳೆಯಬಲ್ಲ ಶಕ್ತಿ ಸಾಮರ್ಥ್ಯ ಹಾಗೂ ಅತಿ ವೇಗ ಹೊಂದಿರುವ ಅಪರೂಪದ ತಳಿ ಇದು. ದಿನಕ್ಕೆ ೪೦-೫೦ ಮೈಲಿ ದೂರವನ್ನು ಯಾವ ವಿಶ್ರಾಂತಿಯ ಅಗತ್ಯವಿಲ್ಲದೆ ಕ್ರಮಿಸಬಲ್ಲ ತಳಿ ಇದು. ಉಳುಮೆಯಲ್ಲಿ ಎತ್ತು ಮತ್ತು ಹಸು ಎರಡನ್ನೂ ಬಳಸಬಹುದಾದ ವಿಶ್ವದ ಏಕೈಕ ತಳಿ ಇದಾಗಿದೆ.

ಬಾಸ್ ಇಂಡಿಕಸ್ ವರ್ಗಕ್ಕೆ ಸೇರುವ ಹಳ್ಳಿಕಾರು ಹೆಚ್ಚಾಗಿ ಕಂಡುಬರುವುದು ಹಳ್ಳಿಕಾರ ಸಮುದಾಯ ವಾಸಿಸುವ ಹಳ್ಳಿಕಾರ್ ಬೆಲ್ಟ್ ಎಂದೇ ಗುರುತಿಸಲ್ಪಡುವ ಮೈಸೂರು, ಮಂಡ್ಯ, ತುಮಕೂರು, ಹಾಸನ, ಬೆಂಗಳೂರು , ಚಿಕ್ಕಮಗಳೂರು ಚಿತ್ರದುರ್ಗ ಪ್ರದೇಶಗಳಲ್ಲಿ.[][] ಈ ಸಮುದಾಯದ ಜನ ಈ ಹಳ್ಳಿಕಾರ ತಳಿ ದನಗಳನ್ನು ಅಭಿವೃದ್ಧಿಪಡಿಸಿ ಮಹಾಭಾರತ ಯುದ್ಧ ಕಾಲದಿಂದ ಹಿಡಿದು ಹಲವಾರು ರಾಜ ಮಹಾರಾಜರ ಯುದ್ಧಗಳು ಸೇರಿದಂತೆ, ಬ್ರಿಟಿಷರ ವಿರುದ್ದ ಗೆಲ್ಲುವಲ್ಲಿ ಹಳ್ಳಿಕಾರ್ ದನಗಳ ಕೊಡುಗೆ ಅಪಾರ ಎನ್ನುವ ಜಾನಪದ ಕತೆಗಳು ಇಂದಿಗೂ ಗ್ರಾಮೀಣ ಭಾಗದಲ್ಲಿ ಜನಜನಿತವಾಗಿವೆ. ತೆಲಂಗಾಣದ ರಾಯಲ ಸೀಮಾ ಪ್ರದೇಶದಲ್ಲಿ ಹಳ್ಳಿಕಾರ್‌ಗಳನ್ನು "ಸೀಮಾ" ಹಸುಗಳು ಎಂದು ಕರೆಯಲಾಗುತ್ತದೆ. ಸಂರಕ್ಷಣೆ ಮತ್ತು ಅಭಿವೃದ್ಧಿಯ ಮೂಲಕ ಮೈಸೂರು ರಾಜ್ಯದ ಹಿಂದಿನ ಮಹಾರಾಜರಿಂದ ರಾಜಮನೆತನದ ಪ್ರೋತ್ಸಾಹ ಮತ್ತು ಕಾಳಜಿಯನ್ನು ಪಡೆದಿರುವ ಅಮೃತ್ ಮಹಲ್ ಜೊತೆಗೆ ಇದು ಎರಡು ತಳಿಗಳಲ್ಲಿ ಒಂದಾಗಿದೆ. ಈ ತಳಿಯು ಅಮೃತ್ ಮಹಲ್ ಜಾನುವಾರುಗಳ ಮೂಲ ಎಂದು ಹೇಳಲಾಗುತ್ತದೆ.[]

ಸಾಮಾನ್ಯವಾಗಿ ಇವುಗಳದ್ದು ಬೂದು ಬಣ್ಣ, ಹಿಂದಕ್ಕೆ ಬಗ್ಗಿದಂತಿರುವ ಕೋಡುಗಳು, ೧೭೦-೧೯೦ ಸೆಂಟಿಮೀಟರ್ ಎತ್ತರ ಹಾಗೂ ಆಸುಪಾಸು ೪೫೦ ಕೆ.ಜಿ. ತೂಕ. ಕರಾವಿನ ಅವಧಿ ೨೫೦ರಿಂದ ೩೧೦ ದಿನಗಳು. ಅತ್ಯಂತ ಕಡಿಮೆ ಆಹಾರ ಸೇವನೆ ಇವುಗಳ ಇನ್ನೊಂದು ವೈಶಿಷ್ಟ್ಯ. ಹಿಂದಿನಿಂದಲೂ ಬೀಜದ ಹೋರಿಗಳನ್ನು ಆರಿಸಲು ಕೇವಲ ದೈಹಿಕ ಆಕಾರವೊಂದನ್ನೇ ಮಾನದಂಡವಾಗಿ ಪರಿಗಣಿಸಿದ್ದರಿಂದ ಈಗಿನ ತಳಿಗಳು ದಿನಕ್ಕೆ ಒಂದು-ಎರಡು ಲೀಟರ್ ಹಾಲು ಕೊಡುತ್ತವೆ ಅಷ್ಟೆ.

ಸ್ಮರಣಾರ್ಥ ಅಂಚೆಚೀಟಿ

ಸಣ್ಣ- ಮಳ್ಳಿಗೆ, ಗುಜುಮಾವು ಎಂಬ ಎರಡು ಉಪತಳಿಗಳು ಇದ್ದವು ಎನ್ನುತ್ತಾರಾದರೂ ಸಾಕಷ್ಟು ಮಾಹಿತಿ ಲಭ್ಯವಿಲ್ಲ. ಭಾರತೀಯ ಅಂಚೆ ಇಲಾಖೆ ಹಳ್ಳಿಕಾರ್ ಮೇಲೆ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದೆ.[] ಈ ತಳಿಗಳ ಅಭಿವೃದ್ದಿಗಾಗಿ ಕರ್ನಾಟಕ ಸರ್ಕಾರ ಸೇರಿದಂತೆ ಕೆಲ ಸಂಘ ಸಂಸ್ಥೆಗಳು ಕ್ರಮ ಕೈಗೊಂಡಿವೆಯಾದರೂ ಇವುಗಳ ಸಂಖ್ಯೆ ದಿನ ದಿನಕ್ಕೂ ಕ್ಷೀಣಿಸುತ್ತಲೇ ಸಾಗಿದೆ. ಇರುವ ಗೋವುಗಳು ಕೂಡ ಕೇವಲ ಶೇಕಡ ೬೦-೭೦ ತಳಿಶುದ್ಧತೆ ಹೊಂದಿವೆ.

ಇಂದಿನ ಬಳಕೆಗಳು

[ಬದಲಾಯಿಸಿ]
  • ಹಸುಗಳು - ಹಾಲು ಮತ್ತು ಸಂತಾನೋತ್ಪತ್ತಿ ಉದ್ದೇಶಕ್ಕಾಗಿ , ಉಳುಮೆ
  • ಸ್ಟಡ್ ಬುಲ್ಸ್ - ಸಂತಾನೋತ್ಪತ್ತಿ, ಬುಲ್ ರೇಸ್
  • ಎತ್ತು - ಉಳುಮೆ, ಎತ್ತಿನ ಓಟ, ಎತ್ತಿನ ಪ್ರದರ್ಶನ, ಧಾರ್ಮಿಕ ಮೆರವಣಿಗೆ.

ಚಿತ್ರಗಳು

[ಬದಲಾಯಿಸಿ]

ಆಧಾರ/ಆಕರ

[ಬದಲಾಯಿಸಿ]

'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು

[ಬದಲಾಯಿಸಿ]
  1. "Important Breeds of Karnataka - Hallikar". Department of AH & VS, Karnataka. Archived from the original on 18 May 2015. Retrieved 13 May 2015.
  2. Native Cow Varieties of India - Hallikar
  3. Rao, C. Hayavadana (1927). Mysore Gazetteer. Vol. 1. Bangalore: Government Press. p. 246.:”Hallikara Vokkaligas.—This is a section that is mainly engaged in the rearing of cattle. The breed of that name is the best in the far-famed Amrut Mahal Cattle.”
  4. "Hallikar - Vishwagou". Archived from the original on 12 March 2008.
  5. "Cattle Throughout History". Dairy Farmers of Washington. Archived from the original on 27 May 2005. Retrieved 2009-12-11.
  6. "Breeds of Livestock - Amrit Mahal Cattle". Ansi.okstate.edu. Archived from the original on 2010-06-05. Retrieved 2009-12-11.
  7. "Indian Post Stamp Catalogue 1947 - 2011 - Hallikar" (PDF). Archived from the original (PDF) on 17 January 2013. Retrieved 12 May 2015.